ಬೆಳಗಾವಿ: ನಗರದ ರಾಮದೇವ್ ಹೋಟೆಲ್ ಸಮೀಪ ಚಲಿಸುತ್ತಿದ್ದ ಸ್ವಿಫ್ಟ್ ಕಾರಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು, ಕೆಲವೇ ನಿಮಿಷಗಳಲ್ಲಿ ಕಾರು ಸಂಪೂರ್ಣ ಸುಟ್ಟು ಕರಕಲಾಗಿದೆ. ಎಂಜಿನ್ ಭಾಗದಲ್ಲಿ ಹೊಗೆ ಮತ್ತು ಬೆಂಕಿ ಕಾಣಿಸಿಕೊಂಡ ತಕ್ಷಣ ಚಾಲಕ ಹಾಗೂ ಪ್ರಯಾಣಿಕರು ಕಾರಿನಿಂದ ಇಳಿದು ಸುರಕ್ಷಿತವಾಗಿ ದೂರ ಸರಿದಿದ್ದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಕಾಣಿಸಿಕೊಂಡಿರಬಹುದೆಂದು ಶಂಕಿಸಲಾಗಿದ್ದು, ನಿಖರ ಕಾರಣ ತನಿಖೆಯಿಂದ ತಿಳಿಯಬೇಕಿದೆ. ಘಟನೆಯಿಂದ ಕೆಲಕಾಲ ಸಂಚಾರ ದಟ್ಟಣೆ ಉಂಟಾಗಿದ್ದು, ಸ್ಥಳಕ್ಕೆ …
Read More »ಹಳೇ ದ್ವೇಷಕ್ಕೆ ಹರಿದ ನೆತ್ತರು – ರೌಡಿಶೀಟರ್ ಕೊ*ಲೆಯ ಭೀಭತ್ಸ್ಯ ದೃಶ್ಯ ಸಿಸಿಟಿವಿಯಲ್ಲಿ ಸೆರೆ!
ಬೆಂಗಳೂರು: ಜೆ.ಪಿ.ನಗರದಲ್ಲಿ ದಶಕದ ಹಿಂದಿನ ದ್ವೇಷದ ಹಿನ್ನೆಲೆಯಲ್ಲಿ ಕುಖ್ಯಾತ ರೌಡಿಶೀಟರ್ ರಾಜ ಅಲಿಯಾಸ್ ಹಾಫ್ಮುಖ ರಾಜನನ್ನು ಸಾರ್ವಜನಿಕ ರಸ್ತೆಯಲ್ಲೇ ಮಚ್ಚುಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆಗೆ ಸಂಬಂಧಿಸಿದ ಸಿಸಿಟಿವಿ ದೃಶ್ಯಗಳು ಹೊರಬಿದ್ದಿವೆ. ಸಿಸಿಟಿವಿಯಲ್ಲಿ ರಾಜ ಜೀವ ಉಳಿಸಿಕೊಳ್ಳಲು ರಸ್ತೆಯಲ್ಲಿ ಓಡುತ್ತಿರುವುದು, ಆತನನ್ನು ಬೆನ್ನಟ್ಟಿದ ಮೂವರು ದುಷ್ಕರ್ಮಿಗಳು ರಸ್ತೆ ಮಧ್ಯೆಯೇ ಅಡ್ಡಗಟ್ಟಿ ಮಚ್ಚುಗಳಿಂದ ಹಲ್ಲೆ ನಡೆಸುತ್ತಿರುವ ದೃಶ್ಯಗಳು ಸೆರೆಯಾಗಿವೆ. ಹೋಮ್ ಗಾರ್ಡ್ಸ್ ಸಮ್ಮುಖದಲ್ಲೇ ಕೃತ್ಯ ಎಸಗಿದ ಆರೋಪಿಗಳು ಬಳಿಕ ಹಳದಿ ಬೋರ್ಡ್ …
Read More »3 ವರ್ಷದ ಬಾಲಕಿ ‘ಅತ್ಯಾ’ಚಾರ ಪ್ರಕರಣ; 60 ದಿನದಲ್ಲಿ ಆರೋಪಿಗೆ ಮರಣದಂಡನೆ ವಿಧಿಸಿದ ಕೋರ್ಟ್
