Breaking News

BigTv News

ದರ್ಪ ತೋರಿದವನಿಗೆ ದಂಡದ ಬಿಸಿ!

ಚಿಂತಾಮಣಿ: ನಗರದ ರಾಷ್ಟ್ರೀಯ ಹೆದ್ದಾರಿಯ ಕಾಂಪ್ಲೆಕ್ಸ್​ ಬಳಿ ಸೋಮವಾರ ನಗರಠಾಣೆ ಪೊಲೀಸರು ದ್ವಿಚಕ್ರವಾಹನಗಳ ದಾಖಲೆ ಪರಿಶೀಲನೆಯಲ್ಲಿ ತೊಡಗಿದ್ದಾಗ ದಾಖಲಾತಿ ಹಾಜರುಪಡಿಸದೆ ದರ್ಪ ಪ್ರದರ್ಶಿಸಿದ ಬೈಕ್​ ಸವಾರನಿಗೆ ಒಂದು ಸಾವಿರ ರೂ. ದಂಡ ವಿಧಿಸಿ ಬಿಸಿ ಮುಟ್ಟಿಸಲಾಗಿದೆ. ಮಹಿಳಾ ಪಿಎಸ್​ಐ ಪದ್ಮಾ ನೇತೃತ್ವದ ತಂಡ ವಾಹನಗಳ ದಾಖಲೆಗಳ ಜತೆಗೆ ಹೆಲ್ಮೆಟ್​ ಧರಿಸದ ಸವಾರರನ್ನು ತಡೆದು ತಪಾಸಣೆ ಮಾಡುತ್ತಿದ್ದಾಗ ನೋಂದಣಿ ಸಂಖ್ಯೆ ಇಲ್ಲದ ಬೈಕ್​ ಚಾಲನೆ ಮಾಡಿಕೊಂಡು ಬಂದವನನ್ನು ಪ್ರಶ್ನಿಸಿದ್ದಕ್ಕೆ ದರ್ಪ ತೋರಿದ್ದ. …

Read More »

ಸುಳ್ಯ: ಮಸೀದಿಯ ಕಾಣಿಕೆ ಡಬ್ಬಿ ಕಳವು ಪ್ರಕರಣ-ಆರೋಪಿ ಸೆರೆ

ಸುಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಸಂಪಾಜೆ ಗೂನಡ್ಕ ಎಂಬಲ್ಲಿರುವ ಮಸೀದಿಯ ಆವರಣದಲ್ಲಿದ್ದ ಕಾಣಿಕೆ ಡಬ್ಬಿ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವನನ್ನು ಪೊಲೀಸರು ಸೆರೆ ಹಿಡಿದಿದ್ದಾರೆ. ಆರೋಪಿ ಆಂದ್ರಪ್ರದೇಶದ ಪಶ್ಚಿಮ ಗೊದಾವರಿ ನಿವಾಸಿ ಮಹಮ್ಮದ್‌ ಸಲ್ಮಾನ್‌ (35) ಎಮದು ಗುರುತಿಸಲಾಗಿದೆ. ಮಾರ್ಚ್‌ 30 ರಂದು ಸುಳ್ಯ ಠಾಣೆಯಲ್ಲಿ ಅ.ಕ್ರ 45/2026 ಕಲಂ 303(2)BNS -2023 ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಯಿತು. , ಏಪ್ರಿಲ್‌ 06 ಪೋಲೀಸರು ಆರೋಪಿಯನ್ನ ಬಂಧಿಸಿದ್ದಾರೆ. ಆರೋಪಿತನಿಂದ ಕಳವು …

Read More »

ಶಿವಮೊಗ್ಗದಲ್ಲಿ 6 ಕಾಲಿನ ಕರುವಿಗೆ ಜನ್ಮ ನೀಡಿದ ಹಸು…!

ಶಿವಮೊಗ್ಗ: ಹಸುವೊಂದು ಆರು ಕಾಲಿನ ಕರುವಿಗೆ ಜನ್ಮ ನೀಡಿದ ಘಟನೆ ಶಿವಮೊಗ್ಗ ತಾಲೂಕಿನ ಸೂಗೂರು ಗ್ರಾಮದಲ್ಲಿ ನಡೆದಿದೆ. ಸೂಗೂರು ಗ್ರಾಮದ ಹನುಮಂತಪ್ಪ ಎಂಬ ರೈತನ ಮನೆಯಲ್ಲಿ ಈ ಕರು ಜನನವಾಗಿದೆ. ಪ್ರಸ್ತುತ 6 ಕಾಲುಗಳ ಕರು ಆರೋಗ್ಯಕರವಾಗಿದೆ. ಕರು ಹಿಂಬದಿಯಲ್ಲಿ 4 ಕಾಲುಗಳನ್ನ ಹೊಂದಿರುವುದು ವಿಶೇಷ. ಹೆಚ್ಚುವರಿ ಕಾಲುಗಳಿಂದ ಕರು ನಿಲ್ಲಲು ಕಷ್ಟ ಪಡುತ್ತಿದೆ. ಹಸು ಆರು ಕಾಲಿನ ಕರು ಹಾಕಲು ತೀವ್ರ ಒದ್ದಾಡಿದೆ. ಸಮಯಕ್ಕೆ ಸ್ಥಳಕ್ಕೆ ಆಗಮಿಸಿದ ಪಶು …

Read More »

ರಾಷ್ಟ್ರೀಯ ಭದ್ರತಾ ಉಲ್ಲಂಘನೆ: 7 ಜನಕ್ಕೆ ನ್ಯಾಯಾಂಗ ಬಂಧನ

ನವದೆಹಲಿ: ರಾಷ್ಟ್ರೀಯ ಭದ್ರತೆಯನ್ನು ಉಲ್ಲಂಘಿಸಿದ ಆರೋಪದಡಿ 6 ಉಕ್ರೇನಿಯನ್ನರು ಸೇರಿದಂತೆ 7 ಮಂದಿ ವಿದೇಶಿ ಪ್ರಜೆಗಳನ್ನು ದೆಹಲಿ ನ್ಯಾಯಾಲಯ ಸೋಮವಾರ 30 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ. ಈ ಅವಧಿಯಲ್ಲಿ ತನಿಖಾಧಿಕಾರಿಗಳು ಇವರ ಹಿನ್ನೆಲೆ, ಇವರಿಗೆ ಸ್ಥಳೀಯವಾಗಿ ಯಾರು ಸಹಾಯ ಮಾಡುತ್ತಿದ್ದರು ಮತ್ತು ಇವರ ಭೇಟಿಯ ಅಸಲಿ ಉದ್ದೇಶವೇನು ಎಂಬ ಬಗ್ಗೆ ಹೆಚ್ಚಿನ ಮಾಹಿತಿ ಕಲೆಹಾಕಲಿದ್ದಾರೆ. ಭಾರತದ ವೀಸಾ ನಿಯಮಗಳನ್ನು ಉಲ್ಲಂಘಿಸಿ ಅನಧಿಕೃತವಾಗಿ ದೇಶದಲ್ಲಿ ನೆಲೆಸಿರುವ ಶಂಕೆಯ ಮೇಲೆ ಇವರನ್ನು …

Read More »

ಫುಡ್ ಪಾಯಿಸನ್ – ಬೀದರ್‌ನಲ್ಲಿ 40ಕ್ಕೂ ಅಧಿಕ ಮಂದಿ ಅಸ್ವಸ್ಥ

ಬೀದರ್:ಫುಡ್ ಪಾಯಿಸನ್ ಆಗಿ 40ಕ್ಕೂ ಅಧಿಕ ಜನರು ಅಸ್ವಸ್ಥರಾಗಿರುವ ಘಟನೆ ಬೀದರ್ ಜಿಲ್ಲೆಯ ಭಾಲ್ಕಿಯ ಜಾಂತಿ ಗ್ರಾಮದಲ್ಲಿ ನಡೆದಿದೆ. ಹೊಸ ಮನೆಯ ಮೇಲ್ಛಾವಣಿ ಹಾಕಿದ ಖುಷಿಗೆ ರಾಜಕುಮಾರ್ ಎಂಬುವವರು ಹುಗ್ಗಿ, ಅನ್ನ, ಸಾಂಬಾರ್ ಮಾಡಿಸಿ, ಗ್ರಾಮಸ್ಥರಿಗೆ ಊಟ ಹಾಕಿಸಿದ್ದರು. ಇದನ್ನು ತಿಂದು ಗ್ರಾಮದ ಜನರು ಬೆಳಗಿನ ಜಾವ ಫುಡ್ ಪಾಯಿಸನ್ ಆಗಿ ವಾಂತಿ, ಭೇದಿಯಿಂದ ಅಸ್ವಸ್ಥರಾಗಿದ್ದಾರೆ. 40ಕ್ಕೂ ಅಧಿಕ ಜನರು ಅಸ್ವಸ್ಥರಾಗಿದ್ದು, 5 ರಿಂದ 6 ಜನರ ಸ್ಥಿತಿ ಗಂಭೀರವಾಗಿದೆ. …

