Breaking News

BigTv News

ಬೆಂಗಳೂರಲ್ಲಿ ಪ್ರೀತಿ ವಿಚಾರಕ್ಕೆ ಮನನೊಂದ ಯುವಕ : ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣು!

ಬೆಂಗಳೂರಿನಲ್ಲಿ ಪ್ರೀತಿ ವಿಚಾರಕ್ಕೆ ಮನನೊಂದು ಯುವಕನೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ವರದಿಯಾಗಿದೆ. ರಾಜೇಶ್ (35) ಎನ್ನುವ ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಬೆಂಗಳೂರಿನ ಕುದುರು ರಸ್ತೆಯ ಮಲ್ಲಿಕುಂಟೆಯ ಮನೆಯಲ್ಲಿ ಈ ಒಂದು ಘಟನೆ ನಡೆದಿದ್ದು, ಬೆಂಗಳೂರಿನ ಬಾಗಲೂರು ಸಾತನೂರು ನಿವಾಸಿಯಾಗಿರುವ ರಾಜೇಶ್, ಪ್ರೀತಿಯಲ್ಲಿ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆ. ಮಗನ ಸಾವಿನ ಬಗ್ಗೆ ಪೋಷಕರು ಅನುಮಾನ ವ್ಯಕ್ತಪಡಿಸಿದ್ದಾರೆ. ಇದು ಆತ್ಮಹತ್ಯೆ ಅಲ್ಲ ಕೊಲೆ ಅಂತ ಅನುಮಾನ ವ್ಯಕ್ತಪಡಿಸಿದ್ದಾರೆ. ಸಂಬಂಧಿಕರ ಬಳಿ …

Read More »

ಹರಿಯಾಣದಲ್ಲಿ ಹೊತ್ತಿ ಉರಿದ ಖಾಸಗಿ ಬಸ್‌: ಇಬ್ಬರು ಸಜೀವ ದಹನ

ಹರಿಯಾಣದಲ್ಲಿ ಖಾಸಗಿ ಬಸ್‌ವೊಂದು ಹೊತ್ತಿ ಉರಿದಿದ್ದು, ಇಬ್ಬರು ಪ್ರಯಾಣಿಕರು ಸಜೀವ ದಹನವಾಗಿದ್ದಾರೆ. ಭಿವಾನಿ-ಹನ್ಸಿ ರಸ್ತೆಯಲ್ಲಿ ತೆರಳುತ್ತಿದ್ದ ಖಾಸಗಿ ಬಸ್‌ಗೆ ಮಿಲ್ಕ್‌ಪುರ ಗ್ರಾಮದ ಬಳಿ ಏಕಾಏಕಿ ಬೆಂಕಿ ಹೊತ್ತಿದೆ.ಈ ಅಪಘಾತದಲ್ಲಿ ಆರು ಮಂದಿಗೆ ತೀವ್ರ ಸುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.ಭಿವಾನಿಯಿಂದ ಹನ್ಸಿ ಕಡೆಗೆ ಬಸ್‌ ಹೋಗುತ್ತಿದ್ದ ವೇಳೆ ದುರಂತ ಸಂಭವಿಸಿದೆ. ಯಾವ ಕಾರಣದಿಂದ ಬಸ್‌ಗೆ ಬೆಂಕಿ ಹೊತ್ತಿದೆ ಎಂದು ತಿಳಿದುಬಂದಿಲ್ಲ. ಹೆಚ್ಚಿನ ಪ್ರಯಾಣಿಕರು ಬೆಂಕಿ ಹೊತ್ತಿದ ತಕ್ಷಣವೇ ಕಿಟಕಿ ಹಾಗೂ ಬಾಗಿಲುಗಳಿಂದ …

Read More »

