Breaking News

BigTv News

ಆಕಸ್ಮಿಕ ಬೆಂಕಿ: ಚಿತ್ರಮಂದಿರ ಭದ್ರತಾ ಸಿಬ್ಬಂದಿ ಸಜೀವ ದಹನ

ಮೈಸೂರಿನ ಗೋಕುಲಂ ಚಿತ್ರಮಂದಿರ ಆವರಣದಲ್ಲಿ ಆಕಸ್ಮಿಕವಾಗಿ ಕಾಣಿಸಿದ ಬೆಂಕಿ ನಂದಿಸಲು ಹೋಗಿ ಭದ್ರತಾ ಸಿಬ್ಬಂದಿ ಸಜೀವ ದಹನವಾದ ಘಟನೆ ಮಂಗಳವಾರ ಬೆಳಿಗ್ಗೆ ನಡೆದಿದೆ. ಮರಿ ಶೆಟ್ಟಿ(75) ಮೃತಪಟ್ಟ ಭದ್ರತಾ ಸಿಬ್ಬಂದಿ ಗೋಕುಲಂ ಚಿತ್ರಮಂದಿರ ಮುಚ್ಚಿದ್ದು, ಯಾವುದೇ ಚಿತ್ರ ಪ್ರದರ್ಶನ ಆಗುತ್ತಿರಲಿಲ್ಲ.45 ವರ್ಷಗಳಿಂದ ಮರಿ ಶೆಟ್ಟಿ ಇಲ್ಲಿ ವಾಚ್ ಮನ್ ಆಗಿ ಕೆಲಸ ಮಾಡುತ್ತಿದ್ದರು. ಮಂಗಳವಾರ ಚಿತ್ರಮಂದಿರ ಆವರಣ ಸ್ವಚ್ಛಗೊಳಿಸುವಾಗ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದ್ದು, ಬೆಂಕಿ ನಂದಿಸಲು ಮುಂದಾದಾಗ ಅವರು ಜ್ವಾಲೆಯಿಂದ …

Read More »

ಬೆಂಗಳೂರು: ಗ್ಯಾಸ್ ಏಜೆನ್ಸಿಯ ಗೋಡೌನ್‌ನಲ್ಲಿ ಅಕ್ರಮ: 150 ಕ್ಕೂ ಹೆಚ್ಚು ಎಲ್‌ಪಿಜಿ ಸಿಲಿಂಡರ್‌ಗಳು ವಶಕ್ಕೆ

ನಗರದಲ್ಲಿ ಅಡುಗೆ ಅನಿಲದ ಅಕ್ರಮ ಸಂಗ್ರಹಣೆಯ ವಿರುದ್ಧ ಕಾರ್ಯಾಚರಣೆ ನಡೆಸುತ್ತಿರುವ ಬೆಂಗಳೂರು ಪೊಲೀಸರು ಇಲ್ಲಿನ ಗೋಡೌನ್‌ನಲ್ಲಿ ಸಂಗ್ರಹಿಸಲಾಗಿದ್ದ 155 ಎಲ್‌ಪಿಜಿ ಸಿಲಿಂಡರ್‌ಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ. ಬೆಂಗಳೂರು ದಕ್ಷಿಣ ತಾಲ್ಲೂಕಿನ ಆಹಾರ ನಿರೀಕ್ಷಕರ ದೂರಿನ ಆಧಾರದ ಮೇಲೆ ತಲಘಟ್ಟಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಂಗಳವಾರ ದಾಳಿ ನಡೆಸಿ ಈ ವಶಪಡಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ. ತಲಘಟ್ಟಪುರ ಪೊಲೀಸ್ ಠಾಣೆ ವ್ಯಾಪ್ತಿಯ ಜೆಪಿ ನಗರದ ವಿಶ್ವೇಶ್ವರಯ್ಯ ಕೈಗಾರಿಕಾ ವಿನ್ಯಾಸದಲ್ಲಿರುವ …

Read More »

ರಾಯಚೂರು: ಅಕ್ರಮ ಸಂಬಂಧದ ಶಂಕೆ; ಯುವಕನ ಹತ್ಯೆಗೈದಿದ್ದ ಇಬ್ಬರು ಆರೋಪಿಗಳ ಬಂಧನ

ರಾಯಚೂರು: ಜಿಲ್ಲೆಯ ಇಡಪನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಯುವಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮೃತ ವ್ಯಕ್ತಿಯನ್ನು 23 ವರ್ಷದ ವಿಜಯಕುಮಾರ್ ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿಗಳನ್ನು ಪ್ರಸಾದ್ ಮತ್ತು ಮಲ್ಲೇಶ್ ಎಂದು ಹೆಸರಿಸಲಾಗಿದ್ದು, ಮತ್ತೊಬ್ಬ ಆರೋಪಿ ಅಮರೇಶ್ ಎಂಬಾತನಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಆರೋಪಿ ಪ್ರಸಾದ್‌ನ ಪತ್ನಿಯೊಂದಿಗೆ ಮೃತ ವಿಜಯಕುಮಾರ್ ಅಕ್ರಮ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಈ ಹಿಂದೆ ವಿಜಯಕುಮಾರ್, ಪ್ರಸಾದ್‌ನ …

