ತುಮಕೂರು ಜಿಲ್ಲೆಯ ಅಂಚಿಹಳ್ಳಿ ಕಾಡಿನಲ್ಲಿ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಮಹಿಳೆಯ ಮೃತದೇಹವು ಮುತ್ತಗದಹಳ್ಳಿಯ 26 ವರ್ಷದ ಶ್ವೇತಾಳದ್ದು ಎಂದು ಡಿಎನ್ಎ ಪರೀಕ್ಷೆಯಿಂದ ದೃಢಪಟ್ಟಿದೆ. ಪ್ರಕರಣದ ತನಿಖೆ ನಡೆಸಿದ ತುರುವೇಕೆರೆ ಪೊಲೀಸರು, ಮೊಬೈಲ್ ಕರೆ ವಿವರಗಳ ಆಧಾರದಲ್ಲಿ 53 ವರ್ಷದ ಭಾನುಪ್ರಕಾಶ್ನನ್ನು ಬಂಧಿಸಿದ್ದಾರೆ. ಆರೋಪಿಗೆ ಶ್ವೇತಾಳೊಂದಿಗೆ ಹಲವು ವರ್ಷಗಳಿಂದ ಅಕ್ರಮ ಸಂಬಂಧವಿದ್ದು, ಬಳಿಕ ದೂರವಾದ ಕಾರಣ ಅಸೂಯೆಯಿಂದ ಕೊಲೆ ಸಂಚು ರೂಪಿಸಿದ್ದಾನೆ ಎನ್ನಲಾಗಿದೆ. ಜನವರಿ 19ರಂದು ಆದಿಚುಂಚನಗಿರಿಗೆ ಕರೆಸಿ ಉಸಿರುಗಟ್ಟಿಸಿ ಹತ್ಯೆ …
Read More »ಬೆಂಗಳೂರು : ಡ್ರಾಗರ್ನಿಂದ ಇರಿದು ಆಟೋ ಚಾಲಕನ ಕೊಲೆ
ಬೆಂಗಳೂರುದಲ್ಲಿ ಕ್ಷುಲ್ಲಕ ಕಾರಣಕ್ಕೆ ಆಟೋ ಚಾಲಕನೊಬ್ಬನನ್ನು ಡ್ರಾಗರ್ನಿಂದ ಇರಿದು ಕೊಲೆ ಮಾಡಿರುವ ಘಟನೆ ಚಿಕ್ಕಬಾಣವಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಬಾಗಲೂರಿನ ಸೈಯದ್ ಶಫೀ (36) ಮೃತ ದುರ್ದೈವಿ. ನಿನ್ನೆ ರಾತ್ರಿ ಸ್ನೇಹಿತನೊಂದಿಗೆ ಆಟೋದಲ್ಲಿ ಕುಳಿತಿದ್ದ ವೇಳೆ ಮದ್ಯಪಾನ ಮಾಡಿಕೊಂಡು ಬಂದ ದರ್ಶನ್ ಅಲಿಯಾಸ್ ದಾಸ್ ಜಗಳ ತೆಗೆದು ಹಲ್ಲೆ ನಡೆಸಿದ್ದಾನೆ. ಮಾತಿನ ಚಕಮಕಿ ತೀವ್ರಗೊಂಡಾಗ ಆರೋಪಿ ತನ್ನ ಬಳಿ ಇದ್ದ ಡ್ರಾಗರ್ನಿಂದ ಶಫೀ ಅವರ ಕುತ್ತಿಗೆಗೆ ಇರಿದಿದ್ದಾನೆ. ಗಂಭೀರ …
Read More »20 ಕೆ.ಜಿ ಜಿಂಕೆ ಮಾಂಸದ ಜತೆ ಮೂವರ ಬಂಧನ: ಪ್ರಮುಖ ಆರೋಪಿ ಪರಾರಿ
ಶಿವಮೊಗ್ಗ: ಜಿಂಕೆ ಮಾಂಸ ತಂದು ಮಾರುತ್ತಿದ್ದ ಮೂವರು ಆರೋಪಿ ಹಾಗೂ 20 ಕೆ.ಜಿ ಜಂಕೆ ಮಾಂಸವನ್ನು ಭದ್ರಾವತಿ ವಿಭಾಗದ ಅರಣ್ಯ ಇಲಾಖೆ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ. ಪ್ರಮುಖ ಆರೋಪಿ ತಪ್ಪಿಸಿಕೊಂಡಿದ್ದಾನೆ. ಕಾಚಗೊಂಡನಹಳ್ಳಿಯ ಆರ್ಮುಗ ಪ್ರಮುಖ ಆರೋಪಿಯಾಗಿದ್ದು ನಾಪತ್ತೆಯಾಗಿದ್ದಾನೆ. ಸೀಗೆಬಾಗಿಯ ಮುನ್ನ, ಸುರಗಿತೋಪಿನ ಚಂದ್ರಶೇಖರ್, ಹೊಸಸಿದ್ದಾಪುರ ಮೂರ್ತಿ ಬಂಧಿತರು. ಜಿಂಕೆ ಬೇಟೆಯಾಡಿ ಮಾಂಸ ತಂದು ಮಾರುತ್ತಿದ್ದ ಖಚಿತ ಮಾಹಿತಿ ಮೇರೆಗೆ ಅರಣ್ಯ ಇಲಾಖೆ ಸಿಬ್ಬಂದಿ ದಾಳಿ ನಡೆಸಿ ಮಿಲಿಟರಿ ಕ್ಯಾಂಪ್, ಬಸ್ …
