ಹಿರಿಯೂರು: ಕಲ್ಪವೃಕ್ಷ ಗ್ರಾಮೀಣಾಭಿವೃದ್ಧಿ ಸಹಕಾರಿ ಸಂಘದ ಹೆಸರಿನಲ್ಲಿ ನೂರಾರು ಜನರಿಂದ ಉಳಿತಾಯ ಹಾಗೂ ಪಿಗ್ಮಿ ಖಾತೆಗಳ ಮೂಲಕ ಕೋಟ್ಯಂತರ ರೂಪಾಯಿ ಸಂಗ್ರಹಿಸಿ ವಂಚಿಸಿರುವ ಆರೋಪ ಕೇಳಿಬಂದಿದೆ. ಸಂಘದ ಕಾರ್ಯದರ್ಶಿ ತಮ್ಮಿಂದ ₹35 ಲಕ್ಷ ಪಡೆದು ಮರಳಿಸಿಲ್ಲ. ಭಾನುಪ್ರಕಾಶ್ ಎಂಬುವವರಿಂದಲೂ ₹20 ಲಕ್ಷ ಪಡೆದು ವಂಚಿಸಿದ್ದಾರೆ ಎಂದು ಜಿ. ದೇವರಾಜ್ ಪೊಲೀಸರಿಗೆ ದೂರು ನೀಡಿದ್ದಾರೆ. ಇನ್ನೂ 12 ಮಂದಿ ವಂಚನೆಗೆ ಒಳಗಾಗಿದ್ದು, ಆರೋಪಿ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ನಗರ …
Read More »ಪೌರ ಕಾರ್ಮಿಕರ ಜೊತೆ ಕಿರಿಕ್ ಮಾಡಿಕೊಂಡ ಮಹಿಳೆ : ಮನೆ ಮುಂದೆ ಲೋಡ್ ಕಸ ಸುರಿದ ಸಿಬ್ಬಂದಿ!
ಬೆಂಗಳೂರು: ನೆಲಮಂಗಲದ ವೀವರ್ಸ್ ಕಾಲೋನಿಯಲ್ಲಿ ಮನೆಯ ಮುಂದಿನ ಕಸವನ್ನು ಮೊದಲು ತೆರವುಗೊಳಿಸುವಂತೆ ಪುಟ್ಟಮ್ಮ ಎಂಬ ಮಹಿಳೆ ಪೌರಕಾರ್ಮಿಕರೊಂದಿಗೆ ವಾಗ್ವಾದ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎನ್ನಲಾಗಿದೆ. ಇದರಿಂದ ಆಕ್ರೋಶಗೊಂಡ ಪೌರಕಾರ್ಮಿಕ ಅಶೋಕ್ ಕುಮಾರ್ ಹಾಗೂ ಇತರ ಸಿಬ್ಬಂದಿ ಸೇರಿ ಮಹಿಳೆಯ ಮನೆ ಮುಂದೆ ಒಂದು ಲೋಡ್ ಕಸ ಸುರಿದಿದ್ದಾರೆ. ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದ್ದು, ಮಹಿಳೆಯ ವರ್ತನೆ ಹಾಗೂ ಪೌರಕಾರ್ಮಿಕರ ಸೇಡಿನ ಕ್ರಮ ಎರಡಕ್ಕೂ ಸಾರ್ವಜನಿಕರಿಂದ ಆಕ್ಷೇಪ ವ್ಯಕ್ತವಾಗಿದೆ.
