Breaking News

ತಣ್ಣೀರುಪಂತ ಖತೀಜಮ್ಮ ಕೊಲೆ ಪ್ರಕರಣ; ತಲೆಮರೆಸಿದ್ದ ಅಪರಾಧಿ ಆಂಧ್ರಪ್ರದೇಶದಲ್ಲಿ ಸೆರೆ

ಕಡಬ: ಹದಿನಾಲ್ಕು ವರ್ಷಗಳ ಹಿಂದೆ ಚಿನ್ನ ಎಗರಿಸಲೆತ್ನಿಸಿದಾಗ ತಡೆದ ಸಂಬಂಧಿ ಮಹಿಳೆಯನ್ನು ಕೊಲೆ ಮಾಡಿ ಅಪರಾಧಿಯಾಗಿ ನ್ಯಾಯಾಲಯದಿಂದ ಶಿಕ್ಷೆ ಪ್ರಕಟವಾದರೂ ಪೊಲೀಸರಿಗೆ ಸಿಗದೆ ತರೆಮರೆಸಿಕೊಂಡಿದ್ದ ಅಜ್ಜಾವರ ನಿವಾಸಿ ಅಬ್ದುಲ್‌ ಅಜೀಜ್‌ ಎಂಬಾತನನ್ನು ಕಡಬ ಪೊಲೀಸರು ಆಂಧ್ರಪ್ರದೇಶದಲ್ಲಿ ಪತ್ತೆ ಹಚ್ಚಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. 2012ರ ಜನವರಿ 31ರಂದು ಕೊಂಬಾರು ಗ್ರಾಮದ ಆಮೈತಡ್ಕ ಎಂಬಲ್ಲಿ ರಸ್ತೆಯಲ್ಲಿರುವ ಮೋರಿಯೊಂದರ ಅಡಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಮಹಿಳೆಯೋರ್ವರ ಮೃತದೇಹ ಪತ್ತೆಯಾಗಿತ್ತು. ಕಡಬ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿತ್ತು. ಮೃತಪಟ್ಟವರು ತಣ್ಣೀರುಪಂತ ಗ್ರಾಮದ ಅಳಕೆ ಅಬ್ಬಾಸ್‌ ಎಂಬವರ ಪತ್ನಿ ಖತೀಜಮ್ಮ ಎಂಬುದನ್ನು ಪತ್ತೆ ಮಾಡಿದ್ದ ಪೊಲೀಸರು, ಇದೊಂದು ಕೊಲೆ ಪ್ರಕರಣ ಎನ್ನುವುದನ್ನು ಭೇದಿಸಿದ್ದರು. ಅಜೀಜ್‌ ಮತ್ತು ಆತನ ತಂಗಿಯರು ಸೇರಿ ಖತೀಜಮ್ಮ ಅವರನ್ನು ಕೊಲೆಗೈದಿದ್ದರು ಎಂದು ಪೊಲೀಸ್‌ ತನಿಖೆಯಲ್ಲಿ ಬೆಳಕಿಗೆ ಬಂದಿತ್ತು. ಅಪರಾಧಿಯನ್ನು ಶಿಕ್ಷೆಗೊಳಪಡಿಸಿ ಜೈಲಿಗಟ್ಟಲಾಗಿದೆ.

Share News

About BigTv News

Check Also

ಅಕ್ರಮ ಕಲ್ಲು ಸಾಗಾಟದ ವಿರುದ್ಧ ಕಾರ್ಯಾಚರಣೆ: 9 ಲಾರಿಗಳು, ನಾಲ್ಕು ಹಿಟಾಚಿ ಸಹಿತ ಸೊತ್ತುಗಳು ವಶ

ಉಡುಪಿ: ಕಾರ್ಕಳ ತಾಲೂಕಿನಲ್ಲಿ ಅಕ್ರಮ ಕಲ್ಲು ಸಾಗಾಟದ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಿ, ಹಲವರನ್ನು ಬಂಧಿಸಿ ಲಾರಿ, ಟಿಪ್ಪರ್, ಹಿಟಾಚಿ …

Leave a Reply

Your email address will not be published. Required fields are marked *