Breaking News

BigTv News

: ಜಗಳ ಬಿಡಿಸಲು ಹೋದ ವ್ಯಕ್ತಿ ಮೇಲೆಯೇ ಹಲ್ಲೆ: ಪತಿ-ಪತ್ನಿ ಗಲಾಟೆಯಲ್ಲಿ ಅಮಾಯಕ ಸಾವು

ಚಿತ್ರದುರ್ಗ: ಗಂಡ-ಹೆಂಡತಿ ನಡುವೆ ಜಗಳ ಬಿಡಿಸಲು ಹೋದ ವ್ಯಕ್ತಿಗೆ ಮಚ್ಚಿನಿಂದ ಹಲ್ಲೆ ನಡೆಸಲಾಗಿದು, ಗಂಭೀರವಾಗಿ ಗಾಯಗೊಂಡ ಆತ ಸಾವನ್ನಪ್ಪಿರುವ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.ಇಲ್ಲಿನ ಬುದ್ಧ ವೃತ್ತದಲ್ಲಿ ಈ ಘಟನೆ ನಡೆದಿದೆ. ಸಾದಿಕ್ ವುಲ್ಲಾ ಎಂಬತ ತನ್ನ ಪತ್ನಿಯೊಂದಿಗೆ ನಡುರಸ್ತೆಯಲ್ಲಿಯೇ ಗಲಾಟೆ ಮಾಡುತ್ತಿದ್ದ. ಈ ವೇಳೆ ಗಂಡ-ಹೆಂಡತಿ ಜಗಳ ಬಿಡಿಸಲು ಹೋದ ತಾಜ್ ಪಿರ್ (42) ಎಂಬಾತನ ಮೇಲೆ ಸಾದಿಕ್ ವುಲ್ಲಾ ಮಚ್ಚಿನಿಂದ ಹಲ್ಲೆ ನಡೆಸಿದ್ದಾನೆ. ಪರಿಣಾಮ ರಾಜ್ ಪಿರ್ ಗಂಭೀರವಾಗಿ …

Read More »

ಚಾಮರಾಜನಗರದಲ್ಲಿ ಭೀಕರ ಅಪಘಾತ : ಗೂಡ್ಸ್ ವಾಹನ ಪಲ್ಟಿಯಾಗಿ 13 ಜನರಿಗೆ ಗಂಭೀರ ಗಾಯ!

ಚಾಮರಾಜನಗರದಲ್ಲಿ ಭೀಕರವಾದ ಅಪಘಾತ ಸಂಭವಿಸಿದ್ದು, ಗೂಡ್ಸ್ ಆಟೋ ಪಲ್ಟಿಯಾಗಿ 13 ಮಂದಿ ಗಾಯಗೊಂಡಿರುವ ಘಟನೆ ಯಳಂದೂರು ಪಟ್ಟಣ ಸಮೀಪದ ಬೈಪಾಸ್ ರಸ್ತೆಯಲ್ಲಿ ನಡೆದಿದೆ. ಗುಂಡ್ಲುಪೇಟೆ ತಾಲೂಕಿನ ಮಲ್ಲಯ್ಯನಪುರ ಗ್ರಾಮದ 13 ಜನರು ಗಾಯಗೊಂಡಿದ್ದಾರೆ. ಮಲೆ ಮಹದೇಶ್ವರ ಬೆಟ್ಟಕ್ಕೆ ಗೂಡ್ಸ್ ಆಟೋದಲ್ಲಿ ತೆರಳುತ್ತಿದ್ದಾಗ ಯಳಂದೂರು ಬಳಿ ಅಡ್ಡ ಬಂದ ಬೈಕ್​ಗೆ ಡಿಕ್ಕಿಯಾಗುವುದನ್ನು ತಪ್ಪಿಸುವ ಸಮಯದಲ್ಲಿ ಆಟೋ ರಸ್ತೆ ಬದಿಗೆ ಪಲ್ಟಿಯಾಗಿದೆ. ಗಾಯಗೊಂಡ 13 ಮಂದಿಯಲ್ಲಿ 9 ಮಂದಿಗೆ ತೀವ್ರ ಗಾಯಗಳಾದ ಹಿನ್ನೆಲೆ …

Read More »

