Breaking News

BigTv News

ಆಟೊ ಚಾಲಕನ ಮೇಲೆ ಹಲ್ಲೆ: ನಾಲ್ವರ ವಿರುದ್ಧ ದೂರು ದಾಖಲು

ನಾಪೋಕ್ಲು:ಆಟೊ ಚಾಲಕ ಝಕರಿಯ ಎಂಬುವವರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇರೆಗೆ ಸಿದ್ದಿಕ್, ಮಹಮ್ಮದ್ ಅಲಿ, ನಾಫಿ ಸೇರಿ ನಾಲ್ವರ ವಿರುದ್ಧ ಇಲ್ಲಿನ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇಲ್ಲಿಗೆ ಸಮೀಪದ ಬೇತುಗ್ರಾಮದಲ್ಲಿ ಹಲ್ಲೆ ನಡೆದಿದ್ದು, ಹಲ್ಲೆಗೊಳಗಾದ ಝಕರಿಯ ತೀವ್ರ ರಕ್ತಸ್ರಾವದಿಂದ ಚರಂಡಿಗೆ ಬಿದ್ದಿದ್ದನ್ನು ಗಮನಿಸಿದ ಸ್ಥಳೀಯರು ಹಾಗೂ ಪೊಲೀಸರು ಅವರಿಗೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಕೊಡಿಸಿ, ಬಳಿಕ ಮಡಿಕೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಆಸ್ತಿ ವಿಚಾರಕ್ಕೆ ವೈಷಮ್ಯದಿಂದ ಈ ಹಲ್ಲೆ …

Read More »

ಗನ್ ಇಟ್ಟುಕೊಂಡು ಓಡಾಡುತ್ತಿದ್ದ ವ್ಯಕ್ತಿಯ ಬಂಧನ..!

ಬೆಳಗಾವಿ : ಸಾರ್ವಜನಿಕ ಸ್ಥಳದಲ್ಲಿ ಗನ್ ಇಟ್ಟುಕೊಂಡು ಓಡಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿರುವ ಘಟನೆ ಬೆಳಗಾವಿ ನಗರದ ಕಾಲೇಜು ರಸ್ತೆ ಬಳಿ ನಡೆದಿದೆ. ಶಂಕರ ಬಂಡಿವಡ್ಡರ ಬಂಧಿತ ಆರೋಪಿ. ಈತ ಸಾರ್ವಜನಿಕರಲ್ಲಿ ಭಯ ಹುಟ್ಟಿಸುವ ರೀತಿ ಗನ್ ಇಟ್ಟುಕೊಂಡು ನಗರದಲ್ಲಿ ಓಡಾಡುತ್ತಿದ್ದ. ಈ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಮಾಹಿತಿ ಪಡೆದ ಖಡೇಬಜಾರ್ ಠಾಣೆ ಪೊಲೀಸರು ಕೂಡಲೇ ಸ್ಥಳಕ್ಕೆ ತೆರಳಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಯಿಂದ ರಿವಾಲ್ವರ್ ವಶಪಡಿಸಿಕೊಂಡು …

Read More »

ಕಡಂಗ ಗ್ರಾಮದಲ್ಲಿ 3 ಅಂಗಡಿ ಬೆಂಕಿಗಾಹುತಿ

ಮಡಿಕೇರಿ: ವಿರಾಜಪೇಟೆ ತಾಲ್ಲೂಕಿನ ಕಡಂಗ ಗ್ರಾಮದಲ್ಲಿ ಆಕಸ್ಮಿಕ ಬೆಂಕಿ ಉಂಟಾಗಿ ಹೋಟೆಲ್, ಮೊಬೈಲ್ ಅಂಗಡಿ, ಹಣ್ಣು, ತರಕಾರಿ ಅಂಗಡಿಗಳು ಭಸ್ಮವಾಗಿವೆ. ಇಲ್ಲಿಂದ ಸುಮಾರು 30 ಕಿ.ಮೀ ದೂರದ ಗೋಣಿಕೊಪ್ಪಲುವಿನಿಂದ ಅ‌ಗ್ನಿಶಾಮಕ ಅಧಿಕಾರಿಗಳು ಬಂದು ಬೆಂಕಿಯನ್ನು ಸಂಪೂರ್ಣ ನಂದಿಸಿದರು. ಅಷ್ಟರಲ್ಲಿ ಬಹುತೇಕ ವಸ್ತುಗಳು ಸುಟ್ಟು ಕರಕಲಾಗಿದ್ದವು. ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಟ್ಯಾಂಕರ್‌ ಮೂಲಕ ನೀರು ತಂದು ಸ್ಥಳೀಯರು ಬೆಂಕಿ ನಂದಿಸಲು ಯತ್ನಿಸಿದ್ದಾರೆ. ಆದಾಗ್ಯೂ, ಬೆಂಕಿ ಕೆನ್ನಾಲಿಗೆ ನಿಯಂತ್ರಣ ಬರಲಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ. …

