Breaking News

BigTv News

ನಿಷೇಧಿತ ಹೆಂಡ ಮಾರಾಟ: ವ್ಯಕ್ತಿ ವಶಕ್ಕೆ

ಗಂಗಾವತಿ: ತಾಲ್ಲೂಕಿನ ಹೀರೆಡಂಕ ನಕಲ್ ಗ್ರಾಮದಲ್ಲಿ ನಿಷೇಧಿತ ಹೆಂಡ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸ್ ಅಧಿಕಾರಿಗಳು ವಶಕ್ಕೆ ಪಡೆದ ಘಟನೆ ಸೋಮವಾರ ಜರುಗಿದೆ.ಹಿರೇಡಂಕನಕಲ್ ಗ್ರಾಮದ ಮುತ್ತಣ್ಣ ಮ್ಯಾಗಲಮನಿ (50) ಬಂಧಿತ. ಆಂಧ್ರಪ್ರದೇಶದಿಂದ ಹೆಂಡವನ್ನು ತರಿಸಿ, ಸುತ್ತಲಿನ ಗ್ರಾಮಸ್ಥರಿಗೆ ₹50ಕ್ಕೆ ಲೀಟರ್ ಮಾರಾಟ ಮಾಡಲಾಗುತ್ತಿತ್ತು.ಈ ಹಿನ್ನೆಲೆಯಲ್ಲಿ ಪೊಲೀಸರು ದಾಳಿ ನಡೆಸಿ, ಹೆಂಡ ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »

ತುಮಕೂರಲ್ಲಿ ಭೀಕರ ಅಪಘಾತ : ಡಿವೈಡರ್ ಗೆ ಡಿಕ್ಕಿ ಹೊಡೆದು ಪಲ್ಟಿಯಾದ ‘KSRTC’ ಬಸ್ : 40 ಪ್ರಯಾಣಿಕರು ಪಾರು!

ತುಮಕೂರು : ತುಮಕೂರಲ್ಲಿ ಭೀಕರವಾದ ಅಪಘಾತ ಸಂಭವಿಸಿದ್ದು, ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಗೆ ಡಿಕ್ಕಿ ಹೊಡೆದು ಕೆ ಎಸ್ ಆರ್ ಟಿ ಸಿ ಬಸ್ ಪಲ್ಟಿ ಆಗಿರುವ ಘಟನೆ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಕಳ್ಳಿಪಾಳ್ಯ ಎಂಬ ಗ್ರಾಮದಲ್ಲಿ ಈ ಒಂದು ಅಪಘಾತ ಸಂಭವಿಸಿದೆ.ರಾಷ್ಟ್ರೀಯ ಹೆದ್ದಾರಿ 206ರಲ್ಲಿ ಕೆಎಸ್‌ಆರ್ಟಿಸಿ ಬಸ್ ಒಂದು ಪಲ್ಟಿಯಾಗಿದೆ. ಬಸ್ ನಲ್ಲಿದ್ದ ಐದಾರು ಪ್ರಯಾಣಿಕರಿಗೆ ಗಂಭೀರವಾದ ಗಾಯಗಳಾಗಿದ್ದು ಎಲ್ಲರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. 40ಕ್ಕೂ …

Read More »

ಗೃಹ ಸಚಿವ ಪರಮೇಶ್ವರ್‌ಗೆ ₹500 ಬೆಟ್ಟಿಂಗ್ ಕೇಸ್ ಶಾಕ್ – ಎಫ್‌ಐಆರ್‌ಗೆ ಕೋರ್ಟ್ ಗ್ರೀನ್ ಸಿಗ್ನಲ್!

ತುಮಕೂರು: ಕಬಡ್ಡಿ ಪಂದ್ಯಾವಳಿಯ ವೇಳೆ 500 ರೂಪಾಯಿ ಬೆಟ್ಟಿಂಗ್ ಕಟ್ಟಿದ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರಿಗೆ ಕಾನೂನು ಸಂಕಷ್ಟ ಎದುರಾಗಿದೆ. ಅವರ ವಿರುದ್ಧ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸುವಂತೆ ನ್ಯಾಯಾಲಯವು ಪೊಲೀಸರಿಗೆ ಮಹತ್ವದ ಆದೇಶ ನೀಡಿದೆ. ಇತ್ತೀಚೆಗೆ ನಡೆದ ಕಬಡ್ಡಿ ಟೂರ್ನಿಯೊಂದರಲ್ಲಿ ಭಾಗವಹಿಸಿದ್ದ ಗೃಹ ಸಚಿವರು, ಆಟದ ಭರದಲ್ಲಿ 500 ರೂಪಾಯಿ ಬೆಟ್ಟಿಂಗ್ ಕಟ್ಟುವುದಾಗಿ ಹೇಳಿಕೆ ನೀಡಿದ್ದರು. ಸಾರ್ವಜನಿಕವಾಗಿ ಜವಾಬ್ದಾರಿಯುತ ಸ್ಥಾನದಲ್ಲಿರುವ ವ್ಯಕ್ತಿಯೇ …