Read More »9ನೇ ತರಗತಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ: ಮೊಬೈಲ್ ನಲ್ಲಿ ಖಾಸಗಿ ಫೋಟೊಗಳನ್ನು ಸೆರೆ ಹಿಡಿದ ಕಾಮುಕ
ಧಾರವಾಡ: ಕಾಮುಕನೊಬ್ಬ ಅಪ್ರಾಪ್ತ ಬಾಲಕಿಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರವೆಸಗಿ, ಖಾಸಗಿ ಫೋಟೋಗಳನ್ನು ಸೆರೆ ಹಿಡಿದಿರುವ ಘಟನೆ ಧಾರವಾಡದಲ್ಲಿ ನಡೆದಿದೆ. 9ನೇ ತರಗತಿಯ 14 ವರ್ಷದ ಬಾಲಕಿಯನ್ನು ಪುಸಲಾಯಿಸಿ, ತಾನು ನಿನ್ನನ್ನು ಪ್ರೀತಿಸುವುದಾಗಿ ಹೇಳಿ ಆರೋಪಿ ಕರೆದೊಯ್ದು, ಅತ್ಯಾಚಾರವೆಸಗಿದ್ದಾನೆ. ನಿರ್ಜನ ಪ್ರದೇಶದಲ್ಲಿದ್ದ ಆರೋಪಿಯನ್ನು ಕಂಡು ಸ್ಥಳೀಯರು ವಿಚಾಅರಿಸಿದ್ದಾರೆ. ಆರೋಪಿಯ ಮೊಬೈಲ್ ವಶಕ್ಕೆ ಪಡೆದು ಪರಿಶೀಲಿಸಿದಾಗ ಖಾಸಗಿ ಫೋಟೋಗಳು ಪತ್ತೆಯಾಗಿವೆ. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿದ್ಯಾಗಿರಿ ಠಾಣೆ ಪೊಲೀಸರು ಆರೋಪಿಯನ್ನು …
Read More »ಅಕ್ರಮ ಸಂಬಂಧ ಶಂಕೆ; ಅಕ್ಕನ ಕತ್ತು ಸೀಳಿದ ತಮ್ಮ! ಅಂಗನವಾಡಿಯಲ್ಲಿ ಭೀಕರ ಕೊಲೆ
ಹಾವೇರಿ ಜಿಲ್ಲೆಯ ಶಿಗ್ಗಾವಿ ಪಟ್ಟಣದಲ್ಲಿ, ಪರ ಪುರುಷನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾಳೆಂಬ ಶಂಕೆಯಿಂದ ಸ್ವಂತ ತಮ್ಮನೇ ತನ್ನ ಅಕ್ಕನನ್ನು ಬರ್ಬರವಾಗಿ ಕೊಲೆ ಮಾಡಿದ್ದಾನೆ. ಅಂಗನವಾಡಿ ಸಹಾಯಕಿಯಾಗಿದ್ದ ಮಹಿಳೆಯ ಮೇಲೆ ಮಚ್ಚಿನಿಂದ ದಾಳಿ ಮಾಡಿ, ಆಕೆ ಕೆಲಸ ಮಾಡುತ್ತಿದ್ದ ಕೇಂದ್ರದಲ್ಲಿಯೇ ಹತ್ಯೆಗೈದಿದ್ದಾನೆ. ಪರ ಪುರುಷನೊಂದಿಗೆ ಅಕ್ರಮ ಸಂಬಂಧ ಶಂಕೆ ಹಿನ್ನೆಲೆ ಸ್ವಂತ ತಮ್ಮನೇ ಅಕ್ಕನನ್ನು ಕೊಲೆ ಮಾಡಿರುವ ಘಟನೆ ಹಾವೇರಿ ಜಿಲ್ಲೆಯ ಶಿಗ್ಗಾವಿ ಪಟ್ಟಣದಲ್ಲಿ ನಡೆದಿದೆ. ಕೊಲೆಯಾದ ಮಹಿಳೆಯನ್ನು 29 ವರ್ಷದ …
Read More »ಬೆಂಗಳೂರು: ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ ಬಂಧನ
ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇರೆಗೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರನ್ನು ಶ್ರೀರಾಂಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಾಲಕಿ ಒಂದೂವರೆ ತಿಂಗಳು ಗರ್ಭಿಣಿ ಆಗಿರುವುದು ಪತ್ತೆಯಾದ ನಂತರ ಈ ವಿಚಾರ ಗೊತ್ತಾಗಿದೆ. ಆರೋಪಿಯು ವರ್ಷದಿಂದ ಬಾಲಕಿಗೆ ಕಿರುಕುಳ ನೀಡುತ್ತಿದ್ದ ಎಂಬುದು ವಿಚಾರಣೆ ವೇಳೆ ಗೊತ್ತಾಗಿದೆ. ದೂರು ಆಧರಿಸಿ ಪೊಲೀಸರು, ಮುಖ್ಯ ಶಿಕ್ಷಕನ ವಿರುದ್ಧ ಪೋಕ್ಸೊ ಪ್ರಕರಣ ದಾಖಲಿಸಿಕೊಂಡು ಬಂಧಿಸಿದ್ದಾರೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.
Read More »ಖರ್ಜೂರ ವ್ಯಾಪಾರದ ಹೆಸರಿನಲ್ಲಿ 15.81 ಲಕ್ಷ ರೂ. ವಂಚನೆ; ಮೂವರ ವಿರುದ್ಧ ಪ್ರಕರಣ ದಾಖಲು
ಕತಾರ್ನಿಂದ ಖರ್ಜೂರ ಹಾಗೂ ಗೃಹೋಪಯೋಗಿ ವಸ್ತುಗಳನ್ನು ಆಮದು ಮಾಡಿಕೊಂಡು ಭಾರತದಲ್ಲಿ ಮಾರಾಟ ಮಾಡಿದರೆ ಹೆಚ್ಚಿನ ಲಾಭ ಸಿಗುತ್ತದೆ ಎಂದು ನಂಬಿಸಿ, ಉಡುಪಿಯ ವ್ಯಕ್ತಿಯೊಬ್ಬರಿಗೆ ಅವರ ಸ್ವಂತ ಅಳಿಯ ಸೇರಿ ಮೂವರು 15.81 ಲಕ್ಷ ರೂ. ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ. ಬಡಗುಬೆಟ್ಟು ಗ್ರಾಮದ ನಿವಾಸಿ ಇಫ್ರಾನ್ ಅಜೀಜ್ ಅವರು ವಂಚನೆಗೊಳಗಾದವರಾಗಿದ್ದು, ಈ ಕುರಿತು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕತಾರ್ನಲ್ಲಿ ಕೆಲಸ ಮಾಡುತ್ತಿದ್ದ ಅಳಿಯ ಮೊಹಮ್ಮದ್ ಶರ್ಪದ್ದೀನ್, …
Read More »ಅನ್ಯಕೋಮಿನವರಿಂದ ಮುರಿನಕಟ್ಟೆ ಧ್ವಂಸ: ಭಟ್ಕಳ ಪಟ್ಟಣದಲ್ಲಿ ಉದ್ವಿಘ್ನ ಪರಿಸ್ಥಿತಿ
ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ನವಾಯತ್ ಕಾಲನಿಯಲ್ಲಿ ಮಾರಿಯಮ್ಮನ ಮುರಿನಕಟ್ಟೆ ವಿಚಾರವಾಗಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ರಾಷ್ಟ್ರೀಯ ಹೆದ್ದಾರಿ ಅಗಲೀಕರಣದ ವೇಳೆ ತೆರವುಗೊಳಿಸಲಾಗಿದ್ದ ಮುರಿನಕಟ್ಟೆಯನ್ನು ಭಾನುವಾರ ಹಿಂದೂ ಸಂಘಟನೆಯ ಕಾರ್ಯಕರ್ತರು ಮರುಸ್ಥಾಪಿಸಿದ್ದರು. ಇದು ಹಿಂದೂಗಳ ಶ್ರದ್ಧಾಭಕ್ತಿಯ ಕೇಂದ್ರವಾಗಿದ್ದು, ಹಲವು ವರ್ಷಗಳಿಂದ ಮರುನಿರ್ಮಾಣಕ್ಕೆ ಒತ್ತಾಯಿಸಲಾಗುತ್ತಿತ್ತು ಎನ್ನಲಾಗಿದೆ. ಆದರೆ ರಾತ್ರಿ ವೇಳೆ ಅನ್ಯಕೋಮಿನ ಕೆಲ ಮುಖಂಡರು ಹಾಗೂ ಜನರು ಆಗಮಿಸಿ ಕಟ್ಟೆಯನ್ನು ಕೆಡವಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಘಟನೆ ಸ್ಥಳೀಯರಲ್ಲಿ ಆಕ್ರೋಶಕ್ಕೆ …
Read More »ಟ್ಯೂಷನ್ಗೆ ಹೋಗುತ್ತಿದ್ದ ಬಾಲಕಿಯನ್ನು ಅಪಹರಿಸಿ ರೇ*ಪ್ – ಇಬ್ಬರು ಕಾಮುಕರು ಅರೆಸ್ಟ್!