Read More »

ರಾಯಚೂರು: ಭಾರೀ ಅಗ್ನಿ ಅವಘಡಕ್ಕೆ 300ಕ್ಕೂ ಹೆಚ್ಚು ಚೀಲ ಭತ್ತ ಭಸ್ಮ

ಆಕಸ್ಮಿಕ ಅಗ್ನಿ ಅವಘಡದಿಂದ 300 ಕ್ಕೂ ಹೆಚ್ಚು ಭತ್ತದ ಚೀಲಗಳು ಸುಟ್ಟು ಭಸ್ಮವಾದ ಘಟನೆ ರಾಯಚೂರು ಜಿಲ್ಲೆಯ ಸಿಂಧನೂರು ನಗರದ ಹೊರವಲಯದಲ್ಲಿ ನಡೆದಿದೆ. ಉತ್ತಮ ಬೆಲೆ ಸಿಗಲೆಂದು ಭತ್ತವನ್ನು ಶೇಖರಿಸಿ ಕಾಯುತ್ತಿದ್ದ ರೈತ ಇದೀಗ ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸಿ ಕಂಗಾಲಾಗಿದ್ದಾನೆ. ಮಹಮ್ಮದ್ ಯೂಸಫ್ ಎಂಬ ರೈತನಿಗೆ ಸೇರಿದ ಈ ಭತ್ತವನ್ನು ಜಮೀನಿನಲ್ಲಿರುವ ದನದ ಶೆಡ್‌ನಲ್ಲಿ ಸಂಗ್ರಹಿಸಲಾಗಿತ್ತು. ಆರ್‌ಎನ್‌ಆರ್ ಜಾತಿಯ ಭತ್ತಕ್ಕೆ ಉತ್ತಮ ದರ ಸಿಗಲಿದೆ ಎಂಬ ನಿರೀಕ್ಷೆಯಲ್ಲಿ ಅವರು …

Read More »

ಉಡುಪಿ: ಗ್ಯಾಸ್​​ ಅಭಾವವನ್ನೇ ಬಂಡವಾಳ ಮಾಡಿಕೊಂಡ ಆನ್‌ಲೈನ್‌ ವಂಚಕರು ; ಎಪಿಕೆ ಆಯಪ್ ಕಳುಹಿಸಿ ಗ್ರಾಹಕರಿಗೆ ವಂಚನೆ

ಗ್ಯಾಸ್ ಸಮಸ್ಯೆಯನ್ನೇ ಬಂಡವಾಳ ಮಾಡಿಕೊಂಡಿರುವ ಆನ್‌ಲೈನ್‌ ವಂಚಕರು ಅನಾಮಧೇಯ ಎಪಿಕೆ ಫೈಲ್‌ಗಳನ್ನು ಕಳುಹಿಸಿ ಗ್ರಾಹಕರನ್ನು ವಂಚಿಸುವ ಘಟನೆಗಳು ನಡೆಯುತ್ತಿವೆ. ಮುಂಬಯಿಯಲ್ಲಿದ್ದು ಸದ್ಯ ಉಡುಪಿಯಲ್ಲಿರುವ ಲೀಲಿ ಪ್ಲೋರಿನ್ ಡಿಸಿಲ್ವಾ ವಂಚನೆಗೊಳಗಾದವರು. ಅವರಿಗೆ ಮಾ.11 ರಂದು ಬೆಳಗ್ಗೆ 11.30ಕ್ಕೆ ಮುಂಬಯಿಯ ಮಹಾನಗರ ಗ್ಯಾಸ್ ಲಿಮಿಡೆಟ್ ನಿಂದ ದೇವೇಶ ಜೋಷಿ ಕರೆ ಮಾಡಿ ಗ್ಯಾಸ್ ಗೆ ಆನ್‌ಲೈನ್‌ನಲ್ಲಿ ಹಣ ಪಾವತಿಸಿರುವ ಬಗ್ಗೆ ಅಪ್‌ಡೇಟ್ ಆಗಿಲ್ಲ ಎಂದು ತಿಳಿಸಿ ವಾಟ್ಸ್ ಆಯಪ್ ನಲ್ಲಿ ಮಹಾನಗರ ಗ್ಯಾಸ್ …

Read More »

