ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಅಡಿಗೆಬೈಲು ಗ್ರಾಮದಲ್ಲಿ ಮಹಿಳೆಯೊಬ್ಬಳ ವಿಚಾರವಾಗಿ ಇಬ್ಬರ ನಡುವೆ ನಡೆದ ಜಗಳ ಭೀಕರ ತಿರುವು ಪಡೆದುಕೊಂಡಿದೆ. ಶೇಷಗಿರಿ ಎಂಬಾತ ಲಾಂಗ್ನಿಂದ ದಾಳಿ ನಡೆಸಿದ ವೇಳೆ ಅರುಣ್ ಎಂಬಾತನ ಒಂದು ಕೈ ಮಣಿಕಟ್ಟಿನಿಂದ ಸಂಪೂರ್ಣವಾಗಿ ತುಂಡಾಗಿದೆ. ಗಾಯಾಳುವನ್ನು ಮೊದಲು ಚಿಕ್ಕಮಗಳೂರು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ರವಾನಿಸಲಾಗಿದೆ. ಘಟನೆಗೆ ಸಂಬಂಧಿಸಿ ಬಾಳೆಹೊನ್ನೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
Read More »ರಾಜ್ಯದಲ್ಲಿ ಮತ್ತೊಂದು ಪೈಶಾಚಿಕ ಕೃತ್ಯ : ಅಪ್ರಾಪ್ತ ಬಾಲಕರಿಂದ 5 ವರ್ಷದ ಬಾಲಕಿ ಮೇಲೆ ಗ್ಯಾಂಗ್ ರೇಪ್.!
ದಕ್ಷಿಣ ಕನ್ನಡ ಜಿಲ್ಲೆಯ ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 5 ವರ್ಷದ ಬಾಲಕಿಯ ಮೇಲೆ ಮೂರು ವರ್ಷಗಳ ಹಿಂದೆ ನಡೆದಿದ್ದ ಸಾಮೂಹಿಕ ಅತ್ಯಾಚಾರದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಇಬ್ಬರು ಅಪ್ರಾಪ್ತರು ಈ ಕೃತ್ಯ ಎಸಗಿದ್ದು, ಘಟನೆಯನ್ನು ಮೊಬೈಲ್ನಲ್ಲಿ ವಿಡಿಯೋ ಮಾಡಿದ್ದರೆಂದು ಆರೋಪಿಸಲಾಗಿದೆ. ಇತ್ತೀಚೆಗೆ ಆ ವಿಡಿಯೋ ಹೊರಬಂದ ನಂತರ ಪ್ರಕರಣ ಬಹಿರಂಗಗೊಂಡಿದೆ. ಆರೋಪಿಗಳ ಕಡೆಯವರು ಬೆದರಿಕೆ ಒಡ್ಡಿದರೂ ಬಾಲಕಿಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಸಂಬಂಧ ಮೂವರು …
Read More »ನೌಕರರ ಗಳಿಕೆ ರಜೆ ನಗದೀಕರಣದಲ್ಲಿ 4 ಕೋಟಿ ರೂ. ವಂಚನೆ: SDA ಅರೆಸ್ಟ್
ತುಮಕೂರು: ನೌಕರರ ಗಳಿಕೆ ರಜೆ ನಗದೀಕರಣ ಮಂಜೂರಾತಿ ಪ್ರಕರಣದಲ್ಲಿ 4.24 ಕೋಟಿ ರೂ. ವಂಚಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಮಧುಗಿರಿ ತಾಲೂಕು ಪಂಚಾಯಿತಿ ದ್ವಿತೀಯ ದರ್ಜೆ ಸಹಾಯಕಿ ಸೌಮ್ಯಾ ಮತ್ತು ಅವರ ಪತಿ ಜಿ.ಆರ್. ರಮೇಶ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಅಕ್ರಮ ಬೆಳಕಿಗೆ ಬರುತ್ತಿದ್ದಂತೆ ಸೌಮ್ಯಾ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ. ಆಕ್ರಮದಲ್ಲಿ ಭಾಗಿಯಾಗಿರುವ ಪತಿ ಜೊತೆಗೆ ತಲೆಮರಿಸಿಕೊಂಡಿದ್ದ ಸೌಮ್ಯ ಮತ್ತು ರಮೇಶ್ ಅವರನ್ನು ಸೋಮವಾರ ರಾತ್ರಿ ಮಧುಗಿರಿ ಪೊಲೀಸರು ಬಂಧಿಸಿದ್ದಾರೆ. …
Read More »ವಾರಕ್ಕೊಂದು ಬೈಕ್ ಕದಿಯುತ್ತಿದ್ದ ‘ಸ್ಪ್ಲೆಂಡರ್ ಸಿದ್ದಾರೆಡ್ಡಿ’ ಬಳ್ಳಾರಿಯಲ್ಲಿ ಅಂದರ್!
