Breaking News

BigTv News

ಹಾಸನ ಜಿಲ್ಲಾ ನ್ಯಾಯಾಲಯದ ಎದುರೇ ರೌಡಿಶೀಟರ್‌ ಬರ್ಬರ ಹತ್ಯೆ

ಹಾಸನ ನಗರದ ಚನ್ನಪಟ್ಟಣದಲ್ಲಿರುವ ಜಿಲ್ಲಾ ನ್ಯಾಯಾಲಯದ ಎದುರು ತಡರಾತ್ರಿ ರೌಡಿಶೀಟರ್ ಮಂಜೇಶ್ ಕುಮಾರ್ (43) ಅವರನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಬರ್ಬರವಾಗಿ ಹತ್ಯೆಗೈದಿದ್ದಾರೆ. ಮೂಲತಃ ಹಾಸನ ಜಿಲ್ಲೆಯವರಾದ ಮಂಜೇಶ್ ಕುಟುಂಬದೊಂದಿಗೆ ಬೆಂಗಳೂರಿನಲ್ಲಿ ವಾಸವಾಗಿದ್ದು, ರೌಡಿಶೀಟರ್ ಆಗಿ ಗುರುತಿಸಿಕೊಂಡಿದ್ದರು. ಕೆಲಸದ ನಿಮಿತ್ತ ಹಾಸನಕ್ಕೆ ಬಂದಿದ್ದ ವೇಳೆ ಅವರನ್ನು ಹಿಂಬಾಲಿಸಿದ ದುಷ್ಕರ್ಮಿಗಳು, ಒಂಟಿಯಾಗಿದ್ದ ಸಂದರ್ಭದಲ್ಲಿ ದಾಳಿ ನಡೆಸಿ ತಲೆ, ಹೊಟ್ಟೆ ಹಾಗೂ ದೇಹದ ವಿವಿಧ ಭಾಗಗಳಿಗೆ ಗಂಭೀರ ಗಾಯಗೊಳಿಸಿ ಕೊಲೆ ಮಾಡಿ …

Read More »

ದೆಹಲಿ ವಿಮಾನ ನಿಲ್ದಾಣದಲ್ಲಿ ₹5.38 ಕೋಟಿ ಮೌಲ್ಯದ 15.38 ಕೆ.ಜಿ ಗಾಂಜಾ ವಶ

ದೆಹಲಿ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ₹5.38 ಕೋಟಿ ಮೌಲ್ಯದ 15.38 ಕೆ.ಜಿ ಹೈಡ್ರೋಪೋನಿಕ್ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಇಬ್ಬರು ಆರೋಪಿಗಳನ್ನು ಎನ್‌ಡಿಪಿಎಸ್ ಕಾಯ್ದೆಯಡಿ ಬಂಧಿಸಲಾಗಿದೆ. ಕೌಲಾಲಂಪುರದಿಂದ ಬಂದ ಪ್ರಯಾಣಿಕರ ಬ್ಯಾಗ್‌ನಲ್ಲಿದ್ದ ಎರಡು ಗೀಸರ್‌ಗಳ ಒಳಗೆ ಗಾಂಜಾವನ್ನು ಅಡಗಿಸಿಡಲಾಗಿತ್ತು. ಅನುಮಾನಾಸ್ಪದ ವರ್ತನೆಯ ಹಿನ್ನೆಲೆಯಲ್ಲಿ ತಪಾಸಣೆ ನಡೆಸಿದ ವೇಳೆ ಮಾದಕ ವಸ್ತು ಪತ್ತೆಯಾಗಿದೆ. 145 ವ್ಯಾಕ್ಯೂಮ್-ಸೀಲ್ಡ್ ಪ್ಯಾಕ್‌ಗಳಲ್ಲಿ ಸಂಗ್ರಹಿಸಿದ್ದ ಗಾಂಜಾವನ್ನು ವಶಪಡಿಸಿಕೊಂಡಿರುವ ಅಧಿಕಾರಿಗಳು, ಕಳ್ಳಸಾಗಣೆ ಜಾಲದ ಸಂಪರ್ಕಗಳ …

Read More »

ಕೈ ನರ ಕತ್ತರಿಸಿ, ತಲೆ ಜಜ್ಜಿ ಭೀಕರ ಕೊಲೆ: 1,400 ಕಿಮೀ ದೂರದಿಂದ ಬಂದು ಸ್ಕೆಚ್ ಹಾಕಿದ ದಂಪತಿ!

