ರಾಜ್ಯದ ವಿವಿಧೆಡೆ ಅನಧಿಕೃತವಾಗಿ ಸಂಗ್ರಹಿಸಿಡಲಾಗಿದ್ದ ವಾಣಿಜ್ಯ ಬಳಕೆಯ ಅನಿಲದ ಸಿಲಿಂಡರ್ ಗಳನ್ನು ಆಹಾರ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಪೊಲೀಸ್ ಸಹಕಾರದೊಂದಿಗೆ ತಡರಾತ್ರಿ ದಾಳಿ ನಡೆಸಿದ ಅಧಿಕಾರಿಗಳು, ಅನಿಲ ತುಂಬಿದ 25 ಸಿಲಿಂಡರ್ಗಳನ್ನು ಪತ್ತೆ ಹಚ್ಚಿ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಅಗತ್ಯ ವಸ್ತುಗಳ ಅಕ್ರಮ ದಾಸ್ತಾನು ಕಾಯ್ದೆಯಡಿ ಹೋಟೆಲ್ ಸಹ ಮಾಲೀಕರ ವಿರುದ್ಧ ಆಹಾರ ನಿರೀಕ್ಷಕ ವಿಜಯಕುಮಾರ ಪತ್ತಾರ ದೂರು ನೀಡಿದ್ದಾರೆ. ಗೋ ಗ್ಯಾಸ್ ಕಂಪನಿಯಿಂದ ಪೂರೈಕೆಯಾಗುವ ಅನಿಲದ …
Read More »ಕೆಲಸ ಕೊಡಿಸುವುದಾಗಿ ವಂಚನೆ: ಮಾಜಿ ಉಪ ಕುಲಸಚಿವ ಸೇರಿ ಇಬ್ಬರಿಗೆ ಜೈಲು ಶಿಕ್ಷೆ, ದಂಡ
ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿವಿಯಲ್ಲಿ ಕೆಲಸ ಕೊಡಿಸುವುದಾಗಿ ಹಣ ಪಡೆದು ವಂಚಿಸಿದ ವಿವಿಯ ಮಾಜಿ ಉಪ ಕುಲಸಚಿವ ಸೇರಿ ಇಬ್ಬರಿಗೆ ಮೈಸೂರಿನ ಒಂದನೇ ಅಧಿಕ ಸಿಜೆಎಂ ನ್ಯಾಯಾಲಯ ಎರಡೂವರೆ ವರ್ಷ ಕಾರಾಗೃಹ ಶಿಕ್ಷೆ ಮತ್ತು ತಲಾ 40,000 ರೂ. ದಂಡ ವಿಧಿಸಿ ಆದೇಶಿಸಿದೆ.ಮೈಸೂರು ನಿವಾಸಿಗಳಾದ ಮುಕ್ತ ವಿವಿಯ ನಿವೃತ್ತ ಉಪ ಕುಲಸಚಿವ ಎಂ. ಕೃಷ್ಣಮೂರ್ತಿ ಮತ್ತು ಮಂಜುನಾಥ್ ಶಿಕ್ಷೆಗೆ ಒಳಗಾದವರು. ಕೃಷ್ಣಮೂರ್ತಿ ಅವರು ಮಂಜುನಾಥನೊಂದಿಗೆ ಸೇರಿಕೊಂಡು ಕರ್ನಾಟಕ ರಾಜ್ಯ …
Read More »ರಾಯಚೂರಲ್ಲಿ ಘೋರ ದುರಂತ : ಬಸ್ ನಿಲ್ದಾಣದಲ್ಲಿ KKRTC ಬಸ್ ಹರಿದು ಸ್ಥಳದಲ್ಲೇ ಮಹಿಳೆ ಸಾವು
ರಾಯಚೂರು ಜಿಲ್ಲೆಯ ಸಿಂಧನೂರು ಬಸ್ ನಿಲ್ದಾಣದ ಮುಖ್ಯದ್ವಾರದ ಬಳಿ ಕೆಕೆಆರ್ಟಿಸಿ (KKRTC) ಬಸ್ ಹರಿದು ಮಹಿಳೆಯೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸೋಮವಾರ ಈ ಘಟನೆ ನಡೆದಿದ್ದು, ಬಸ್ ಚಾಲಕನ ಅಜಾಗರೂಕತೆಯೇ ಈ ಅಪಘಾತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಮೃತರನ್ನು ದೊಡ್ಡ ಈರಮ್ಮ (38) ಎಂದು ಗುರುತಿಸಲಾಗಿದೆ. ಕೊಪ್ಪಳ ಜಿಲ್ಲೆಯ ಬೆವಿನಹಾಳ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಸಿಂಧನೂರು ಬಸ್ ನಿಲ್ದಾಣದ ಎಂಟ್ರೆನ್ಸ್ ಗೇಟ್ ಬಳಿ ದುರಂತ ಸಂಭವಿಸಿದೆ. ಬಸ್ ಚಾಲಕನ ನಿರ್ಲಕ್ಷ್ಯದ …
Read More »ಲಂಚಕೋರ ಅಧಿಕಾರಿಗಳಿಗೆ 4 ವರ್ಷ ಜೈಲು ಶಿಕ್ಷೆ
ಕಲಬುರಗಿ: ಹೊರಗುತ್ತಿಗೆ ನೌಕರನ ನೇಮಕಾತಿಗೆ ಶಿಫಾರಸು ಮಾಡಲು ಲಂಚ ಪಡೆದಿದ್ದ ಎಂಎಸ್ಐಎಲ್ ಕಚೇರಿಯ ಇಬ್ಬರು ಅಧಿಕಾರಿಗಳಿಗೆ ಇಲ್ಲಿನ ಪ್ರಧಾನ ಜಿಲ್ಲಾ ಮತ್ತು ವಿಶೇಷ ನ್ಯಾಯಾಲಯವು ೪ ರ್ಷ ಜೈಲು ಶಿಕ್ಷೆ ಹಾಗೂ ತಲಾ ೨೦ ಸಾವಿರ ರೂ. ದಂಡ ವಿಧಿಸಿ ಸೋಮವಾರ ತರ್ಪು ನೀಡಿದೆ.ಎಂಎಸ್ಐಎಲ್ನಲ್ಲಿ ಎ.ಡಿ.ಇ.ಓ ಆಗಿ ನೇಮಕಗೊಳ್ಳಲು ಸಿದ್ದಲಿಂಗ ಎಂಬುವವರು ರ್ಜಿ ಸಲ್ಲಿಸಿದ್ದರು. ಅವರ ನೇಮಕಾತಿಗೆ ಶಿಫಾರಸು ಮಾಡಲು ಡಿಎಲ್ಓ ಚಂದ್ರಶೇಖರ ಸಲಾಕೆ ೧ ಲಕ್ಷ ರೂ. ಬೇಡಿಕೆಯಿಟ್ಟು, …
Read More »ಸಾಗರದಲ್ಲಿ ವಿದ್ಯಾರ್ಥಿ ಮೇಲೆ ಹಲ್ಲೆ; ಶಿಕ್ಷಕ ಅಮಾನತು
ಸಾಗರ: ತಾಲ್ಲೂಕಿನ ಶೆಡ್ತಿಕೆರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 7ನೇ ತರಗತಿ ವಿದ್ಯಾರ್ಥಿಯೊಬ್ಬರ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದ ಆರೋಪದ ಮೇರೆಗೆ ಶಿಕ್ಷಕ ಪ್ರಮೋದ ಬೀರಪ್ಪ ಸಣ್ಣಕ್ಕಿ ಅವರನ್ನು ಸೇವೆಯಿಂದ ಅಮಾನತ್ತು ಮಾಡಲಾಗಿದೆ. ಮಾ.12 ರಂದು ವಿದ್ಯಾರ್ಥಿ ಮೇಲೆ ಹಲ್ಲೆ ನಡೆದ ಸಂಬಂಧ ಇಲ್ಲಿನ ಕ್ಷೇತ್ರ ಶಿಕ್ಷಣಾಧಿಕಾರಿ ನೀಡಿದ ವರದಿಯ ಆಧಾರದ ಮೇರೆಗೆ ಶಿಕ್ಷಣ ಇಲಾಖೆಯ ಜಿಲ್ಲಾ ಉಪ ನಿರ್ದೇಶಕರು ಹಾಗೂ ಶಿಸ್ತು ಪ್ರಾಧಿಕಾರಿ ಮಂಜುನಾಥ ಎಸ್.ಆರ್. ಅಮಾನತ್ತಿನ …
Read More »10 ವರ್ಷದ ಬಾಲಕಿಯನ್ನು ಬಲವಂತದಿಂದ ಹಿಡಿದು ಎದೆ ಮುಟ್ಟಿದ 65ರ ಮುದುಕ