Read More »ಶ್ರೀನಿವಾಸಪುರ: ಅರಣ್ಯ ಸಿಬ್ಬಂದಿ ಮೇಲೆ ಹಲ್ಲೆ
ಶ್ರೀನಿವಾಸಪುರ: ತಾಲ್ಲೂಕಿನ ಉಪ್ಪರಪಲ್ಲಿ ಗ್ರಾಮದ ಮಜರ ಮಲ್ಲಂಪಲ್ಲಿಯಲ್ಲಿ ಅರಣ್ಯ ಪ್ರದೇಶದ ಒತ್ತುವರಿ ತೆರವು ಕಾರ್ಯಾಚರಣೆ ವೇಳೆ ಅರಣ್ಯ ಸಿಬ್ಬಂದಿ ಹಾಗೂ ಸ್ಥಳೀಯರ ನಡುವೆ ಘರ್ಷಣೆ ನಡೆದಿದೆ. ಮೂವರು ಸಿಬ್ಬಂದಿ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಲಾಗಿದೆ. ಗಾಯಗೊಂಡ ಡಿಆರ್ಎಫ್ಒ ನವೀನ್, ವಾಚರ್ ಸೋಮಶೇಖರ್ ಹಾಗೂ ಗಾರ್ಡ್ ಜಮೀರ್ ಅವರನ್ನು ಶ್ರೀನಿವಾಸಪುರ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರ್ಯಾಚರಣೆ ವೇಳೆ ವಾಹನಗಳನ್ನೂ ಜಖಂಗೊಳಿಸಲಾಗಿದೆ ಎಂದು ಡಿಸಿಎಫ್ ಸರೀನಾ ಸಿಕ್ಕಲಿಗಾರ್ ಆರೋಪಿಸಿದ್ದಾರೆ. ಹಲ್ಲೆ ನಡೆಯುತ್ತಿದ್ದರೂ ಪೊಲೀಸರು …
Read More »ಅರಕೇರ ತಾಲ್ಲೂಕಿನಲ್ಲಿ 51 ಗಾಂಜಾ ಗಿಡ ಜಪ್ತಿ, ಆರೋಪಿ ಬಂಧನ
ರಾಯಚೂರು: ಅರಕೇರ ತಾಲ್ಲೂಕಿನ ದೇವರಗುಡ್ಡ ಗ್ರಾಮದ ಹೊಲವೊಂದರಲ್ಲಿ ಅಕ್ರಮವಾಗಿ ಬೆಳೆದಿದ್ದ 51 ಗಾಂಜಾ ಗಿಡಗಳನ್ನು ಜಾಲಹಳ್ಳಿ ಪೊಲೀಸರು ಬುಧವಾರ ಜಪ್ತಿ ಮಾಡಿದ್ದಾರೆ. ಸಿಪಿಐ ಪುಂಡಲೀಕ ಪಟ್ಟೆದಾರ ನೇತೃತ್ವದಲ್ಲಿ ದಾಳಿ ನಡೆಸಿದ ಪೊಲೀಸರು ₹11,94,500 ಮೌಲ್ಯದ 23 ಕೆ.ಜಿ 890 ಗ್ರಾಂ ಹಸಿ ಗಾಂಜಾ ಗಿಡಗಳನ್ನು ವಶಪಡಿಸಿಕೊಂಡಿದ್ದಾರೆ. ಗಾಂಜಾ ಬೆಳೆದ ಆರೋಪದಡಿ ಮದರಕಲ್ ಗ್ರಾಮದ ಸಾಬಣ್ಣ ಮಹಾದೇವಪ್ಪ ಎಂಬಾತನನ್ನು ಬಂಧಿಸಲಾಗಿದ್ದು, ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Read More »ವಿದ್ಯುತ್ ಇಲಾಖೆ ಸಿಬಂದಿ ಸೋಗಿನಲ್ಲಿ ಚಿನ್ನದ ಸರ ಕಿತ್ತು ಪರಾರಿ
ಕಾಸರಗೋಡು: ವಿದ್ಯುತ್ ಇಲಾಖೆಯ ಸಿಬ್ಬಂದಿ ಸೋಗಿನಲ್ಲಿ ಮನೆಗೆ ಬಂದ ಯುವಕನೊಬ್ಬ ಗೃಹಿಣಿಯ ಕುತ್ತಿಗೆಯಲ್ಲಿದ್ದ ಐದು ಪವನ್ ಚಿನ್ನದ ಸರ ಕಿತ್ತುಕೊಂಡು ಪರಾರಿಯಾದ ಘಟನೆ ಮಂಗಳವಾರ ಸಂಜೆ ಕೊಳತ್ತೂರಿನಲ್ಲಿ ನಡೆದಿದೆ. ಸ್ಥಳೀಯ ನಿವಾಸಿ ಶುಭಾ ಅವರ ಮನೆಗೆ ಬಂದ ಯುವಕ, ವಿದ್ಯುತ್ ತಂತಿ ಪರಿಶೀಲಿಸುವ ನೆಪದಲ್ಲಿ ಕೊಳವೆ ಬಾವಿ ಸಮೀಪಕ್ಕೆ ತೆರಳಿದ್ದಾನೆ. ಈ ವೇಳೆ ಅಲ್ಲಿಗೆ ಬಂದ ಶುಭಾ ಅವರ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಕಿತ್ತುಕೊಂಡಿದ್ದಾನೆ. ಜಗ್ಗಾಟದ ವೇಳೆ ನಾಲ್ಕು ಪವನ್ …
Read More »ಉಡುಪಿ: ಎಂಬ್ರಾಯ್ಡರಿ ಅಂಗಡಿಗೆ ನುಗ್ಗಿ ಮಾಲಕನ ಮೇಲೆ ಆಸಿಡ್ ದಾಳಿ!
