Breaking News

BigTv News

ಶಿರಾಡಿ| ಕೆಎಸ್ಸಾರ್ಟಿಸಿ ಬಸ್‌ – ಕಾರು ನಡುವೆ ಅಪಘಾತ: ಮೂರು ಮಂದಿ ಮೃತ್ಯು

ಬೆಳ್ತಂಗಡಿ: ಶಿರಾಡಿ ಘಾಟಿಯಲ್ಲಿ ಕಾರು ಮತ್ತು ಕೆಎಸ್ಸಾರ್ಟಿಸಿ ಬಸ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮೂವರು ಮೃತಪಟ್ಟ ಘಟನೆ ಶುಕ್ರವಾರ ಸಂಭವಿಸಿದೆ. ಕಾರಿನಲ್ಲಿದ್ದ ಕೊಕ್ಕಡದ ಉದ್ಯಮಿ ಚಂದ್ರಶೆಖರ, ಕಕ್ಕಿಂಜೆಯ ಶ್ರೀಧರ ಹಾಗೂ ಜನಾರ್ದನ ಎಂಬವರು ಗಂಭೀರ ಗಾಯಗೊಂಡು ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಕಾರಿನಲ್ಲಿದ್ದ ಇನ್ನಿಬ್ಬರು ಗಾಯಗೊಂಡಿದ್ದು ಅವರನ್ನು ಆಸ್ಪತ್ರೆ ದಾಖಲಿಸಲಾಗಿದೆ. ಕಾರು ಮತ್ತು ಬಸ್ ಮುಖಾಮುಖಿಯಾಗಿ ಢಿಕ್ಕಿ ಹೊಡೆದಿದ್ದು, ಹೊಡೆತದ ರಭಸಕ್ಕೆ ಕಾರು ಸಂಪೂರ್ಣ ನುಜ್ಜುಗುಜ್ಜಾಗಿದೆ. ಘಟನೆಯ ಬಗ್ಗೆ ಹೆಚ್ಚಿನ ಮಾಹಿತಿಗಳು …

Read More »

ಬೆಂಕಿ ಅವಘಡ; ಗಾಯ

ಪುತ್ತೂರು: ನಗರದ ಟೈಮ್ ಸೆಂಟರ್ ವಾಚ್ ರಿಪೇರಿ ಮಳಿಗೆಯಲ್ಲಿ ಗುರುವಾರ ಆಕಸ್ಮಿಕವಾಗಿ ಬೆಂಕಿ ಹತ್ತಿಕೊಂಡಿದೆ. ಸಂಸ್ಥೆಯ ಮಾಲಕ ವಸಂತ್ ಬೆಳಗ್ಗೆ ಅಂಗಡಿ ಬಾಗಿಲು ತೆರೆದಿದ್ದು, ದೇವರಿಗೆ ದೀಪ ಹಚ್ಚುವ ವೇಳೆ ಆಕಸ್ಮಿಕವಾಗಿ ಕೈ ತಗಲಿ ದೀಪ ಕೆಳಗಿಟ್ಟಿದ್ದ ಬಾಕ್ಸ್ ಮೇಲೆ ಬಿದ್ದು ಬೆಂಕಿ ಹತ್ತಿಕೊಂಡಿದೆ. ಒಮ್ಮೆಲೆ ಬೆಂಕಿ ವ್ಯಾಪಿಸಿ ಹೊಗೆ ಆವರಿಸಿದೆ. ಸ್ಥಳೀಯರು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ವಸಂತ್ ಅವರ ಕೈಗೆ ಸಣ್ಣಪುಟ್ಟ ಸುಟ್ಟ ಗಾಯವಾಗಿದೆ.

Read More »

