Breaking News

BigTv News

ಗದಗ | ರಥೋತ್ಸವಕ್ಕೆ ಅಡ್ಡಿ: ಮೂವರ ಬಂಧನ

ರಥೋತ್ಸವದ ವೇಳೆ ರಸ್ತೆಗೆ ಅಡ್ಡವಾಗಿ ಕಾರು ನಿಲ್ಲಿಸಿ ಅಡಚಣೆ ಪಡಿಸಿದ್ದಲ್ಲದೇ, ಜಾತ್ರಾ ಕಮಿಟಿ ಸದಸ್ಯರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಗದಗ ಗ್ರಾಮೀಣ ಠಾಣೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಸಲೀಂ ಬಡೇಖಾನ್‌, ಲೋಕೇಶ್‌ ರಾಮ್‌ಜಿ ಹಾಗೂ ಮಂಜುನಾಥ ಹಾದಿಮನಿ ಬಂಧಿತರು. ತಾಲ್ಲೂಕಿನ ಮಲ್ಲಸಮುದ್ರ ಗ್ರಾಮದಲ್ಲಿ ಯುಗಾದಿ ಅಂಗವಾಗಿ ಗುರುವಾರ ಬಸವೇಶ್ವರ ಜಾತ್ರೆ ಹಾಗೂ ರಥೋತ್ಸವ ನಡೆಯುತ್ತಿತ್ತು. ಈ ವೇಳೆ ರಸ್ತೆಗೆ ಕಾರು ಅಡ್ಡ ನಿಲ್ಲಿಸಿದ ಆರೋಪಿಗಳು, ಕಾರನ್ನು ರಸ್ತೆ …

Read More »

ಬೆಂಗಳೂರು | ಬ್ಯಾಟರಿ ಕಳ್ಳತನ: ಆರೋಪಿ ವಶ

ಯುಪಿಎಸ್‌ ಬ್ಯಾಟರಿಗಳನ್ನು ಕಳ್ಳ‌ತನ ಮಾಡುತ್ತಿದ್ದ ಆರೋಪಿಯನ್ನು ಪರಪ್ಪನ ಅಗ್ರಹಾರ ಠಾಣೆಯ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿಯಿಂದ ₹4 ಲಕ್ಷ ಮೌಲ್ಯದ 51 ವಿವಿಧ ಕಂಪನಿಯ ಬ್ಯಾಟರಿಗಳು ಹಾಗೂ ಒಂದು ಆಟೊರಿಕ್ಷಾ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದರು. ಎಲೆಕ್ಟ್ರಾನಿಕ್‌ ಸಿಟಿಯ ಖಾಸಗಿ ಕಂಪನಿಯ ವ್ಯವಸ್ಥಾಪಕರೊಬ್ಬರು ನೀಡಿದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು. ಶಾಂತಿಪುರ ಮುಖ್ಯರಸ್ತೆ ಸೇರಿದಂತೆ ವಿವಿಧೆಡೆ ಬ್ಯಾಟರಿಗಳನ್ನು …

Read More »

ಬಾಗಲಕೋಟೆಯಲ್ಲಿ ಟ್ರೇಡಿಂಗ್ ಹೆಸರಲ್ಲಿ 1.20 ಕೋಟಿ ವಂಚನೆ ತನಿಖೆ ವೇಳೆ, 1296 ಮ್ಯೂಲ್ ಅಕೌಂಟ್ ಪತ್ತೆ, ಆರೋಪಿ ಅರೆಸ್ಟ್!

ಟ್ರೆಡಿಂಗ್ ಹೆಸರಿನಲ್ಲಿ ವಂಚಿಸುತ್ತಿದ್ದ ಆರೋಪಿಯನ್ನು ಇದೀಗ ಬಾಗಲಕೋಟೆ ಸೆನ್ ಠಾಣೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಿವಾಸಿ ಪ್ರಜ್ವಲ್ (25) ಬಂಧಿತ ಆರೋಪಿ ಎಂದು ತಿಳಿದು ಬಂದಿದೆ. ಬಂದಿತ ಆರ್ ಪಿ ಬಳಿ ಇದ್ದ ಒಂದು ಮೊಬೈಲ್ ಒಂದು ಡೆಬಿಟ್ ಕಾರ್ಡ್ ಜಪ್ತಿ ಮಾಡಿಕೊಂಡಿದ್ದಾರೆ. ಉಜ್ಜೀವನ್ ಸ್ಮಾಲ್ ಫೈನಾನ್ಸ್ ಖಾತೆಯ ಮೂಲಕ 1.20 ಕೋಟಿ ಪಂಜನೆಯಾಗಿದ್ದಾನೆ. ತನಿಖೆಯ ವೇಳೆ ಬಾಗಲಕೋಟೆ ಜಿಲ್ಲೆಯ ಒಟ್ಟು 1296 ಮ್ಯೂಲ್ ಅಕೌಂಟ್ …

Read More »

ಅನಧಿಕೃತ ಸೆಕ್ಯೂರಿಟಿ ಏಜೆನ್ಸಿ : ಕೇಸು

ಕುಂದಾಪುರ: ಅನಧಿಕೃತವಾಗಿ ಮಾರಿಕಾಂಬಾ ಸೆಕ್ಯೂರಿಟಿ ಏಜೆನ್ಸಿ ಎಂಬ ಖಾಸಗಿ ಸೆಕ್ಯೂರಿಟಿ ಏಜೆನ್ಸಿಯನ್ನು ಯಾವುದೇ ಪರವಾನಿಗೆ ಪಡೆಯದೇ, ನಿಯಮ ಪಾಲಿಸದೇ ಸೆಕ್ಯೂರಿಟಿಗಳನ್ನು ನೇಮಿಸಿ ಅಪರಾಧ ಎಸಗಿರುವ ಬಗ್ಗೆ ವಡೇರಹೋಬಳಿ ನಾಯ್ಕರಬೆಟ್ಟಿನ ನಿವಾಸಿ ಅಣ್ಣಪ್ಪಯ್ಯ ಯು.ಎಲ್. ವಿರುದ್ಧ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈತ ಅನಧಿಕೃತವಾಗಿ ಮಾರಿಕಾಂಬಾ ಸೆಕ್ಯೂರಿಟಿ ಏಜೆನ್ಸಿ ಎಂಬ ಪ್ರೈವೇಟ್‌ ಸೆಕ್ಯೂರಿಟಿ ಏಜೆನ್ಸಿ ಹೆಸರಿನಲ್ಲಿ ಉಡುಪಿ, ಉತ್ತರಕನ್ನಡ, ಹಾವೇರಿ ಜಿಲ್ಲೆಗಳ ವಿವಿಧ ಕಡೆಗಳಲ್ಲಿ ಭದ್ರತಾ ಸಿಬಂದಿ ನಿಯೋಜಸಿದ್ದಾನೆ. ಈ ಹಿಂದೆ …

Read More »

ಯಾದಗಿರಿ: ₹2.50 ಲಕ್ಷ ಸುಪಾರಿ ಕೊಟ್ಟು ತಂದೆ ಕೊಲ್ಲಿಸಿದ ಮಗ!

ಆಸ್ತಿ ವಿಚಾರಕ್ಕೆ ಮಗನೊಬ್ಬ, ₹2.50 ಲಕ್ಷ ಸುಪಾರಿ ಕೊಟ್ಟು ತಂದೆಯನ್ನು ಕೊಲೆ ಮಾಡಿಸಿದ ಪ್ರಕರಣದಲ್ಲಿ ವಡಗೇರಾ ಠಾಣೆ ಪೊಲೀಸರು ಮಗ ಸೇರಿ ಐವರನ್ನು ಬಂಧಿಸಿದ್ದಾರೆ. ವಡಗೇರಾ ತಾಲ್ಲೂಕಿನ ಗೋನಾಲ ಗ್ರಾಮದ ಹಂಪಣ್ಣ ಸಜ್ಜನ್ ಕೊಲೆಯಾದವರು. ಸುಪಾರಿ ನೀಡಿದ್ದ ಮಗ ನರಸರೆಡ್ಡಿ ಸಜ್ಜನ್ (48), ಆರೋಪಿಗಳಾದ ಆಂಧ್ರಪ್ರದೇಶದ ಕರ್ನೂಲ್‌ ಜಿಲ್ಲೆಯ ರಾಚಮರ್ರಿ ಗ್ರಾಮದ ರಮೇಶ ನರಸಪ್ಪ (32), ಜಿ.ವೀರೇಶ ಮುರಕಪ್ಪ (40), ಕೃಷ್ಣ ತಿಕ್ಕಯ್ಯ (28) ಹಾಗೂ ಎಂ.ವೀರೇಶ ಉರಕುಂದಿ (26) …

Read More »

