Breaking News

BigTv News

ಕಾಂಗ್ರೆಸ್ ಪಕ್ಷಕ್ಕೆ ಹಿರಿಯ ನಟ ಮುಖ್ಯಮಂತ್ರಿ ಚಂದ್ರು ರಾಜೀನಾಮೆ

ಬೆಂಗಳೂರು : ಕಾಂಗ್ರೆಸ್ ಪಕ್ಷಕ್ಕೆ ಹಿರಿಯ ನಟ ಮುಖ್ಯಮಂತ್ರಿ ಚಂದ್ರು ಇಂದು ರಾಜೀನಾಮೆ ನೀಡಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಗೆ ಮುಖ್ಯಮಂತ್ರಿ ಚಂದ್ರು ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ರಾಜ್ಯಸಭೆ ಟಿಕೆಟ್ ನಿರೀಕ್ಷೆಯಲ್ಲಿದ್ದ ಮುಖ್ಯಮಂತ್ರಿ ಚಂದ್ರುಗೆ ಟಿಕಟ್ ನೀಡದ ಹಿನ್ನೆಲೆಯಲ್ಲಿ ಬೇಸರಗೊಂಡು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ.

Read More »

ನೂತನ ಮೇಯರ್ ಉಪಮೇಯರ್‌ಗೆ ಕೇಂದ್ರ ಸಚಿವ ಜೋಶಿ ಕಿವಿ ಮಾತು … !

ಹು – ಧಾ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಅಧಿಕಾರ ಹಿಡಿದ ಹಿನ್ನಲೆಯಲ್ಲಿ ನೂತನ ಮೇಯರ್ ಮತ್ತು ಉಪಮೇಯರ್‌ಗೆ ಶುಭ ಕೋರಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ನೂತನ ಮೇಯರ್ ಈರೇಶ್ ಅಂಚಟಗೇರಿ ಮತ್ತು ಉಪಮೇಯರ್ ಉಮಾ ಮುಕುಂದ ಅವರಿಗೆ ಜೋಶಿ ಕಿವಿಮಾತು ಹೇಳಿದ್ದಾರೆ . ಈ ಕುರಿತು ಮಾಧ್ಯಮದ ಜೊತೆಗೆ ಮಾತನಾಡಿದ ಅವರು , ಮೂರು ವರ್ಷಗಳ ಬಳಿಕ ಪಾಲಿಕೆಗೆ ಈಗ ಆಡಳಿತ ಕಾರ್ಯಗಳು ಚುರುಕುಗೊಳಲಿದೆ.ನಮ್ಮ ಪಕ್ಷದ ಸದಸ್ಯರು ಅಧಿಕಾರ …

Read More »

ಜ್ವಲಂತ ಸಮಸ್ಯೆಗಳಿಗೆ ಸ್ಪಂದಿಸುವೆ : ನೂತನ ಮೇಯರ್ ಅಂಚಟಗೇರಿ ಭರವಸೆ

ಹುಬ್ಬಳ್ಳಿ : ನನ್ನ ಮೇಲೆ ಪಕ್ಷ ಹಾಗೂ ನಾಯಕರು ಭರವಸೆ ಇಟ್ಟು ಜವಾಬ್ದಾರಿ ನೀಡಿದ್ದಾರೆ . ಅವರ ಭರವಸೆಗೆ ತಕ್ಕಂತೆ ಕಾರ್ಯವನ್ನು ನಿರ್ವಹಿಸುವ ಮೂಲಕ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುತ್ತೇನೆ ಎಂದು ಹುಬ್ಬಳ್ಳಿ – ಧಾರವಾಡ ಮಹಾನಗರ ಪಾಲಿಕೆ ನೂತನ ಮೇಯರ್ ಈರೇಶ್ ಅಂಚಟಗೇರಿ ಹೇಳಿದರು . ಮೇಯರ್ ಆಗಿ ಆಯ್ಕೆಯಾದ ಬಳಿಕ ಮೊದಲ ಬಾರಿಗೆ ಮಾಧ್ಯಮದ ಜೊತೆಗೆ ಮಾತನಾಡಿದ ಅವರು , ನನ್ನ ಮೇಲೆ ಪಕ್ಷ ಹಾಗೂ ನಾಯಕರು , …