ಬಸ್‌ ಸ್ಟ್ಯಾಂಡ್‌ನಲ್ಲಿ ಚಿನ್ನಾಭರಣ ಎಗರಿಸುತ್ತಿದ್ದ ಖತರ್ನಾಕ್‌ ಕಳ್ಳಿ ಅರೆಸ್ಟ್‌

ಬೆಳಗಾವಿ : ಬೈಲಹೊಂಗಲ ಕೇಂದ್ರ ಬಸ್ ನಿಲ್ದಾಣದಲ್ಲಿ ಚಿನ್ನಾಭರಣ ಕಳ್ಳತನ ಮಾಡಿಕೊಂಡಿದ್ದ ಖತರ್ನಾಕ್‌ ಕಳ್ಳಿಯನ್ನು ಪೊಲೀಸರು ಅರೆಸ್ಟ್ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಅನಿತಾ ಚೌಗುಲೆ(45) ಅರೆಸ್ಟ್ ಆಗಿರುವ ಆರೋಪಿ. ಸಾರ್ವಜನಿಕರು ಬಸ್‌ ಹತ್ತುವಾಗ ನೂಕುನುಗ್ಗಲು ಮಧ್ಯೆ ಆರೋಪಿ ಮಹಿಳೆಯು ಚಿನ್ನಾಭರಣ ಕದಿಯುತ್ತಿದ್ದಳೆಂದು ತಿಳಿದುಬಂದಿದೆ. ಈಕೆಯನ್ನು ಪಿಐ ಪ್ರಮೋದ ಯಲಿಗಾರ ನೇತೃತ್ವದ ತಂಡ ಬಂಧಿಸಿ, 90 ಗ್ರಾಂ ಚಿನ್ನಾಭರಣವನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ. ಪೊಲೀಸರು ಮಹಿಳೆಯಿಂದ ಸುಮಾರು 15-20 ಲಕ್ಷ …

Read More »

ಅಕ್ರಮವಾಗಿ ಗೋವು ಸಾಗಣೆ; ಮೂವರ ವಿರುದ್ಧ ಪ್ರಕರಣ

ಹುಬ್ಬಳ್ಳಿ: ತಾಲ್ಲೂಕಿನ ಸುಳ್ಳ ಹಾಗೂ ಬ್ಯಾಹಟ್ಟಿ ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿ ಅಕ್ರಮವಾಗಿ ಗೋವುಗಳನ್ನು ಸಾಗಿಸುತ್ತಿದ್ದ ಆರೋಪದ ಮೇಲೆ ಮೂವರ ವಿರುದ್ಧ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೈಲಹೊಂಗಲದ ಸಂಪಗಾವ ನಿವಾಸಿ ಬಾಬಾಜಾನ ಕುಂಡೆವಾಲಿ, ಶಬ್ಬೀರ ಮತ್ತಿಕೊಪ್ಪ ಹಾಗೂ ದಸ್ತಗೀರಿ ತಾಳಿಕೋಟಿ ಆರೋಪಿಗಳು. ಅವರು ಟಾಟಾ ಗೂಡ್ಸ್ ಕ್ಯಾಂಟರ್ ವಾಹನದಲ್ಲಿ ಬೈಲಹೊಂಗಲದಿಂದ ಹುಬ್ಬಳ್ಳಿಗೆ 23 ವಿವಿಧ ಹಸುಗಳು ಹಾಗೂ ಕರುಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದರು. ಈ ವೇಳೆ ವಾಹನವನ್ನು ತಡೆದು ಗೋವುಗಳ …

Read More »

ಗೋಕರ್ಣ ಬೀಚ್‌ನಲ್ಲಿ ಗಾಂಜಾ ನಶೆಯಲ್ಲಿ ತೂರಾಡುತ್ತಿದ್ದ ಇಬ್ಬರಿಗೆ ಖಾಕಿ ಶಾಕ್‌!

ಕಾರವಾರ : ಗಾಂಜಾ ನಶೆಯಲ್ಲಿ ಗೋಕರ್ಣ ಕಡಲ ತೀರದಲ್ಲಿ ತೂರಾಡುತಿದ್ದ ಬೆಂಗಳೂರು ಮೂಲದ ಇಬ್ಬರು ಟೆಕ್ಕಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಎಂ.ಎಸ್. ಪವನ್ (28) ಹಾಗೂ ರಾಘು ಸೆಲ್ವರಂಗನ್ (30) ಎಂದು ಗುತುತಿಸಲಾಗಿದೆ. ಇಬ್ಬರು ಗೋಕರ್ಣದ ರುದ್ರಪಾದದ ಕರಿಯಪ್ಪನ ಕಟ್ಟೆ ಸಮೀಪದ ಬ್ಲೂ ಪೀನ್ ಬೀಚ್ ಸ್ಟೇಟ್ ರೆಸಾರ್ಟ್ ಎದುರಿನ ಸಮುದ್ರ ತೀರದಲ್ಲಿ ಅಮಲಿನಲ್ಲಿ ತೇಲಾಡುತ್ತಿದ್ದರು.ಈ ವೇಳೆ ಪೊಲೀಸರು ಅವರನ್ನು ಬಂಧಿಸಿದ್ದಾರೆ. ವೈದ್ಯಕೀಯ ಪರೀಕ್ಷೆಯಲ್ಲಿ ಇಬ್ಬರು ಗಾಂಜಾ ಸೇವಿಸಿರುವುದು ದೃಢವಾಗಿದೆ …

