ಬೆಂಗಳೂರು: ಮಾದಕ ವಸ್ತು ಮಾರಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಬಂಧಿಸಿರುವ ರಾಮಮೂರ್ತಿ ನಗರ ಠಾಣೆ ಪೊಲೀಸರು, ₹52 ಸಾವಿರ ಮೌಲ್ಯದ 14 ಗ್ರಾಂ ಎಂಡಿಎಂಎ ಮಾತ್ರೆ ಹಾಗೂ 94 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ. ಖಚಿತ ಮಾಹಿತಿ ಮೇರೆಗೆ ಕೆ.ಆರ್.ಪುರ ರೈಲ್ವೆ ನಿಲ್ದಾಣದ ಸಮೀಪ ಪೊಲೀಸರು ದಾಳಿ ಮಾಡಿ, ಡ್ರಗ್ಸ್ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆದರು. ಹೆಚ್ಚಿನ ಹಣ ಗಳಿಸುವ ಉದ್ದೇಶದಿಂದ ಈ ಕೃತ್ಯವೆಸಗಿರುವುದಾಗಿ ವಿಚಾರಣೆ ವೇಳೆ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ ಎಂದು …
Read More »ಹೂಡಿಕೆ ನೆಪದಲ್ಲಿ ಮಹಿಳೆಗೆ 11.75 ಲಕ್ಷ ರೂ. ವಂಚನೆ
ಉಡುಪಿ: ಟ್ರೇಡಿಂಗ್ ಅಪ್ಲಿಕೇಶನ್ ನಲ್ಲಿ ಹೂಡಿಕೆ ಮಾಡಿ ಮಹಿಳೆಯೊಬ್ಬರು 11.75 ಲಕ್ಷ ರೂ. ಆನ್ಲೈನ್ ವಂಚನೆಗೆ ಒಳಗಾಗಿದ್ದು, ಉಡುಪಿಯ ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಟ್ರೇಡಿಂಗ್ ಬಗ್ಗೆ ತಿಳಿದುಕೊಳ್ಳಲು ಸಹನಾ ಎಂಬುವರು ಅಪ್ಲಿಕೇಶನ್ ಡೌನ್ಲೋಡ್ ಮಾಡಿದ್ದು, ಮುಂದೆ 15 ದಿನಗಳ ನಂತರ ಅಪರಿಚಿತ ವ್ಯಕ್ತಿ ಕರೆ ಮಾಡಿ ವಾಟ್ಸಾಪ್ ಗ್ರೂಪ್ ಗೆ ಸೇರಿಸಿದ್ದಾನೆ. ಅದರಲ್ಲಿ ಲಿಂಕ್ ಕಳುಹಿಸಿ ಇ-ಕೆವೈಸಿ ಡಿಟೇಲ್ ಭರ್ತಿ ಮಾಡುವಂತೆ ತಿಳಿಸಲಾಗಿದೆ. ನಂತರ ಟ್ರೇಡಿಂಗ್ …
Read More »ಬೇಗೂರು: ಅಪಾರ್ಟ್ಮೆಂಟಲ್ಲಿ 2 ಎಲ್ಪಿಜಿ ಸಿಲಿಂಡರ್ ಕಳ್ಳತನ
ಬೆಂಗಳೂರು: ಬೇಗೂರು ಬಳಿಯ ಆರ್ .ಸಿ ಲೇಔಟ್ನ ವಿಶ್ವಪ್ರಿಯ ಅಪಾರ್ಟ್ಮೆಂಟ್ನ ಆವರಣದಲ್ಲಿದ್ದ ಎಲ್ಪಿಜಿ ಸಿಲಿಂಡರ್ಗಳನ್ನು ಕಳ್ಳರು ಕದೊಯ್ದಿದ್ದಾರೆ. ಹೆಲ್ಮೆಟ್ ಧರಿಸಿಕೊಂಡು ದ್ವಿಚಕ್ರ ವಾಹನದಲ್ಲಿ ಬಂದಿದ್ದ ಇಬ್ಬರು, ಅಪಾಟ್ ìಮೆಂಟ್ ಒಳಗೆ ಬಂದು 2 ಸಿಲಿಂಡರ್ ಗಳನ್ನು ಕಳವು ಮಾಡಲಾಗಿದೆ. ಬಳಿಕ ಅಪಾರ್ಟ್ಮೆಂಟ್ ನಿವಾಸಿಯೊಬ್ಬರು ಗಮನಿಸಿ ಸಿಸಿ ಕ್ಯಾಮೆರಾ ಪರಿಶೀಲಿಸಿದಾಗ, ದ್ವಿಚಕ್ರ ವಾಹನದಲ್ಲಿ ಬಂದ ಒಬ್ಬ ಹೊರಗೆ ನಿಂತಿದ್ದ. ಮತ್ತೂಬ್ಬ ದ್ವಿಚಕ್ರ ವಾಹನ ಸಮೇತ ಒಳಗೆ ಹೋಗಿ ಎರಡು ಸಿಲಿಂಡರ್ಗಳನ್ನು ಹೊರಕ್ಕೆ …
