Breaking News

BigTv News

ಪತ್ನಿ ಮೇಲಿನ ಸಿಟ್ಟಿಗೆ ಸ್ಕ್ರಾಪ್ ಅಂಗಡಿಗಳಿಗೆ ಬೆಂಕಿ – ಬೆಂಗಳೂರಲ್ಲಿ ಕಿಡಿಗೇಡಿ ಅರೆಸ್ಟ್

ಬೆಂಗಳೂರು: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬ ಏಳು–ಎಂಟು ಸ್ಕ್ರಾಪ್ ಅಂಗಡಿಗಳಿಗೆ ಬೆಂಕಿ ಹಚ್ಚಿದ ಘಟನೆ ಬೆಂಗಳೂರಿನ ಅತ್ತಿಬೆಲೆ, ಆನೇಕಲ್ ಹಾಗೂ ಜಿಗಣಿ ಭಾಗಗಳಲ್ಲಿ ನಡೆದಿದೆ. ಸುದ್ದುಗುಂಟೆಪಾಳ್ಯದ ಈರುಳ್ಳಿ ವ್ಯಾಪಾರಿ ಜೀವನ್ ರಾಜ್, ಪತ್ನಿ ಮಗನೊಂದಿಗೆ ತವರು ಮನೆಗೆ ಹೋದಿದ್ದರಿಂದ ಆಕ್ರೋಶಗೊಂಡು ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ. ಅಕ್ಟೋಬರ್ 22ರಂದು ಸ್ಕ್ರಾಪ್ ಅಂಗಡಿಗಳಿಗೆ ಬೆಂಕಿ ಹಚ್ಚಿ, ಮೊಬೈಲ್‌ನಲ್ಲಿ ವಿಡಿಯೋ ಮಾಡಿಕೊಳ್ಳುತ್ತಿದ್ದ ಎಂದು ಆರೋಪಿಸಲಾಗಿದೆ. ಈ ವೇಳೆ ಅಂಗಡಿಯೊಂದರಲ್ಲಿ ಮಲಗಿದ್ದ ಮಣಿಕಂಠ ಎಂಬುವವರು …

Read More »

ಬೆಂಗಳೂರಿನ ಕ್ರಿಕೆಟ್ ಮ್ಯಾಚ್ ನಡುವೆ ಮಾರಾಮಾರಿ, ಬ್ಯಾಟ್, ವಿಕೆಟ್ ಹಿಡಿದು ಅಟ್ಟಾಡಿಸಿದ ತಂಡ

ಆನೇಕಲ್: ಕ್ರಿಕೆಟ್ ಪಂದ್ಯದ ವೇಳೆ ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಜಗಳ ಎರಡು ಯುವಕರ ಗುಂಪುಗಳ ನಡುವೆ ಮಾರಾಮಾರಿಗೆ ತಿರುಗಿದ ಘಟನೆ ಬೆಂಗಳೂರಿನ ಹೊರವಲಯದ ಆನೇಕಲ್ ಪಟ್ಟಣದ ಎ.ಎಸ್.ಬಿ. ಆಟದ ಮೈದಾನದಲ್ಲಿ ನಡೆದಿದೆ. ಪಂದ್ಯದ ವೇಳೆ ಮಾತಿನ ಚಕಮಕಿ ಆರಂಭವಾಗಿ ಬಳಿಕ ಯುವಕರು ಬ್ಯಾಟ್ ಹಾಗೂ ವಿಕೆಟ್ ಹಿಡಿದು ಪರಸ್ಪರ ಹಲ್ಲೆ ನಡೆಸಿದ್ದಾರೆ. ಕೆಲವರನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ ಮಾಡಲಾಗಿದ್ದು, ಯುವಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಘಟನೆಯ ದೃಶ್ಯಗಳು ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿವೆ. …

Read More »