ಬೆಂಗಳೂರಿನಲ್ಲಿ ಪತಿಯಿಂದಲೇ ಪತ್ನಿಯ ಬರ್ಬರ ಹತ್ಯೆ

ಬೆಂಗಳೂರಿನಲ್ಲಿ ಪತಿಯಿಂದಲೇ ಪತ್ನಿಯ ಬರ್ಬರ ಹತ್ಯೆ ನಡೆದಿದೆ. ಗೌರಮ್ಮ(45) ಕೊಲೆಯಾದ ಮಹಿಳೆ ಎಂದು ಹೇಳಲಾಗಿದೆ. ಗೌರಮ್ಮ ಅವರನ್ನು ಪತಿ ನಾಗರಾಜ್ ಕತ್ತು ಕೊಯ್ದು ಕೊಲೆ ಮಾಡಿ ಪರಾರಿಯಾಗಿದ್ದಾನೆ. ಮೈಕೋ ಲೇಔಟ್ ಬಿಳೇಕಲ್ಲಹಳ್ಳಿಯ ಸಮೀಪ ಘಟನೆ ನಡೆದಿದೆ. ಜಗಳೂರು ಮೂಲದ ದಂಪತಿಯಾಗಿರುವ ನಾಗರಾಜ್ ಮತ್ತು ಗೌರಮ್ಮ ಕೆಲಸಕ್ಕಾಗಿ ಜಗಳೂರಿನಿಂದ ಬೆಂಗಳೂರಿಗೆ ಬಂದಿದ್ದರು. ನಾಗರಾಜ್ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ. ದಂಪತಿಯ ಮೂವರು ಮಕ್ಕಳು ಕ್ಯಾಟರಿಂಗ್ ಕೆಲಸ ಮಾಡುತ್ತಿದ್ದರು. ನಿನ್ನೆ ರಾತ್ರಿ …

Read More »

ಜಾಗ ಅಕ್ರಮವಾಗಿ ಪರಭಾರೆ ಮಾಡಿದ ಆರೋಪ: ಉಪನೋಂದಣಾಧಿಕಾರಿ ಸೇರಿ ನಾಲ್ವರ ಮೇಲೆ ಕೇಸು

ಬಳ್ಳಾರಿ ಹೊರ ವಲಯದ ಚಾಗನೂರು ಗ್ರಾಮದ 1ಎಕರೆ 58 ಸೆಂಟ್ ಜಾಗವನ್ನು ಅಕ್ರಮವಾಗಿ ಪರಭಾರೆ ಮಾಡಿದ ಆರೋಪದ ಮೇರೆಗೆ ಬಳ್ಳಾರಿಯ ಉಪ ನೋಂದಣಾಧಿಕಾರಿ ಸೇರಿ ನಾಲ್ವರ ಮೇಲೆ ನಗರದ ಬ್ರೂಸ್‌ಪೇಟೆ ಠಾಣೆಯಲ್ಲಿ ಇತ್ತೀಚೆಗೆ ಪ್ರಕರಣ ದಾಖಲಾಗಿದೆ. ವಡ್ಡರ ರಂಗಮ್ಮ (66) ಎಂಬುವವರ ದೂರು ಆಧರಿಸಿ ಉಪ ನೋಂದಣಾಧಿಕಾರಿ, ಸುಂಕಪ್ಪ, ದಾನಪ್ಪ, ರಾಜಾ ಎಂಬುವವರ ಮೇಲೆ ಪೊಲೀಸ್‌ ಎಫ್‌ಐಆರ್‌ ಹಾಕಿದ್ದಾರೆ. ಪತಿಯಿಂದ ಪೌತಿ ಖಾತೆಯಾಗಿ ಬಂದಿದ್ದ ಜಮೀನನ್ನು ಆರೋಪಿಗಳು ನಕಲಿ ದಾಖಲೆ …

Read More »

ಏರ್‌ಗನ್‌ ಗುಂಡು ಎದೆಗೆ ತಗುಲಿ ಯುವಕ ಮೃತ್ಯು

ಹೊನ್ನಾವರ: ಏರಗನ್ ಮೂಲಕ ಗುಂಡು ತಗುಲಿ ಯುವಕನೊರ್ವ ಮೃತಪಟ್ಟ ಘಟನೆ ತಾಲೂಕಿನ ನಗರಬಸ್ತಿಗೇರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಹಾಡಗೇರಿ ಗ್ರಾಮದಲ್ಲಿ‌ ಮಾ.14ರ ಶನಿವಾರ ಸಾಯಂಕಾಲ ನಡೆದಿದೆ. ಹಾಡಗೇರಿ ನಿವಾಸಿ ಸುಬ್ರಹ್ಮಣ್ಯ ಮಂಜುನಾಥ ಮರಾಠಿ (19) ಮೃತ ಯುವಕ ಎಂದು ತಿಳಿದು ಬಂದಿದೆ. ಸುಬ್ರಹ್ಮಣ್ಯ ತೋಟಕ್ಕೆ ಬಂದ ಮಂಗನನ್ನು ಓಡಿಸಲು ಇಟ್ಟುಕೊಂಡಿದ್ದ ಏರ್ ಗನ್ ಸಿಡಿದು ಗುಂಡು ಹಾರಿ ಸಾವನ್ನಪ್ಪಿದ್ದಾರೆ ಎಂದು ಆತನ ಕುಟುಂಬದ ಸದಸ್ಯರು ತಿಳಿಸಿದ್ದಾರೆ. ಹೊನ್ನಾವರ ಸರ್ಕಾರಿ ಆಸ್ಪತ್ರೆಯ …