Read More »

ಜವಾಬ್ದಾರಿಯಿಂದ ಕೆಲಸ ಮಾಡುತ್ತೇನೆ : ಉಪಮೇಯರ್ ಉಮಾ ಮುಕುಂದ

ಹುಬ್ಬಳ್ಳಿ : ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುವೆ . ಹುಬ್ಬಳ್ಳಿ ಧಾರವಾಡ ಅವಳಿನಗರದ ಜನತೆಯ ಸಮಸ್ಯೆಗಳಿಗೆ ಧ್ವನಿಯಾಗಿ ಕೆಲಸ ನಿರ್ವಹಣೆ ಮಾಡುವೆ ಎಂದು ನೂತನ ಉಪ ಮೇಯರ್ ಉಮಾ ಮುಕ್ಕುಂದ ಹೇಳಿದರು . ಉಪಮೇಯರ್ ಆಗಿ ಆಯ್ಕೆಯಾದ ಬೆನ್ನಲ್ಲೇ ಮೊದಲ ಬಾರಿಗೆ ಮಾಧ್ಯಮದ ಜೊತೆಗೆ ಮಾತನಾಡಿದ ಅವರು , ಪಕ್ಷದ ಪ್ರಮುಖರು ನನ್ನ ಮೇಲೆ ಭರವಸೆ ಇಟ್ಟು ಜವಾಬ್ದಾರಿ ನೀಡಿದ್ದಾರೆ . ಅವರ ಋಣ ತೀರಿಸುವ ಕೆಲಸ ಮಾಡುವೆ …

Read More »

ಬಿಜೆಪಿ ಪಾಲಾದ ಹು-ಧಾ ಮೇಯರ್, ಉಪಮೇಯರ್ ಸ್ಥಾನ

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮೇಯರ್ ಗಾದಿ ಬಿಜೆಪಿಗೆ ಒಲಿದಿದೆ. ಈರೇಶ ಅಂಚಟಗೇರಿ ಮೇಯರ್​ ಸ್ಥಾನ ಅಲಂಕರಿಸಿದರೆ, ಉಪ‌ ಮೇಯರ್ ಸ್ಥಾನಕ್ಕೆ ಉಮಾ ಮುಕುಂದ ಆಯ್ಕೆಯಾದರು. ಧಾರವಾಡಕ್ಕೆ ಮೇಯರ್ ಪಟ್ಟ ಹಾಗೂ ಹುಬ್ಬಳ್ಳಿಗೆ ಉಪ ಮೇಯರ್ ಪಟ್ಟ ದಕ್ಕಿದಂತಾಗಿದೆ. ಈ ಮೂಲಕ 38 ತಿಂಗಳ ಬಳಿಕ ಹು-ಧಾ ಮಹಾನಗರಕ್ಕೆ ಪ್ರಥಮ ಪ್ರಜೆ ಬಂದಿದ್ದಾರೆ. ಶನಿವಾರ ಬೆಳಗ್ಗೆ ಮೇಯರ್​-ಉಪಮೇಯರ್​ ಸ್ಥಾನಕ್ಕೆ ಚುನಾವಣಾ ಪ್ರಕ್ರಿಯೆ ನಡೆಯಿತು. ಮೇಯರ್ ಸ್ಥಾನಕ್ಕೆ ಕಾಂಗ್ರೆಸ್​ನಿಂದ ಮಯೂರ ಮೋರೆ, …

Read More »