ಹನುಮನ ದೇಗುಲದಲ್ಲಿ ದನದ ಮಾಂಸ ಬಿಸಾಡಿದ ಕಿಡಿಗೇಡಿಗಳು, ಭುಗಿಲೆದ್ದ ಆಕ್ರೋಶ

ಚಾಮರಾಜನಗರ: ಗುಂಡ್ಲುಪೇಟೆ ಪಟ್ಟಣದ ಆಂಜನೇಯ ದೇವಸ್ಥಾನದಲ್ಲಿ ದನದ ಮಾಂಸದ ತ್ಯಾಜ್ಯ ಎಸೆದಿರುವ ಘಟನೆ ನವೆಂಬರ್ 15ರಂದು ಬೆಳಕಿಗೆ ಬಂದಿದೆ. ಮುಂಜಾನೆ ಪೂಜೆಗೆಂದು ದೇವಸ್ಥಾನಕ್ಕೆ ಬಂದ ಅರ್ಚಕರು ಇದನ್ನು ಗಮನಿಸಿದ್ದಾರೆ. ಘಟನೆಯಿಂದ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು, ಕೃತ್ಯವನ್ನು ಖಂಡಿಸಿದ್ದಾರೆ. ಈ ಸಂಬಂಧ ಗುಂಡ್ಲುಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ದೇವಸ್ಥಾನದಲ್ಲಿ ಮಾಂಸದ ತ್ಯಾಜ್ಯ ಎಸೆದವರನ್ನು ಪತ್ತೆಹಚ್ಚಿ ಬಂಧಿಸುವಂತೆ ಆಗ್ರಹಿಸಿದ್ದಾರೆ.

Read More »

ಬಾಲಕಿಗೆ ಲೈಂಗಿಕ ಕಿರುಕುಳ: ಇಬ್ಬರ ವಿರುದ್ಧ ಪೋಕ್ಸೊ ಕೇಸು

ಕಾಸರಗೋಡು: ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಆಕೆಯ ಸಂಬಂಧಿಕ ಸೇರಿದಂತೆ ಇಬ್ಬರ ವಿರುದ್ಧ ಪೊಲೀಸರು ಪೋಕ್ಸೊ ಪ್ರಕರಣ ದಾಖಲಿಸಿದ್ದಾರೆ. ಕಳೆದ ಆಗಸ್ಟ್‌ನಲ್ಲಿ ಓಣಂ ಪರೀಕ್ಷೆ ಮುಗಿದ ಬಳಿಕ ಬಾಲಕಿಯನ್ನು ಮೈಸೂರಿಗೆ ಕರೆದೊಯ್ದ ಸಂದರ್ಭದಲ್ಲಿ ಸಂಬಂಧಿಕನೊಬ್ಬ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಬಳಿಕ ಮೈಸೂರಿನಿಂದ ಮಂಗಳೂರಿಗೆ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಮತ್ತೊಬ್ಬ ವ್ಯಕ್ತಿ ಕೂಡ ಬಾಲಕಿಗೆ ಕಿರುಕುಳ ನೀಡಿದ್ದಾನೆ ಎನ್ನಲಾಗಿದೆ. ಬಾಲಕಿ ನೀಡಿದ ದೂರಿನ ಮೇರೆಗೆ ಇಬ್ಬರ ವಿರುದ್ಧ …

Read More »

ಪತ್ನಿ ಜೊತೆ ಜಗಳ: ಮಧ್ಯೆ ಬಂದ ಮಗನನ್ನೇ ಕೊಂದ ತಂದೆ

ಕುಣಿಗಲ್: ತಾಲ್ಲೂಕಿನ ಚೌಡನಾಯಕನಪಾಳ್ಯ ಗ್ರಾಮದಲ್ಲಿ ಭಾನುವಾರ ಬೆಳಗಿನ ಜಾವ ತಂದೆಯೇ ಮಗನನ್ನು ಕೊಲೆ ಮಾಡಿರುವ ಘಟನೆ ನಡೆದಿದೆ. ಸುನೀಲ್ (16) ಕೊಲೆಯಾದ ಬಾಲಕನಾಗಿದ್ದು, ತಂದೆ ನಂಜೇಗೌಡ (45) ಆರೋಪಿ. ನಂಜೇಗೌಡ ಪತ್ನಿ ರಂಜಿತಾ ಜತೆ ಜಗಳವಾಡುತ್ತಿದ್ದಾಗ, ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಯಾಗಿದ್ದ ಮಗ ಸುನೀಲ್ ಮಧ್ಯೆ ಅಡ್ಡ ಬಂದಿದ್ದಾನೆ. ಈ ವೇಳೆ ಕೋಪಗೊಂಡ ತಂದೆ ಹಾರೇಕೋಲಿನಿಂದ ಮಗನಿಗೆ ಹೊಡೆದು ಹತ್ಯೆ ಮಾಡಿದ್ದಾನೆ. ಸ್ಥಳಕ್ಕೆ ಕುಣಿಗಲ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, …