ಮದುವೆ ನಿಶ್ಚಯವಾಗಿದ್ದ ಯುವತಿ ನಾಪತ್ತೆ

ಮಂಗಳೂರು: ನಗರದ ತೋಟ ಬೆಂಗ್ರೆಯಲ್ಲಿ ಹೆತ್ತವರೊಂದಿಗೆ ವಾಸವಾಗಿದ್ದ ಮದುವೆ ನಿಶ್ಚಯವಾಗಿದ್ದ ಯುವತಿ ಮನೆಯಿಂದ ನಾಪತ್ತೆಯಾಗಿರುವ ಬಗ್ಗೆ ಪಣಂಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಪವಿತ್ರಾ ಖಾರ್ವಿ (25) ನಾಪತ್ತೆಯಾದವರು. ಎ.25ರಂದು ಮಧ್ಯಾಹ್ನ ವೇಳೆ ಮನೆಯವರು ಊಟ ಮಾಡಿ ಮಲಗಿದ್ದರು.3.30ರ ವೇಳೆಗೆ ಎಚ್ಚರವಾಗಿ ನೋಡಿದಾಗ ಪವಿತ್ರಾ ಮನೆಯಲ್ಲಿ ಇರಲಿಲ್ಲ. ಎಲ್ಲ ಕಡೆ ಹುಡುಕಾಡಿದರೂ ಪತ್ತೆಯಾಗಿಲ್ಲ. ಮೇ 3ರಂದು ಮದುವೆಗೆ ದಿನಾಂಕ ನಿಗದಿಯಾಗಿತ್ತು. ಈಕೆಯ ಬಗ್ಗೆ ಮಾಹಿತಿ ಇದ್ದಲ್ಲಿ ಪಣಂಬೂರು ಠಾಣೆಯನ್ನು ಸಂಪರ್ಕಿಸುವಂತೆ ಪೊಲೀಸರು ತಿಳಿಸಿದ್ದಾರೆ.

Read More »

ತಣ್ಣೀರುಪಂತ ಖತೀಜಮ್ಮ ಕೊಲೆ ಪ್ರಕರಣ; ತಲೆಮರೆಸಿದ್ದ ಅಪರಾಧಿ ಆಂಧ್ರಪ್ರದೇಶದಲ್ಲಿ ಸೆರೆ

ಕಡಬ: ಹದಿನಾಲ್ಕು ವರ್ಷಗಳ ಹಿಂದೆ ಚಿನ್ನ ಎಗರಿಸಲೆತ್ನಿಸಿದಾಗ ತಡೆದ ಸಂಬಂಧಿ ಮಹಿಳೆಯನ್ನು ಕೊಲೆ ಮಾಡಿ ಅಪರಾಧಿಯಾಗಿ ನ್ಯಾಯಾಲಯದಿಂದ ಶಿಕ್ಷೆ ಪ್ರಕಟವಾದರೂ ಪೊಲೀಸರಿಗೆ ಸಿಗದೆ ತರೆಮರೆಸಿಕೊಂಡಿದ್ದ ಅಜ್ಜಾವರ ನಿವಾಸಿ ಅಬ್ದುಲ್‌ ಅಜೀಜ್‌ ಎಂಬಾತನನ್ನು ಕಡಬ ಪೊಲೀಸರು ಆಂಧ್ರಪ್ರದೇಶದಲ್ಲಿ ಪತ್ತೆ ಹಚ್ಚಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. 2012ರ ಜನವರಿ 31ರಂದು ಕೊಂಬಾರು ಗ್ರಾಮದ ಆಮೈತಡ್ಕ ಎಂಬಲ್ಲಿ ರಸ್ತೆಯಲ್ಲಿರುವ ಮೋರಿಯೊಂದರ ಅಡಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಮಹಿಳೆಯೋರ್ವರ ಮೃತದೇಹ ಪತ್ತೆಯಾಗಿತ್ತು. ಕಡಬ ಠಾಣೆಯಲ್ಲಿ ಈ ಸಂಬಂಧ …

Read More »

12 ಗಂಟೆಯೊಳಗೆ ಆರೋಪಿ ಬಂಧನ

ಶಿವಮೊಗ್ಗ: ವಿನೋಬನಗರ ಪೊಲೀಸ್ ಠಾಣಾ ವ್ಯಾಪ್ತಿಯ ಬೊಮ್ಮನಕಟ್ಟೆ ಚಾನಲ್ ಪ್ರದೇಶದ ಬಳಿ ಲಿಂಗತ್ವ ಅಲ್ಪಸಂಖ್ಯಾತರೊಬ್ಬರ ಹಣ, ಆಭರಣ ಕಿತ್ತುಕೊಂಡು ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು 12 ಗಂಟೆಯೊಳಗೆ ಬಂಧಿಸಿದ್ದಾರೆ. ಏ. 24ರ ರಾತ್ರಿ ಅಪರಿಚಿತ ವ್ಯಕ್ತಿಯೊಬ್ಬ ಲಿಂಗತ್ವ ಅಲ್ಪಸಂಖ್ಯಾತರರೊಬ್ಬರನ್ನು ಆಟೊದಲ್ಲಿ ಕರೆದುಕೊಂಡು ಹೋಗಿ ₹4,000 ನಗದು, ಮೊಬೈಲ್, ಕೊರಳಲ್ಲಿದ್ದ ಸರ ಹಾಗೂ ಬಂಗಾರದ ಉಂಗುರ ಕಿತ್ತುಕೊಂಡು ಪರಾರಿಯಾಗಿದ್ದಈ ಕುರಿತು ಏ. 25ರಂದು ದೂರು ದಾಖಲಿಸಲಾಗಿತ್ತು. ತನಿಖೆ ಆರಂಭಿಸಿದ ಪೊಲೀಸರು ನಗರದ ಹಳೆ …