ಚಾಮರಾಜನಗರ: ಅರವತ್ತೈದು ವರ್ಷದ ವ್ಯಕ್ತಿ ೧೦ ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ತಪ್ಪಿಗೆ ಜೈಲು ಪಾಲಾದ ಘಟನೆ ತಾಲೂಕಿನ ಹಸಗೂಲಿ ಗ್ರಾಮದಲ್ಲಿ ನಡೆದಿದೆ. ಹಸಗೂಲಿ ಗ್ರಾಮದ ಮಹದೇವಪ್ಪ(65) ಆರೋಪಿ. ಈತ ಅದೇ ಗ್ರಾಮದ 10 ವರ್ಷ ವಯಸ್ಸಿನ ಐದನೇ ತರಗತಿಯಲ್ಲಿ ಓದುತ್ತಿದ್ದ ಬಾಲಕಿ ಎದೆ ಚಿವುಟಿ ಗಾಯಗೊಳಿಸಿದ್ದಾನೆ ಎಂದು ತಾಲೂಕಿನ ಬೇಗೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಲೈಂಗಿಕ ದೌರ್ಜನ್ಯ ನಡೆಸಿದ ಮಹದೇವಪ್ಪನ ಮೇಲೆ ಭಾರತೀಯ ನ್ಯಾಯ …
Read More »ಮೂಡುಬಿದಿರೆ: ಮಿನಿ ಗೂಡ್ಸ್ ಟೆಂಪೋಗೆ KSRTC ಬಸ್ ಢಿಕ್ಕಿ- ಟೆಂಪೊ ಚಾಲಕ ಸ್ಥಳದಲ್ಲೇ ಮೃತ್ಯು
ಕಾರ್ಕಳ-ಮೂಡುಬಿದಿರೆ ರಾಷ್ಟ್ರೀಯ ಹೆದ್ದಾರಿಯ ಬೆಳುವಾಯಿ ಸಮೀಪ ಕೆಎಸ್ಆರ್ಟಿಸಿ ಬಸ್ಸೊಂದು ಗೂಡ್ಸ್ ಮಿನಿ ಟೆಂಪೋಗೆ ಢಿಕ್ಕಿ ಹೊಡೆದ ಪರಿಣಾಮ ಟೆಂಪೋ ಚಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ಸಂಭವಿಸಿದೆ. ಬಂಟ್ವಾಳ ತಾಲೂಕು ಕೆಲಿಂಜೆ ನಿವಾಸಿ ಲೆಸ್ಟರ್ ಡೇವಿಡ್ ಡಿ’ಸೋಜ (30 ) ಮೃತಪಟ್ಟವರು. ಮೂಡುಬಿದಿರೆಯಿಂದ ಕಾರ್ಕಳ ಕಡೆಗೆ ಸಾಗುತ್ತಿದ್ದ ಕೆಎಸ್ಆರ್ಟಿಸಿ ಬಸ್ ವಿರುದ್ಧ ದಿಕ್ಕಿನಲ್ಲಿ ಬಂದು ಕಾರ್ಕಳ ಕಡೆಯಿಂದ ಮೂಡುಬಿದಿರೆ ಕಡೆಗೆ ಬರುತ್ತಿದ್ದ ಮಿನಿ ಗೂಡ್ಸ್ ಟೆಂಪೋಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ತೀವ್ರತೆಗೆ …
Read More »ಸಾಲ ಬಾಧೆಗೆ ರೈತ ಆತ್ಮಹತ್ಯೆ
ಹಗರಿಬೊಮ್ಮನಹಳ್ಳಿ: ಸಾಲ ಬಾಧೆ ತಾಳಲಾರದೇ ಮನನೊಂದು ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಾ.16ರ ಸೋಮವಾರ ನಡೆದಿದೆ. ತಾಲೂಕಿನ ರಾಮೇಶ್ವರ ಬಂಡಿ ಗ್ರಾಮದ ವಸಂತ ಸೊನ್ನದ (34) ಮೃತಪಟ್ಟ ರೈತ. ಮಾ.12ರ ಗುರುವಾರ ರೈತ ವಸಂತ ತಮ್ಮ ಹೊಲದಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದು, ಕೂಡಲೇ ಕುಟುಂಬದವರು ಚಿಕಿತ್ಸೆಗಾಗಿ ತಾಲೂಕು ಆಸ್ಪತ್ರೆ ಮತ್ತು ಹೆಚ್ಚಿನ ಚಿಕಿತ್ಸೆಗಾಗಿ ಕೊಟ್ಟಳ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ (ಇಂದು) ಬೆಳೆಗ್ಗೆ ಸುಮಾರು …
Read More »ಮನೆ ಮುಂದೆ ಕೆಲಸ ಮಾಡೋವಾಗ ಓಡಿ ಬಂದ ಕಳ್ಳರು, ಗೋಲ್ಡ್ ಕದ್ದು ಎಸ್ಕೇಪ್
ಮಂಡ್ಯ : ಮನೆಯ ಆವರಣದಲ್ಲಿ ಕೆಲಸ ಮಾಡುತ್ತಿದ್ದಾಗ ದಾಳಿ ಮಾಡಿದ ದುಷ್ಕರ್ಮಿಗಳು ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ಸಮೀಪದ ಮಳವಳ್ಳಿ ತಾಲೂಕಿನ ಜೂಗನಹಳ್ಳಿ ವ್ಯಾಪ್ತಿಯ ತೋಟದ ಮನೆಯಲ್ಲಿ ನಡೆದಿದೆ. ಬೆಂಗಳೂರಿನ ಜೆ.ಪಿ.ನಗರ ನಿವಾಸಿ ಯಶೋಧಮ್ಮ ಮಾಲೀಕತ್ವದ ತೋಟದ ಮನೆಯಲ್ಲಿ ಜಮೀನು ಕೆಲಸ ಮಾಡಿಕೊಂಡಿದ್ದ ಚಂದ್ರು ಮತ್ತು ಕವಿತ ಅವರ ಮೇಲೆ ಮಾ. 15 ರಂದು ಭಾನುವಾರ ರಾತ್ರಿ 9 ರ ಸಮಯದಲ್ಲಿ ಏಕಾಏಕಿ ದಾಳಿ ಮಾಡಿದ ಇಬ್ಬರು ದುಷ್ಕರ್ಮಿಗಳು ಮಾರಾಕಾಸ್ತ್ರಗಳನ್ನು …
Read More »13 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಆರೋಪಿ ಅರೆಸ್ಟ್
ಉಡುಪಿ: ಸುಮಾರು 13 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಸೋಮವಾರ(ಮಾ16) ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿ ಉಪ್ಪಿನಂಗಡಿಯ ಕೊಯ್ಲ ಗ್ರಾಮದ ಗಂಡಿ ಬಾಗಿಲು ನಿವಾಸಿ ಆರಿಫ್ ಎಂಬಾತನಾಗಿದ್ದಾನೆ. ಮಲ್ಪೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿತ್ತು. ವಾರೆಂಟ್ ಸಿಬಂದಿಗಳಾದ ಸುರೇಶ್ ಕುಮಾರ್ ಮತ್ತು ವಿಶ್ವನಾಥ್ ಅವರು ಬೆಳಗ್ಗೆ ಕೊಯ್ಲದಲ್ಲಿ ಬಂಧಿಸಿ ಸಿಜೆಎಂ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯ ಮಾರ್ಚ್ 28 ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