Read More »

ಜಮೀನಿನಲ್ಲಿ ಅಕ್ರಮವಾಗಿ ಬೆಳೆದಿದ್ದ 18 ಲಕ್ಷ ಮೌಲ್ಯದ ಗಾಂಜಾ ವಶ : ಆರೋಪಿ ಅರೆಸ್ಟ್

ಚಿತ್ರದುರ್ಗ: ಜಿಲ್ಲೆಯ ಚಳ್ಳಕೆರೆ ತಾಲೂಕಿನ ಗುಂತ ಕೊಲಮ್ಮನಹಳ್ಳಿ ಗ್ರಾಮದಲ್ಲಿ ಅಕ್ರಮವಾಗಿ ಗಾಂಜಾ ಬೆಳೆದಿದ್ದ ವ್ಯಕ್ತಿಯನ್ನು ಬಂಧಿಸುವಲ್ಲಿ ನಾಯಕನಹಟ್ಟಿ ಪೊಲೀಸರು ಯಶಸ್ವಿಯಾಗಿದ್ದಾರೆ. ಗುಂತ ಕೊಲಮ್ಮನಹಳ್ಳಿ ಗ್ರಾಮದ ನಿವಾಸಿ ಪಾಲಯ್ಯ ಜಿ (58) ಎಂಬಾತ ಬಂಧಿತ ಆರೋಪಿ. ಈತ ತನ್ನ ಜಮೀನಿನಲ್ಲಿ ಅಕ್ರಮವಾಗಿ ಗಾಂಜಾ ಗಿಡಗಳನ್ನು ಬೆಳೆದಿರುವ ಬಗ್ಗೆ ಪೊಲೀಸರಿಗೆ ಖಚಿತ ಮಾಹಿತಿ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಜಮೀನಿನ ಮೇಲೆ ದಾಳಿ ನಡೆಸಿದ್ದಾರೆ. ಒಟ್ಟು 791 ಗಿಡಗಳು. ಅಂದಾಜು 187 ಕೆಜಿ …

Read More »

ಹಾವೇರಿಯಲ್ಲಿ ಗಾಂಧಿ ಪ್ರತಿಮೆ ಧ್ವಂಸ ಕೇಸ್ – ಆರೋಪಿ ಅರೆಸ್ಟ್.!

ಹಾವೇರಿ ನಗರದ ನಗರಸಭೆ ಕಚೇರಿಯ ಆವರಣದಲ್ಲಿದ್ದ ಮಹಾತ್ಮ ಗಾಂಧೀಜಿಯವರ ಪ್ರತಿಮೆಯನ್ನು ಭಗ್ನಗೊಳಿಸಿದ್ದ ಕಿಡಿಗೇಡಿಯನ್ನು ಹಾವೇರಿ ಶಹರ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ವೈಭವ್ ವಿನೋದ್ ರಾಯ್ಕರ್ (28) ಎಂದು ಗುರುತಿಸಲಾಗಿದ್ದು, ಈತ ಭಾನುವಾರ ತಡರಾತ್ರಿ ಈ ಕೃತ್ಯ ಎಸಗಿದ್ದ ಎನ್ನಲಾಗಿದೆ. ನಗರಸಭೆಯ ಮುಂಭಾಗದಲ್ಲಿ ಪ್ರತಿಷ್ಠಾಪಿಸಲಾಗಿದ್ದ ರಾಷ್ಟ್ರಪಿತನ ಪ್ರತಿಮೆಗೆ ಕಿಡಿಗೇಡಿಯು ಸಿಮೆಂಟ್ ಇಟ್ಟಿಗೆಯಿಂದ ಹೊಡೆದು ಹಾನಿ ಮಾಡಿದ್ದನು. ಈ ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ನಗರಸಭೆಯ ಪೌರಾಯುಕ್ತರಾದ ಎಚ್. ಕಾಂತರಾಜು ಅವರು …

Read More »

ಕಚೇರಿಯಲ್ಲಿ ಯುವತಿಯರ ಮೇಲೆ ಮತಾಂತರಕ್ಕೆ ಒತ್ತಡ ಹೇರುತ್ತಿದ್ದ ಮುಸಲ್ಮಾನನ ಬಂಧನ !

