Breaking News

BigTv News

ದಾಖಲೆಯ ಸರದಾರಗೆ ಅದ್ದೂರಿ ಸ್ವಾಗತ: ಕಮಲದಲ್ಲಿ ಮುಗಿಲು ಮುಟ್ಟಿದ ಸಂಭ್ರಮ

ಹುಬ್ಬಳ್ಳಿ: ಸತತ ಎಂಟು ಬಾರಿ ವಿಜಯದ ಪತಾಕೆ ಹಾರಿಸಿದ ಸೋಲಿಲ್ಲದ ಸರದಾರ ಖ್ಯಾತಿಯ ಬಸವರಾಜ ಹೊರಟ್ಟಿಯವರು ವಿಧಾನ ಪರಿಷತ್ ಪಶ್ಚಿಮ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಗೆಲುವು ಸಾಧಿಸಿ ಹುಬ್ಬಳ್ಳಿಗೆ ಆಗಮಿಸಿದ ವೇಳೆಯಲ್ಲಿ ಬಿಜೆಪಿಯಿಂದ ಅದ್ದೂರಿಯಾಗಿ ಸ್ವಾಗತಿಸಿ ಮೆರವಣಿಗೆ ಮಾಡಲಾಯಿತು. ಬಿಜೆಪಿಯ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದ ಬಸವರಾಜ ಹೊರಟ್ಟಿ ದಾಖಲೆಯ ಗೆಲುವನ್ನು ಪಡೆದು ಬೆಳಗಾವಿಯಿಂದ ತವರಿಗೆ ಆಗಮಿಸಿದ ಹೊರಟ್ಟಿಯವರಿಗೆ ತೆರೆದ ವಾಹನದಲ್ಲಿ ಅದ್ದೂರಿಯಾಗಿ ಮೆರವಣಿಗೆ ಮಾಡಲಾಯಿತು. ದಾರಿಯುದ್ದಕ್ಕೂ ಪಟಾಕಿ ಸಿಡಿಸಿದ ಬಿಜೆಪಿ …

Read More »

ಪೊಲೀಸ್ ಕಮಿಷನರೇಟ್’ನಲ್ಲಿ 300 ಸಿಬ್ಬಂದಿ ವರ್ಗಾವಣೆ

ಹುಬ್ಬಳ್ಳಿ: ಹುಧಾ ಪೊಲೀಸ್ ಕಮಿಷನರೇಟ್’ನ ವಿವಿಧ ಪೊಲೀಸ್ ಠಾಣೆಗಳಲ್ಲಿ ನಾಲ್ಕಕ್ಕಿಂತ ಹೆಚ್ಚು ವರ್ಷ ಕರ್ತವ್ಯ ನಿರ್ವಹಿಸಿದ 300 ಸಿಬ್ಬಂದಿಯನ್ನು ಆಂತರಿಕ ವರ್ಗಾವಣೆಗೆ ಅಂತಿಮಗೊಳಿಸಲಾಗಿದೆ. 36 ಎಎಸ್ಐ, 197 ಹೆಡ್ ಕಾನ್’ಸ್ಟೆಬಲ್ ಮತ್ತು 67 ಕಾನ್’ಸ್ಟೆಬಲ್’ಗಳ ಹೆಸರು ವರ್ಗಾವಣೆಯ ಅಂತಿಮ ಪಟ್ಟಿಯಲ್ಲಿವೆ. ಧಾರವಾಡ ವಿದ್ಯಾಗಿರಿ ಠಾಣೆಯಿಂದ 21, ಹುಬ್ಬಳ್ಳಿ ಶಹರ ಠಾಣೆಯಿಂದ 20, ಹಳೇಹುಬ್ಬಳ್ಳಿ ಠಾಣೆಯಿಂದ 18 ಹಾಗೂ ನಾಲ್ಕು ಸಂಚಾರ ಠಾಣೆಗಳಿಂದ 10 ಎಎಸ್ಐ ಸೇರಿ 51 ಸಿಬ್ಬಂದಿ ವರ್ಗಾವಣೆ …

Read More »