Read More »

ಯುವಕನ ವಿರುದ್ಧ ಪೋಕ್ಸೊ ಪ್ರಕರಣ

ಕಾರವಾರ: ತಾಲ್ಲೂಕಿನ ಗ್ರಾಮವೊಂದರಲ್ಲಿ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಉತ್ತರ ಪ್ರದೇಶದ ಶಂಶಾದ್ (22) ಎಂಬಾತನ ವಿರುದ್ಧ ಚಿತ್ತಾಕುಲ ಠಾಣೆಯಲ್ಲಿ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಕ್ಷೌರಿಕ ಕೆಲಸ ಮಾಡುತ್ತಿದ್ದ ಆರೋಪಿ ವಿರುದ್ಧ ಬಾಲಕಿಯ ಪೋಷಕರು ದೂರು ನೀಡಿದ್ದಾರೆ. ಆರೋಪಿ ಪರಾರಿಯಾಗಿದ್ದು, ಬಂಧನಕ್ಕಾಗಿ ವಿಶೇಷ ಪೊಲೀಸ್ ತಂಡ ರಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಯನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಬಜರಂಗ ದಳ, ವಿಶ್ವ …

Read More »

ಬೆಂಗಳೂರು | ಪಿಎಸ್‌ಐ ಮೇಲೆ ಹಲ್ಲೆ: ಚಾಲಕನ ಬಂಧನ

ಬೆಂಗಳೂರು: ಮದ್ಯಪಾನ ಮಾಡಿ ಕಾರು ಚಲಾಯಿಸಿ ಕಾಂಪೌಂಡ್‌ಗೆ ಡಿಕ್ಕಿ ಹೊಡೆದಿದ್ದನ್ನು ಪ್ರಶ್ನಿಸಿದ ಪೊಲೀಸ್ ಅಧಿಕಾರಿಯ ಮೇಲೆ ಹಲ್ಲೆ ನಡೆಸಿ, ಸಮವಸ್ತ್ರ ಹರಿದ ಘಟನೆ ಮಹದೇಶ್ವರ ನಗರದಲ್ಲಿ ನಡೆದಿದೆ. ನ.13ರ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಘಟನೆ ನಡೆದಿದ್ದು, ಆರೋಪಿ ಸಚಿನ್ (35) ಎಂಬಾತನನ್ನು ಬ್ಯಾಡರಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಕಾರು ಬ್ರೋಕರ್ ಸಚಿನ್ ಕುಡಿದ ಮತ್ತಿನಲ್ಲಿ ಅತಿವೇಗವಾಗಿ ಕಾರು ಚಲಾಯಿಸಿ ಮನೆಯೊಂದರ ಕಾಂಪೌಂಡ್‌ಗೆ ಡಿಕ್ಕಿ ಹೊಡೆದಿದ್ದಾನೆ. ಸ್ಥಳಕ್ಕೆ ಬಂದ ಪೊಲೀಸರು …

Read More »

ಒಂದು ಕಾಲ್ ಮಾಡಬೇಕಿತ್ತು, ಪೋನ್ ಕೊಡ್ತೀರಾ ಅಂತ ಯಾರಾದ್ರೂ ಕೇಳಿದ್ರೆ ಎಚ್ಚರ!

ಮಂಡ್ಯ: ಅಪರಿಚಿತ ಮಹಿಳೆಗೆ ಮೊಬೈಲ್ ಕರೆ ಮಾಡಲು ಫೋನ್ ನೀಡಿದ್ದ ಯುವಕನೊಬ್ಬ ಕೊಲೆ ಆರೋಪ ಎದುರಿಸಿ ಎರಡೂವರೆ ವರ್ಷ ಜೈಲು ಶಿಕ್ಷೆ ಅನುಭವಿಸಿದ ಘಟನೆ ಪಾಂಡವಪುರದಲ್ಲಿ ನಡೆದಿದೆ. 2019ರಲ್ಲಿ ನಾಪತ್ತೆಯಾಗಿದ್ದ ಮಂಜು ಪ್ರಕರಣದಲ್ಲಿ ರಾಜೇಶ್ ಎಂಬ ಯುವಕನನ್ನು ಪೊಲೀಸರು ಬಂಧಿಸಿದ್ದರು. ಮಹಿಳೆಗೆ ಕೊನೆಯದಾಗಿ ಕರೆ ಮಾಡಲು ಫೋನ್ ನೀಡಿದ್ದ ರಾಜೇಶ್‌ನನ್ನೇ ಕೊಲೆ ಆರೋಪಿ ಎಂದು ಬಂಧಿಸಲಾಗಿತ್ತು. ಆದರೆ ಇದೀಗ ಏಳು ವರ್ಷಗಳ ಬಳಿಕ ಮಂಜು ನಾಗಮಂಗಲದಲ್ಲಿ ಜೀವಂತವಾಗಿ ಪತ್ತೆಯಾಗಿದ್ದು, ತಾನೇ …