ವಾಹನಗಳ ಕಳವು ಆರೋಪಿ ಬಂಧನ; 4.25 ಲಕ್ಷ ಬೆಲೆಯ 8 ವಾಹನ ವಶ

ದಾವಣಗೆರೆ: ವಾಹನಗಳ ಕಳವು ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿರುವ ಪೊಲೀಸರು ₹ 4,25,000 ಮೊತ್ತದ 7 ದ್ವಿಚಕ್ರ ವಾಹನ ಹಾಗೂ ಒಂದು ಟಾಟಾ ಏಸ್ ವಾಹನವನ್ನು ವಶಪಡಿಸಿಕೊಂಡಿದ್ದಾರೆ. ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲ್ಲೂಕಿನ ಅಪ್ಪು ನಾಗೇನಹಳ್ಳಿ ಅಲಿಯಾಸ್ ಅಬ್ಬಾಸ್ ಅಲಿ ಬಂಧಿತ ಆರೋಪಿ. ಕಳವು ಮಾಡಿದ್ದ ಟಾಟಾ ಏಸ್‌ನಲ್ಲಿ ತೆರಳುತ್ತಿದ್ದ ಆರೋಪಿಯು ಪೊಲೀಸರನ್ನು ಕಂಡು ಪರಾರಿಯಾಗಲು ಯತ್ನಿಸಿದ್ದ. ಆರೋಪಿ ವಿರುದ್ಧ ಹರಿಹರ ನಗರ ಠಾಣೆ, ಹರಪನಹಳ್ಳಿ ಠಾಣೆ, ರಾಣೆಬೆನ್ನೂರು ನಗರ ಠಾಣೆ, …

Read More »

ದೆಹಲಿಯಲ್ಲಿ ಕಟ್ಟಡಕ್ಕೆ ಬೆಂಕಿ; ಮೂರು ಮಕ್ಕಳು ಸೇರಿ ಆರು ಮಂದಿ ಬಲಿ

ದೆಹಲಿಯ ಪಲಮ್ ಪ್ರದೇಶದಲ್ಲಿ ನಾಲ್ಕು ಅಂತಸ್ತಿನ ಕಟ್ಟಡವೊಂದರಲ್ಲಿ ಬೆಂಕಿ ತಗುಲಿರುವ ದುರ್ಘಟನೆ ಸಂಭವಿಸಿದೆ. ಆರಕ್ಕೂ ಹೆಚ್ಚು ಜನರು ಸಾವನ್ನಪ್ಪಿರುವ ಮಾಹಿತಿ ಸದ್ಯಕ್ಕೆ ತಿಳಿದುಬಂದಿದೆ. ಇನ್ನೂ ಹಲವಾರು ಜನರಿಗೆ ಗಾಯಗಳಾಗಿವೆ. ದುರಂತದಲ್ಲಿ ಮೃತಪಟ್ಟಿರುವವರ ಪೈಕಿ ಮೂವರು ಮಕ್ಕಳಿದ್ದಾರೆ ಎಂದು ಹೇಳಲಾಗುತ್ತಿದೆ. ಬೆಂಕಿ ದುರಂತಕ್ಕೆ ಏನು ಕಾರಣ ಎಂದು ಸದ್ಯಕ್ಕೆ ತಿಳಿದುಬಂದಿಲ್ಲ. ಕಟ್ಟಡಕ್ಕೆ ಬೆಂಕಿ ತಗುಲಿರುವ ಬಗ್ಗೆ ಅಗ್ನಿಶಾಮಕ ವಿಭಾಗಕ್ಕೆ ಬೆಳಗ್ಗೆ 7:30ಕ್ಕೆ ಮಾಹಿತಿ ಹೋಗಿದೆ. ಕೂಡಲೇ 30 ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ …

Read More »