ದಾಖಲೆ ಜಯ ಸಾಧಿಸಿದ ಬಸವರಾಜ ಹೊರಟ್ಟಿ

ಹುಬ್ಬಳ್ಳಿ: ಪಶ್ಚಿಮ ಶಿಕ್ಷಕ ಮತಕ್ಷೇತ್ರದ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾದ ಬಸವರಾಜ್ ಹೊರಟ್ಟಿ ಅವರು 8 ನೆಯ ಸಲ ಗೆಲ್ಲುವ ಮೂಲಕ ದೇಶದಲ್ಲೇ ಮೊದಲಿಗರಾಗಿದ್ದಾರೆ.ಸುಮಾರು 42 ವರ್ಷಗಳ ಕಾಲ ಮೇಲ್ಮನೆ ಚುನಾವಣೆಗೆ ಬೇರೆಬೇರೆ ಪಕ್ಷಗಳಿಂದ ಸ್ಪರ್ದೆ ಮಾಡಿ, ಗೆದ್ದು, ಸೋಲಿಲ್ಲದ ಸರದಾರ ಆಗಿದ್ದಾರೆ.. ಪಲಿತಾಂಶದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಯಾವ ದಾಖಲೆ ಗೊತ್ತಿಲ್ಲ. 9266 ಮತಗಳು ಬಂದಿವೆ.‌ನಮ್ಮ ನಿರೀಕ್ಷೆಯಷ್ಟು ಮತ ಬಂದಿವೆ.3600 ಮತಗಳಿಂದ ಗೆದ್ದಿರುವ ಮಾಹಿತಿ ಇದೆ ಎಂದರು..ಶಿಕ್ಷಕರ ತಪ್ಪು …

Read More »

ಈಜಲು ಉಣಕಲ್ ಕೆರೆಗೆ ಹೋದ ವ್ಯಕ್ತಿ ಶವವಾಗಿ ಪತ್ತೆ

ಹುಬ್ಬಳ್ಳಿ ; ಕೆರೆಯಲ್ಲಿ ಈಜಲು ಹೋಗಿದ್ದ ವ್ಯಕ್ತಿ ಶವವಾಗಿ ಪತ್ತೆಯಾಗಿರುವ ಘಟನೆ ನಗರದ ಉಣಕಲ್ ಕೆರೆಯಲ್ಲಿನಡೆದಿದೆ. ಕುಡಿದ ಮತ್ತಿನಲ್ಲಿ ಈಜಲು ಕೆರೆಗೆ ಜಿಗಿದಿರೋ ಸಾರ್ವಜನಿಕರು ಮಾಹಿತಿ ನೀಡಿದ್ದಾರೆ. ಸಾರ್ವಜನಿಕರು ನೀಡಿದ ಮಾಹಿತಿ ಆಧರಿಸಿ ಶೋಧ ಅಗ್ನಿಶಾಮಕ ದಳ ಸಿಬ್ಬಂದಿಯಿಂದ ಪತ್ತೆ ಕಾರ್ಯಾಚರಣೆಯಲ್ಲಿ ವ್ಯಕ್ತಿ ಶವವಾಗಿ ಪತ್ತೆಯಾಗಿದ್ದಾನೆ. ನಿನ್ನೆ ರಾತ್ರಿಯಿಂದಲೂ ನಡೆದಿದ್ದ ಕಾರ್ಯಾಚರಣೆ ಇಂದು ಮದ್ಯಾಹ್ನ ಶವ ಪತ್ತೆಯಾಗಿದೆ. ವ್ಯಕ್ತಿಯ ಗುರುತು ಪತ್ತೆಯಾಗಿಲ್ಲಾ. ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.

Read More »

ಮಳೆಯಿಂದಾಗಿ ಮನೆ ಕಳೆದುಕೊಂಡವರು ಗೋಳು ಕೇಳುವರ್ಯಾರು : ಖ್ಯಾರೇ ಎನ್ನದ ಅಧಿಕಾರಿಗಳು

ಹುಬ್ಬಳ್ಳಿ : ಮಳೆ ಬಂದು ಮನೆ ಕಳೆದುಕೊಂಡವರನ್ನ ಅಧಿಕಾರಿಗಳು ಮರೆತು ಬಿಟ್ಟಿದ್ದಾರೆ. ಕುಂದಗೋಳ ತಾಲ್ಲೂಕು ಸಂಶಿ ಗ್ರಾಮದಲ್ಲಿ ಕಳೆದ ತಿಂಗಳು ಮಳೆಯಿಂದ 26 ಮನೆಗಳಿಗೆ ಹಾನಿಯಾಗಿದ್ದು, ಕಾಟಾಚಾರಕ್ಕೆ ಮನವಿ ಪಡೆದುಕೊಂಡಿದ್ದಾರೆ ಎಂದು ರೈತಸಂಘದ ಕುಂದಗೋಳ ತಾಲೂಕು ಅಧ್ಯಕ್ಷರ ಬೇಸರ ವ್ಯಕ್ತಪಡಿಸಿದರು. ಮಳೆ ಸುರಿದು, ಮನೆಗಳು ಹಾನಿಯಾಗಿ ಒಂದು ತಿಂಗಳು ಕಳೆದಿದೆ. ಆದರೂ ಅಧಿಕಾರಿಗಳು ಖ್ಯಾರೇ ಅನ್ನುತ್ತಿಲ್ಲಾ. ಪರಿಹಾರಕ್ಕಾಗಿ ಕಳೆದ ತಿಂಗಳೇ ಅರ್ಜಿ ಸಲ್ಲಿಸಿದ್ದರು ಅಪಡೆಟ್ ಇನ್ನೂ ಮಾಡಿಲ್ಲಾ. ಪುನರ್ವಸತಿ, ಪರಿಹಾರಕ್ಕಾಗಿ …