ಉಪವಾಸ ಸತ್ಯಾಗ್ರಹಕ್ಕೆ ರಾಜು ನಾಯಕವಾಡಿ ಬೆಂಬಲ

ಹುಬ್ಬಳ್ಳಿ ‌: ಹಿರಿಯ ಅಧಿಕಾರಿಗಳಿಂದ ದಲಿತ ನೌಕರರಿಗೆ ಕಿರುಕುಳ ಮತ್ತು ಅನಧೀಕೃತ 5 ತಿಂಗಳ ವೇತನ ತಡೆಹಿಡಿದಿರುವ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಹುಬ್ಬಳ್ಳಿ ಅರವಿಂದ ನಗರದ ಕಾರ್ಮಿಕ ರಾಜ್ಯ ವಿಮಾ ಆಸ್ಪತ್ರೆ ಎದುರು ಮಹಿಳೆ ನಡೆಸುತ್ತಿರುವ ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ಜೆಡಿಎಸ್ ಹುಬ್ಬಳ್ಳಿ ಸೆಂಟ್ರಲ್ ಅಧ್ಯಕ್ಷ ರಾಜು ನಾಯಕವಾಡಿ ಭೇಟಿ ನೀಡಿ ಬೆಂಬಲ ವ್ಯಕ್ತಪಡಿಸಿದರು .

Read More »

ಭೂತಾಯಿಗೆ ತನ್ನ ಜೀವವನ್ನು ಅರ್ಪಿಸಿದ ಕಲಘಟಗಿ ವೀರಯೋಧ

Featured Video Play Icon

ಕಲಘಟಗಿ : ಭಾರತಾಂಬೆಗೆ ಸೇವೆ ಸಲ್ಲಿಸಿಸಲು ಹೋಗಿದ್ದ ಯುವಕ ಮರಣಹೊಂದಿದ್ದಾರೆ. ಕಲಘಟಗಿ ತಾಲೂಕು ಬೇಗೂರ ಗ್ರಾಮದ ನಿವಾಸಿಯಾಗಿದ್ದ ಮಹಾದೇವಪ್ಪ ಷಣ್ಮುಖಪ್ಪ ಮುತ್ತಗಿ ಅವರ ಭಾರತಾಂಬೆಗೆ ತನ್ನ ಜೀವವನ್ನು ಅರ್ಪಿದ ವೀರಯೋದ. ಭೂಸೇನೆಯಲ್ಲಿ ರ್ಯಾಂಕ್ ಹವಾಲ್ದಾರ್ ಆಗಿ 23 ವರ್ಷ ಸುದೀರ್ಘ ಕೆಲಸ ಮಾಡಿದ್ದಾರೆ. ಗುಜರಾತ್ ನಲ್ಲಿ ಇದೀಗ ಅವರ ಕಾರ್ಯ ನಿರ್ವಹಿಸುತ್ತೀದ್ದರು. ಮೇ. 27 ರಂದು ಪ್ರಾಣ ತ್ಯಾಗ ಮಾಡಿದ್ದಾರೆ. ಸ್ವಗ್ರಾಮ ಪಾರ್ಥಿವ ಶರೀರ ಬರಲಿದೆ.

Read More »

ಕಳ್ಳಭಟ್ಟಿ ವೃತ್ತಿಯಲ್ಲಿದ್ದವರಿಗೆ ಅಬಕಾರಿ ಇಲಾಖೆಯಿಂದ ಹೈನುಗಾರಿಕೆ ತರಬೇತಿ

ನವಲಗುಂದ : ಕಳ್ಳಭಟ್ಟ ಸರಾಯಿ ನಿರ್ಮೂಲನ ಅಭಿಯಾನದಲ್ಲಿನವಲಗುಂದ ಅಬಕಾರಿ ಇಲಾಖೆ ವಲಯ ವ್ಯಾಪ್ತಿಯ ಅಣ್ಣಿಗೇರಿ ಪಟ್ಟಣದ ಹರಣಶಿಕಾರಿ ಕಾಲೋನಿಯಲ್ಲಿ ಕಳ್ಳಭಟ್ಟಿ ತಯಾರಿಕೆ ಸಾಗಾಟ ಹಾಗೂ ಮಾರಾಟ ಮಾಡುವ ವೃತ್ತಿಯಲ್ಲಿ ತೊಡಗಿದ್ದ ವ್ಯಕ್ತಿಗಳಿಗೆ ಉದ್ಯೋಗ ಅವಕಾಶವನ್ನು ಹಾಗೂ ಜೀವನ ಅವಕಾಶವನ್ನು ಕಲ್ಪಿಸುವ ಉದ್ದೇಶದಿಂದ ಅಬಕಾರಿ ನಿರೀಕ್ಷಕರ ಕಚೇರಿ ನವಲಗುಂದ ವಲಯ ದಿಂದ 35 ಜನರಿಗೆ ಹೈನುಗಾರಿಕೆ ಉದ್ಯೋಗ ತರಬೇತಿ ನಿಡ್ಡಿದ್ದಾರೆ. ಅಬಕಾರಿ ನಿರೀಕ್ಷಕರ ಕಚೇರಿ ನವಲಗುಂದ ವಲಯದಿಂದ ಧಾರವಾಡದಲ್ಲಿ 30 ಜನ …

Read More »

ಚುನಾವಣೆ‌ ಕಾವು : ಪಾಲಿಕೆ ಸುತ್ತಮುತ್ತ ಪೋಲಿಸ್ ಬಿಗಿ ಬಂದೋಬಸ್ತ್

ಹುಬ್ಬಳ್ಳಿ: ಹು-ಧಾ ಮಹಾನಗರ ಪಾಲಿಕೆ ಮೇಯರ್,‌ ಉಪಮೇಯರ್ ಚುನಾವಣೆಗೆ ಕ್ಷಣ ಗಣನೆ ಆರಂಭವಾಗಿದ್ದು, ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯಬಾರದೆಂದು ಪಾಲಿಕೆ ಸುತ್ತಮುತ್ತ ಪೋಲಿಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಹುಬ್ಬಳ್ಳಿ-ಧಾರವಾಡ ಪಾಲಿಕೆಗೆ ಚುನಾವಣೆ ನಡೆದು ಆರು ಏಳು ತಿಂಗಳುಗಳು ಕಳೆಯುತ್ತಾ ಬಂದಿದ್ದು, ಈವರೆಗೆ ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿಗಳಿಗೆ ಅಧಿಕಾರ ಸಿಕ್ಕಿದಿಲ್ಲ. ಇಂದು ಮೇಯರ್ ಉಪಮೇಯರ್ ಚುನಾವಣೆ ನಡೆಯುತ್ತಿದ್ದು, ಯಾರು ಉಪಮೇಯರ್ ಆಗಲಿದ್ದಾರೆ ಎಂಬ ಕುತೂಹಲ ಎಲ್ಲರ ಮನಸ್ಸಿನಲ್ಲಿ ಮೂಡಿಸಿದೆ. ಹೀಗಾಗಿಯೇ …

Read More »

ಚುನಾವಣೆ : ಕೊರೋನಾ ಹಿನ್ನೆಲೆ ಸದಸ್ಯರಿಗೆ ಥರ್ಮಲ್ ಸ್ಕ್ಯಾನ್

ಹುಬ್ಬಳ್ಳಿ : ಮೇಯರ್ ಮತ್ತು ಉಪಮೇಯರ್ ಚುನಾವಣೆ ಹಿನ್ನೆಲೆಯಲ್ಲಿ ಪಾಲಿಕೆ ಸದಸ್ಯರಿಗೆ ಕೊರೊನಾ ಮುಂಜಾಗ್ರತಾ ಕ್ರಮವಾಗಿ ಥರ್ಮಲ್ ಸ್ಕ್ಯಾನಿಂಗ್ ಹಾಗೂ ಮಾಸ್ಕ್ ಬಳಸುವಂತೆ ಚಿಟಗುಪ್ಪಿ ಆಸ್ಪತ್ರೆ ಸಿಬ್ಬಂದಿಗಳು ಸಲಹೆ ನೀಡುತ್ತಿದ್ದಾರೆ. ಕೊರೊನಾ ನಾಲ್ಕನೇ ಅಲೆ ಭೀತಿ ಹಿನ್ನೆಲೆಯಲ್ಲಿ ಇಂದು ನಡೆಯುತ್ತಿರುವ ಮೇಯರ್ ಮತ್ತು ಉಪಮೇಯರ್ ಚುನಾವಣೆ ಹಿನ್ನೆಲೆಯಲ್ಲಿ ಎಲ್ಲಾ ಸದಸ್ಯರಿಗೆ ಥರ್ಮಲ್ ಸ್ಕ್ಯಾನ್ ಮಾಡುತ್ತಿದ್ದಾರೆ ‌.

Read More »