ನಾಗ್ಪುರ – ಇಲ್ಲಿನ ಸ್ವಯಂಸೇವಾ ಸಂಸ್ಥೆಯೊಂದರಲ್ಲಿ ಇಸ್ಲಾಂ ಧರ್ಮವನ್ನು ಪಾಲಿಸುವಂತೆ ರಿಯಾಜ್ ಖಾಜಿ ಎಂಬಾತ ಅಲ್ಲಿನ ಯುವತಿಯರ ಮೇಲೆ ಒತ್ತಡ ಹೇರಿ ಬೆದರಿಕೆ ಹಾಕಿದ್ದನು. ಈ ಸಂಬಂಧ ಪೊಲೀಸರು ರಿಯಾಜ್‌ನನ್ನು ಬಂಧಿಸಿದ್ದಾರೆ. ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ನ್ಯಾಯಾಲಯವು ಆತನನ್ನು ಏಪ್ರಿಲ್ 23 ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ. ರಿಯಾಜ್ ಜೊತೆ ಬೇರೆ ಯಾರಾದರೂ ಶಾಮೀಲಾಗಿದ್ದರೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಆತ ‘ಫಿಕರ್ ಫೌಂಡೇಶನ್’ ಮತ್ತು ‘ಪಢೇ ಹಮ್ …

Read More »

ನಂಜನಗೂಡು: ಬೈಕ್ ಟೈರ್‌ ಸ್ಫೋಟ, ವಿದ್ಯಾರ್ಥಿನಿ ಸಾವು

ಬೈಕ್‌ನಲ್ಲಿ ಚಲಿಸುತ್ತಿದ್ದಾಗ ಟೈರ್ ಸ್ಫೋಟ ಆಗಿ ವಿದ್ಯಾರ್ಥಿನಿ ಸಾವನ್ನಪ್ಪಿ ಮೂವರು ಗಂಭೀರ ಗಾಯಗೊಂಡಿರುವ ಘಟನೆ ತಾಲೂಕಿನ ಗಣೇಶಪುರ ಗ್ರಾಮದ ಬಿಳಿ ಸಂಭವಿಸಿದೆ. ಮಡುವಿನಹಳ್ಳಿಯ ಮಹದೇವಸ್ವಾಮಿ ಎಂಬುವವರ ಪುತ್ರಿ ಸಿಂಚನಾ (16) ಮೃತರು. ಮಹದೇವಸ್ವಾಮಿ ಅವರು ಪತ್ನಿ, ಮಗಳು ಮತ್ತು ಮಗನ ಜತೆ ಬೈಕ್‌ನಲ್ಲಿ ಬೇಲದಕುಪ್ಪೆ ಮಹದೇಶ್ವರಸ್ವಾಮಿ ದೇವಾಲಯಕ್ಕೆ ತೆರಳಿ ವಾಪಸಾಗುತ್ತಿದ್ದಾಗ ಗಣೇಶಪುರ ಬಳಿ ಬೈಕ್‌ನ ಟೈರ್‌ ಸ್ಫೋಟವಾಗಿದೆ. ನಾಲ್ವರು ರಸ್ತೆಯಲ್ಲಿ ಬಿದ್ದು ಗಂಭೀರ ಗಾಯಗೊಂಡಿದ್ದರು. ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆ …

Read More »

ಬಹಿರಂಗವಾಯ್ತು ‘ರೇಪ್ ಅಕಾಡೆಮಿ’ಗಳ ಕರಾಳ ಮುಖ! ಮಹಿಳೆಯರ ಮೇಲೆ ದೌರ್ಜನ್ಯ ಎಸಗಲು ಆನ್‌ಲೈನ್‌ನಲ್ಲಿ ತರಬೇತಿ!