Read More »

ಬಂಗಾಳದಲ್ಲಿ 100 ಕಚ್ಚಾ ಬಾಂಬ್‌ ವಶ: ಬಂಧಿತ ಟಿಎಂಸಿ ಕಾರ್ಯಕರ್ತ?

ಕೋಲ್ಕತಾ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ 2ನೇ ಹಂತದ ಮತದಾನಕ್ಕೆ ಕೆಲವೇ ದಿನಗಳು ಬಾಕಿ ಇರುವಾಗ, ದಕ್ಷಿಣ 24 ಪರಗಣ ಜಿಲ್ಲೆಯ ಭಾಂಗರ್‌ನಲ್ಲಿ ತೃಣ ಮೂಲ ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತ ಎನ್ನಲಾದ ವ್ಯಕ್ತಿಯೊಬ್ಬನ ಮನೆಯಿಂದ ಸುಮಾರು 100 ಕಚ್ಚಾ ಬಾಂಬ್‌ಗಳನ್ನು ರವಿವಾರ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನಿರ್ದಿಷ್ಟ ಗುಪ್ತಚರ ಮಾಹಿತಿಯ ಆಧಾರದ ಮೇಲೆ ರಫಿಕುಲ್ ಇಸ್ಲಾಂ ಎಂಬಾತನ ಮನೆಯಲ್ಲಿ ನಡೆಸಿದ ಶೋಧ ಕಾರ್ಯಾಚರಣೆಯ ಸಂದರ್ಭದಲ್ಲಿ ಈ ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ …

Read More »

ಎಪಿಕೆ ಫೈಲ್‌ ಕಳುಹಿಸಿ ವಂಚನೆ

ತುಮಕೂರು: ಎಪಿಕೆ ಫೈಲ್‌ ಕಳುಹಿಸಿ ನಗರದ ಗೋಕುಲ ಬಡಾವಣೆಯ ಎಚ್‌.ಸಿ.ನರಸೀದೇವರು ಎಂಬುವರಿಗೆ ₹8.77 ಲಕ್ಷ ವಂಚಿಸಲಾಗಿದೆ. ನರಸೀದೇವರು ಅವರ ಬ್ಯಾಂಕ್‌ ಖಾತೆಯಿಂದ ಏ. 4ರಿಂದ 7ರ ವರೆಗೆ ಹಂತ ಹಂತವಾಗಿ ಒಟ್ಟು ₹8,77,149 ಕಡಿತಗೊಂಡಿದೆ. ಏ. 4ರಂದು ಅವರ ಮೊಬೈಲ್‌ಗೆ ಯಾವುದೇ ಕರೆ, ಮೆಸೇಜ್‌ ಬಂದಿಲ್ಲ. ಮತ್ತೊಂದು ಸಿಮ್‌ ಖರೀದಿಸಿದ್ದಾರೆ. ನಂತರ ಬ್ಯಾಂಕ್‌ಗೆ ಹೋಗಿ ವಿಚಾರಿಸಿದಾಗ ಖಾತೆಯಲ್ಲಿ ಕೇವಲ ₹441 ಮಾತ್ರ ತೋರಿಸಿದೆ. ಇದಾದ ಬಳಿಕ ಮೊಬೈಲ್‌ ಪರಿಶೀಲಿಸಿದ್ದು, ಎಪಿಕೆ …

Read More »

ಬೆಂಗಳೂರಲ್ಲಿ ಕೃಷಿಹೊಂಡದಲ್ಲಿ ಬಿದ್ದು ತಾಯಿ-ಮಗಳು ಸಾವು : ಪತಿ ವಿರುದ್ಧ ದೂರು ದಾಖಲು!