Read More »

ಜಮೀನು ವ್ಯಾಜ್ಯಕ್ಕೆ ತಂದೆ-ಮಗನೇ ಬಲಿ: ಕಬ್ಬು ಕಟಾವು ಮಾಡಲು ಹೋದವರ ಮೇಲೆ ಮಾರಣಾಂತಿಕ ಹಲ್ಲೆ

ವಿಜಯಪುರ: ಜಮೀನು ವಿವಾದದ ಹಿನ್ನೆಲೆಯಲ್ಲಿ ಕಬ್ಬು ಕಟಾವು ಮಾಡಲು ಹೋದ ತಂದೆ-ಮಗನನ್ನು ದೊಣ್ಣೆ ಹಾಗೂ ಕಲ್ಲುಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿರುವ ಘಟನೆ ಕೊಲ್ಹಾರ ತಾಲೂಕಿನ ತಡಲಗಿ ಗ್ರಾಮದಲ್ಲಿ ನಡೆದಿದೆ. ಹನುಮಂತ ಸಾಲವಾಡಗಿ ಹಾಗೂ ಪುತ್ರ ಮಂಜುನಾಥ ಮೃತಪಟ್ಟವರು. ಹನುಮವ್ವ ಮೇಟಿ ಅವರಿಗೆ ಸೇರಿದ ಜಮೀನಿನಲ್ಲಿ ಸಾಲವಾಡಗಿ ಕುಟುಂಬ ಕಬ್ಬು ಬೆಳೆದಿತ್ತು. ಕಟಾವು ಮಾಡಲು ಹೋದಾಗ ಪಾಲಿನ ವಿಚಾರವಾಗಿ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿದ್ದು, ಹಲ್ಲೆಯಿಂದ ತಂದೆ-ಮಗ ಸ್ಥಳದಲ್ಲೇ …

Read More »

ಬ್ಲಾಕ್‌ಮೇಲ್ ಮಾಡಿ ₹14 ಲಕ್ಷ ಮೌಲ್ಯದ ಚಿನ್ನಾಭರಣ ಸುಲಿಗೆ: ಆರೋಪಿ ಬಂಧನ

ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನಲ್ಲಿ ಖಾಸಗಿ ಫೋಟೋಗಳನ್ನು ಸಾಮಾಜಿಕವಾಗಿ ಬಹಿರಂಗಪಡಿಸುವುದಾಗಿ ಬೆದರಿಸಿ ಮಹಿಳೆಯೊಬ್ಬರಿಂದ ₹14 ಲಕ್ಷ ಮೌಲ್ಯದ ಚಿನ್ನಾಭರಣ ಸುಲಿಗೆ ಮಾಡಿದ ಆರೋಪದ ಮೇಲೆ ಸಚೀನ್ ಶಿವಾಜಿ ಪೂಜೇರಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯು ಖಾಸಗಿ ಫೋಟೋಗಳನ್ನು ಮಹಿಳೆಯ ಪತಿಗೆ ಕಳುಹಿಸಿ ಸಂಸಾರ ಹಾಳು ಮಾಡುವುದಾಗಿ ಹಾಗೂ ಪತಿಯನ್ನು ಕೊಲೆ ಮಾಡುವುದಾಗಿ ಬೆದರಿಸಿ ಚಿನ್ನಾಭರಣ ಪಡೆದುಕೊಂಡಿದ್ದಾನೆ ಎಂದು ಮಹಿಳೆ ದೂರು ನೀಡಿದ್ದರು. ನ.10ರಂದು ಆರೋಪಿಯನ್ನು ಬಂಧಿಸಿದ ಗೋಕಾಕ ಗ್ರಾಮೀಣ ಪೊಲೀಸರು, …

Read More »