Breaking News

ಕಳ್ಳಭಟ್ಟಿ ವೃತ್ತಿಯಲ್ಲಿದ್ದವರಿಗೆ ಅಬಕಾರಿ ಇಲಾಖೆಯಿಂದ ಹೈನುಗಾರಿಕೆ ತರಬೇತಿ

ನವಲಗುಂದ : ಕಳ್ಳಭಟ್ಟ ಸರಾಯಿ ನಿರ್ಮೂಲನ ಅಭಿಯಾನದಲ್ಲಿ
ನವಲಗುಂದ ಅಬಕಾರಿ ಇಲಾಖೆ ವಲಯ ವ್ಯಾಪ್ತಿಯ ಅಣ್ಣಿಗೇರಿ ಪಟ್ಟಣದ ಹರಣಶಿಕಾರಿ ಕಾಲೋನಿಯಲ್ಲಿ ಕಳ್ಳಭಟ್ಟಿ ತಯಾರಿಕೆ ಸಾಗಾಟ ಹಾಗೂ ಮಾರಾಟ ಮಾಡುವ ವೃತ್ತಿಯಲ್ಲಿ ತೊಡಗಿದ್ದ ವ್ಯಕ್ತಿಗಳಿಗೆ ಉದ್ಯೋಗ ಅವಕಾಶವನ್ನು ಹಾಗೂ ಜೀವನ ಅವಕಾಶವನ್ನು ಕಲ್ಪಿಸುವ ಉದ್ದೇಶದಿಂದ ಅಬಕಾರಿ ನಿರೀಕ್ಷಕರ ಕಚೇರಿ ನವಲಗುಂದ ವಲಯ ದಿಂದ 35 ಜನರಿಗೆ ಹೈನುಗಾರಿಕೆ ಉದ್ಯೋಗ ತರಬೇತಿ ನಿಡ್ಡಿದ್ದಾರೆ.

ಅಬಕಾರಿ ನಿರೀಕ್ಷಕರ ಕಚೇರಿ ನವಲಗುಂದ ವಲಯದಿಂದ ಧಾರವಾಡದಲ್ಲಿ 30 ಜನ ಮಹಿಳೆಯರು ಹಾಗೂ 5 ಜನ ಪುರುಷರು ತರಬೇತಿ ಪಡೆದುಕೊಂಡಿರುತ್ತಾರೆ.

ಈ ತರಬೇತಿಯನ್ನು ಪಶುಪಾಲನೆ ಮತ್ತು ಪಶು ವೈದ್ಯಕಿಯ ಸೇವಾ ಇಲಾಖೆ ಧಾರವಾಡರವರಿಂದ ಅಧುನಿಕ ಹೈನುಗಾರಿಕೆ, ಕುರಿ, ಮೇಕೆ ಸಾಗಣಿಕೆ ಕುರಿತು ಎರಡು ದಿನ ತರಬೇತಿ ನೀಡಿದರು.

ಡಾ. ಸುನೀಲ್ ಬನ್ನಿಗೋಳ, ಡಾ.ವಿಲಾಸ ಕುಲಕರ್ಣಿ ಹಾಗೂ ಇತರರು ತರಬೇತಿ ನೀಡಿದ್ದಾರೆ.

Share News

About BigTv News

Check Also

ವಿಟ್ಲ: 35 ಬಾರಿ ವಾರಂಟ್ ಜಾರಿಯಾಗಿದ್ದ ಆರೋಪಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂಧನ

ಕಳೆದ ಒಂಬತ್ತು ವರ್ಷಗಳಿಂದ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ, ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಕುಖ್ಯಾತ ಆರೋಪಿಯನ್ನು ವಿಟ್ಲ …

Leave a Reply

Your email address will not be published. Required fields are marked *