Breaking News

BigTv News

ಬಾಗಲಕೋಟೆ ಜಿಲ್ಲಾಸ್ಪತ್ರೆಗೆ ಅಣ್ಣನ ಆರೈಕೆಗೆ ಬಂದ ವಿಧವೆ ಮೇಲೆ ಆಸ್ಪತ್ರೆ ನೌಕರನಿಂದ ರೇಪ್‌

ಬಾಗಲಕೋಟೆ: ನಗರದ ಜಿಲ್ಲಾಸ್ಪತ್ರೆಯ ಬಾತ್‌ರೂಮ್‌ನಲ್ಲಿ ವಿಧವೆಯ ಮೇಲೆ ಆಸ್ಪತ್ರೆಯ ಹೊರಗುತ್ತಿಗೆ ನೌಕರನೊಬ್ಬ ಅತ್ಯಾಚಾರ ಎಸಗಿದೆ ಘಟನೆ ವರದಿಯಾಗಿದೆ. ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಡಿ-ದರ್ಜೆ ನೌಕರ ಫರೀದ್ ಸಾಬ್ ಡಾಂಗಿ ಎಂಬಾತ ಅತ್ಯಾಚಾರ ಎಸಗಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರೋಗಿಯೊಬ್ಬರ ಸಹೋದರಿಯ ಮೇಲೆ ಈತ ಬಾತ್‌ರೂಂನಲ್ಲಿ ಅತ್ಯಾಚಾರ ಎಸಗಿದ್ದಾನೆ ಎನ್ನಲಾಗಿದೆ. 34 ವರ್ಷದ ಸಂತ್ರಸ್ತೆ ತನ್ನ ಅನಾರೋಗ್ಯ ಪೀಡಿತ ಸಹೋದರನ ಆರೈಕೆಗಾಗಿ ಕಳೆದ ಒಂದು ತಿಂಗಳಿನಿಂದ ಆಸ್ಪತ್ರೆಯಲ್ಲಿದ್ದಳು. …

Read More »

ಪಂಜಾಬ್‌ನಲ್ಲಿ ಸರಣಿ ಸ್ಫೋಟದ ಸದ್ದು: ಜಲಂಧರ್ ಬಿಎಸ್‌ಎಫ್ ಕೇಂದ್ರ ಮತ್ತು ಅಮೃತಸರ ಸೇನಾ ಶಿಬಿರದ ಮೇಲೆ ದಾಳಿ; ಹೈ ಅಲರ್ಟ್ ಘೋಷಣೆ!

ಪಂಜಾಬ್ ರಾಜ್ಯದಲ್ಲಿ ಒಂದೇ ದಿನ ಎರಡು ಕಡೆಗಳಲ್ಲಿ ಸ್ಫೋಟ ಸಂಭವಿಸಿದ್ದು, ಭದ್ರತಾ ಸಂಸ್ಥೆಗಳು ತಲ್ಲಣಗೊಂಡಿವೆ. ಜಲಂಧರ್‌ನಲ್ಲಿರುವ ಬಿಎಸ್‌ಎಫ್ ಕೇಂದ್ರ ಕಚೇರಿ ಮತ್ತು ಅಮೃತಸರದ ಸೇನಾ ಶಿಬಿರದ ಸಮೀಪ ಈ ಸ್ಫೋಟಗಳು ನಡೆದಿವೆ. ಘಟನೆಯ ಬೆನ್ನಲ್ಲೇ ಪಂಜಾಬ್‌ನಾದ್ಯಂತ ಹೈ ಅಲರ್ಟ್ ಘೋಷಿಸಲಾಗಿದ್ದು, ಭದ್ರತೆಯನ್ನು ತೀವ್ರಗೊಳಿಸಲಾಗಿದೆ. ಜಲಂಧರ್‌ನ ಬಿಎಸ್‌ಎಫ್ ಕೇಂದ್ರ ಕಚೇರಿಯ ಮುಂಭಾಗದಲ್ಲಿ ಸ್ಫೋಟ ಸಂಭವಿಸಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಅಮೃತಸರದ ಖಾಸಾ ಪ್ರದೇಶದಲ್ಲಿರುವ ಸೇನಾ ಶಿಬಿರದ ಬಳಿಯೂ ಇದೇ ಮಾದರಿಯ …

Read More »