Read More »

ಕಡಬ | ಮಹಿಳೆಗೆ ಹಲ್ಲೆ, ಜೀವ ಬೆದರಿಕೆ: ಆರೋಪಿಯ ವಿರುದ್ಧ ಪ್ರಕರಣ ದಾಖಲು

ಮಹಿಳೆಯೊಬ್ಬರಿಗೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ ಆರೋಪದ ಮೇರೆಗೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವುದು ತಿಳಿದುಬಂದಿದೆ. ಪ್ರಕರಣದ ಫಿರ್ಯಾದುದಾರರಾದ ಮಹಿಳೆ ಕಳೆದ ಸುಮಾರು 3 ವರ್ಷಗಳಿಂದ ತನ್ನ ಗಂಡನಿಂದ ಪ್ರತ್ಯೇಕವಾಗಿ ಮಗಳೊಂದಿಗೆ ವಾಸವಾಗಿದ್ದರು. ಈ ನಡುವೆ ಆರೋಪಿತ ಪ್ರಭಾಕರ ಪಿ ಅವರೊಂದಿಗೆ ಪರಿಚಯವಾಗಿ ಆತ್ಮೀಯತೆ ಬೆಳೆದಿತ್ತು ಎನ್ನಲಾಗಿದೆ. ದಿನಾಂಕ 03.04.2026 ರಂದು ಫಿರ್ಯಾದುದಾರರು ಆರೋಪಿಯೊಂದಿಗೆ ಮಾತನಾಡಲು ಅವರ ಮನೆಗೆ ತೆರಳಿದ ವೇಳೆ, ಆರೋಪಿಯು ಹಲ್ಲೆ ನಡೆಸಿ ಆವಾಚ್ಯ …

Read More »

ಕಾಳಸಂತೆ IPL ಟಿಕೆಟ್ ಮಾರಾಟಕ್ಕೆ ಬ್ರೇಕ್: 11 ಆರೋಪಿಗಳ ಬಂಧನ

ಬೆಂಗಳೂರು: ಟಿ20 ಐಪಿಎಲ್ ಪಂದ್ಯಗಳ ಟಿಕೆಟ್‌ಗಳನ್ನು ಕಾಳಸಂತೆ ಮೂಲಕ ಮಾರಾಟ ಮಾಡುತ್ತಿದ್ದವರ ವಿರುದ್ಧ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ. ನಗರದಲ್ಲಿ ನಡೆದ ಕಾರ್ಯಾಚರಣೆಯಲ್ಲಿ 11 ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರಿಂದ ಸುಮಾರು ₹4.53 ಲಕ್ಷ ಮೌಲ್ಯದ ಟಿಕೆಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಜೊತೆಗೆ 7 ಮೊಬೈಲ್ ಫೋನ್‌ಗಳು ಹಾಗೂ 28 ಟಿಕೆಟ್‌ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಈ ಸಂಬಂಧ ಕಬ್ಬನ್ ಪಾರ್ಕ್ ಹಾಗೂ ಚಾಮರಾಜಪೇಟೆ ಪೊಲೀಸ್ ಠಾಣೆಗಳಲ್ಲಿ ಒಟ್ಟು 7 ಪ್ರಕರಣಗಳನ್ನು ದಾಖಲಿಸಲಾಗಿದೆ. ಪೊಲೀಸರು …

Read More »

ಬಳ್ಳಾರಿ: ಮೀನುಗಾರಿಕೆ ಇಲಾಖೆ ಅಧಿಕಾರಿಗೆ ಲೋಕಾ ಶಾಕ್!