Read More »

ಬಸ್ -ಬೈಕ್ ಢಿಕ್ಕಿ; ವಿದ್ಯಾರ್ಥಿ ಸ್ಥಳದಲ್ಲೇ ಸಾವು

ಮೂಡುಬಿದಿರೆ: ರಾಷ್ಟ್ರೀಯ ಹೆದ್ದಾರಿ 169 ಹಾದು ಹೋಗುವ ಪುತ್ತಿಗೆ ಗ್ರಾ.ಪಂ. ವ್ಯಾಪ್ತಿಯ ಹಂಡೇಲು ಸುತ್ತು ಬಳಿ ಖಾಸಗಿ ಬಸ್ ಹಾಗೂ ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿ ಸ್ಥಳದಲ್ಲೇ ಮೃತಪಟ್ಟ ಘಟನೆ ಶನಿವಾರ ಸಂಜೆ ಘಟಿಸಿದೆ. ಆಳ್ವಾಸ್ ಎಂಜಿನಿಯರಿಂಗ್ ಕಾಲೇಜಿನ ದ್ವಿತೀಯ ವರ್ಷದ ವಿದ್ಯಾರ್ಥಿ ಮೈಸೂರು ಮೂಲದ ಸಮೃದ್ಧ್ ಮೃತಪಟ್ಟವರು. ಮೂಡುಬಿದಿರೆ ಸ್ವರಾಜ್ಯ ಮೈದಾನದಲ್ಲಿ ನಡೆಯುತ್ತಿದ್ದ ಕ್ರೀಡಾಕೂಟದಿಂದ ಮಿಜಾರ್ ನಲ್ಲಿರುವ ಹಾಸ್ಟೆಲ್ ಗೆ ಸಮೃದ್ಧ್‌ ಸಹಪಾಠಿ ನಿಶಾಂತ್ ಜತೆ …

Read More »

ಯುವತಿಗೆ ಬೆದರಿಸಿ 14 ಲಕ್ಷ ರೂ. ಪಡೆದ ಯುವಕ: ಪ್ರಕರಣ ದಾಖಲು

ಉಡುಪಿ: ಯುವತಿಗೆ ಬೆದರಿಸಿ 14ಲಕ್ಷ ರೂ. ಹಣ ಪಡೆದು ಕೊಂಡಿರುವ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಾರ್ಪಳ್ಳಿಯ ಮಹಿಮಾ(22) ಎಂಬವರಿಗೆ ಶರತ್ ಎಂಬಾತ ಬೇರೆ ಬೇರೆ ಸಮಸ್ಯೆಗಳನ್ನು ಹೇಳಿಕೊಂಡು ಹಣವನ್ನು ಪಡೆದುಕೊಳ್ಳುತ್ತಿದ್ದನು. ಮಹಿಮಾ ಹಣವನ್ನು ವಾಪಸ್ಸು ಕೇಳಿದಾಗ ನೆಪ ಹೇಳಿ ತಪ್ಪಿಸಿಕೊಳ್ಳುತ್ತಿದ್ದು, 2026ರ ಫೆಬ್ರವರಿಯಲ್ಲಿ ಶರತ್ ಕರೆ ಮಾಡಿ ತಂದೆಗೆ ಹುಷಾರಿಲ್ಲ 15,00,000ರೂ. ಹಣ ಕೊಡುವಂತೆ ಕೇಳಿದ್ದನು. ಅದಕ್ಕೆ ಶರತ್, ಆಕೆಗೆ ಅವಾಚ್ಯ ಶಬ್ದಗಳಿಂದ ಬೈದು …

Read More »