ಕೆಜಿಎಫ್‌ನಲ್ಲಿ ಅಕ್ರಮ ಮಣ್ಣು ಸಾಗಾಣೆ, ಎರಡು ಲಾರಿ ವಶಕ್ಕೆ

ಬಂಗಾರದ ಗಣಿ ಗ್ರಾಮಕ್ಕೆ ಸೇರಿದ ಜಾಗದಲ್ಲಿ ಅಕ್ರಮವಾಗಿ ಮಣ್ಣು ತೆಗೆಯುತ್ತಿದ್ದ ಎರಡು ಲಾರಿಗಳನ್ನು ಬೆಮಲ್‌ ನಗರ ಪೊಲೀಸರು ಸೋಮವಾರ ವಶಪಡಿಸಿಕೊಂಡಿದ್ದಾರೆ. ಬೆಮಲ್‌ ನಗರ-ಬೇತಮಂಗಲ ರಸ್ತೆಯ ಹ್ಯಾಪಿ ಹೋಂ ಮುಂಭಾಗದಲ್ಲಿರುವ ಬಂಗಾರದ ಗಣಿ ಯಲ್ರಿ ಅಕ್ರಮವಾಗಿ ಮಣ್ಣು ಸಾಗಿಸಲಾಗುತ್ತಿದೆ ಎಂಬ ಮಾಹಿತಿ ಮೇರೆಗೆ ಸ್ಥಳಕ್ಕೆ ಧಾವಿಸಿದ ಬೆಮಲ್‌ ನಗರ ಪೊಲೀಸರು ಎರಡು ಲಾರಿಗಳನ್ನು ವಶಕ್ಕೆ ಪಡೆದಿದ್ದಾರೆ. ಮಣ್ಣು ತೆಗೆದ ಜಾಗ ಬಿಜಿಎಂಎಲ್‌ಗೆ ಸೇರಿದ್ದಲ್ಲ ಎಂದು ಗಣಿ ಅಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡಿದರು. …

Read More »

ಕೆಲಸಕ್ಕಿದ್ದ ಮನೆಯಲ್ಲೇ 42.89 ಲಕ್ಷ ರೂ. ಮೌಲ್ಯದ ಚಿನ್ನ ಕದ್ದ ದಂಪತಿ ಬಂಧನ

ಬೆಂಗಳೂರು: ಕೆಲಸ ಮಾಡುತ್ತಿದ್ದ ಮನೆಯಲ್ಲೇ ಕಳ್ಳತನ ಮಾಡಿದ್ದ ದಂಪತಿಯನ್ನು ಚನ್ನಮ್ಮನಕೆರೆ ಅಚ್ಚುಕಟ್ಟು ಠಾಣೆ ಪೊಲೀಸರು ಬಂಧಿಸಿದ್ದಾರೆ. ದಾವಣಗೆರೆ ಮೂಲದ ಐಶ್ವರ್ಯ (22) ಮತ್ತು ಈಕೆಯ ಪತಿ ಮಣಿಕಂಠ (26) ಬಂಧಿತರು. ‌ 42.89 ಲಕ್ಷ ರೂ. ಮೌಲ್ಯದ 199 ಗ್ರಾಂ ಚಿನ್ನಾಭರಣ ಮತ್ತು 730 ಗ್ರಾಂ ಬೆಳ್ಳಿ ವಸ್ತುಗಳನ್ನು ವಶಕ್ಕೆಪಡೆಯಲಾಗಿದೆ. ಆರೋಪಿಗಳು ಉದ್ಯಮಿ, ಗುತ್ತಿಗೆದಾರ ಮಲ್ಲಿಕಾರ್ಜುನ್‌ ನಾಯ್ಡು ಎಂಬುವರ ಮನೆಯಲ್ಲಿ ಕಳ್ಳತನ ಮಾಡಿದ್ದರು. 5 ತಿಂಗಳ ಹಿಂದಷ್ಟೇ ದಂಪತಿ ಮಲ್ಲಿಕಾರ್ಜುನ್‌ …

Read More »