ಕಾಳಸಂತೆಯಲ್ಲಿ ಎಲ್‌ಪಿಜಿ ಮಾರಾಟ: 15 ಸಾವಿರ ಸಿಲಿಂಡರ್‌ ವಶ

ಯುದ್ಧದ ಪರಿಣಾಮವಾಗಿ ಹಲವು ಕಡೆ ಎಲ್‌ಪಿಜಿ ಸಿಲಿಂಡರ್‌ ಸಿಗುತ್ತಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡ ಕೆಲವರು ಕಾಳಸಂತೆಯಲ್ಲಿ ಹೆಚ್ಚು ಹಣಕ್ಕೆ ಸಿಲಿಂಡರ್‌ ಮಾರಾಟ ಮಾಡಿದ್ದಾರೆ. ಪೊಲೀಸರು ಇದರ ವಿರುದ್ಧ ಕಾರ್ಯಾಚರಣೆ ಮಾಡಿದ್ದು, ಕರ್ನಾಟಕ, ದೆಹಲಿ, ಜಮ್ಮು ಕಾಶ್ಮೀರ, ಕೇರಳ ಸೇರಿದಂತೆ 12 ಸಾವಿರಕ್ಕೂ ಹೆಚ್ಚು ಕಡೆ ದಾಳಿ ನಡೆಸಿದ್ದಾರೆ. ಬರೋಬ್ಬರಿ 15 ಸಾವಿರ ಗ್ಯಾಸ್ ಸಿಲಿಂಡರ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ದೆಹಲಿಯಲ್ಲಿ 600 ಸಿಲಿಂಡರ್‌ಗಳು, ಉತ್ತರ ಪ್ರದೇಶದಲ್ಲಿ 405 ತಪಾಸಣೆಗಳು ನಡೆದಿವೆ ಹಾಗೂ …

Read More »

ಗುಂಡ್ಲುಪೇಟೆ: ಗೆಳೆಯನ ಕೊಲೆಗೆ ಸಹೋದರಿಯೊಂದಿಗಿನ ಸಂಬಂಧವೇ ಕಾರಣ; ಟ್ವಿಸ್ಟ್ ಮೇಲೆ ಟ್ವಿಸ್ಟ್ ಸಿಕ್ಕ ಹತ್ಯೆ ಕೇಸ್!

ಪಟ್ಟಣದ ದೊಡ್ಡಕೆರೆ ಏರಿ ಬಳಿ ನಡೆದಿದ್ದ ಮೂಖಹಳ್ಳಿ ಗ್ರಾಮದ ನಂಜುಂಡಸ್ವಾಮಿ (23) ಎಂಬ ಯುವಕನ ಬರ್ಬರ ಹತ್ಯೆ ಪ್ರಕರಣಕ್ಕೆ ಈಗ ಭಾರಿ ಟ್ವಿಸ್ಟ್ ಸಿಕ್ಕಿದೆ. ತನ್ನ ಸಹೋದರಿಯ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಗೆಳೆಯನನ್ನು ಪಾರ್ಟಿ ಹೆಸರಲ್ಲಿ ಕರೆದೊಯ್ದು ಕತ್ತು ಸೀಳಿ ಕೊಲೆ ಮಾಡಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ. ಬಂಧಿತ ಆರೋಪಿ ಅಜಯ್ ಅಲಿಯಾಸ್ ಪ್ರಮೋದ್ ಮತ್ತು ಮೃತ ನಂಜುಂಡಸ್ವಾಮಿ ಬಾಲ್ಯದ ಗೆಳೆಯರು ಹಾಗೂ ದೂರದ ಸಂಬಂಧಿಗಳು. ಅಜಯ್‌ನ ಸಹೋದರಿಗೆ ಮದುವೆಯಾಗಿದ್ದರೂ …

Read More »

ವಿಚ್ಛೇದನ ನೀಡಿದ್ದಕ್ಕೆ ಪತ್ನಿಯನ್ನು ಅಟ್ಟಾಡಿಸಿಕೊಂಡು ಹೋಗಿ ಆಸಿಡ್ ಹಾಕಿದ ಪತಿ;

ಚೆನ್ನೈ: ಪ್ರೀತಿಸಿ ಮದುವೆಯಾದ ಪತಿಯೇ ಪತ್ನಿಯ ಜೀವನವನ್ನು ಅಂಧಕಾರಕ್ಕೆ ತಳ್ಳಿದ ಘಟನೆ ಪಲ್ಲವರಂನ ಭಾರತಿ ನಗರದಲ್ಲಿ ನಡೆದಿದೆ. 29 ವರ್ಷದ ಸನಾ ಫಾತಿಮಾ ಸಂತ್ರಸ್ತ ಮಹಿಳೆಯಾಗಿದ್ದು, ಪತಿ ಮೊಹಮ್ಮದ್ ಅಲಿ ಸದ್ಯ ತಲೆಮರೆಸಿಕೊಂಡಿದ್ದಾನೆ.ಸನಾ ಫಾತಿಮಾ ಮತ್ತು ಅನಾಕಪುತ್ತೂರು ನಿವಾಸಿ ಮೊಹಮ್ಮದ್ ಅಲಿ 2020ರಲ್ಲಿ ಪ್ರೀತಿಸಿ ವಿವಾಹವಾಗಿದ್ದರು. ಇವರಿಗೆ ನಾಲ್ಕು ವರ್ಷದ ಮಗನಿದ್ದಾನೆ. ಮೊಹಮ್ಮದ್ ಅಲಿ ಮದ್ಯವ್ಯಸನಿಯಾಗಿದ್ದು, ಪ್ರತಿದಿನ ಕುಡಿದು ಬಂದು ಪತ್ನಿಗೆ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. …

Read More »