ಫೇಸ್‌ಬುಕ್‌ನಲ್ಲಿ ‘ಬಾದ್‌ಶಾ’ಗೆ ಜೀವ ಬೆದರಿಕೆ

ಚಂಡೀಗಢ: ಲಾರೆನ್ಸ್‌ ಬಿಷ್ಣೋಯಿ ಗ್ಯಾಂಗ್‌ನ ಸಹಚರ ಎಂದು ಹೇಳಿಕೊಂಡು ಸಾಮಾಜಿಕ ಮಾಧ್ಯಮದಲ್ಲಿ ಭಾನುವಾರ ಹಂಚಿಕೊಂಡಿರುವ ಪೋಸ್ಟ್‌ವೊಂದರಲ್ಲಿ ಬಾದ್‌ಶಾ ಎಂದೇ ಜನಪ್ರಿಯರಾದ ರ‍್ಯಾಪರ್‌ ಸಂಗೀತಗಾರ ಆದಿತ್ಯ ಪ್ರತೀಕ್‌ ಸಿಂಗ್‌ ಸಿಸೋಡಿಯಾ ಅವರಿಗೆ ಜೀವ ಬೆದರಿಕೆ ಹಾಕಲಾಗಿದೆ. ‘ಗಾಯಕ ಬಾದ್‌ಶಾ, ಹರಿಯಾಣದ ಸಂಸ್ಕೃತಿಯನ್ನು ಹಾಳು ಮಾಡಲು ಪ್ರಯತ್ನಿಸುತ್ತಿದ್ದೀರಿ. ನಾವು ಈ ಹಿಂದೆ 2024ರಲ್ಲಿ ನಿಮ್ಮ ಕ್ಲಬ್‌ನಲ್ಲಿ ಟ್ರೇಲರ್‌ ತೋರಿಸಿದ್ದೇವೆ. ಮುಂದಿನ ಬಾರಿ ನಿಮ್ಮ ತಲೆಗೆ ಗುಂಡು ಹಾರಿಸುತ್ತೇವೆ’ ಎಂದು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿರುವ ಪೋಸ್ಟ್‌ನಲ್ಲಿ …

Read More »

ಶ್ರೀನಗರ: ಭಯೋತ್ಪಾದಕನ ಹತ್ಯೆ

ಜಮ್ಮು ಮತ್ತು ಕಾಶ್ಮೀರದ ಉರಿ ಸೆಕ್ಟರ್‌ನ ಗಡಿ ನಿಯಂತ್ರಣ ರೇಖೆಯ ಬಳಿ ಒಳನುಸುಳಲು ಪ್ರಯತ್ನಿಸುತ್ತಿದ್ದ ಪಾಕಿಸ್ತಾನದ ಭಯೋತ್ಪಾದಕನನ್ನು ಹತ್ಯೆ ಮಾಡಲಾಗಿದೆ ಎಂದು ಸೇನೆ ಭಾನುವಾರ ತಿಳಿಸಿದೆ. ‘ಪೊದೆಯಲ್ಲಿ ಭಯೋತ್ಪಾದಕನ ಅನುಮಾನಾಸ್ಪದ ಚಲನವಲನಗಳನ್ನು ಸೈನಿಕರು ಗಮನಿಸಿದ್ದಾರೆ. ಒಳನುಸುಳುವಿಕೆ ಪ್ರಯತ್ನದ ಕುರಿತು ಖಚಿತ ಗುಪ್ತಚರ ಮಾಹಿತಿಯ ಮೇರೆಗೆ ಜಂಟಿ ತಂಡವು ಮಾರ್ಚ್‌ 14- 15ರ ಮಧ್ಯರಾತ್ರಿ ಕಾರ್ಯಾಚರಣೆ ನಡೆಸಿದೆ’ ಎಂದು ಸೇನೆ ತಿಳಿಸಿದೆ. ಸೇನೆ ಮತ್ತು ಭಯೋತ್ಪಾದಕನ ನಡುವೆ ಗುಂಡಿನ ಚಕಮಕಿ ನಡೆದಿದ್ದು, …

Read More »

ಟಿಎಂಸಿ-ಬಿಜೆಪಿ ಕಲಹ: 9 ಮಂದಿ ಬಂಧನ

ಕೊಲ್ಕತ್ತ: ಟಿಎಂಸಿ ಮತ್ತು ಬಿಜೆಪಿ ಬೆಂಬಲಿಗರ ನಡುವಿನ ಸಂಘರ್ಷಕ್ಕೆ ಸಂಬಂಧಿಸಿದಂತೆ ಒಂಬತ್ತು ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದರು. ಕೋಲ್ಕತ್ತದ ಬ್ರಿಗೇಡ್‌ ಪೆರೇಡ್‌ ಮೈದಾನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ರ‍್ಯಾಲಿಗೂ ಅರ್ಧ ಗಂಟೆ ಮುನ್ನ, ಟಿಎಂಸಿ ಮತ್ತು ಬಿಜೆಪಿ ಬೆಂಬಲಿಗರ ನಡುವೆ ಸಂಘರ್ಷ ಏರ್ಪಟ್ಟಿದೆ. ಸಂಘರ್ಷದ ಕುರಿತು ಟಿಎಂಸಿ ಮತ್ತು ಬಿಜೆಪಿ ಎರಡೂ ಪಕ್ಷಗಳು ಪರಸ್ಪರ ದೂರು ದಾಖಲಿಸಿಕೊಂಡಿವೆ. ಘಟನೆಗೆ ಸಂಬಂಧಿಸಿದಂತೆ ನಾಲ್ಕು ಜನರನ್ನು ಶನಿವಾರ ರಾತ್ರಿ, …

Read More »