Read More »

ಬೆಂಗಳೂರು ನಗರದಲ್ಲಿ ಅಕ್ರಮ ವಾಸ: ಬಾಂಗ್ಲಾದ ಇಬ್ಬರ ವಶ

ನಗರದಲ್ಲಿ ಅಕ್ರಮವಾಗಿ ನೆಲಸಿರುವವರ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸುತ್ತಿರುವ ಪೊಲೀಸರು, ಕೊತ್ತನೂರು ಠಾಣೆ ವ್ಯಾಪ್ತಿಯಲ್ಲಿ ಬಾಂಗ್ಲಾದೇಶದ ಇಬ್ಬರು ಪ್ರಜೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಜುಯಿಮೋನೆ (17) ಹಾಗೂ ಮೊಹಮ್ಮದ್‌ ಉಮರ್‌(23) ಎಂಬುವರನ್ನು ವಶಕ್ಕೆ ಪಡೆಯಲಾಗಿದೆ. ಬಳಿಕ ವಿದೇಶಿ ಪ್ರಾದೇಶಿಕ ನೋಂದಣಿ ಕಚೇರಿಗೆ ಹಾಜರು ಪಡಿಸಲಾಗಿದೆ ಎಂದು ಪೊಲೀಸರು ಹೇಳಿದರು. ಎರಡೂವರೆ ವರ್ಷಗಳ ಹಿಂದೆ ಪಶ್ಚಿಮ ಬಂಗಾಳದ ಮಧ್ಯವರ್ತಿಯ ಸಹಾಯ ಪಡೆದು, ಬೆಂಗಳೂರಿಗೆ ಬಂದಿದ್ದ ಇಬ್ಬರು ಈ ಹಿಂದೆ ಬನ್ನೇರುಘಟ್ಟ, ಹೆಬ್ಬಗೋಡಿ ಭಾಗದಲ್ಲಿ …

Read More »

ಗಾಂಜಾ ಸಾಗಿಸುತ್ತಿದ್ದವನ ಬಂಧನ; ಓಡಿ ಹೋದ ನಾಲ್ವರು

ಶಿಗ್ಗಾಂವಿ: ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ವಾಹನ ಜಪ್ತಿ ಮಾಡಿದ ಪೊಲೀಸರು 1.53 ಲಕ್ಷ ರೂ. ಮೌಲ್ಯದ 3014 ಗ್ರಾಂ ತೂಕದ ಗಾಂಜಾ ವಶಪಡಿಸಿಕೊಂಡ ಘಟನೆ ತಾಲೂಕಿನ ವಡಗಟ್ಟಾ ನಾಕಾ ಬಳಿ ನಡೆದಿದೆ. ಹಾನಗಲ್ಲ ತಾಲೂಕು ಬೊಮ್ಮನಹಳ್ಳಿಯ ಇಮಾಮ್ ಖಾಸೀಂ ನೂರ್ ಅಹ್ಮದ್ ಮಕಾನದಾರ (25), ಸದ್ದಾಂ ನೂರ ಅಹ್ಮದ್ ಮಕಾನದಾರ, ರಹೀಮ ಮಕಾನದಾರ, ರಶೀದ್ ಮರದಾನಸಾಬ ವಾಗಿನಕೊಪ್ಪ ಹಾಗೂ ವಹಾಬ್ ನನ್ನೆಸಾಬ ಹನಕನಹಳ್ಳಿ ಎಂಬುವರು ಟಾಟಾ ಇಂಟ್ರಾ ವಾಹನದಲ್ಲಿ …

Read More »