Read More »

ನಕಲಿ ವೈದ್ಯರ ಆಸ್ಪತ್ರೆ ಮೇಲೆ ದಾಳಿ

ಚಿಕ್ಕೋಡಿ ತಾಲ್ಲೂಕಿನ ಕರೋಶಿ ಗ್ರಾಮದಲ್ಲಿ ನಕಲಿ ವೈದ್ಯರ ಹಾವಳಿ ಹೆಚ್ಚಾಗಿರುವ ಕುರಿತು ಸಾರ್ವಜನಿಕರಿಂದ ದೂರು ಕೇಳಿ ಬಂದ ಹಿನ್ನಲೆ ಮಂಗಳವಾರ ನಕಲಿ ವೈದ್ಯರ ಕ್ಲಿನಿಕ್‌ಗಳು ಮೇಲೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಈಶ್ವರ್ ಗಡಾದ ಅವರ ನೇತೃತ್ವದಲ್ಲಿ ಆಸ್ಪತ್ರೆಗಳ ಮೇಲೆ ದಾಳಿ ನಡೆಸಲಾಗಿದೆ. ಇಲಾಖೆ ಆಲಯಕಾರಿಗಳ ೧೨ ತಂಡಗಳು ಏಕಕಾಲಕ್ಕೆ ಗ್ರಾಮದ ೭ ಆಸ್ಪತ್ರೆಗಳ ಮೇಲೆ ದಾಳಿ ನಡೆಸಿ, ಆಸ್ಪತ್ರೆ, ಪ್ರಮಾಣ ಪತ್ರ,ಹೈಡೋಜ್ ಆಸ್ಪತ್ರೆ ನೀಡುತ್ತಿರುವ ಕುರಿತು ಪರೀಶಿಲನೆ …

Read More »

ಲೈಸನ್ಸ್ ಪಡೆಯದೆ ನಿರ್ಮಿಸಿದ್ದ ಶೆಡ್‌ ಗೆ ಬೆಂಕಿ; ಲಕ್ಷಾಂತರ ರೂ. ನಷ್ಟ

ತೀರ್ಥಹಳ್ಳಿ: ಪಟ್ಟಣದ ಎ.ಪಿ.ಎಂ.ಸಿ ಎದುರು ರಾಜ್ಯ ಹೆದ್ದಾರಿ ಪಕ್ಕದಲ್ಲಿ ಪಟ್ಟಣ ಪಂಚಾಯಿತಿಯಿಂದ ಲೈಸನ್ಸ್ ಪಡೆಯದೆ ನಿರ್ಮಿಸಿದ್ದ ಶೆಡ್‌ ನಲ್ಲಿ ಮೇ.5ರ ತಡರಾತ್ರಿ ಸುಮಾರು 3 ಗಂಟೆಗೆ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ತೀವ್ರವಾಗಿ ಹಬ್ಬಿ ಶೆಡ್‌ನೊಳಗಿದ್ದ ಪೀಠೋಪಕರಣಗಳು ಸೇರಿದಂತೆ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಸುಟ್ಟುಹೋಗಿವೆ. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬೆಂಕಿ ಕಾಣಿಸಿಕೊಂಡ ಕಾರಣ ಮತ್ತು ನಷ್ಟದ ನಿಖರ ಅಂದಾಜಿಗಾಗಿ …

Read More »

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೆಸರಲ್ಲಿ ‘ಡೀಪ್‌ಫೇಕ್’ ವಂಚನೆ: ಬೆಳಗಾವಿ ವ್ಯಕ್ತಿಗೆ ₹7.9 ಲಕ್ಷ ನಾಮ!