ಉಡುಪಿ: ಬಾಡಿಗೆ ಮನೆಯ ಠೇವಣಿ ಹಣ ಮರಳಿ ನೀಡದ ವಿಚಾರಕ್ಕೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಎಂಬ್ರಾಯ್ಡರಿ ಅಂಗಡಿ ಮಾಲಕನ ಮೇಲೆ ಆಸಿಡ್ ಎರಚಿ ಹಲ್ಲೆ ನಡೆಸಿದ ಘಟನೆ ಬುಧವಾರ ನಡೆದಿದೆ. ಆರೋಪಿ ಸುರೇಶ್ ಆಚಾರ್ಯ ಮಾರಕಾಯುಧ ಹಾಗೂ ಆಸಿಡ್ನೊಂದಿಗೆ ಅಂಗಡಿಗೆ ನುಗ್ಗಿ ಮಾಲಕ ನವೀನ್ ಕುಮಾರ್ ಮೇಲೆ ದಾಳಿ ನಡೆಸಿದ್ದಾನೆ. ಘಟನೆಯಲ್ಲಿ ನವೀನ್ ಕುಮಾರ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಠೇವಣಿ ಹಣದ ವಿವಾದವೇ ದಾಳಿಗೆ ಕಾರಣ ಎನ್ನಲಾಗಿದ್ದು, ಪೊಲೀಸರು ಆರೋಪಿ ಸುರೇಶ್ …
Read More »ಚಿತ್ರದುರ್ಗ : ಮಗನ ಮೇಲಿನ ಹಲ್ಲೆಗೆ ಸೇಡು; ಯುವಕನ ಅಪಹರಿಸಿ ಕೊಲೆಗೈದು ಶವ ಹೂತಿಟ್ಟ ಮೂವರ ಬಂಧನ
ಚಿತ್ರದುರ್ಗ: ಮಗನ ಕಣ್ಣಿಗೆ ಹಲ್ಲೆ ಮಾಡಿದ ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಗುರುಕಿರಣ್ ಎಂಬ ಯುವಕನನ್ನು ಅಪಹರಿಸಿ ಕೊಲೆ ಮಾಡಿ ಶವ ಹೂತು ಹಾಕಿದ ಪ್ರಕರಣದಲ್ಲಿ ಮೂವರು ಆರೋಪಿಗಳ ವಿರುದ್ಧ ಪೊಲೀಸರು ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದಾರೆ. 2023ರಲ್ಲಿ ಗುರುಕಿರಣ್ ಹಾಗೂ ರಮೇಶ್ ಮಗ ಗೋಪಿ ನಡುವೆ ಗಲಾಟೆ ನಡೆದಿದ್ದು, ಗೋಪಿಯ ಬಲಗಣ್ಣಿಗೆ ಗಂಭೀರ ಗಾಯವಾಗಿತ್ತು. ಇದೇ ದ್ವೇಷದಿಂದ ರಮೇಶ್ ತನ್ನ ಸಂಬಂಧಿಕರಾದ ವಿರೂಪಾಕ್ಷ ಮತ್ತು ಸೋಮಶೇಖರ್ ಜೊತೆ ಸೇರಿ ಗುರುಕಿರಣ್ನನ್ನು ಆಟೋದಲ್ಲಿ …
Read More »ಶಾಲೆಗೆ ತೆರಳುತ್ತಿದ್ದ 9ನೇ ತರಗತಿ ವಿದ್ಯಾರ್ಥಿನಿಯ ಅಪಹರಣ; ಬಾಗಲಕೋಟೆ ಮೂಲದ ಆರೋಪಿ ಬಂಧನ
ಬಾಗಲಕೋಟೆ: ಶಾಲೆಗೆ ತೆರಳುತ್ತಿದ್ದ ಪರಿಶಿಷ್ಟ ಜಾತಿಯ ಅಪ್ರಾಪ್ತ ವಿದ್ಯಾರ್ಥಿನಿಯನ್ನು ಪುಸಲಾಯಿಸಿ ಕಾರಿನಲ್ಲಿ ಅಪಹರಿಸಿದ ಆರೋಪದಡಿ ಬಾಗಲಕೋಟೆ ಮೂಲದ ಗೂಡಾಸಾಬ್ ಯಾನೆ ಆಶಿಫ್ (23) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ವಿದ್ಯಾರ್ಥಿನಿ ಶಾಲೆಗೆ ಬಾರದಿರುವ ಬಗ್ಗೆ ಶಿಕ್ಷಕರು ಪೋಷಕರಿಗೆ ಮಾಹಿತಿ ನೀಡಿದ್ದರು. ಬಳಿಕ ಬಾಲಕಿಯ ತಾಯಿ ನೀಡಿದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿದ ಉಳ್ಳಾಲ ಪೊಲೀಸರು, ಮಂಗಳವಾರ ರಾತ್ರಿಯೇ ಸೋಮೇಶ್ವರದಲ್ಲಿ ಆರೋಪಿಯನ್ನು ವಶಕ್ಕೆ ಪಡೆದು ಬಾಲಕಿಯನ್ನು ರಕ್ಷಿಸಿದ್ದಾರೆ. ಬಾಲಕಿಯ ಹೇಳಿಕೆ ಆಧರಿಸಿ ಆರೋಪಿ …
Read More »ಪ್ಯಾಂಟ್ ಜೇಬಿನಲ್ಲಿ ₹1.30 ಕೋಟಿ ಮೌಲ್ಯದ ಚಿನ್ನ ಸಾಗಿಸುತ್ತಿದ್ದ ಯುವಕನ ಬಂಧನ
ದೇವನಹಳ್ಳಿ: ದುಬೈನಿಂದ ಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದ ಪ್ರಯಾಣಿಕನನ್ನು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ. ಅಕ್ಟೋಬರ್ 25ರಂದು ದುಬೈನಿಂದ ಆಗಮಿಸಿದ್ದ ಪ್ರಯಾಣಿಕನನ್ನು ತಪಾಸಣೆ ನಡೆಸಿದಾಗ, ಪ್ಯಾಂಟ್ ಜೇಬಿನಲ್ಲಿ ಬಚ್ಚಿಟ್ಟಿದ್ದ 900 ಗ್ರಾಂ ತೂಕದ ₹1.30 ಕೋಟಿ ಮೌಲ್ಯದ ಚಿನ್ನದ ಸರಗಳು ಪತ್ತೆಯಾಗಿವೆ. ಚಿನ್ನವನ್ನು ವಶಪಡಿಸಿಕೊಂಡ ಅಧಿಕಾರಿಗಳು ಕಸ್ಟಮ್ಸ್ ಕಾಯ್ದೆ-1962ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು, ಚಿನ್ನದ ಮೂಲ ಹಾಗೂ ಅಕ್ರಮ ಸಾಗಣೆಯ ಉದ್ದೇಶದ ಕುರಿತು ತನಿಖೆ ಮುಂದುವರಿಸಿದ್ದಾರೆ.
Read More »ಕೋಲಾರದಲ್ಲಿ ರೈತರು-ಅರಣ್ಯ ಇಲಾಖೆ ಮಧ್ಯೆ ಸಂಘರ್ಷ: ಸಿಬ್ಬಂದಿ ಮೇಲೆ ಮಚ್ಚಿನಿಂದ ಅಟ್ಯಾಕ್
ಕೋಲಾರ: ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಮಲ್ಲಂಪಲ್ಲಿ ಗ್ರಾಮದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಮಚ್ಚಿನಿಂದ ಹಲ್ಲೆ ನಡೆದಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸರ್ವೆ ನಂ.35ರ ಅರಣ್ಯ ಪ್ರದೇಶದಲ್ಲಿ ಗಿಡ ನೆಡುವ ಕಾರ್ಯಕ್ಕೆ ಮುಂದಾದ ವೇಳೆ ಚಲಪತಿ ಎಂಬಾತ ಅಡ್ಡಿಪಡಿಸಿ ಮಚ್ಚಿನಿಂದ ಹಲ್ಲೆ ನಡೆಸಿದ ಆರೋಪ ಕೇಳಿಬಂದಿದೆ. ಘಟನೆಯಲ್ಲಿ ಸಿಬ್ಬಂದಿಗಳಾದ ಸೋಮಶೇಖರ್, ಜಮೀರ್ ಹಾಗೂ ನವೀನ್ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿ ಚಲಪತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇತ್ತ ಅರಣ್ಯ ಇಲಾಖೆ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





