ಬಂಗಾರದ ಗಣಿ ಗ್ರಾಮಕ್ಕೆ ಸೇರಿದ ಜಾಗದಲ್ಲಿ ಅಕ್ರಮವಾಗಿ ಮಣ್ಣು ತೆಗೆಯುತ್ತಿದ್ದ ಎರಡು ಲಾರಿಗಳನ್ನು ಬೆಮಲ್ ನಗರ ಪೊಲೀಸರು ಸೋಮವಾರ ವಶಪಡಿಸಿಕೊಂಡಿದ್ದಾರೆ. ಬೆಮಲ್ ನಗರ-ಬೇತಮಂಗಲ ರಸ್ತೆಯ ಹ್ಯಾಪಿ ಹೋಂ ಮುಂಭಾಗದಲ್ಲಿರುವ ಬಂಗಾರದ ಗಣಿ ಯಲ್ರಿ ಅಕ್ರಮವಾಗಿ ಮಣ್ಣು ಸಾಗಿಸಲಾಗುತ್ತಿದೆ ಎಂಬ ಮಾಹಿತಿ ಮೇರೆಗೆ ಸ್ಥಳಕ್ಕೆ ಧಾವಿಸಿದ ಬೆಮಲ್ ನಗರ ಪೊಲೀಸರು ಎರಡು ಲಾರಿಗಳನ್ನು ವಶಕ್ಕೆ ಪಡೆದಿದ್ದಾರೆ. ಮಣ್ಣು ತೆಗೆದ ಜಾಗ ಬಿಜಿಎಂಎಲ್‌ಗೆ ಸೇರಿದ್ದಲ್ಲ ಎಂದು ಗಣಿ ಅಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡಿದರು. ನಂತರ ಪೊಲೀಸರು ತಹಶೀಲ್ದಾರರಿಗೆ ವಿಷಯ ಮುಟ್ಟಿಸಿದರು. ಕಂದಾಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದಾಗ ಜಾಗವು ಬಂಗಾರದ ಗಣಿಗೆ ಸೇರಿದ್ದು ಎಂದು ತಿಳಿದಿದೆ. ಬೆಮಲ್ ನಗರ ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