ಬಳ್ಳಾರಿ ಜಿಲ್ಲೆಯ ಸಿರಗುಪ್ಪ ಪೊಲೀಸರು ದ್ವಿಚಕ್ರ ವಾಹನ ಕಳ್ಳತನ ಪ್ರಕರಣವನ್ನು ಭೇದಿಸಿ, ಆಟೋ ಚಾಲಕ ಸಿದ್ದಾರೆಡ್ಡಿ ಅಲಿಯಾಸ್ ‘ಸ್ಪ್ಲೆಂಡರ್’ ಸಿದ್ದಾರೆಡ್ಡಿಯನ್ನು ಬಂಧಿಸಿದ್ದಾರೆ. ಆರೋಪಿಯಿಂದ 20.50 ಲಕ್ಷ ರೂ. ಮೌಲ್ಯದ 41 ಬೈಕ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಳೆದ ಒಂದೂವರೆ ವರ್ಷದಿಂದ ನಕಲಿ ಕೀ ಬಳಸಿ ಬೈಕ್ಗಳನ್ನು ಕದಿಯುತ್ತಿದ್ದ ಆರೋಪಿ, ನಕಲಿ ಆರ್ಸಿ ಕಾರ್ಡ್ಗಳನ್ನು ಸೃಷ್ಟಿಸಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ. ಬಳ್ಳಾರಿ, ಚಿತ್ರದುರ್ಗ, ವಿಜಯನಗರ ಹಾಗೂ ಆಂಧ್ರಪ್ರದೇಶದಲ್ಲಿ ಒಟ್ಟು 41 ಬೈಕ್ಗಳನ್ನು …
Read More »ದಾವಣಗೆರೆಯಲ್ಲಿ ಶಂಕಿತ ಉಗ್ರ ಬಂಧನ ; ಅಯೋಧ್ಯೆ ರಾಮಮಂದಿರ ಗುರಿಯಾಗಿಸಿದ್ದ ಸಂಚು ಬಹಿರಂಗ
ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಬನ್ನಿಕೋಡು ಗ್ರಾಮದಲ್ಲಿ ಅಡಗಿದ್ದ ಉತ್ತರ ಪ್ರದೇಶ ಮೂಲದ 20 ವರ್ಷದ ಸುಹೇಲ್ ಎಂಬ ಶಂಕಿತನನ್ನು ಕೇಂದ್ರ ಗುಪ್ತಚರ ಇಲಾಖೆ ಹಾಗೂ ಪೊಲೀಸರು ಜಂಟಿ ಕಾರ್ಯಾಚರಣೆಯಲ್ಲಿ ಬಂಧಿಸಿದ್ದಾರೆ. ಪಾಕಿಸ್ತಾನ ಮೂಲದ ಉಗ್ರ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿದ್ದಾನೆ ಎಂಬ ಶಂಕೆ ವ್ಯಕ್ತವಾಗಿದ್ದು, ಅಯೋಧ್ಯೆಯ ರಾಮ ಮಂದಿರವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುವ ಉದ್ದೇಶ ಹೊಂದಿದ್ದಾನೆ ಎಂಬ ಮಾಹಿತಿ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಆತನ ಮೊಬೈಲ್ನಲ್ಲಿ ಪಾಕಿಸ್ತಾನ ಮೂಲದ …
Read More »ಕ್ಯಾಬ್ ಚಾಲಕನಿಂದ 10 ವರ್ಷದ ಬಾಲಕಿಯ ಅಪಹರಿಸಿ ಅತ್ಯಾಚಾರ, ಕೊಲೆ
