ರಾಮನಗರ: ತಾಲೂಕಿನ ಲಕ್ಕೋಜನಹಳ್ಳಿ ಸರ್ಕಾರಿ ಶಾಲೆ ಆವರಣದಲ್ಲಿ ಮದ್ಯಪಾನ ಮಾಡಿ, ಇಸ್ಪೀಟ್ ಆಡುತ್ತಿದ್ದ ರೌಡಿಶೀಟರ್ ಹಾಗೂ ಆತನ ಮೂವರು ಸಹಚರರನ್ನು ರಾಮನಗರ ಗ್ರಾಮಾಂತರ ಠಾಣೆ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಲಕ್ಕೋಜನಹಳ್ಳಿ ರೌಡಿಶೀಟರ್ ಹನುಮ ಹಾಗೂ ಸಹಚರರಾದ ಕೌಶಿಕ್, ಭಾನುಪ್ರಕಾಶ್, ಅನುಕುಮಾರ್ ಬಂಧಿತರು. ಬೇಸಿಗೆ ರಜೆ ಹಿನ್ನೆಲೆಯಲ್ಲಿ ಶಾಲೆ ಬಂದ್ ಆಗಿದೆ. ಈ ವೇಳೆ ಆರೋಪಿಗಳು ಶಾಲಾ ಆವರಣದಲ್ಲಿನ ತೆರೆದ ರಂಗಮಂದಿರದಲ್ಲಿ ಮದ್ಯ ಸೇವಿಸುತ್ತ ಇಸ್ಪೀಟ್ ಆಡುತ್ತಿದ್ದರು. ಇದನ್ನು ಗಮನಿಸಿದ ಸ್ಥಳಿಯರೊಬ್ಬರು …
Read More »ಕಾರವಾರ: ಕುಡಿದ ಮತ್ತಿನಲ್ಲಿ ಕಟ್ಟಡ ಕಾರ್ಮಿಕನ ಹತ್ಯೆ, ಇಬ್ಬರ ಬಂಧನ
ಕಾರವಾರ: ತಾಲ್ಲೂಕಿನ ಅಸ್ನೋಟಿಯಲ್ಲಿ ಕಟ್ಟಡ ಕಾರ್ಮಿಕರೊಬ್ಬರನ್ನು ಶನಿವಾರ ತಡರಾತ್ರಿ ಹತ್ಯೆ ಮಾಡಲಾಗಿದೆ. ಗುಜರಾತ್ ಮೂಲದ ಕಾರ್ಮಿಕ ದೆವೇಶ ರಾಥೋಡ (28) ಹತ್ಯೆಯಾದವ. ಆತನೊಂದಿಗೆ ಕಟ್ಟಡ ನಿರ್ಮಾಣ ಕೆಲಸ ಮಾಡುತ್ತಿದ್ದ ಇಬ್ಬರು ಕಾರ್ಮಿಕರು ಕುಡಿದ ಮತ್ತಿನಲ್ಲಿ ಈ ಕೃತ್ಯ ಎಸಗಿದ್ದಾರೆ ಎಂದು ಚಿತ್ತಾಕುಲ ಠಾಣೆ ಪೊಲೀಸರು ತಿಳಿಸಿದ್ದಾರೆ. ‘ಬಾಗಲಕೋಟೆ ಜಿಲ್ಲೆ ಶಿರೂರು ಹಳ್ಳಿಯ ಶಿವಾನಂದ ನಾಯ್ಕರ (45) ಮತ್ತು ಹಾವೇರಿ ಜಿಲ್ಲೆ ಸವಣೂರಿನ ಮರಿಯಪ್ಪಾ ಹರಿಜನ (43) ಎಂಬುವವರನ್ನು ಬಂಧಿಸಲಾಗಿದೆ. ಮದ್ಯದ …
Read More »ಬೆಂಗಳೂರು ಏರ್ಪೋರ್ಟ್ ನಲ್ಲಿ ಹೈಡ್ರೋ ಗಾಂಜಾ ಸಾಗಣೆ – 7 ಕೋಟಿ ರೂ. ಮಾಲು ಜಪ್ತಿ!