ಸಹೋದರರ ಜಾಗ ತಕರಾರು: ಕತ್ತಿ ದಾಳಿ – ಒಬ್ಬರಿಗೆ ಗಾಯ, ಪ್ರಕರಣ ದಾಖಲು

ಸಿದ್ದಾಪುರ: ಸಹೋದರರಿಬ್ಬರ ನಡುವೆ ಜಾಗದ ಗಡಿ ಗುರುತಿನ ವಿಷಯದಲ್ಲಿ ಜಗಳ ನಡೆದು, ಒಬ್ಬ ಕತ್ತಿಯಿಂದ ಕಡಿದು ಗಾಯ ಮಾಡಿದ ಘಟನೆ ಮೇ 4ರಂದು ಬೆಳ್ವೆಯಲ್ಲಿ ಸಂಭವಿಸಿದೆ. ಬೆಳ್ವೆ ಗ್ರಾಮದ ಮುರಳೀಧರ ಅಲ್ಸೆ(37) ಮತ್ತು ಪ್ರಕಾಶ ಅಲ್ಸೆ ನಡುವೆ ಜಾಗದ ತಕರಾರು ನಡೆಯುತ್ತಿತ್ತು. ಮೇ 4ರಂದು ಮುರಳೀಧರ ಅಲ್ಸೆ ಅವರು ತಮ್ಮ ಜಾಗದ ಗಡಿಯಲ್ಲಿ ಬೇಲಿಕಂಬವನ್ನು ಸರಿಪಡಿಸುತ್ತಿದ್ದಾಗ, ಪ್ರಕಾಶ ಅಲ್ಸೆ ಅಲ್ಲಿಗೆ ಬಂದು ಈ ಜಾಗ ತನಗೆ ಬರುತ್ತದೆ ಎಂದು ಜಗಳ …

Read More »

ಕನಕಗಿರಿ: ಸಿಆರ್‌ಪಿ ವಿರುದ್ಧ ಕ್ರಮಕ್ಕೆ ಆಗ್ರಹ, ಕರ್ತವ್ಯಲೋಪ ಆರೋಪ

ಕನಕಗಿರಿ: ‘ತಾಲ್ಲೂಕಿನ ಬಸರಿಹಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದ ಶಿವಪ್ಪ ಹೆಳವರ ಎಂಬುವವರು ಹುಲಿಹೈದರ ಸಮೂಹ ಸಂಪನ್ಮೂಲ ವ್ಯಕ್ತಿಯಾಗಿ ಅಧಿಕಾರ ವಹಿಸಿಕೊಂಡಾಗ ಬಸರಿಹಾಳ ಶಾಲೆಯ ಪ್ರಭಾರ ಮುಖ್ಯಶಿಕ್ಷಕರಿಗೆ ಶಾಲಾ‌ ದಾಖಲಾತಿ ನೀಡದೆ ಕರ್ತವ್ಯಲೋಪ ಎಸಗಿದ್ದಾರೆ’ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಕಲಬುರಗಿ ವಿಭಾಗೀಯ ಅಧ್ಯಕ್ಷ ಪಂಪಣ್ಣ ನಾಯಕ ದೂರಿದ್ದಾರೆ. ಈ ಕುರಿತು ಗಂಗಾವತಿ ಕ್ಷೇತ್ರ ಶಿಕ್ಷಣಾಧಿಕಾರಿಗೆ ಮಂಗಳವಾರ ದೂರು ನೀಡಿದ್ದಾರೆ. ‘ನಿಯಮದಂತೆ …

Read More »

ಪತಿಯಿಂದಲೇ ಪತ್ನಿಯ ಹತ್ಯೆ

ನಗರದ ಹಳೆಯ ಕೆಸರೆ ಬಡಾವಣೆಯಲ್ಲಿ ಬುಧವಾರ ತಡರಾತ್ರಿ ಪತಿಯೇ ಪತ್ನಿಯನ್ನು ಕೊಲೆ ಮಾಡಿದ್ದಾನೆ. ಪುಷ್ಪಾ (24) ಮೃತ ಗೃಹಿಣಿ. ಆಕೆಯ ಪತಿ ಮಹೇಶ್ ಕೊಲೆ ಮಾಡಿದ ಆರೋಪಿ. ಪುಷ್ಪಾ ಹಾಗೂ ಮಹೇಶ್ ಒಂದೂವರೆ ವರ್ಷದ ಹಿಂದೆ ಮದುವೆ ಆಗಿದ್ದರು. ಇಬ್ಬರೂ ಹಳೇ ಕೆಸರೆಯ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಪುಷ್ಪಾ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಶಾಪ್ ಬಾಗಿಲು ಹಾಕುವುದು ತಡವಾಗುತ್ತಿದ್ದ ಕಾರಣ ನಿತ್ಯವೂ ತಡವಾಗಿ ಮನೆಗೆ ಬರುತ್ತಿದ್ದಳು. ಇದೇ ವಿಚಾರಕ್ಕೆ …

Read More »

75 ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದಾಗಲೇ ಲೋಕಾಯುಕ್ತ ಬಲೆಗೆ ಬಿದ್ದ ಗ್ರಾಪಂ ನೌಕರರು

