Breaking News

ಶಿವಮೊಗ್ಗದಲ್ಲಿ ನಡೆದ ಚಾಕು ಇರಿತ ಪೂರ್ವ ನಿಯೋಜಿತವಾಗಿದೆ : ಮುತಾಲಿಕ್ ಆರೋಪ

ಧಾರವಾಡ: ಶಿವಮೊಗ್ಗದಲ್ಲಿ ನಡೆದ ಚಾಕು ಇರಿತ ಪೂರ್ವ ನಿಯೋಜಿತವಾಗಿದೆ ಎಂದು ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆರೋಪಿಸಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿವಮೊಗ್ಗ ಘಟನೆ ಆಕಸ್ಮಿಕವಾದದ್ದು ಅಲ್ಲ, 40 ವರ್ಷದಿಂದಲೂ ಹಿಂದೂ ಮಹಾಸಭಾ ಗಣೇಶೋತ್ಸವ ಆಚರಣೆ ಮಾಡುತ್ತದೆ. ಆಗ ಗಣೇಶ ಮೆರವಣಿಗೆ ಮಸೀದಿಯಲ್ಲೂ ಹೋಗಬಾರದು ಅಂತಾ ಗಲಾಟೆ ಮಾಡಿದ್ದರು. ಆಗಿನಿಂದಲೇ ಇದು ಆರಂಭವಾಗಿದೆ ಎಂದರು.

ಇದು ಸೊಕ್ಕಿನ ನಡೆ, ಸಾವರ್ಕರ್ ಅವರನ್ನು ವಿರೋಧ ಶುರು ಮಾಡಿದ್ದು ಕಾಂಗ್ರೆಸ್. ಓರ್ವ ಪ್ರಖರ ಹಿಂದೂವಾದಿ ಮತ್ತು ರಾಷ್ಟ್ರೀಯವಾದಿ ಸಾವರ್ಕರ್, ಕಾಂಗ್ರೆಸ್ ಗೆ ನೆಹರು, ಇಂದಿರಾಗಾಂಧಿ, ಸೋನಿಯಾ, ರಾಹುಲ್ ಮಾತ್ರ ಬೇಕು. ಸ್ವಾತಂತ್ರ್ಯ ಹೋರಾಟಗಾರರು ಬೇಕಾಗಿಲ್ಲ. ಇದು ಕಾಂಗ್ರೆಸ್ ಹಾಕಿದ ಬೀಜ. ಅದು ಈಗ ಮುಸ್ಲಿಂ ಹುಳುಗಳಂತೆ ಹೊರ ಬರುತ್ತಿದ್ದಾರೆ. ಸಾವರ್ಕರ್ ಅವರ ಬಗ್ಗೆ ಮಾತನಾಡಲು ಕಾಂಗ್ರೆಸ್, ಮುಸ್ಲಿಂರಿಗೆ ಯಾವುದೇ ಹಕ್ಕಿಲ್ಲ. ಎಂದು ವಾಗ್ದಾಳಿ ನಡೆಸಿದರು.

ಸಿದ್ದರಾಮಯ್ಯ ಮುಸ್ಲಿಂ ಏರಿಯಾದಲ್ಲಿ ಸಾವರ್ಕರ್ ಫೋಟೋ ಯಾಕೆ ಅಂತಾ ಹೇಳಿದ್ದಾರೆ. ನಮ್ಮಲ್ಲೂ ಹಿಂದೂ ಮುಸ್ಲಿಂ ಏರಿಯಾ ಅಂತಿಲ್ಲ. ಎಲ್ಲವೂ ಭಾರತೀಯ ಏರಿಯಾಗಳು, ಮುಸ್ಲಿಮರು ಬಾಯಿ ಮುಚ್ಚಿಕೊಂಡು ಇರುವುದನ್ನು ಕಲಿಯಬೇಕು ಎಂದು ಹರಿಹಾಯ್ದರು.

ಬಿಜೆಪಿಯವರು ಬರೀ ಕಠಿಣ ಕ್ರಮ ಅಂತಷ್ಟೇ ಹೇಳುತ್ತಾರೆ. ಈ ಎಲ್ಲ ಗಲಾಟೆಗಳಿಗೆ ಬಿಜೆಪಿಯೂ ಕಾರಣ. ಶಿವಮೊಗ್ಗದಲ್ಲಿ ಗಲಾಟೆ ಆಗುತ್ತಿದೆ. ಅದು ಮಾಜಿ ಸಿಎಂ ಊರು, ಹಾಲಿ ಗೃಹ ಸಚಿವರ ಊರು. ಇಷ್ಟೇಲ್ಲ ಆದರೂ ಯಾಕೆ ಬಿಜೆಪಿ ಗಮನಿಸುತ್ತಿಲ್ಲ. ಇನ್ನಾದರೂ ಹದ್ದು ಬಸ್ತಿನಲ್ಲಿಡಬೇಕಿ. ನಿಮ್ಮ ಕೈಯಲ್ಲಿ ಆಗದೇ ಇದ್ರೆ ಮನೆಗೆ ಹೋಗಿ, ಕಠಿಣ ಕ್ರಮ ಅನ್ನೋದು ಹಾಸ್ಯಾಸ್ಪದ ಆಗಿ ಹೋಗಿದೆ. ಹದ್ದು ಬಸ್ಸಿನಲ್ಲಿ ಇಡಲು ಆಗದಿದ್ದರೇ ನಾವು ಮಾಡಿ ತೋರಿಸ್ತೇವಿ ಎಂದು ಮುತಾಲಿಕ್ ಹೇಳಿದರು.

Share News

About BigTv News

Check Also

ಶಾಸಕ ಉಮೇಶ್ ಮೇಟಿ ಸೊಸೆ ವಿರುದ್ಧ ಅಕ್ರಮ ಆರೋಪ; ಎಂಡಿ ಓದುವಾಗ ಸರ್ಕಾರಿ ವೈದ್ಯೆಯಾಗಿ ವೇತನ ಪಡೆದರಾ ಅಂಕಿತಾ!

ಬಾಗಲಕೋಟೆ: ಖಾಸಗಿ ಕಾಲೇಜಿನಲ್ಲಿ MD ವ್ಯಾಸಂಗ ಮಾಡುತ್ತಲೇ ‘ನಮ್ಮ ಕ್ಲಿನಿಕ್’ನಲ್ಲಿ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸದೆ ₹75 ಸಾವಿರ ಸರ್ಕಾರಿ ವೇತನ …

Leave a Reply

Your email address will not be published. Required fields are marked *