ದೆಹಲಿ ವಿಶ್ವವಿದ್ಯಾಲಯದ ಮಹಿಳಾ ಸಹಾಯಕ ಪ್ರಾಧ್ಯಾಪಕಿಯೊಬ್ಬರನ್ನು ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಹತ್ಯೆ ಮಾಡಿರುವ ಪ್ರಕರಣದಲ್ಲಿ ಪಶ್ಚಿಮ ಬಂಗಾಳದ ದಂಪತಿ ಹಾಗೂ ಅವರ 13 ವರ್ಷದ ಮಗನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪೂರ್ವ ದೆಹಲಿಯ ವಸುಂಧರಾ ಎನ್‌ಕ್ಲೇವ್‌ನಲ್ಲಿರುವ ಫ್ಲಾಟ್‌ನಲ್ಲಿ ಪ್ರಾಧ್ಯಾಪಕಿಯ ಶವ ರಕ್ತದ ಮಡುವಿನಲ್ಲಿ ಪತ್ತೆಯಾಗಿತ್ತು. ಬರ್ಧಮಾನ್‌ನಲ್ಲಿದ್ದ ಹಳೆಯ ಮನೆಯನ್ನು ಮಾರಲು ನಿರಾಕರಿಸಿದ್ದ ಕಾರಣ ಆರೋಪಿತ ದಂಪತಿ ಕೊಲೆಗೆ ಸಂಚು ರೂಪಿಸಿದ್ದರು ಎನ್ನಲಾಗಿದೆ. ದೆಹಲಿಗೆ ಬಂದು ಪರಿಚಯದ ನೆಪದಲ್ಲಿ ಫ್ಲಾಟ್‌ಗೆ ಪ್ರವೇಶಿಸಿ, …

Read More »

ರಸ್ತೆ ಅಪಘಾತ: ವಾಹನಗಳಿಗೆ ಢಿಕ್ಕಿ ಹೊಡೆದ ಬಸ್; ಓರ್ವ ಸಾವು; ಸಿಸಿಟಿವಿಯಲ್ಲಿ ದೃಶ್ಯ ಸೆರೆ

ಮುಂಬೈನ ದಾದರ್ ರೈಲು ನಿಲ್ದಾಣದ ಸಮೀಪ ಸೋಮವಾರ ಬೆಳಗ್ಗೆ ಬೆಸ್ಟ್ ಬಸ್ ನಿಯಂತ್ರಣ ತಪ್ಪಿ ಐದು ವಾಹನಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಓರ್ವ ಯುವಕ ಮೃತಪಟ್ಟಿದ್ದು, ಮತ್ತೋರ್ವನ ಸ್ಥಿತಿ ಗಂಭೀರವಾಗಿದೆ. ವೇಗವಾಗಿ ಬಂದ ಬಸ್ ದ್ವಿಚಕ್ರ ವಾಹನ, ಎಲೆಕ್ಟ್ರಿಕ್ ಬೈಕ್, ಎಲೆಕ್ಟ್ರಿಕ್ ಕಾರು, ಟ್ಯಾಕ್ಸಿ ಹಾಗೂ ಬಲೆನೋ ಕಾರಿಗೆ ಡಿಕ್ಕಿ ಹೊಡೆದಿದೆ. ಗಾಯಾಳುಗಳನ್ನು ಸಿಯಾನ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, 22-25 ವರ್ಷದ ಅಪರಿಚಿತ ಯುವಕ …

Read More »

ಪೊಲೀಸ್ ಠಾಣೆ ಪಕ್ಕದಲ್ಲೇ ಡೀಲ್‌, ವ್ಯಕ್ತಿಗೆ 70 ಸಾವಿರ ಪಂಗನಾಮ – ಮತ್ತೆ ಕೈಚಳಕ ತೋರಿಸಿದ ಸಿಗ್ಲಿ ಬಸ್ಯಾ!

ದಾವಣಗೆರೆ ಜಿಲ್ಲೆಯಲ್ಲಿ ವಂಚನೆ ಪ್ರಕರಣಗಳಿಗೆ ಕುಖ್ಯಾತನಾಗಿರುವ “ಸಿಗ್ಲಿ ಬಸ್ಯಾ” ವಿರುದ್ಧ ಮತ್ತೊಂದು ಮೋಸ ಪ್ರಕರಣ ದಾಖಲಾಗಿದೆ. ಕಡಿಮೆ ದರದಲ್ಲಿ 10 ಗ್ರಾಂ ಚಿನ್ನ ಕೊಡಿಸುವುದಾಗಿ ನಂಬಿಸಿ ನ್ಯಾಮತಿ ತಾಲೂಕಿನ ಶಿವರಾಜ್ (59) ಅವರಿಂದ ₹70 ಸಾವಿರ ಪಡೆದು ಪರಾರಿಯಾಗಿದ್ದಾನೆ ಎಂದು ಆರೋಪಿಸಲಾಗಿದೆ. ಶಿವರಾಜ್ ಅವರನ್ನು ಜಗಳೂರಿಗೆ ಕರೆತಂದ ಆರೋಪಿ, ಪೊಲೀಸ್ ಠಾಣೆ ಪಕ್ಕದ ಹೋಟೆಲ್‌ನಲ್ಲಿ ಹಣ ಪಡೆದು “ಚಿನ್ನ ತಂದುಕೊಡುತ್ತೇನೆ” ಎಂದು ಹೇಳಿ ನಾಪತ್ತೆಯಾಗಿದ್ದಾನೆ. ಬಳಿಕ ವಿವಿಧ ನೆಪ ಹೇಳಿ …