ಲಕ್ಷ್ಮಿಸಾಗರದಲ್ಲಿ ಕೃಷಿ ಹೊಂಡಕ್ಕೆ ಬಿದ್ದು ತಾಯಿ ಮಗಳು ಸಾವನ್ನಪ್ಪಿರುವ ಘಟನೆ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಲಕ್ಷ್ಮಿ ಸಾಗರ ಗ್ರಾಮದಲ್ಲಿ ನಡೆದಿದೆ. ಶನಿವಾರ ನಡೆದಿರುವ ಘಟನೆ ಇದೀಗ ತಡವಾಗಿ ಬೆಳಕಿಗೆ ಬಂದಿದೆ. ತಾಯಿ ಲಾವಣ್ಯ (28) ಹಾಗೂ ಪುತ್ರಿ ಲಕ್ಷತಾ (8) ಮೃತ ದುರ್ದವಿಗಳು ಎಂದು ತಿಳಿದುಬಂದಿದೆ. ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ಪತಿ ಸಂಪತ್ ವಿರುದ್ಧ ದೂರು ದಾಖಲಾಗಿದೆ. ಈ ಬಗ್ಗೆ ತನಿಖೆ ನಡೆಸಬೇಕು ಎಂದು ಮೃತ …

Read More »

ಕೇರಳ ವಿದ್ಯಾರ್ಥಿಗಳ ದರೋಡೆ: ವಿದ್ಯಾರ್ಥಿ ಸೇರಿ 6 ಮಂದಿ ಸೆರೆ

ಬೆಂಗಳೂರು: ವೈಯಕ್ತಿಕ ದ್ವೇಷಕ್ಕೆ ಕೇರಳ ಮೂಲದ ವಿದ್ಯಾರ್ಥಿಗಳ ಕೋಣೆಗೆ ನುಗ್ಗಿ ದರೋಡೆ ಮಾಡಿದ್ದ ವಿದ್ಯಾರ್ಥಿ ಹಾಗೂ ಐವರು ಸಹಚರರನ್ನು ಕೋಣನಕುಂಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡು ಮೂಲದ ಅಭಿನೇಷ್ (22) ಡಿಪ್ಲೊಮಾ ವಿದ್ಯಾರ್ಥಿ. ಈತನ ಸಹಚರರಾದ ನವೀನ್‌ ಕುಮಾರ್‌ (23), ಕುಮಾರ್‌ (23), ವಿಮಲ್‌ ರಾಜ್‌ (24), ಕೈಲವಂದನಂ (23) ಮತ್ತು ಪ್ರೇಮ್‌ ಕುಮಾರ್ (24) ಬಂಧಿತರು. ಆರೋಪಿಗಳು ಕೋಣನಕುಂಟೆ ಠಾಣೆ ವ್ಯಾಪ್ತಿಯ ಪವಮಾನ ನಗರ ಕೆಂಬತ್ತಹಳ್ಳಿ ರಸ್ತೆಯಲ್ಲಿ ಕೇರಳ …

Read More »

ಪಡುವನ್ನೂರು: ಹಲ್ಲೆಗೆ ಮುಂದಾಗಿ ಜೀವ ಬೆದರಿಕೆ

ಪುತ್ತೂರು: ಪಡುವನ್ನೂರು ಗ್ರಾಮದ ಸಸಿಹಿತ್ತಿಲುನಲ್ಲಿ ಖಾಸಗಿ ಜಾಗದಲ್ಲಿ ಆವರಣ ಗೋಡೆ ನಿರ್ಮಿಸುವುದನ್ನು ಪ್ರಶ್ನಿಸಿದ ಜಾಗದ ಮಾಲಕನಿಗೆ ಆರೋಪಿ ಹಲ್ಲೆಗೆ ಮುಂದಾಗಿ ಜೀವ ಬೆದರಿಕೆಯೊಡ್ಡಿದ ಘಟನೆ ಎ. 26ರಂದು ನಡೆದಿದೆ. ಘಟನೆಯ ಕುರಿತು ನೆಟ್ಟಣಿಗೆಮುಡ್ನೂರು ಗ್ರಾಮದ ಸರೋಳಿಮೂಲೆ ನಿವಾಸಿ ಅಬ್ದುಲ್‌ ರಹಿಮಾನ್‌ ಕೆ.ಎಂ. ದೂರು ನೀಡಿದ್ದು, ಮಹಮ್ಮದ್ ಎಂಬಾತ ಆರೋಪಿಯಾಗಿದ್ದಾನೆ. ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »