ಆಸ್ತಿ ವಿಚಾರಕ್ಕೆ ಮಗನೊಬ್ಬ, ₹2.50 ಲಕ್ಷ ಸುಪಾರಿ ಕೊಟ್ಟು ತಂದೆಯನ್ನು ಕೊಲೆ ಮಾಡಿಸಿದ ಪ್ರಕರಣದಲ್ಲಿ ವಡಗೇರಾ ಠಾಣೆ ಪೊಲೀಸರು ಮಗ ಸೇರಿ ಐವರನ್ನು ಬಂಧಿಸಿದ್ದಾರೆ. ವಡಗೇರಾ ತಾಲ್ಲೂಕಿನ ಗೋನಾಲ ಗ್ರಾಮದ ಹಂಪಣ್ಣ ಸಜ್ಜನ್ ಕೊಲೆಯಾದವರು. ಸುಪಾರಿ ನೀಡಿದ್ದ ಮಗ ನರಸರೆಡ್ಡಿ ಸಜ್ಜನ್ (48), ಆರೋಪಿಗಳಾದ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ರಾಚಮರ್ರಿ ಗ್ರಾಮದ ರಮೇಶ ನರಸಪ್ಪ (32), ಜಿ.ವೀರೇಶ ಮುರಕಪ್ಪ (40), ಕೃಷ್ಣ ತಿಕ್ಕಯ್ಯ (28) ಹಾಗೂ ಎಂ.ವೀರೇಶ ಉರಕುಂದಿ (26) ಅವರನ್ನು ಬಂಧಿಸಲಾಗಿದೆ. ಕೊಲೆಗೈದ ನಾಲ್ವರು ಆರೋಪಿಗಳು ಹಿಂದೆ ಹಂಪಣ್ಣನ ಜಮೀನಿಗೆ ಕೆಲಸಕ್ಕೆ ಬಂದಿದ್ದರು. ಆಗ ಮಹಿಳೆಯರ ಜೊತೆಗೆ ಹಂಪಣ್ಣ ಅನುಚಿತವಾಗಿ ವರ್ತಿಸಿದ್ದ. ಹಳೇ ವೈಷಮ್ಯ ಇರಿಸಿಕೊಂಡ ಆರೋಪಿಗಳು ಸುಪಾರಿ ಪಡೆದು ಕೊಲೆ ಮಾಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