ನಗರದಲ್ಲಿಂದು ಲೋಕಾಯುಕ್ತ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಶಿವಣ್ಣ ಅವರ ನಿವಾಸ ಹಾಗೂ ಕಚೇರಿಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ. ಆದಾಯಕ್ಕಿಂತ ಹೆಚ್ಚು ಆಸ್ತಿಗಳಿಸಿದ್ದಾರೆ ಎಂಬ ಗಂಭೀರ ಆರೋಪದ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಈ ಕಾರ್ಯಾಚರಣೆ ಕೈಗೊಂಡಿದ್ದಾರೆ. ಇಲ್ಲಿನ ಸಿದ್ಧಾರ್ಥ್ ನಗರದಲ್ಲಿರುವ ಶಿವಣ್ಣ ಅವರ ಮನೆ ಹಾಗೂ ಅವರ ಕಚೇರಿ ಸೇರಿದಂತೆ ಒಟ್ಟು ನಾಲ್ಕು ಕಡೆಗಳಲ್ಲಿ ಅಧಿಕಾರಿಗಳ ತಂಡ ಶೋಧ ಕಾರ್ಯ ನಡೆಸಿದೆ. ಸಹಾಯಕ …

Read More »

ಕೊಡಗು: ಹಾರಂಗಿ ಜಲಾಶಯದ ಎಇಇ ಪುಟ್ಟಸ್ವಾಮಿ ನಿವಾಸ, ಕಚೇರಿ ಮೇಲೆ ಲೋಕಾಯುಕ್ತ ದಾಳಿ

ಕೊಡಗು ಜಿಲ್ಲೆಯ ಹಾರಂಗಿ ಜಲಾಶಯದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಹಾಗೂ ಕಾವೇರಿ ನೀರಾವರಿ ನಿಗಮದ ಪ್ರಭಾರ ಕಾರ್ಯಪಾಲಕ ಎಂಜಿನಿಯರ್ ಐ.ಕೆ.ಪುಟ್ಟಸ್ವಾಮಿ ಅವರಿಗೆ ಸಂಬಂಧಿಸಿದ 4 ಸ್ಥಳಗಳ ಮೇಲೆ ಲೋಕಾಯುಕ್ತ ಪೊಲೀಸರು ಮಂಗಳವಾರ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ಕುಶಾಲನಗರದ ಹಾರಂಗಿ ಜಲಾಶಯದ ಕಚೇರಿ, ಕಾವೇರಿ ನೀರಾವರಿ ನಿಗಮದ ಕಚೇರಿ, ಹಾಸನದ ವಿದ್ಯಾ ನಗರದಲ್ಲಿರುವ ಅವರ ಸ್ವಂತ ಕಚೇರಿ ಹಾಗೂ ಮೈಸೂರಿನ ಬಾಡಿಗೆ ಮನೆಯ ಮೇಲೆ ದಾಳಿ ನಡೆಸಲಾಗಿದೆ. ಪರಿಶೀಲನೆ ನಡೆಸಲಾಗುತ್ತಿದೆ ಎಂದು …

Read More »

ಬೆಂಗಳೂರಲ್ಲಿ ಮತ್ತೊಂದು ಮರ್ಡರ್ : ಅನೈತಿಕ ಸಂಬಂಧಕ್ಕೆ ಅಡ್ಡಿ ಎಂದು, ಪ್ರೇಯಸಿಯ ಪತಿಯನ್ನೆ ಕೊಂದ ಪ್ರಿಯಕರ!

ಬೆಂಗಳೂರು : ಇತ್ತೀಚಿಗೆ ಅನೈತಿಕ ಸಂಬಂಧದಿಂದ ಕೊಲೆಗಳ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿವೆ. ಇದೀಗ ಬೆಂಗಳೂರಿನಲ್ಲಿ ಇದೆ ಅನೈತಿಕ ಸಂಬಂಧ ಹಿನ್ನೆಲೆಯಲ್ಲಿ, ಪ್ರೇಯಸಿಯ ಪತಿಯನ್ನೇ ಪ್ರಿಯಕರ ಒಬ್ಬ ಭೀಕರವಾಗಿ ಕೊಲೆ ಮಾಡಿರುವ ಘಟನೆ ಬೆಂಗಳೂರಲ್ಲಿ ನಡೆದಿದೆ. ಸುನೀಲ್ ನಾಯಕ್ ಕೊಲೆಯಾದ ಪತಿ. ಪ್ರಿಯಕರ ಬಸುದೇವ್ ಮಲ್ಲಿಕ್ ಈ ಕೃತ್ಯ ಎಸಗಿದ್ದಾನೆ. ಆರೋಪಿ ಬಸುದೇವ್ ಮಲ್ಲಿಕ್ ಸುನೀಲ್ ನಾಯಕ್ ಪತ್ನಿಯೊಂದಿಗೆ ಸಲುಗೆ ಹೊಂದಿದ್ದ. ಈ ವಿಚಾರ ತಿಳಿದು ಸುನೀಲ್ ನಾಯಕ್ ಗಲಾಟೆ ಮಾಡಿದ್ದ. …

Read More »