Read More »ರಸ್ತೆ ಅಪಘಾತದಲ್ಲಿ ಒಬ್ಬ ಸಾವು, ಮತ್ತೊಬ್ಬ ಗಾಯ
ಮೇಲುಕೋಟೆ: ಹೋಬಳಿಯ ಬೆಳ್ಳಾಳೆ ಸರ್ಕಾರಿ ಫ್ರೌಡಶಾಲೆ ಬಳಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೊಬ್ಬ ಗಂಭೀರವಾಗಿ ಗಾಯಗೊಂಡಿದ್ದಾನೆ. ನಾಗಮಂಗಲ ಹಳ್ಳಿಕೆರೆ ಗ್ರಾಮದ ಸೋಮೇಶ್ (35) ಮೃತ. ಇಲ್ಲಿನ ಮೈಸೂರು-ಜೀವರ್ಗಿ ಹೆದ್ದಾರಿಯ ಬೆಳ್ಳಾಳೆ ಬಳಿ ಶನಿವಾರ ನಾಗಮಂಗಲದಿಂದ ಮೈಸೂರು ಕಡೆಗೆ ಹೋಗುತ್ತಿದ್ದ ದ್ವಿಚಕ್ರ ವಾಹನಕ್ಕೆ ಮತ್ತೊಂದು ದ್ವಿಚಕ್ರ ವಾಹನ ಡಿಕ್ಕಿಯಾದ ಪರಿಣಾಮ ಬೈಕ್ ನಿಂದ ಕೆಳಗೆ ಬಿದ್ದ ಯುವಕನ ತಲೆಗೆ ಗಾಯಗೊಂಡು ತೀವ್ರ ರಕ್ತ ಸ್ರಾವದಿಂದಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. …
Read More »ದೇವಸ್ಥಾನದಲ್ಲಿ ದಲಿತ ಯುವಕರ ಮೇಲೆ ಹಲ್ಲೆ, ಯಾದಗಿರಿಯಲ್ಲಿ ಅಮಾನವೀಯ ಘಟನೆ
ಯಾದಗಿರಿ : ಜಿಲ್ಲೆಯ ಗುರುಮಠಕಲ್ ತಾಲೂಕಿನಲ್ಲಿ ಮಾನವೀಯತೆ ಮರೆತ ಘಟನೆಯೊಂದು ನಡೆದಿದ್ದು, ದೇವಸ್ಥಾನದ ಕಟ್ಟೆಯ ಮೇಲೆ ಕುಳಿತಿದ್ದ ಕಾರಣಕ್ಕೆ ದಲಿತ ಸಮುದಾಯದ ಯುವಕರ ಮೇಲೆ ಹಲ್ಲೆ ನಡೆಸಲಾಗಿದೆ. ಗ್ರಾಮದ ಜಾತ್ರೆಯ ಸಂದರ್ಭದಲ್ಲಿ ಈ ಅಹಿತಕರ ಘಟನೆ ಸಂಭವಿಸಿದೆ ಎಂದು ವರದಿಯಾಗಿದೆ. ಇಲ್ಲಿನ ಸ್ಥಳೀಯ ದೇವಸ್ಥಾನದ ಆವರಣದಲ್ಲಿ ಕುಳಿತಿದ್ದ ಯುವಕರನ್ನು ಕಂಡು ಕೆರಳಿದ ಮೇಲ್ವರ್ಗದ ಕೆಲವರು, ಅವರನ್ನು ಅಲ್ಲಿಂದ ಎದ್ದು ಹೋಗುವಂತೆ ಧಮಕಿ ಹಾಕಿದ್ದಾರೆ. ಕೇವಲ ಮಾತಿನ ಚಕಮಕಿಯಷ್ಟೇ ಅಲ್ಲದೆ, ಯುವಕರ …
Read More »ಮಂಗಳೂರು| ಕೋಮುಪ್ರಚೋದನೆಯ ಪೋಸ್ಟ್ ಹಾಕಿದ ಆರೋಪ: ಯುವತಿ ಸೆರೆ
ಸಾಮಾಜಿಕ ಜಾಲತಾಣಗಳಲ್ಲಿ ಕೋಮು ಪ್ರಚೋದನೆಯ ಪೋಸ್ಟ್ ಹಾಕಿದ್ದ ಆರೋಪದ ಮೇರೆಗೆ ಬೆಳ್ತಂಗಡಿ ಮೂಲದ ಯುವತಿಯನ್ನು ಕಂಕನಾಡಿ ನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. 