ಬಾಲಕನಿಗೆ ಹಲ್ಲೆ ; ಪ್ರಕರಣ ದಾಖಲು

ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಜಾತ್ರೆಗೆ ಹುಡುಗಿಯರೊಂದಿಗೆ ಆಗಮಿಸಿದ್ದಾನೆ ಎಂದು ಆರೋಪಿಸಿ ಅನ್ಯ ಧರ್ಮದ ಅಪ್ರಾಪ್ತ ವಯಸ್ಕ ಬಾಲಕನಿಗೆ ಹಲ್ಲೆ ನಡೆಸಿದ ಕುರಿತು ಠಾಣೆಯಲ್ಲಿ ತಡವಾಗಿ ಪ್ರಕರಣ ದಾಖಲಾಗಿದೆ. ಮಾ. 11ರಂದು ಖಾಸಗಿ ವಿದ್ಯಾಸಂಸ್ಥೆಯ 17ರ ಹರೆಯದ ವಿದ್ಯಾರ್ಥಿ ಜಾತ್ರೆಗೆ ಹೋಗಿದ್ದ ವೇಳೆ ಸ್ಥಳದಲ್ಲಿದ್ದ ಕೆಲವರು ತಮ್ಮ ಧರ್ಮದ ಹುಡುಗಿಯರೊಂದಿಗೆ ಅನ್ಯ ಧರ್ಮದ ಬಾಲಕ ಜಾತ್ರೆಗೆ ಬಂದಿದ್ದಾನೆ ಎಂದು ಆಕ್ಷೇಪಿಸಿ ಆತನಿಗೆ ಹಲ್ಲೆ ನಡೆಸಿ ನಿಂದಿಸಿದ್ದಾರೆ. ಜತೆಗೆ ಆತನನ್ನು …

Read More »

ಹಾಸನದಲ್ಲಿ ಜೂಜು ಅಡ್ಡೆ ಮೇಲೆ ಪೊಲೀಸರ ದಾಳಿ : ತಪ್ಪಿಸಿಕೊಳ್ಳಲು ಓಡುವಾಗ ಬಿದ್ದು ವ್ಯಕ್ತಿ ಸಾವು!

ಜೂಜಾಟದ ವೇಳೆ ಪೊಲೀಸರು ದಾಳಿ ಮಾಡಿದ್ದಾರೆ ಈ ವೇಳೆ ಓಡುವಾಗ ಬಿದ್ದು ವ್ಯಕ್ತಿ ಸಾವನಪ್ಪಿರುವ ಘಟನೆ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಅರಕೆರೆ ಗ್ರಾಮದಲ್ಲಿ ನಡೆದಿದೆ. ಯುಗಾದಿ ಹಿನ್ನೆಲೆ ನಿರ್ಜನ ಪ್ರದೇಶದಲ್ಲಿ ಯುವಕರು ಜೂಜು ಆಡುತ್ತಿದ್ದರು. ಈ ವಿಚಾರ ತಿಳಿದು ಅಡ್ಡಿಯ ಮೇಲೆ ದಾಳಿ ಮಾಡಿದ್ದಾರೆ. ಆಗ ಸ್ಥಳದಿಂದ ತಪ್ಪಿಸಿಕೊಳ್ಳಲು ಯುವಕರು ಕೂಡಿದರೆ ಈ ವೇಳೆ ಆಯತ ಬಿದ್ದು 34 ವರ್ಷದ ಪ್ರವೀಣ್ ಎನ್ನುವ ವ್ಯಕ್ತಿ ಸಾವನ್ನಪ್ಪಿದ್ದಾನೆ. ಘಟನೆ ಸಂಭಂದ …

Read More »

ವಿಜಯಪುರ: ಮಹಿಳೆಯ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಿದ್ದ ಆರೋಪಿ ಬಂಧನ

ಮಹಿಳೆಯ ಚಿನ್ನದ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾದ ಆರೋಪಿಯನ್ನು ವಿಜಯಪುರ ಟೌನ್ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬೆಂಗಳೂರಿನ ಡಿ.ಜೆ ಹಳ್ಳಿಯ ಆರೀಫ್ ಖಾನ್ (25) ಬಂಧಿತ. ಮಾರ್ಚ್‌ 17ರಂದು ಪದ್ಮಾವತಿ ಎಂಬುವರ ₹5 ಲಕ್ಷ ಬೆಲೆಬಾಳುವ 55 ಗ್ರಾಂ ಚಿನ್ನದ ಮಾಂಗಲ್ಯ ಸರವನ್ನು ಬೈಕ್‌ನಲ್ಲಿ ಬಂದ ಆರೋಪಿ ಕದ್ದು ಪರಾರಿಯಾಗಿದ್ದ. ಚಿಕ್ಕಬಳ್ಳಾಪುರ-ದೇವನಹಳ್ಳಿಯ ರಾಷ್ಟ್ರೀಯ ಹೆದ್ದಾರಿ ಸಮೀಪದ ಮುನೇಶ್ವರಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಲು ಹೆದ್ದಾರಿ ಸಂಪರ್ಕಿಸುವ ಸರ್ವಿಸ್ ರಸ್ತೆಯಲ್ಲಿ ದ್ವಿಚಕ್ರ ವಾಹನದಲ್ಲಿ …