ಗದಗ ತಾಲೂಕಿನ ಗ್ರಾಮವೊಂದರಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಅಮಾನುಷ ಘಟನೆ ಬೆಳಕಿಗೆ ಬಂದಿದೆ. ಟ್ಯೂಷನ್ಗೆ ತೆರಳುತ್ತಿದ್ದ ವೇಳೆ ಬಾಲಕಿಯನ್ನು ದಾರಿ ಮಧ್ಯೆ ಅಡ್ಡಗಟ್ಟಿದ ಇಬ್ಬರು ಆರೋಪಿಗಳು, “ನಿಮ್ಮ ಅಣ್ಣ ಅರ್ಜೆಂಟ್ ಆಗಿ ಕರೆಯುತ್ತಿದ್ದಾನೆ” ಎಂದು ನಂಬಿಸಿ ತಮ್ಮ ಜೊತೆ ಬರಲು ಒತ್ತಾಯಿಸಿದ್ದಾರೆ. ಬಾಲಕಿ ನಿರಾಕರಿಸಿದರೂ ಬಲವಂತವಾಗಿ ವಾಹನಕ್ಕೆ ತಳ್ಳಿ ಅಪಹರಿಸಿ, ಬಳಿಕ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. ಘಟನೆಯ ನಂತರ ಮನನೊಂದ …
Read More »ಗೆಳೆಯರ ಮೇಲೆ ಹಲ್ಲೆ ನಡೆಸಿದ್ದನ್ನು ಕೇಳಲು ಹೋದ ವಿದ್ಯಾರ್ಥಿಗೆ ಚಾಕು ಇರಿತ!
ದಾವಣಗೆರೆ: ಗೆಳೆಯರ ಮೇಲೆ ಹಲ್ಲೆ ನಡೆಸಿದ್ದನ್ನು ಕೇಳಲು ಹೋಗಿದ್ದ ವಿದ್ಯಾರ್ಥಿಗೆ ಚಾಕು ಹಾಕಿದ ಘಟಕ ಶನಿವಾರ (ಮೇ 23) ರಾತ್ರಿ ವಿಜಯನಗರ ಬಡಾವಣೆಯಲ್ಲಿ ನಡೆದಿದೆ. ದಾವಣಗೆರೆಯ ಖಾಸಗಿ ಕಾಲೇಜಿನಲ್ಲಿ ಪ್ರಥಮ ಬಿಕಾಂ ಅಭ್ಯಾಸ ಮಾಡುತ್ತಿರುವ ಮನೋಜ್ (19) ಚಾಕು ಇರಿತಕೊಳ್ಳಗಾಗಿರುವ ವಿದ್ಯಾರ್ಥಿ. ಮನೋಜ್ ಗೆಳೆಯರು ಜನ್ಮ ದಿನಾಚರಣೆಗೆ ತೆರಳಿದ್ದ ಸಂದರ್ಭದಲ್ಲಿ ಕ್ಷುಲ್ಲಕ ವಿಚಾರವಾಗಿ ಅವರ ಮೇಲೆ ಹಲ್ಲೆ ನಡೆಸಲಾಗಿತ್ತು. ಗೆಳೆಯರು ಕರೆದಿದ್ದಕ್ಕೆ ಸ್ಥಳಕ್ಕೆ ತೆರಳಿದ್ದ ಮನೋಜ್ ಯಾವ ಕಾರಣಕ್ಕೆ ಹಲ್ಲೆ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