ದಿಲ್ಲಿಯಲ್ಲಿ 10 ವರ್ಷದ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಎಸಗಿ ಕೊಲೆ ಮಾಡಿದ ಆರೋಪದ ಮೇಲೆ ಕ್ಯಾಬ್ ಚಾಲಕ ಬಬ್ಲುವನ್ನು ಪೊಲೀಸರು ಬಂಧಿಸಿದ್ದಾರೆ. ಪಾದಚಾರಿ ಮಾರ್ಗದಲ್ಲಿ ಮಲಗಿದ್ದ ಬಾಲಕಿಯನ್ನು ಕಾರಿನಲ್ಲಿ ಕರೆದೊಯ್ದು, ನಿರ್ಜನ ಪ್ರದೇಶದಲ್ಲಿ ಅಪರಾಧ ಎಸಗಿ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ. ಸಿಸಿಟಿವಿ, ಜಿಪಿಎಸ್ ಹಾಗೂ ಮೊಬೈಲ್ ಲೊಕೇಶನ್ ಮಾಹಿತಿ ಆಧರಿಸಿ ಆರೋಪಿಯನ್ನು ನಾಲ್ಕು ಗಂಟೆಗಳೊಳಗೆ ಬಂಧಿಸಲಾಗಿದೆ. ಕಸ್ಟಡಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ವೇಳೆ ನಡೆದ ಎನ್ಕೌಂಟರ್ನಲ್ಲಿ …
Read More »ಕಲ್ಲಿನಿಂದ ಜಜ್ಜಿ ವ್ಯಕ್ತಿಯ ಭೀಕರ ಕೊಲೆ, ಪತ್ನಿ, ಮಗನಿಗೆ ಅರಿವಿಲ್ಲ
ಹರಿಹರ: ತಾಲ್ಲೂಕಿನ ಚಿಕ್ಕಬಿದರೆ ಗ್ರಾಮದಲ್ಲಿ ದುಷ್ಕರ್ಮಿಗಳು ಕಲ್ಲಿನಿಂದ ಜಜ್ಜಿ ಗ್ರಾಮದ ಶಿವಪ್ಪ (44) ಎಂಬಾತನನ್ನು ಭೀಕರವಾಗಿ ಕೊಲೆ ಮಾಡಲಾಗಿದೆ. ಶಿವಪ್ಪ ಹೆಂಡತಿ ಮತ್ತು ಮಗನೊಂದಿಗೆ ಚಿಕ್ಕಬಿದರೆ ಕ್ಯಾಂಪ್ನಲ್ಲಿ ವಾಸವಿದ್ದರು. ನರೇಗಾ ಕೆಲಸಕ್ಕೆ ಹೋಗುತ್ತಿದ್ದ ಪತ್ನಿ ಸಾವಿತ್ರಮ್ಮ ಬೆಳಿಗ್ಗೆ 11.30ಕ್ಕೆ ವಾಪಸ್ ಬಂದಾಗ ಗಂಡ ಮನೆಯಲ್ಲಿರಲಿಲ್ಲ.ರಾತ್ರಿ 10ರವರೆಗೂ ಕಾದು, ಆತ ಬಾರದಿದ್ದಾಗ ಪತ್ನಿ ಹಾಗೂ ಮಗ ಊಟ ಮಾಡಿ ಮಲಗಿದ್ದರು. ಜೂನ್ 23ರ ಮುಂಜಾನೆ 4.30ರ ಸುಮಾರಿಗೆ ಎಂದಿನಂತೆ ಶಿವಮ್ಮ ಎದ್ದು, …
Read More »ಗೋವಾ ಮದ್ಯ ಸಾಗಾಟಕ್ಕೆ ಖತರ್ನಾಕ್ ಪ್ಲಾನ್! ಮೇಲೆ ಗೊಬ್ಬರ ಒಳಗೆ ಕೋಟಿ ಮೌಲ್ಯದ ಲಿಕ್ಕರ್
ಗೋವಾದಿಂದ ಮಹಾರಾಷ್ಟ್ರಕ್ಕೆ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ಅಂತರರಾಜ್ಯ ಜಾಲವನ್ನು ವಿಜಯಪುರ ಪೊಲೀಸರು ಭೇದಿಸಿದ್ದಾರೆ. ಕೊಲ್ಹಾರ ಟೋಲ್ ಬಳಿ ಖಚಿತ ಮಾಹಿತಿ ಮೇರೆಗೆ ಟ್ರಕ್ ತಪಾಸಣೆ ನಡೆಸಿದ ವೇಳೆ ಎರೆಹುಳ ಗೊಬ್ಬರದ ಚೀಲಗಳ ಕೆಳಗೆ ಅಡಗಿಸಿಟ್ಟಿದ್ದ ಗೋವಾ ಮದ್ಯ ಪತ್ತೆಯಾಗಿದೆ. ಆರಂಭದಲ್ಲಿ ಟ್ರಕ್ನಲ್ಲಿ ಗೊಬ್ಬರ ಮಾತ್ರ ಇದೆ ಎಂದು ಚಾಲಕರು ಪೊಲೀಸರನ್ನು ದಾರಿ ತಪ್ಪಿಸಲು ಯತ್ನಿಸಿದ್ದರು. ಪೊಲೀಸರ ತನಿಖೆಯಲ್ಲಿ ಖದೀಮರು ಅತ್ಯಂತ ಚಾಣಾಕ್ಷತನದಿಂದ ಮದ್ಯ ಸಾಗಾಟ ನಡೆಸುತ್ತಿದ್ದದ್ದು ಬೆಳಕಿಗೆ ಬಂದಿದೆ. ಮಾರ್ಗದ …
Read More »ಅಕ್ರಮ ಬಡಾವಣೆಯ 50ಕ್ಕೂ ಅಧಿಕ ನಿವೇಶನಗಳಿಗೆ ಇ-ಖಾತಾ: ಕಂದಾಯ ಅಧಿಕಾರಿ ಅಮಾನತು
ಬೆಂಗಳೂರು: ಅಕ್ರಮವಾಗಿ ನಿರ್ಮಿಸಿದ್ದ ಬಡಾವಣೆಯ 50ಕ್ಕೂ ಅಧಿಕ ನಿವೇಶನಗಳಿಗೆ ಕಾನೂನು ಬಾಹಿರವಾಗಿ ಎ-ಖಾತಾ ಮತ್ತು ಇ- ಖಾತಾ ಮಾಡಿಕೊಟ್ಟು ನಗರ ಪಾಲಿಕೆಗೆ ಕೋಟ್ಯಂತರ ರೂ. ನಷ್ಟ ಉಂಟು ಮಾಡಿದ ಆರೋಪದ ಮೇಲೆ ಹೆರೋಹಳ್ಳಿ ಉಪ ವಿಭಾಗದ ಸಹಾಯಕ ಕಂದಾಯ ಅಧಿಕಾರಿ ಕೆ.ಎಸ್.ಮಂಜುಳಾ ಅವರನ್ನು ಜಿಬಿಎ ಅಮಾನತು ಮಾಡಿದೆ. ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಎನ್.ಆರ್. ರಮೇಶ್ ಈ ಕುರಿತಾಗಿ ಪಶ್ಚಿಮ ನಗರ ಪಾಲಿಕೆ ಆಯುಕ್ತರಿಗೆ ದೂರು ನೀಡಿದ್ದರು. ಸರ್ವೇ …
Read More »ಮಹಿಳೆಗೆ 4 ಲಕ್ಷ ರೂ. ಆನ್ಲೈನ್ ವಂಚನೆ: ಪ್ರಕರಣ ದಾಖಲು
ಹಿರಿಯಡ್ಕ: ಮಹಿಳೆಯೊಬ್ಬರಿಗೆ ಆನ್ಲೈನ್ ಹೂಡಿಕೆ ಹೆಸರಿನಲ್ಲಿ ಲಕ್ಷಾಂತರ ರೂ. ವಂಚಿಸಿರುವ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದೆ. ಶೀಲಾವತಿ ಎಂಬವರ ಮೊಬೈಲ್ಗೆ ಕಳೆದ 2 ತಿಂಗಳುಗಳ ಹಿಂದೆ ಅಪರಿಚಿತರು ವೆಬ್ಸೈಟ್ ಲಿಂಕ್ ಕಳುಹಿಸಿ, ಇದರಲ್ಲಿ ಹಣವನ್ನು ಹೂಡಿಕೆ ಮಾಡಿದರೆ ಹೆಚ್ಚಿನ ಹಣ ಕೊಡುವುದಾಗಿ ನಂಬಿಸಿದ್ದರು. ಅದರಂತೆ ಶೀಲಾವತಿ ಹಂತ ಹಂತವಾಗಿ 4,02,000ರೂ. ಹಣವನ್ನು ಹೂಡಿಕೆ ಮಾಡಿದ್ದರು. ನಂತರ ಸ್ವಲ್ಪ ಹಣವನ್ನು ಆರೋಪಿಗಳು ವಾಪಾಸ್ಸು ನೀಡಿದ್ದರು. ಉಳಿದ 3,50,000ರೂ. ಹಣವನ್ನು …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