2025ರಲ್ಲಿ ಯುವತಿಯು ಸಾಮಾಜಿಕ ಜಾಲತಾಣದಲ್ಲಿ ಕೋಮು ಪ್ರಚೋದನೆ ಮಾಡುವಂತಹ ಪೋಸ್ಟ್ಗಳನ್ನು ಹಂಚಿಕೊಂಡಿದ್ದಳು. ಈ ಬಗ್ಗೆ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕೋಮು ಪ್ರಚೋದನೆಯ ಪೋಸ್ಟ್ಗಳನ್ನು ಈಕೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವುದು ತನಿಖೆ ವೇಳೆ ತಿಳಿದು ಬಂದಿದೆ. ಮಾ.19ರಂದು ಆಕೆಯನ್ನು ಬಂಧಿಸಲಾಗಿದ್ದು, ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದಾಳೆ …
Read More »*ವ್ಯಕ್ತಿ ಅಡ್ಡಗಟ್ಟಿ ಥಳಿಸಿ ಚಿನ್ನದ ಚೈನ್ ದಡೋಡೆ: 7 ಜನ ಅರೆಸ್ಟ್*
ಬೆಳಗಾವಿ: ಗೋಕಾಕ ಶಹರದ ಖತೀಬ ಮಸೀದಿ ಬಳಿ 6 ಜನರು ವ್ಯಕ್ತಿಗೆ ಅಡ್ಡಗಟ್ಟಿ ಹಲ್ಲೆ ಮಾಡಿ 16 ಗ್ರಾಂ ತೂಕದ ಬಂಗಾರದ ಚೈನ್ ದರೋಡೆ ಮಾಡಿದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಗೋಕಾಕ ಶಹರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ: 92/2026 ಕಲಂ: 310(2), 118(1), 126(2) ಸಹ ಕಲಂ: 190 ಬಿಎನ್ಎಸ್-23 ಅಡಿ ಪ್ರಕರಣ ದಾಖಲಿಸಿ ತನಿಖೆ ನಡೆಸಿದ ಪೊಲೀಸರು ಆಕಾಶ ಮಹಾದೇವ ತಳವಾರ, ರಾಮಸಿದ್ದ ಮಾರುತಿ ತೋಳಿ, ರಿತೇಶ …
Read More »*ಮಹಾರಾಷ್ಟ್ರ, ಇಂದೋರ್ ನಿಂದ ಗಾಂಜಾ ತಂದು ಮಾರಾಟ: ಆರೋಪಿ ಅರೆಸ್ಟ್*
ಬೆಳಗಾವಿ: ಮಹಾರಾಷ್ಟ್ರ ಹಾಗೂ ಇಂದೋರ್ ನಿಂದ ಗಾಂಜಾ ತಂದು ಬೆಳಗಾವಿಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಓರ್ವ ಆರೋಪಿಯನ್ನು ಬಂಧಿಸಲಾಗಿದ್ದು, ಮತ್ತೋರ್ವ ಆರೋಪಿ ಪರಾರಿಯಾಗಿದ್ದಾನೆ. ಮಾನಸ ಮನೋಹರ ಕದಮ ಎಂಬ ಆರೋಪಿಯನ್ನು ಬಂಧಿಸಲಾಗಿದ್ದು, ರಿತಿಕ ಪಾಟೀಲ ಎಂಬಾತ ಪರಾರಿಯಾಗಿದ್ದಾನೆ. ಆರೋಪಿಗಳು ಮಹಾರಾಷ್ಟ್ರ-ಇಂದೋರ್ ಆರ್ಡರ್ ನಿಂದ ಸುನೀಲ ಕಲಗಾಟ ಎಂಬಾತನಿಂದ ಗಾಂಜಾ ತಂದು ಬೆಳಗಾವಿ ಗ್ರಾಮೀಣ ಪ್ರದೇಶದ ಜೈತುನ ಮಾಳದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಮಾರಾಟ ಮಾಡುವಾಗ ಸಿಸಿಬಿ ಪೊಲೀಸರು ಆರೋಪಿತನ್ನು ಬಂಧಿಸಿದ್ದಾರೆ. ಬಂಧಿತನಿಂದ …
Read More »ಚಾರ್ಮಾಡಿ ಘಾಟನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಟಿಟಿ ವಾಹನ : ಓರ್ವ ಸಾವು, 9 ಜನರಿಗೆ ಗಾಯ!
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಘಾಟ್ ನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಟಿಟಿ ವಾಹನ ಒಂದು ಪಾರ್ಟಿಯಾಗಿದೆ 9 ಜನರಿಗೆ ಗಂಭೀರವಾದ ಗಾಯಗಳಾಗಿರುವ ಘಟನೆ ನಡೆದಿದೆ. ಭದ್ರಾವತಿಯಿಂದ ಧರ್ಮಸ್ಥಳಕ್ಕೆ ತೆರಳುತ್ತಿದ್ದ ಟಿಟಿ ವಾಹನ ಹತ್ತನೇ ತಿರುವು ಸಮೀಪ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಅಪಘಾತದ ಪರಿಣಾಮವಾಗಿ ವಾಹನದಲ್ಲಿದ್ದ ಒಂಬತ್ತು ಮಂದಿಗೆ ಗಾಯಗಳಾಗಿದ್ದು, ಅವರಲ್ಲಿ ಶೇಖರಪ್ಪ (59) ಎಂಬವರು ಮೃತಪಟ್ಟಿದ್ದಾರೆ. ಗಾಯಾಳುಗಳನ್ನು ತಕ್ಷಣ ಸಮೀಪದ ಆಸ್ಪತ್ರೆಗೆ ರವಾನಿಸಲಾಗಿದ್ದು, ಚಿಕಿತ್ಸೆ …
Read More »ಗಾಂಜಾ ಸಾಗಾಟ: 20 ವರ್ಷ ಕಠಿನ ಸಜೆ, 2 ಲಕ್ಷ ರೂ. ದಂಡ
ಕಾಸರಗೋಡು: ಕರ್ನಾಟಕ ಕೆಎಸ್ಆರ್ಟಿಸಿ ಬಸ್ನಲ್ಲಿ 22 ಕಿಲೋ ಗಾಂಜಾ ಸಾಗಾಟ ನಡೆಸಿದ ಚೆಂಗಳ ಬಂಬ್ರಾಣಿನಗರ ಶಬೀಬ್ ಮಂಜಿಲ್ನ ಬಿ.ಎಸ್.ಅಬ್ದುಲ್ ಸಕೀರ್(40)ಗೆ ಕಾಸರಗೋಡು ಜಿಲ್ಲಾ ಅಡಿಶನಲ್ ಸೆಶನ್ಸ್ ನ್ಯಾಯಾಲಯ (ದ್ವಿತೀಯ) 20 ವರ್ಷ ಕಠಿನ ಸಜೆ ಹಾಗೂ 2 ಲಕ್ಷ ರೂ.ದಂಡ ವಿಧಿಸಿ ತೀರ್ಪು ನೀಡಿದೆ. ದಂಡ ಪಾವತಿಸದಿದ್ದಲ್ಲಿ ಆರು ತಿಂಗಳು ಹೆಚ್ಚುವರಿ ಸಜೆ ಅನುಭವಿಸುವಂತೆ ತೀರ್ಪಿನಲ್ಲಿ ತಿಳಿಸಿದೆ. 2020ರ ಫೆಬ್ರವರಿ 12 ರಂದು ಬೆಳಗ್ಗೆ 7 ಗಂಟೆಗೆ ಮಂಜೇಶ್ವರ ಚೆಕ್ಪೋಸ್ಟ್ನಲ್ಲಿ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