ಪುಣೆ: ಇತ್ತೀಚೆಗೆ ಬೆಳಕಿಗೆ ಬಂದಿದ್ದ ಅತ್ಯಾಚಾರ ಪ್ರಕರಣವೊಂದಕ್ಕೆ ಇದೀಗ ನ್ಯಾಯಾಲಯವೊಂದು ತಕ್ಕ ಪಾಠ ಕಲಿಸಿದೆ. ಮಹಾರಾಷ್ಟ್ರದ ಪುಣೆಯಲ್ಲಿ 3 ವರ್ಷ ಅಪ್ರಾಪ್ತ ಬಾಲಕಿ ಮೇಲೆ ಭೀಕರವಾಗಿ ಅತ್ಯಾಚಾರ ಎಸಗಿ ಕಾಮುಕ ವೃದ್ಧನೊಬ್ಬ ಕೊಲೆ ಮಾಡಿದ್ದ ಪ್ರಕರಣ ಬೆಳಕಿಗೆ ಬಂದಿತ್ತು. ಇದೀಗ ಈ ಪ್ರಕರಣದ ಪ್ರಮುಖ ಆರೋಪಿ ಭೀಮರಾವ್ ಕಾಂಬಳೆ ಎಂಬಾತನಿಗೆ ವಿಶೇಷ ನ್ಯಾಯಾಲಯವು ಮರಣ ದಂಡನೆ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ. ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ 3 ವರ್ಷದ …
Read More »ಬೆಂಗಳೂರು : ಮದುವೆಗೆ ನಿರಾಕರಿಸಿದ ಪ್ರೇಯಸಿಯನ್ನು ಕುತ್ತಿಗೆಗೆ ಇರಿದು ಕೊಂದ ಪ್ರಿಯಕರ
ಬೆಂಗಳೂರು ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮದುವೆಗೆ ನಿರಾಕರಿಸಿದ ಯುವತಿಯನ್ನು ಪ್ರಿಯಕರ ಚಾಕುವಿನಿಂದ ಇರಿದು ಹತ್ಯೆ ಮಾಡಿದ ಘಟನೆ ನಡೆದಿದೆ. ಕೆಪಿ ಅಗ್ರಹಾರದ ನಿವಾಸಿ ಅಂಜಲಿ (23) ಮೃತ ಯುವತಿ. ಆರೋಪಿ ರಾಜೀವ್ನನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ. ಅಂಜಲಿ ಮತ್ತು ರಾಜೀವ್ ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಆದರೆ ಕುಟುಂಬದ ವಿರೋಧದ ನಡುವೆ ಅಂಜಲಿ ಮದುವೆಗೆ ನಿರಾಕರಿಸಿದ್ದರಿಂದ ಇಬ್ಬರ ನಡುವೆ ಭಿನ್ನಾಭಿಪ್ರಾಯ ಉಂಟಾಗಿತ್ತು. ಸೋಮವಾರ ರಾತ್ರಿ ಭೇಟಿಯಾದ …
Read More »ನೋಯ್ಡಾ ಬಹುಮಹಡಿ ಕಟ್ಟಡದಲ್ಲಿ ಅಗ್ನಿ ಅವಘಡ: ಎಸಿ ಬ್ಲಾಸ್ಟ್ ಶಂಕೆ!
ನೋಯ್ಡಾದ ಸೆಕ್ಟರ್-119ರ ‘ಅರಣ್ಯ ಸೊಸೈಟಿ’ ಅಪಾರ್ಟ್ಮೆಂಟ್ನ 21ನೇ ಮಹಡಿಯಲ್ಲಿ ಸೋಮವಾರ (ಜೂ.29) ಭೀಕರ ಅಗ್ನಿ ಅವಘಡ ಸಂಭವಿಸಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಏರ್ ಕಂಡೀಷನರ್ (ಎಸಿ) ಸ್ಫೋಟಗೊಂಡಿರುವುದೇ ಬೆಂಕಿಗೆ ಕಾರಣ ಎಂದು ಶಂಕಿಸಲಾಗಿದೆ. ಅಪಾರ್ಟ್ಮೆಂಟ್ನಿಂದ ದಟ್ಟ ಹೊಗೆ ಮತ್ತು ಬೆಂಕಿ ಕಾಣಿಸಿಕೊಂಡ ತಕ್ಷಣ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಆರು ಅಗ್ನಿಶಾಮಕ ವಾಹನಗಳೊಂದಿಗೆ ಸ್ಥಳಕ್ಕಾಗಮಿಸಿದ ಸಿಬ್ಬಂದಿ ಯುದ್ಧೋಪಾದಿಯಲ್ಲಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದ್ದಾರೆ. ಘಟನೆಯಲ್ಲಿ ಯಾರಾದರೂ ಸಿಲುಕಿಕೊಂಡಿರುವ ಬಗ್ಗೆ …