Read More »

ಟೀ ಕುಡಿಯಲು ಹೋಗಿದ್ದ ಯುವಕನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ

ಶಿವಮೊಗ್ಗ: ಟೀ ಕುಡಿಯಲು ಹೋಗಿದ್ದ ಯುವಕನ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿದ ಘಟನೆ ಭದ್ರಾವತಿಯಲ್ಲಿ ಸೋಮವಾರ (ಜೂ.08) ನಡೆದಿದೆ. ವಿಶ್ವ ಅಲಿಯಾಸ್ ಮುದ್ದೆ (35) ಹಲ್ಲೆಗೊಳಗಾದ ಯುವಕ. ಭದ್ರಾವತಿ ನಗರದ ಅನ್ವರ್ ಕಾಲೋನಿಯಲ್ಲಿ ಘಟನೆ ನಡೆದಿದೆ. ಭದ್ರಾವತಿ ಹಳದಮ್ಮ ಬೀದಿಯ ನಿವಾಸಿಯಾದ ವಿಶ್ವ ಟೀ ಕುಡಿಯಲು ಹೋಗಿದ್ದ ವೇಳೆ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ. ಎರಡು ಕೈ ತುಂಡಾಗುವ ರೀತಿ ಹಾಗೂ ಕುತ್ತಿಗೆ ಭಾಗಕ್ಕೆ ಹರಿತವಾದ ಆಯುಧದಿಂದ ಹಲ್ಲೆ …

Read More »

ವಿದ್ಯಾರ್ಥಿನಿಯ ಮೇಲೆ ರೇಪ್ ಅಟೆಂಪ್ಟ್ – ಚಿಂದಿ ಆಯುವಾತ ಅರೆಸ್ಟ್!

ಬೆಂಗಳೂರು ವೈಟ್‌ಫೀಲ್ಡ್‌ನಲ್ಲಿ ಕಾಲೇಜು ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಆರೋಪದಡಿ 27 ವರ್ಷದ ಸೈಫುಲ್ ಮಂಡಲ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಜೂನ್ 2ರ ಮುಂಜಾನೆ ಪಟ್ಟಂದೂರು ಅಗ್ರಹಾರದಲ್ಲಿರುವ ಕೋ-ಲಿವಿಂಗ್ ಪಿಜಿ ಸಮೀಪ ಈ ಘಟನೆ ನಡೆದಿದೆ. ಕೇರಳ ಮೂಲದ 23 ವರ್ಷದ ವಿದ್ಯಾರ್ಥಿನಿ ಟೀ ಕುಡಿದು ಪಿಜಿಗೆ ಮರಳುತ್ತಿದ್ದ ವೇಳೆ ಆರೋಪಿ ಹಿಂಬಾಲಿಸಿ ದಾಳಿ ನಡೆಸಿ, ಕತ್ತಲೆಯಿದ್ದ ರಸ್ತೆಯ ಬದಿಗೆ ಎಳೆದೊಯ್ದು ಅತ್ಯಾಚಾರಕ್ಕೆ ಯತ್ನಿಸಿದ್ದಾನೆ ಎನ್ನಲಾಗಿದೆ. ಯುವತಿ ಜೋರಾಗಿ ಕಿರುಚಿಕೊಂಡ …

Read More »