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಬ್ಯಾಂಕಾಕ್ನಿಂದ ಅಕ್ರಮವಾಗಿ ಸಾಗಿಸುತ್ತಿದ್ದ ಬರೋಬ್ಬರಿ 7.12 ಕೋಟಿ ರೂಪಾಯಿ ಮೌಲ್ಯದ ಹೈಡ್ರೋಪೋನಿಕ್ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಬ್ಯಾಂಕಾಕ್ನಿಂದ ಪ್ರತ್ಯೇಕ ವಿಮಾನಗಳಲ್ಲಿ ಬಂದಿಳಿದ ಇಬ್ಬರು ಪ್ರಯಾಣಿಕರ ನಡವಳಿಕೆಯಲ್ಲಿ ಅಸಹಜತೆ ಕಂಡುಬಂದ ಹಿನ್ನೆಲೆಯಲ್ಲಿ ಅನುಮಾನಗೊಂಡ ಅಧಿಕಾರಿಗಳು ತಕ್ಷಣ ಅವರನ್ನು ವಶಕ್ಕೆ ಪಡೆದು ತಪಾಸಣೆ ನಡೆಸಿದ್ದಾರೆ. ಆರೋಪಿಗಳ ಬ್ಯಾಗ್ಗಳನ್ನು ಕೂಲಂಕಷವಾಗಿ ಪರಿಶೀಲಿಸಿದಾಗ ಅಂತರರಾಷ್ಟ್ರೀಯ ಡ್ರಗ್ಸ್ ಪೆಡ್ಲಿಂಗ್ ಜಾಲ ಬಯಲಾಗಿದೆ. ಬ್ಯಾಗ್ನಲ್ಲಿ ಅಡಗಿಸಿಡಲಾಗಿದ್ದ 20.7 …
Read More »ಬೆಂಗಳೂರಲ್ಲಿ ನಿರಾಶ್ರಿತರ ಕೇಂದ್ರದಲ್ಲಿ ಇರಿಸಿದ್ದ ಅಕ್ರಮ ವಿದೇಶಿ ಪ್ರಜೆಗಳು ಪರಾರಿ : ಮತ್ತೆ ಅಕ್ರಮ ಚಟುವಟಿಕೆಗಳಲ್ಲಿ ಭಾಗಿ ಸಾಧ್ಯತೆ!
ನಿರಾಶ್ರಿತರ ಆಶ್ರಮದಲ್ಲಿ ಇರಿಸಿದ್ದ ಅಕ್ರಮ ವಿದೇಶಿ ಪ್ರಜೆಗಳು ಪರಾರಿ ಆಗಿರುವ ಘಟನೆ ಬೆಂಗಳೂರಿನ ಕೊತ್ತನೂರಿನಲ್ಲಿ ನಡೆದಿದೆ. ನೈಜೀರಿಯಾ ಉಗಾಂಡಾ ಕಿನ್ಯಾ ಬಾಂಗ್ಲಾದ ಅಕ್ರಮ ವಲಸಿಗರು ಎಸ್ಕೇಪ್ ಆಗಿದ್ದಾರೆ. ನಾಲ್ವರು ಮಹಿಳೆಯರು ಪರಾರಿಯಾಗಿದ್ದಾರೆ. ತೊಪಿಷ್ಟ, ನಗವ, ಸಫೀನಾ, ಪಿತಿನ ಎನ್ನುವರು ಪರಾರಿಯಾಗಿದ್ದಾರೆ. ಅಕ್ರಮ ವಲಸಿಗರು ಈ ಕಟ್ಟಡದ ಎರಡನೇ ಅಂತಸ್ತಿನ ಕಿಟಕಿಯ ಗ್ರಿಲ್ ಮುರಿದು ಪರಾರಿಯಾಗಿದ್ದಾರೆ. ಪೊಲೀಸರ ಬಂದೋಬಸ್ತ ನಡುವೆ ಪರಾರಿಯಾಗಿದ್ದಾರೆ. ಅಕ್ರಮ ವಲಸಿಗರನ್ನು FRRO ಜೈಲಿನಲ್ಲಿ ಜಾಗ ಇಲ್ಲದ ಕಾರಣ …
Read More »ಪ್ರೇಮ ವಿಚಾರಕ್ಕೆ ಹೆತ್ತ ಮಗಳನ್ನೇ ಕೊಂದು ಬಿಸಾಡಿದ ಪಾಪಿ ತಂದೆ!