Read More »

ಕೋಮು ಪ್ರಚೋದನೆ ಪೋಸ್ಟ್: ಯುವತಿ ಬಂಧನ; ಜಾಮೀನು

ಮಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಕೋಮು ಪ್ರಚೋದನೆಯ ಪೋಸ್ಟ್ ಹಾಕಿದ್ದ ಬೆಳ್ತಂಗಡಿ ಮೂಲದ ಯುವತಿಯನ್ನು ಕಂಕನಾಡಿ ನಗರ ಪೊಲೀಸರು ಬಂಧಿಸಿದ್ದು, ನ್ಯಾಯಾಲಯ ಮಧ್ಯಾಂತರ ಜಾಮೀನು ನೀಡಿದೆ. ಯುವತಿ 2025ರಲ್ಲಿ ಸಾಮಾಜಿಕ ಜಾಲತಾಣದಲ್ಲಿ ಕೋಮು ಪ್ರಚೋದನೆ ಮಾಡುವಂತಹ ಪೋಸ್ಟ್ ಗಳನ್ನು ಹಂಚಿಕೊಂಡು ಪ್ರಚಾರ ಮಾಡಿದ ಬಗ್ಗೆ ಪ್ರಕರಣ ದಾಖಲಾಗಿತ್ತು. ಸಾಮಾಜಿಕ ಜಾಲತಾಣದಲ್ಲಿ’ಟೆರರಿಸಂ ಹೇಸ್ ರಿಲೀಜಿಯನ್ ಆಯಂಡ್ ಸೋ ಕಾಲ್ಡ್ ಟೆರರಿಸ್ಟ್ಸ್ ಟೂ. ಇಟ್ಸ್ ಇಸ್ಲಾಂ’ ಹಾಗೂ ಇದೇ ರೀತಿಯ ಪೋಸ್ಟ್ ಗಳನ್ನು ಆಕೆ …

Read More »

ಕೋರ್ಟ್ ಗೆ ಹಾಜರಾಗದೇ 7 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಪಾಲಿಕೆ ಮಾಜಿ ಸದಸ್ಯ ಅರೆಸ್ಟ್

ಧಾರವಾಡ: ಜಾಮೀನು ಪಡೆದು ನ್ಯಾಯಾಲಯಕ್ಕೆ ಹಾಜರಾಗದೇ 7 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಧಾರವಾದ ಪಾಲಿಕೆ ಮಾಜಿ ಸದಸ್ಯನನ್ನು ಪೊಲೀಸರು ಬಂಧಿಸಿದ್ದಾರೆ. ಶ್ರೀಕಾಂತ್ ಜಮನಾಳ ಬಂಧಿತ ಆರೋಪಿ. ಧಾರವಾಡ ಉಪನಗರ ಠಾಣೆ ಪೊಲೀಸರು ಶ್ರೀಕಾಂತ್ ನನ್ನು ಬಂಧಿಸಿದ್ದಾರೆ. ಈತ ಸಿಜೆ ಹಾಗೂ ಜೆ ಎಂ ಎಫ್ ಸಿ ನ್ಯಾಯಾಲಯದಿಂದ ಶಿಕ್ಷಕೆಗೆ ಗುರಿಯಾಗಿ ಜಾಮೀನು ಪಡೆದುಕೊಂಡಿದ್ದ. ಬಳಿಕ ಕೋರ್ಟ್ ಗೆ ಹಾಜರಾಗದೇ ಏಳು ವರ್ಷಗಳಿಂದ ತಲೆಮರೆಸಿಕೊಂಡಿದ್ದ. ಈ ಹಿಂದೆ ಜೆಡಿಎಸ್ ನಲ್ಲಿ ಗುರುತಿಸಿಕೊಂಡು ಮಹಾನಗರ …

Read More »