ನವದೆಹಲಿ:ಅಂತರ್ಜಾಲದ ಕತ್ತಲೆ ಲೋಕದಲ್ಲಿ ಮಹಿಳೆಯರ ವಿರುದ್ಧದ ಭಯಾನಕ ಸಂಚೊಂದು ಬಯಲಾಗಿದೆ. ‘ರೇಪ್ ಅಕಾಡೆಮಿ’ ಎಂಬ ಹೆಸರಿನ ಗುಪ್ತ ಆನ್‌ಲೈನ್ ಗುಂಪುಗಳು ಸಕ್ರಿಯವಾಗಿದ್ದು, ಮಹಿಳೆಯರಿಗೆ ಅಮಲು ಪದಾರ್ಥ ನೀಡುವುದು ಮತ್ತು ಅವರ ಮೇಲೆ ಲೈಂಗಿಕ ದೌರ್ಜನ್ಯ ಎಸಗುವುದು ಹೇಗೆ ಎಂಬ ಬಗ್ಗೆ ಪುರುಷರಿಗೆ ‘ತರಬೇತಿ’ ನೀಡುತ್ತಿರುವುದು ತನಿಖೆಯಿಂದ ತಿಳಿದುಬಂದಿದೆ. ಈ ಗುಂಪುಗಳಲ್ಲಿ ಮಹಿಳೆಯರ ಮೇಲೆ ದಾಳಿ ಮಾಡಲು ಸಂಚು ರೂಪಿಸುವುದು, ಅವರಿಗೆ ತಿಳಿಯದಂತೆ ಪಾನೀಯಗಳಲ್ಲಿ ಮಾದಕ ದ್ರವ್ಯ ಬೆರೆಸುವುದು ಮತ್ತು ಪಾರಾಗುವ …

Read More »

ಹಾಡಹಗಲೇ ಅಸಭ್ಯ ವರ್ತನೆ: ಹುಬ್ಬಳ್ಳಿನಲ್ಲಿ ರೋಡ್ ರೋಮಿಯೋಗಳ ದೌರ್ಜನ್ಯ

ಹುಬ್ಬಳ್ಳಿನಲ್ಲಿ ಪುಂಡರ ಅಟ್ಟಹಾಸ ಮಿತಿಮೀರಿದ್ದು, ಸಾರ್ವಜನಿಕ ರಸ್ತೆಗಳಲ್ಲೇ ಯುವತಿಯರ ಮೇಲೆ ಅಸಭ್ಯ ವರ್ತನೆ ನಡೆಯುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ನಗರದ ದೇಶಪಾಂಡೆ ನಗರದಲ್ಲಿ ನಡೆದ ಘಟನೆಯಲ್ಲಿ, ಒಂಟಿಯಾಗಿ ಹೋಗುತ್ತಿದ್ದ ಯುವತಿಯನ್ನು ಹಿಂಬಾಲಿಸಿಕೊಂಡು ಬೈಕ್‌ನಲ್ಲಿ ಬಂದ ಮೂವರು ಯುವಕರು ಹಾಡಹಗಲೇ ಅಸಭ್ಯವಾಗಿ ವರ್ತಿಸಿ ಪರಾರಿಯಾಗಿದ್ದಾರೆ. ಯುವತಿಯ ಹಿಂಭಾಗ ಮುಟ್ಟಿದ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಘಟನೆ ಹುಬ್ಬಳ್ಳಿ ಉಪನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. …

Read More »

ಕತ್ತಲಲ್ಲಿ ಬಂದ್ರು, ಕಾರಲ್ಲಿ ಬಂದು ಹಸು ಕದ್ಕೊಂಡು ಹೋದ್ರು! ಕಳ್ಳರ ಕೈ ಚಳಕದ ಹಿಂದಿದ್ಯಾ ಬೇರೆ ದಂಧೆ?

ಆನೆಕಲ್: ಎಲೆಕ್ಟ್ರಾನಿಕ್ ಸಿಟಿಯಲ್ಲಿ ಹಸು ಕಳ್ಳತನದ ಪ್ರಕರಣ ಮಾಲೀಕರಲ್ಲಿ ಆತಂಕ ಮೂಡಿಸಿದೆ. ಆಗ್ಸ್ಟೈನ್ ಮತ್ತು ಪ್ರಸಾದ್ ಎಂಬ ಹಸು ಸಾಕಾಣಿಕಾರರ ಮನೆ ಪಾರ್ಕಿಂಗ್ ಪ್ರದೇಶದಿಂದ ಮೂರು ಹಸುಗಳು ಹಾಗೂ ಒಂದು ಕರು ಕಳ್ಳತನವಾಗಿವೆ. ಜರ್ಸಿ ಮತ್ತು ಎರಡು ಹೆಚ್‌ಎಫ್ ತಳಿಯ ಹಸುಗಳನ್ನು ರಾತ್ರಿ ವೇಳೆ ಕಾರಿನಲ್ಲಿ ಬಂದ ಕಳ್ಳರು ಕದ್ದೊಯ್ದಿದ್ದಾರೆ. ಕಳ್ಳರ ಕೈಚಳಕ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಹಸುಗಳಿಗೆ ಹುಲ್ಲು ಹಾಕಿ ಮಲಗಿದ್ದ ಮಾಲೀಕರು ಬೆಳಿಗ್ಗೆ ನೋಡಿದಾಗ ಅವು ಕಾಣೆಯಾಗಿದ್ದು …

Read More »