ತುಮಕೂರು: ಇಲ್ಲಿನ ಶಿರಾ ತಾಲ್ಲೂಕಿನ ನಿಂಬೆಮರದಹಳ್ಳಿಯಲ್ಲಿ ತಂದೆಯೊಬ್ಬ ತನ್ನ 17 ವರ್ಷದ ಮಗಳು ಮೇಘನಾಳನ್ನು ಉಸಿರುಗಟ್ಟಿಸಿ ಕೊಂದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ತಾಯಿಯ ಕಡೆಯ ನೆಂಟರ ಹುಡುಗನನ್ನು ಯುವತಿ ಪ್ರೀತಿಸುತ್ತಿದ್ದದ್ದು ತಿಮ್ಮರಾಯಪ್ಪನ (48) ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.ಈ ಪ್ರೇಮ ವಿಚಾರವಾಗಿ ಮನೆಯಲ್ಲಿ ಹಲವು ಬಾರಿ ದೊಡ್ಡ ಜಗಳಗಳಾಗಿದ್ದವು. ಕಳೆದ ಏಪ್ರಿಲ್ 16 ರಂದೇ ಮಗಳನ್ನು ಹತ್ಯೆಗೈದಿದ್ದ ಈತ, ಸಾಕ್ಷಿ ನಾಶಕ್ಕಾಗಿ ಜಮೀನಿನ ಬಳಿಯ ಸರ್ಕಾರಿ ಹಳ್ಳದಲ್ಲಿ ಶವವನ್ನು ಹೂತುಹಾಕಿದ್ದನು. …
Read More »ಕೊಲ್ಲೂರು | ಟೆಂಪೋ-ಜೀಪು ನಡುವೆ ಢಿಕ್ಕಿ: ಕೇರಳದ ಓರ್ವ ಮೃತ್ಯು, ಹಲವರಿಗೆ ಗಾಯ
ಕುಂದಾಪುರ: ಕೊಡಚಾದ್ರಿಯಿಂದ ಕೇರಳದ ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಜೀಪು ಹಾಗೂ ಟೆಂಪೋ ಮಧ್ಯೆ ಕೊಲ್ಲೂರು ದಳಿ ಎಂಬಲ್ಲಿ ರವಿವಾರ ಮಧ್ಯಾಹ್ನ ಸಂಭವಿಸಿದ ಅಪಘಾತದಲ್ಲಿ ಓರ್ವ ಮೃತಪಟ್ಟು, ಹಲವು ಮಂದಿ ಗಾಯಗೊಂಡ ಬಗ್ಗೆ ವರದಿಯಾಗಿದೆ. ಕೊಡಚಾದ್ರಿಯಿಂದ ಕೊಲ್ಲೂರಿನತ್ತ ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಜೀಪು ಹಾಗೂ ಕೊಲ್ಲೂರು ಕಡೆಯಿಂದ ನಾಗೋಡಿ ಕಡೆಯತ್ತ ಸಾಗುತ್ತಿದ್ದ ಟೆಂಪೋ ಮಧ್ಯೆ ಈ ಅಪಘಾತ ನಡೆದಿದೆ. ಮೃತರು ಹಾಗೂ ಗಾಯಾಳುಗಳು ಕೇರಳ ಮೂಲದವರೆಂದು ಸದ್ಯ ತಿಳಿದುಬಂದಿದೆ. ಕೊಲ್ಲೂರು ಠಾಣೆ ಪಿಎಸ್ಐಗಳಾದ ವಿನಯ್ …
Read More »ಕಿಡಿಗೇಡಿಗಳಿಂದ ಕೈಗಾರಿಕಾ ತ್ಯಾಜ್ಯಕ್ಕೆ ಬೆಂಕಿ