ಒಂಟಿ ಮಹಿಳೆ ಮನೆಗೆ ನುಗ್ಗಿ ದರೋಡೆ: ಆರೋಪಿ ಬಂಧನ

ಬೆಂಗಳೂರು: ಮನೆಗೆ ನುಗ್ಗಿ ಮಹಿಳೆ ಮೇಲೆ ಹಲ್ಲೆ ನಡೆಸಿ ಚಿನ್ನದ ಸರ ಹಾಗೂ ಮೊಬೈಲ್‌ ದೋಚಿ ಪರಾರಿಯಾಗಿದ್ದ ಅಸ್ಲಂ ಪಾಷಾ ಎಂಬಾತನನ್ನು ಹೆಬ್ಬಾಳ ಠಾಣೆ ಪೊಲೀಸರು ಬಂಧಿಸಿದ್ದಾರೆ. ನಾಗೇನಹಳ್ಳಿಯ ಅಸ್ಲಂ ಪಾಷಾ ಹೆಬ್ಬಾಳದ ಬಳಿಯ ಸಿಐಎಲ್‌ ಲೇಔಟ್‌ ನಿವಾಸಿ ಜಯಶ್ರೀ ಎಂಬುವರ ಮನೆಗೆ ನುಗ್ಗಿ ಕೃತ್ಯ ಎಸಗಿದ್ದ.ಆರೋಪಿಯಿಂದ 6.70 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ಮೊಬೈಲ್‌ ಹಾಗೂ ದ್ವಿಚಕ್ರ ವಾಹನ ವಶಪಡಿಸಿಕೊಳ್ಳಲಾಗಿದೆ. ಆರೋಪಿ ಅಸ್ಲಂ ಪಾಷಾ, ಜಯಶ್ರೀ ಅವರ ಮನೆ …

Read More »

ಮೊಮ್ಮಗನ ನೋಡಲು ಸೊಸೆ ಮನೆಗೆ ಹೋದ ಅಜ್ಜನ ಕೊಲೆ

ಕಲಬುರಗಿ: ಮೊಮ್ಮಗನನ್ನು ನೋಡಲು ಹೋಗಿದ್ದ ಅಜ್ಜನನ್ನು ಸೊಸೆ ಮನೆಯವರು ಹಿಗ್ಗಾಮುಗ್ಗಾ ಥಳಿಸಿ ಕೊಲೆ ಮಾಡಿದ ಘಟನೆ ಕಲಬುರಗಿ ಹೊರವಲಯದ ಬೇಲೂರ ಕ್ರಾಸ್ ಸಮೀಪ ನಡೆದಿದೆ. ಬೇಲೂರ ತಾಂಡಾ ನಿವಾಸಿ ರಾಜು ರಾಥೋಡ್(48) ಕೊಲೆಯಾದ ವ್ಯಕ್ತಿ. ರಾಜು ರಾಥೋಡ್ ಮಗ ಶಿವಕುಮಾರ್ ಗೆ 15 ದಿನಗಳ ಹಿಂದೆ ಗಂಡು ಮಗು ಜನಿಸಿತು. ಮುಂಬೈನ ಆಸ್ಪತ್ರೆಗೆ ಮೊಮ್ಮಗನನ್ನು ನೋಡಲು ತೆರಳಿದಾಗ ಬೀಗರ ಜೊತೆಗೆ ರಾಜು ರಾಥೋಡ್ ಗೆ ಜಗಳವಾಗಿದೆ. ಮುಂಬೈನಿಂದ ಕಲಬುರಗಿಗೆ ವಾಪಸ್ …

Read More »

ಮರಳು ಅಕ್ರಮ ದಾಸ್ತಾನು ಪತ್ತೆ; ಪ್ರಕರಣ ದಾಖಲು

ವೇಣೂರು: ಆರಂಬೋಡಿ ನಿಡ್ಯಾಲಬೆಟ್ಟು ಪ್ರದೇಶದಲ್ಲಿ ಮರಳು ಅಕ್ರಮವಾಗಿ ದಾಸ್ತಾನು ಮಾಡಿಟ್ಟಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ವೇಣೂರು ಪೊಲೀಸರು ದಾಳಿ ನಡೆಸಿ ಸುಮಾರು 12 ಟಿಪ್ಪರ್ ಲೋಡ್ ಮರಳನ್ನು ವಶಪಡಿಸಿಕೊಂಡಿದ್ದಾರೆ. ದಿನೇಶ್ ಕುಲಾಲ್ ಅವರು ಕಳೆದ 2-3 ದಿನಗಳಿಂದ ಪಲ್ಗುಣಿ ನದಿಯಿಂದ ಮರಳು ಅಕ್ರಮವಾಗಿ ಸಾಗಿಸಿ ಸುಂದರ ಪೂಜಾರಿ ಅವರ ಖಾಲಿ ಜಾಗದಲ್ಲಿ ಸಂಗ್ರಹಿಸಿದ್ದು, ಮಾರಾಟ ಮಾಡಿ ಹಣ ಗಳಿಸುವ ಉದ್ದೇಶ ಹೊಂದಿದ್ದರು ಎನ್ನಲಾಗಿದೆ. ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ …

Read More »