Read More »

ಬಸ್, ಲಾರಿಗೆ ಢಿಕ್ಕಿ : 11 ಜನರಿಗೆ ಗಾಯ

ಹೊಸಪೇಟೆ: ಕೆಎಸ್‌ಆರ್‌ಟಿಸಿ ಬಸ್, ಲಾರಿಗೆ ಢಿಕ್ಕಿ ಹೊಡೆದ ಪರಿಣಾಮ 11 ಜನರು ಗಾಯಗೊಂಡಿರುವ ಘಟನೆ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಅಮಲಾಪುರ ಬಳಿ ರಾಷ್ಟ್ರೀಯ ಹೆದ್ದಾರಿ 50 ರಲ್ಲಿ ಬುಧವಾರ ನಸುಕಿನ ವೇಳೆ ನಡೆದಿದೆ. ಬೆಂಗಳೂರಿನಿಂದ ಬರುತ್ತಿದ್ದ ಬಸ್‌, ಮುಂದೆ ಚಲಿಸುತ್ತಿದ್ದ ಲಾರಿಗೆ ಢಿಕ್ಕಿ ಹೊಡೆದ ಪರಿಣಾಮ 11 ಜನರು ಗಾಯಗೊಂಡಿದ್ದಾರೆ. ಇವರಲ್ಲಿ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದು ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರು ಮತ್ತು ಹೈವೆ ಪೆಟ್ರೋಲಿಂಗ್ ಸಿಬ್ಬಂದಿಯ ಸಹಾಯದಿಂದ …

Read More »

ಬಿಜೆಪಿಯವರಿಗೆ ಅಧಿಕಾರದ ಮದ ಏರಿದೆ : ಮಾಜಿ‌‌ ಸಿಎಂ

ಬೆಂಗಳೂರು: ‘ದೆಹಲಿಯ ಎಐಸಿಸಿ ಕಚೇರಿ ಬಳಿ ಪ್ರತಿಭಟನೆ ನಡೆಸುತ್ತಿದ್ದ ಕಾಂಗ್ರೆಸ್‌ ನಾಯಕರ ಮೇಲೆ ಪೊಲೀಸರು ಹಲ್ಲೆ ನಡೆಸಿರುವುದು ಸರ್ವಾಧಿಕಾರಿ ವರ್ತನೆ. ಬಿಜೆಪಿಯವರಿಗೆ ಅಧಿಕಾರದ ಮದ ಏರಿದೆ. ಹೀಗಾಗಿ ಇಂತಹದ್ದೆಲ್ಲಾ ಮಾಡಿಸುತ್ತಿದ್ದಾರೆ’ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬಿಜೆಪಿಯವರು ಈ ಹಿಂದೆ ಮುಚ್ಚಿ ಹೋಗಿರುವ ನ್ಯಾಷನಲ್‌ ಹೆರಾಲ್ಡ್‌ ಪ್ರಕರಣವನ್ನು ಮತ್ತೆ ಕೆದಕಿ ತನಿಖೆ ನಡೆಸುವ ಮೂಲಕ ದ್ವೇಷದ ಹಾಗೂ ದುರುದ್ದೇಶದ ರಾಜಕಾರಣ ಮಾಡುತ್ತಿದ್ದಾರೆ. …

Read More »