Read More »ಉದ್ಯಮಿಯ ಕಾರು ಅಡ್ಡಗಟ್ಟಿ ಕಾರು ಸಹಿತ ಚಿನ್ನಾಭರಣ ದರೋಡೆ
ಮಂಗಳೂರು: ಕೇರಳ ಮೂಲದ ಉದ್ಯಮಿಯೊಬ್ಬರ ಕಾರನ್ನು ಅಡ್ಡಗಟ್ಟಿ ಕಾರು ಸಹಿತ ಚಿನ್ನಾಭರಣ ದೋಚಿದ ಘಟನೆ ಸೋಮವಾರ ಬೆಳಗ್ಗಿನ ಜಾವ ಬೈಕಂಪಾಡಿಯಲ್ಲಿ ನಡೆದಿದೆ. ಕೇರಳದ ಪಯ್ಯನ್ನೂರು ನಿವಾಸಿ ವಿಕಾಸ್ ದರೋಡೆಗೆ ಒಳಗಾದವರು. ಇವರು ತನ್ನ ಪತ್ನಿ ಮತ್ತು ಮಗನೊಂದಿಗೆ ಮುಂಬೈಯ ತನ್ನ ಸ್ನೇಹಿತರೊಬ್ಬರ ಮದುವೆ ತೆರಳಿ ಹಿಂದಿರುಗುತ್ತಿದ್ದ ವೇಳೆ ಈ ಕೃತ್ಯ ಎಸಗಲಾಗಿದೆ. ಬೆಳಗ್ಗಿನ ಜಾವ 2:30 ಸುಮಾರಿಗೆ ವಿಕಾಸ್ ಅವರ ಕಾರು ರಾಷ್ಟ್ರೀಯ ಹೆದ್ದಾರಿ 66ರ ಬೈಕಂಪಾಡಿ ದ್ವಾರ ಹೋಟೆಲ್ …
Read More »ಗಾಳಿಮುಖ: ಕಾರನ್ನು ತಡೆದು ಹಲ್ಲೆ
ಪುತ್ತೂರು: ನೆಟ್ಟಣಿಗೆಮುಡ್ನೂರು ಗ್ರಾಮದ ಗಾಳಿಮುಖದಲ್ಲಿ ಪಿಕ್ ಅಪ್ ವಾಹನವನ್ನು ರಸ್ತೆಗೆ ಅಡ್ಡಲಾಗಿ ಇಟ್ಟು ಆರೋಪಿಗಳಿಬ್ಬರು ಕಾಸರಗೋಡು ಮೂಲದ ಸಹೋದರರಿಗೆ ಹಲ್ಲೆ ನಡೆಸಿ ಜೀವ ಬೆದರಿಕೆಯೊಡ್ಡಿದ ಘಟನೆ ಜೂ. 27ರಂದು ನಡೆಸಿದೆ. ಪಿಕ್ ಅಪ್ ಚಾಲಕ ಹನೀಫ್ ಹಾಗೂ ಪ್ರಯಾಣಿಕ ಮಹಮ್ಮದ್ ನಿಯಾಝ್ ಪ್ರಕರಣದ ಆರೋಪಿಗಳಾಗಿದ್ದು, ಘಟನೆಗೆ ಸಂಬಂಧಿಸಿ ಕಾಸರಗೋಡಿನ ಕಲ್ನಾಡಿನ ಪ್ರಸನ್ನಕುಮಾರ್ ಕೆ.ವಿ.ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಸನ್ನಕುಮಾರ್ ಅವರು ಜೂ. 27ರಂದು ಕಾರಿನಲ್ಲಿ ಮನೆಯವರ ಜತೆ ಸುಬ್ರಹ್ಮಣ್ಯಕ್ಕೆ ಹೋಗಿ ಸಂಜೆ …
Read More »ಅಕ್ರಮವಾಗಿ ಜಾನುವಾರು ಸಾಗಣೆ ಕೇಸ್ ತನಿಖೆ
ಹುಬ್ಬಳ್ಳಿ: ಕಾನೂನು ಬಾಹಿರವಾಗಿ ಜಾನುವಾರುಗಳನ್ನು ಕೂಡಿಹಾಕಿ ಕಸಾಯಿ ಖಾನೆಗೆ ಸಾಗಿಸಲಾಗುತ್ತಿದೆ ಎಂದು ಆರೋಪಿಸಿ ವಿಶ್ವ ಹಿಂದೂ ಪರಿಷತ್, ಬಜರಂಗದಳ ಕಾರ್ಯಕರ್ತರು ಶನಿವಾರ ರಾತ್ರಿ ಪ್ರತಿಭಟನೆ ನಡೆಸಿದ್ದ ಬೆನ್ನಲ್ಲಿಯೇ ಇಲ್ಲಿಯ ಕಸಬಾಪೇಟೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಇಬ್ರಾಹಿಂಪೂರ 1ನೇ ಕ್ರಾಸ್ನಲ್ಲಿರುವ ಕಸಾಯಿ ಡೆವಲ್ಪಮೆಂಟ್ ಅಸೋಸಿಯೇಷನ್ ಹೆಸರಿನ ಕಟ್ಟಡದಲ್ಲಿ ಬಹಳಷ್ಟು ಎಮ್ಮೆಯ ಕರು, ಆಕಳು, ಆಕಳು ಕರು, ವಿವಿಧ ತಳಿಯ ದನಗಳನ್ನು ಕಟ್ಟಿ ಹಾಕಿದ ಆರೋಪದಡಿ ಪೊಲೀಸರು ಪ್ರಕರಣ …
Read More »ಮದ್ಯ ಸೇವಿಸಿ ಗಲಾಟೆ; ಚಾಕುವಿನಿಂದ ಇರಿದು ವ್ಯಕ್ತಿ ಕೊಲೆ
ಚನ್ನಪಟ್ಟಣ: ಮದ್ಯದ ಅಮಲಿನಲ್ಲಿ ಕ್ಷುಲ್ಲಕ ವಿಚಾರಕ್ಕೆ ಉಂಟಾದ ಜಗಳ ಕೊಲೆಯಲ್ಲಿ ಅಂತ್ಯಗೊಂಡಿದ್ದು, ಆಟೊ ಚಾಲಕ ಭರತ್ (28) ಚಾಕು ಇರಿತದಿಂದ ಮೃತಪಟ್ಟಿದ್ದಾರೆ. ಘಟನೆ ನಗರದ ಸಾತನೂರು ಸರ್ಕಲ್ ಸಮೀಪದ ಖಾಸಗಿ ಹೋಟೆಲ್ ಎದುರು ನಡೆದಿದೆ. ಬಾರ್ನಲ್ಲಿ ಆರಂಭವಾದ ಜಗಳದ ಬಳಿಕ ಅಭಿ (27) ಮತ್ತು ಮಧು (26) ಭರತ್ನನ್ನು ಹಿಂಬಾಲಿಸಿ ಹೋಟೆಲ್ ಬಳಿ ಚಾಕುವಿನಿಂದ ಕುತ್ತಿಗೆಗೆ ಇರಿದಿದ್ದಾರೆ. ತೀವ್ರ ರಕ್ತಸ್ರಾವದಿಂದ ಭರತ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ …
Read More »ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಬಗ್ಗೆ ಕೆಟ್ಟದ್ದಾಗಿ ಕಮೆಂಟ್: ಇಬ್ಬರ ವಿರುದ್ಧ ಪ್ರಕರಣ ದಾಖಲು
ಮಂಗಳೂರು: ಇತ್ತೀಚೆಗೆ ನಿಧನರಾದ ದಕ್ಷಿಣ ಕನ್ನಡದ ಖಾಝಿ ಅಲ್ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅವರ ಬಗ್ಗೆ ಫೇಸ್ಬುಕ್ನಲ್ಲಿ ಅವಹೇಳನಕಾರಿ ಕಾಮೆಂಟ್ ಹಾಕಿದ ಆರೋಪದಡಿ ಇಬ್ಬರ ವಿರುದ್ಧ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಾರ್ತಾಭಾರತಿ ಫೇಸ್ಬುಕ್ ಪೇಜ್ನಲ್ಲಿ ಪ್ರಕಟಿಸಿದ್ದ ಖಾಝಿ ಅವರ ಧಾರ್ಮಿಕ ಬೋಧನೆಯ ವಿಡಿಯೊಗೆ ವಿಶ್ವೇಶ್ವರ ಭಟ್ ಹಾಗೂ ಕ್ಲೇರಾ ರೂಫ್67 ಎಂಬ ಹೆಸರಿನ ಖಾತೆಗಳಿಂದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡುವ ರೀತಿಯ ಕಾಮೆಂಟ್ಗಳನ್ನು ಮಾಡಲಾಗಿದೆ ಎಂದು …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