ಬೆಳಗಾವಿಯಲ್ಲಿ 76 ವರ್ಷದ ವೃದ್ಧರೊಬ್ಬರಿಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಹೆಸರನ್ನು ಬಳಸಿಕೊಂಡು ಸೃಷ್ಟಿಸಲಾದ ಎಐ-ಚಾಲಿತ ‘ಡೀಪ್‌ಫೇಕ್’ ವಿಡಿಯೋ ಮೂಲಕ 7.9 ಲಕ್ಷ ರೂಪಾಯಿ ವಂಚಿಸಿರುವ ಘಟನೆ ನಡೆದಿದೆ. ಈ ಕುರಿತು ಪೊಲೀಸರು ಬುಧವಾರ ಮಾಹಿತಿ ನೀಡಿದ್ದಾರೆ.​ ಈ ಆನ್‌ಲೈನ್ ವಂಚನೆಗೆ ಸಂಬಂಧಿಸಿದಂತೆ ಮೇ 1ರಂದು ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೆಳಗಾವಿ ಪೊಲೀಸ್ ಕಮಿಷನರ್ ಭೂಷಣ್ ಗುಲಾಬ್ರಾವ್ ಬೊರಾಸೆ ಅವರ ಪ್ರಕಾರ, ಸಂತ್ರಸ್ತ …

Read More »

ರೈಲಿನ ಚೈನ್‌ಲಿಂಕ್ ಎಳೆದಿದ್ದನ್ನು ಪ್ರಶ್ನಿಸಿದ್ದಕ್ಕೆ ಹಲ್ಲೆ

ಮದ್ದೂರು: ಚನ್ನೇಗೌಡನದೊಡ್ಡಿ ಗ್ರಾಮದ ಬಳಿ ಬುಧವಾರ ಸಂಜೆ ಮೈಸೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ರಾಜರಾಣಿ ಎಕ್ಸ್‌ಪ್ರೆಸ್ ರೈಲಿನ ಚೈನ್‌ಲಿಂಕ್ ಎಳೆದ ಕಿಡಿಗೇಡಿಗಳನ್ನು ಪ್ರಶ್ನಿಸಿದ ಗೇಟ್‌ಮ್ಯಾನ್‌ಗೆ ಚಾಕುವಿನಿಂದ ಇರಿಯಲಾಗಿದೆ. ಈ ವೇಳೆ ಸ್ಥಳೀಯರು ದುಷ್ಕರ್ಮಿಗಳನ್ನು ಥಳಿಸಿ ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ. ನಗರದ ಎಚ್‌ಕೆವಿ ನಗರದ ಚನ್ನೇಗೌಡನದೊಡ್ಡಿ ಗ್ರಾಮದ ರೈಲ್ವೆ ಗೇಟ್‌ಮ್ಯಾನ್ ಕುಮಾರ್(36) ಚಾಕು ಇರಿಕ್ಕೊಳಗಾದವರು. ಅವರಿಗೆ ಮದ್ದೂರು ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. …

Read More »

ಕನಕಪುರ: ಮನೆಗೆ ನುಗ್ಗಿ ತಾಯಿ, ಮಗನ ಮೇಲೆ ಹಲ್ಲೆ; ನಾಲ್ವರ ವಿರುದ್ಧ ಎಫ್‌ಐಆರ್‌

ಕನಕಪುರ: ಚಾಕನಹಳ್ಳಿಯಲ್ಲಿ ಕ್ಷುಲ್ಲಕ ಕಾರಣಕ್ಕೆ ಗುಂಪು ಕಟ್ಟಿಕೊಂಡು ಬಂದು ಮನೆಗೆ ನುಗ್ಗಿ ತಾಯಿ ಮತ್ತು ಮಗನ ಮೇಲೆ ಹಲ್ಲೆ ಮಾಡಿದ ಆರೋಪದ ಮೇಲೆ ನಾಲ್ವರ ವಿರುದ್ಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಾಲ್ಲೂಕಿನ ಕಸಬಾ ಹೋಬಳಿ ಚಾಕನಹಳ್ಳಿಯ ಮಹಾಲಕ್ಷ್ಮಿ ಮತ್ತು ಅವರ ಮಗ ಆಟೋ ಚಾಲಕ ಶ್ರೀನಿವಾಸ್ ಹಲ್ಲೆಗೆ ಒಳಗಾದವರು. ರಾಕೇಶ್, ಕತ್ರಿ, ಭರತ್, ಚಂದನ್ ವಿರುದ್ಧ ಹಲ್ಲೆ ಪ್ರಕರಣ ದಾಖಲಾಗಿದೆ. ಮೇ 1 ರಂದು ರಾತ್ರಿ 9ಕ್ಕೆ …

Read More »

ವರದಕ್ಷಿಣೆ ಕಿರುಕುಳ: ಕೇಸು ದಾಖಲು

ಕುಂದಾಪುರ: ವರದಕ್ಷಿಣೆ ಬೇಡಿಕೆ ಹಿನ್ನೆಲೆಯಲ್ಲಿ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡಿ ಜೀವ ಬೆದರಿಕೆ ಹಾಕಿರುವುದಾಗಿ ಪತಿ ಜುನೈದ್, ಹಸೈನಾರ್, ಅಲೀಮಾಬಿ, ಸಲೀಂ, ಉಮೈಮಾ ಹಾಗೂ ರಶ್ಮೀಲಾ ವಿರುದ್ಧ ಗೋಪಾಡಿಯ ತಸ್ಮಾ (25) ದೂರು ನೀಡಿದ್ದಾರೆ. 2022ರಲ್ಲಿ ಸಾಗರದ ಆವಿನ ಹಳ್ಳಿಯ ಜುನೈದ್ ಅವರನ್ನು ವಿವಾಹವಾಗಿದ್ದು, ಮದುವೆ ವೇಳೆ 2 ಲಕ್ಷ ರೂ.ನಗದು ಹಾಗೂ 50 ಪವನ್ ಚಿನ್ನ ನೀಡಲಾಗಿದೆ. ಬಳಿಕ ಹೆಚ್ಚುವರಿ ಹಣ ಮತ್ತು ಚಿನ್ನಕ್ಕಾಗಿ ಪತಿ ಸೇರಿದಂತೆ …

Read More »

ಆಸ್ತಿ ಹಂಚಿಕೆ ಕಲಹ: ಇಬ್ಬರು ಸಹೋದರರ ಬರ್ಬರ ಹತ್ಯೆ

ಮೈಸೂರು ಆಸ್ತಿ ಹಂಚಿಕೆ ವಿಚಾರವಾಗಿ ಸಹೋದರರಿಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಶ್ರೀರಂಗಪಟ್ಟಣದ ರಾಘು(35), ಹರ್ಷವರ್ಧನ್(30) ಕೊಲೆಯಾದವರು ಎಂದು ಹೇಳಲಾಗಿದೆ. ಅರ್ಜುನಹಳ್ಳಿಯ ರೋಹಿತ್ ಕೊಲೆ ಆರೋಪಿ. ಆಸ್ತಿ ಹಂಚಿಕೆ ವಿಚಾರವಾಗಿ ಹಿರಿಯ ಮತ್ತು ಕಿರಿಯ ಪತ್ನಿಯ ಮಕ್ಕಳ ನಡುವೆ ನಡೆದ ಗಲಾಟೆಯಲ್ಲಿ ರಾಘು ಮತ್ತು ಹರ್ಷವರ್ಧನ್ ಅವರನ್ನು ರೋಹಿತ್ ಕೊಲೆ ಮಾಡಿ ಪೊಲೀಸರಿಗೆ ಶರಣಾಗಿದ್ದಾನೆ. ಅರ್ಜುನಹಳ್ಳಿ ಗ್ರಾಮದ ರಮೇಶ್ ರಾಜು ಶ್ರೀರಂಗಪಟ್ಟಣದ ಶಿಕ್ಷಕಿ ಕಾಮಾಕ್ಷಿ ಜೊತೆಗೆ ಎರಡನೇ ಮದುವೆಯಾಗಿದ್ದರು. ಅವರ ಮಕ್ಕಳಾದ …

Read More »