ಮೇಲುಕೋಟೆಯ ಬಾಹುಬಲಿ ವಿಧಿವಶ

ಮೇಲುಕೋಟೆಯ ಬಾಹುಬಲಿ ಎಂದೇ ಹೆಸರಾಗಿದ್ದ 75 ವರ್ಷದ ಕಾಳಮೇಘಂ ರಾಮಸ್ವಾಮಿ ಅಯ್ಯಂಗಾರ್ ಸೋಮವಾರದಂದು ವಿಧಿವಶರಾಗಿದ್ದಾರೆ. ರಾಮಸ್ವಾಮಿ ಅಯ್ಯಂಗಾರ್ ರವರು ಯೋಗಾ ನರಸಿಂಹ ಸ್ವಾಮಿ ಬೆಟ್ಟದ ದೇವಾಲಯದಲ್ಲಿ ಅಡುಗೆ ಮನೆ ಕೈಂಕರ್ಯ ಮಾಡುತ್ತಿದ್ದರು. ಅವರು ಭಾರಿ ಗಾತ್ರದ ಪಾತ್ರೆಯಲ್ಲಿ ಬೆಟ್ಟದ ಮಧ್ಯದ ಭಾಗದ ಬಾವಿಯಿಂದ ನೀರು ತೆಗೆದುಕೊಂಡು ನೂರಾರು ಮೆಟ್ಟಿಲುಗಳನ್ನು ಹತ್ತಿ ನರಸಿಂಹನ ಅಭಿಷೇಕ ಮತ್ತು ಪ್ರಸಾದಗಳಿಗೆ ಸೇವೆ ಸಮರ್ಪಿಸಿದ್ದರು.

Read More »

ಬಿಸಿಯೂಟದ ಸಾಂಬಾರು ಪಾತ್ರೆಗೆ ಬಿದ್ದು ಮಹಿಳೆ ಸಾವು

ಮಂಗಳೂರು: ಬಿಸಿಯೂಟದ ಸಾಂಬಾರು ಪಾತ್ರೆಗೆ ಬಿದ್ದು ಗಾಯಗೊಂಡಿದ್ದ ಅಡುಗೆ ಸಹಾಯಕಿ ಸಾವನ್ನಪ್ಪಿರುವ ಘಟನೆ ದಕ್ಷಿಣ ಕನ್ನಡದ ಪುತ್ತೂರಿನಲ್ಲಿ ನಡೆದಿದೆ.ಅಗ್ನೇಸ್ ಪ್ರಮೀಳಾ ಡಿಸೋಜಾ (37) ಮೃತ ದುರ್ದೈವಿ. ಪುತ್ತೂರಿನ ವಿಕ್ಟರ್ಸ್ ಶಾಲೆಯಲ್ಲಿ ಅಡುಗೆ ಸಹಾಯಕಿಯಾಗಿದ್ದ ಪ್ರಮೀಳಾ ಮೇ 30ರಂದು ಬಿಸಿಯೂಟ ತಯಾರಿಸುತ್ತಿದ್ದ ವೇಳೆ ಕಾಲು ಜಾರಿ ಸಂಬಾರು ಪಾತ್ರೆಗೆ ಬಿದ್ದಿದ್ದರು.ಕೂಡಲೇ ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಘಟನೆ ಸಂಬಂಧ ಪುತ್ತೂರು ನಗರ ಪೊಲೀಸ್​ ಠಾಣೆಯಲ್ಲಿ …

Read More »

ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಡಿಕೆಶಿ

ಬೆಂಗಳೂರು: ನಿನ್ನೆ ಪ್ರತಿಭಟನೆ ಆರಂಭವಾಗುವ ಮುನ್ನವೇ ನಮ್ಮ ಯೂಥ್ ಕಾಂಗ್ರೆಸ್ ಅಧ್ಯಕ್ಷ ಬಿ ವಿ ಶ್ರೀನಿವಾಸ್ ಅವರನ್ನು ಬಂಧಿಸಲು ಪ್ರಯತ್ನಿಸಿದ್ದರು. ಅವರು ಪ್ರತಿಭಟನೆಗೆ ಹೋಗುವ ಮುನ್ನವೇ ವಶಕ್ಕೆ ಪಡೆಯಲು ಯತ್ನಿಸಿದರು. ಇಂದು ನಮ್ಮ ಪಾಲಿಗೆ ಪಕ್ಷದ ಕಚೇರಿ ಮನೆ, ದೇವಾಲಯ ಇದ್ದಂತೆ. ನಮ್ಮ ನಾಯಕರು ಎಐಸಿಸಿ ಕಚೇರಿಗೆ ಹೋದರೆ, ಅಲ್ಲೇ ಅವರನ್ನು ಬಂಧಿಸುತ್ತೇನೆ ಎಂದರೆ ಇದು ಅನ್ಯಾಯವಲ್ಲವೇ? ನಮ್ಮ ನಾಯಕರು ಯಾವ ಅಪರಾಧ ಮಾಡಿದ್ದಾರೆ? ಎಂಬುದಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆ …

Read More »