ಕೆ.ಆರ್.ಸಾಗರ: ಮೊಗರಹಳ್ಳಿ (ಮಂಟಿ) ಹೊರಹೊಲಯದಲ್ಲಿರುವ ಕೈಗಾರಿಕಾ ಪ್ರದೇಶ ಸಮೀಪ ಅಪಾರ ಪ್ರಮಾಣದಲ್ಲಿ ಕೈಗಾರಿಕಾ ತ್ಯಾಜ್ಯ ಸುರಿಯುವುದರ ಜತೆಗೆ ಕಿಡಿಗೇಡಿಗಳು ಬೆಂಕಿ ಹಚ್ಚಿರುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ. ರಾತ್ರಿ ವೇಳೆ ತ್ಯಾಜ್ಯಕ್ಕೆ ಬೆಂಕಿ ಹಚ್ಚಲಾಗುತ್ತಿರುವುದರಿಂದ ದಟ್ಟವಾದ ವಿಷಕಾರಿ ಹೊಗೆ ಸುತ್ತಮುತ್ತಲಿನ ಗ್ರಾಮಗಳು ಹಾಗೂ ಪ್ರದೇಶಗಳಿಗೆ ವ್ಯಾಪಿಸುತ್ತಿದೆ. ಪರಿಣಾಮ ಜನರು ಉಸಿರಾಟದ ತೊಂದರೆ, ಕಣ್ಣುರಿ, ಗಂಟಲು ಉರಿ ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆ ಅನುಭವಿಸುವಂತಾಗಿದೆ ಎಂದು ಸ್ಥಳೀಯರು ದೂರಿದ್ದಾರೆ. ಕೈಗಾರಿಕಾ ತ್ಯಾಜ್ಯ ದಹನದಿಂದ …
Read More »ಬೆಂಗಳೂರು -ಮೈಸೂರು ಹೆದ್ದಾರಿಯಲ್ಲಿ ಕಾರು ತಡೆದು 26 ಲಕ್ಷ ರೂ. ದರೋಡೆ
ಬೆಂಗಳೂರು -ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ತಡೆದು 26 ಲಕ್ಷ ರೂ. ದರೋಡೆ ಮಾಡಿದ ಘಟನೆ ಮಂಡ್ಯ ಜಿಲ್ಲೆ ಮದ್ದೂರು ಹೊರವಲಯದಲ್ಲಿ ನಡೆದಿದೆ. ಖಾಸಗಿ ಕಂಪನಿಯ ಉದ್ಯೋಗಿಯ ಕಾರನ್ನು ಅಡ್ಡಗಟ್ಟಿದ ದುಷ್ಕರ್ಮಿಗಳ ತಂಡ ದರೋಡೆ ನಡೆಸಿದೆ. ಮೈಸೂರು ಖಾಸಗಿ ಕಂಪನಿಯ ಉದ್ಯೋಗಿ ಗೋವಿಂದರಾಜು ಐ20 ಕಾರ್ ನಲ್ಲಿ ತೆರಳುತ್ತಿದ್ದ ವೇಳೆ ಅಡ್ಡಗಟ್ಟಿದ ದುಷ್ಕರ್ಮಿಗಳು ಹಣ ದೋಚಿ ಪರಾರಿಯಾಗಿದ್ದಾರೆ. ಅವರು ತಮ್ಮ ಕಂಪನಿಗೆ ಸೇರಿದ ಹಣವನ್ನು ಮೈಸೂರಿನಿಂದ ಬೆಂಗಳೂರಿಗೆ ತೆಗೆದುಕೊಂಡು ತೆರಳುತ್ತಿದ್ದರು. …
Read More »ಬೆಂಗಳೂರಿನಲ್ಲಿ ಭೀಕರ ಕೊಲೆ: 200 ರೂಪಾಯಿ ಸಾಲ ವಾಪಸ್ ಕೇಳಿದ್ದಕ್ಕೆ ಟೀ ಅಂಗಡಿ ಮಾಲೀಕನನ್ನೇ ಹತ್ಯೆಗೈದ ವ್ಯಕ್ತಿ