ಕೊಪ್ಪಳ ತಾಲೂಕಿನ ಕೋಳೂರು ಗ್ರಾಮ ಪಂಚಾಯಿತಿ ಸಿಬ್ಬಂದಿ 75 ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದಾಗಲೇ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಇ- ಸ್ವತ್ತು ನೀಡಲು ಮತ್ತು ಖಾತಾ ಬದಲಾವಣೆ ಮಾಡಲು 75 ಸಾವಿರ ಲಂಚ ಸ್ವೀಕರಿಸುತ್ತಿದ್ದ ಕೋಳೂರು ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಮರಿಯಪ್ಪ, ಬಿಲ್ ಕಲೆಕ್ಟರ್ ನಾಗರಾಜ್, ಗುತ್ತಿಗೆ ನೌಕರ ನಾಗರಾಜ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಜ್ಞಾನೇಶ್ವರ ಎಂಬುವವರಿಂದ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ಲೋಕಾಯುಕ್ತ ಡಿವೈಎಸ್ಪಿ ಲೋಕೇಶ್ …

Read More »

ಬೆಂಗಳೂರಲ್ಲಿ ಡ್ರಗ್ ಪೆಡ್ಲರ್‌ಗಳ ಬಂಧನ – 5.75 ಕೋಟಿ ಮೌಲ್ಯದ 5 ಕೆಜಿ ಹೈಡ್ರೋ ಗಾಂಜಾ ವಶಕ್ಕೆ!

ಬೆಂಗಳೂರಿನಲ್ಲಿ ಡ್ರಗ್ಸ್ ದಂಧೆ ನಡೆಯುವ, ಪೆಡ್ಲರ್​ಗಳು ಸಿಕ್ಕಿ ಬೀಳುವ ಘಟನೆಗಳು ಇತ್ತೀಚೆಗೆ ಹೆಚ್ಚಾಗಿವೆ. ಇದೀಗ ನಗರದಲ್ಲಿ ನಂದಿನಿ ಲೇಔಟ್ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಕೇರಳ ಮೂಲದ ಇಬ್ಬರು ಡ್ರಗ್ ಪೆಡ್ಲರ್‌ಗಳನ್ನು ಬಂಧಿಸಿದ್ದಾರೆ. ಸೌಗೇಶ್ ಮತ್ತು ಅಲ್ತಾಫ್ ಬಂಧಿತ ಆರೋಪಿಗಳಾಗಿದ್ದು, ಇವರಿಂದ 5.75 ಕೋಟಿ ರೂ.ಮೌಲ್ಯದ 5 ಕೆಜಿ 700 ಗ್ರಾಂ ಹೈಡ್ರೋ ಗಾಂಜಾವನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳು ವಿದೇಶದಿಂದ ಈ ಹೈಡ್ರೋ ಗಾಂಜಾವನ್ನು ತರಿಸಿ ಸ್ಥಳೀಯರಿಗೆ ಮಾರಾಟ ಮಾಡಲು ಯತ್ನಿಸುತ್ತಿದ್ದರು …

Read More »

ಚಾಮರಾಜನಗರ : ಚಾಲಕನ ನಿಯಂತ್ರಣ ತಪ್ಪಿ ಅರಣ್ಯ ಪ್ರದೇಶಕ್ಕೆ ನುಗ್ಗಿದ ಕೆಎಸ್ಸಾರ್ಟಿಸಿ ಬಸ್

ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ನಾಲ್ ರೋಡ್ ಸಮೀಪ ಕೆಎಸ್ಸಾರ್ಟಿಸಿ ಬಸ್ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಅರಣ್ಯ ಪ್ರದೇಶಕ್ಕೆ ನುಗ್ಗಿದ ಘಟನೆ ನಡೆದಿದೆ. ಹನೂರಿನಿಂದ ಜಲ್ಲಿಪಾಳ್ಯ ಕಡೆಗೆ ತೆರಳುತ್ತಿದ್ದ ಬಸ್, ಎದುರಿಗೆ ಬಂದ ಮತ್ತೊಂದು ವಾಹನವನ್ನು ತಪ್ಪಿಸಲು ಹೋಗಿ ಚಾಲಕನ ನಿಯಂತ್ರಣ ತಪ್ಪಿದೆ ಎಂದು ತಿಳಿದುಬಂದಿದೆ. ಅಪಘಾತದ ವೇಳೆ ಬಸ್‌ನಲ್ಲಿದ್ದ 39 ಪ್ರಯಾಣಿಕರು ಯಾವುದೇ ಪ್ರಾಣಾಪಾಯವಿಲ್ಲದೆ ಪಾರಾಗಿದ್ದು, ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಇತ್ತೀಚೆಗೆ ಮಲೆಮಹದೇಶ್ವರಬೆಟ್ಟ ಮಾರ್ಗದಲ್ಲಿ ಕೆಎಸ್ಸಾರ್ಟಿಸಿ ಬಸ್ …

Read More »