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಂದು ಬರ್ಬರ ಹತ್ಯೆ ನಡೆದಿದೆ. 200 ರೂಪಾಯಿ ಸಾಲ ವಾಪಸ್ ಕೇಳಿದ್ದಕ್ಕೆ ಟೀ ಅಂಗಡಿ ಮಾಲೀಕನನ್ನೇ ವ್ಯಕ್ತಿ ಹೊಡೆದು ಕೊಂದಿರುವ ಘಟನೆ ನಡೆದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ದ್ಯಾವಸಂದ್ರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮಂಜುನಾಥ್ (41) ಕೊಲೆಯಾದ ಟೀ ಅಂಗಡಿ ಮಾಲೀಕ. ಮುನಿಯಪ್ಪ ಎಂಬಾತ ಕೊಲೆ ಮಾಡಿರುವ ಆರೋಪಿ. ಬೆಳಿಗ್ಗೆ ಟೀ ಕುಡಿಯಲೆಂದು ಅಂಗಡಿಗೆ ಬಂದಿದ್ದ ಮುನಿಯಪ್ಪ ಸಾಲ ಕೇಳಿದ್ದ. ಮತ್ತೆ …
Read More »ಕೊಡಗಿನ ಕಾಡಿನಲ್ಲಿ ಅಕ್ರಮವಾಗಿ ಚರ್ಚ್ ನಿರ್ಮಾಣ; ಉದ್ಘಾಟನೆಗೆ ತಮಿಳುನಾಡಿನಿಂದ ಬಂದಿದ್ದ 40ಕ್ಕೂ ಹೆಚ್ಚು ಮಂದಿ ವಶಕ್ಕೆ
ಕೊಡಗು: ಕಾಡಿನೊಳಗೆ ಅಕ್ರಮವಾಗಿ ನಿರ್ಮಿಸಿದ ಚರ್ಚ್ ಉದ್ಘಾಟನೆಗೆ ತಮಿಳುನಾಡಿನಿಂದ ಆಗಮಿಸಿದ್ದ 40ಕ್ಕೂ ಹೆಚ್ಚು ಜನರನ್ನು ಪೊಲೀಸರು ವಶಕ್ಕೆ ಪಡೆದಿರುವ ಘಟನೆ ಕೊಡಗಿನಲ್ಲಿ ನಡೆದಿದೆ. ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೇರೂರಿನ ಗಿರಿಜನರು ಕಾಡಿನಲ್ಲಿ ಅಕ್ರಮವಾಗಿ ಚರ್ಚ್ ನಿರ್ಮಿಸಿದ್ದು, ಶನಿವಾರ ಉದ್ಘಾಟನೆ ಕಾರ್ಯಕ್ರಮ ಹಿನ್ನೆಲೆ ತಮಿಳುನಾಡಿನಿಂದ ಜನರನ್ನು ಕರೆಸಲಾಗಿತ್ತು. ಈ ವೇಳೆ ಸ್ಥಳೀಯರು ಕಾರ್ಯಕ್ರಮವನ್ನು ತಡೆದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕುಶಾಲನಗರ ವೃತ್ತ ನಿರೀಕ್ಷಕ ಪ್ರದೀಪ್, ಸುಂಟಿಕೊಪ್ಪ ಪೊಲೀಸ್ ಠಾಣಾಧಿಕಾರಿಗಳಾದ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