ವಂಡ್ಸೆ: ಹಣಕಾಸು ವಿಚಾರದಲ್ಲಿ ಹಲ್ಲೆ; ತಡೆಯಲು ಬಂದವರಿಗೂ ತುಳಿತ

ಕೊಲ್ಲೂರು: ವಂಡ್ಸೆಯ ಐತಾಳ್ ಕ್ಲಿನಿಕ್ ಬಳಿ ಅಡಿಕೆ ಮತ್ತು ಕೃಷಿ ಸಂಬಂಧಿತ ವಾಣಿಜ್ಯ ಬೆಳೆ ಮಾರಾಟದ ಅಂಗಡಿ ಹೊಂದಿರುವ ಬೆಳ್ಳಾಲ ಗ್ರಾಮದ ಶೇಷು ಶೆಟ್ಟಿ (65) ಅವರ ಮೇಲೆ ಹಲ್ಲೆ ನಡೆದಿದೆ. ಆರೋಪಿ ಪ್ರಕಾಶ ಎಂ. ಎಸ್., ಹಣಕಾಸಿನ ವಿಚಾರದಲ್ಲಿ ತಗಾದೆ ಮಾಡಿ ಅವಾಚ್ಯ ಶಬ್ಧಗಳಿಂದ ಬೈದು, ದೈಹಿಕ ಹಲ್ಲೆ ನಡೆಸಿದ ಹಿನ್ನೆಲೆಯಲ್ಲಿ ಗಂಭೀರ ಗಾಯಗೊಂಡ ಶೇಷು ಶೆಟ್ಟಿ ಅವರನ್ನು ಕುಂದಾಪುರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯನ್ನು ತಡೆಯಲು ಬಂದ …

Read More »

ಕೊಪ್ಪಳ: ಬಾಲಕನನ್ನು ಅಪಹರಿಸಿ ಕೊಂದ ಅಪರಾಧಿಗೆ ಜೀವಾವಧಿ ಶಿಕ್ಷೆ

ಬಾಲಕನನ್ನು ಅಪಹರಿಸಿ ಕೊಲೆ ಮಾಡಿ ತಾಲ್ಲೂಕಿನ ಹಲಗೇರಿ ಸೀಮೆಯ ವ್ಯಾಪ್ತಿಯ ಹಳ್ಳದಲ್ಲಿ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ಜಿಲ್ಲಾ ಸಷೆನ್ಸ್‌ ನ್ಯಾಯಾಲಯವು ಅಪರಾಧಿಗೆ ಜೀವಾವಧಿ ಹಾಗೂ ₹70 ಸಾವಿರ ದಂಡ ವಿಧಿಸಿ ಆದೇಶಿಸಿದೆ. 2020ರ ಜುಲೈನಲ್ಲಿ ಲಕ್ಷ್ಮವ್ವ ಬುರ್ಲಿ ಎಂಬುವರ ಮಗನನ್ನು ತಳಕಲ್‌ನ ಅಪರಾಧಿ ಅಣ್ಣಪ್ಪ ಎಂಬಾತ ಅಪ‍ಹರಿಸಿಕೊಂಡು ಹೋಗಿದ್ದ.ಈ ಕುರಿತು ಕುಕನೂರು ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿತ್ತು. ಆಗ ಆರೋಪಿಯಾಗಿದ್ದ ಅಣ್ಣಪ್ಪನನ್ನು ಭಾನಾಪುರ ಬಳಿ ವಶಕ್ಕೆ ಪಡೆದು ವಿಚಾರಣೆಗೆ …

Read More »

ಸಿನಿಮೀಯ ರೀತಿ ಸ್ಕೂಟರ್‌ ಬೆನ್ನತ್ತಿ ಅಕ್ರಮ ಸಾರಾಯಿ ಹಿಡಿದ ಅಬಕಾರಿ ಅಧಿಕಾರಿಗಳು

ಕಾರವಾರ: ಅಬಕಾರಿ ಅಧಿಕಾರಿಗಳು ಗೋವಾ ಮದ್ಯದ ಮೇಲೆ ನಿರಂತರ ದಾಳಿ ನಡೆಸಿದ್ದು, ಅಕ್ರಮ ಮದ್ಯ ವಶಕ್ಕೆ ಪಡೆಯುತ್ತಿದ್ದಾರೆ. ಮಂಗಳವಾರ ಮುಡಗೇರಿ ಬಳಿ ಸ್ಕೂಟರ್ ಒಂದನ್ನು ಬೆನ್ನಟ್ಟಿದ ಅಬಕಾರಿ ನಿರೀಕ್ಷಕ ವಿಜಯ ಮಹಾಂತೇಶ ಲಮಾಣಿ ಹಾಗೂ ತಂಡ ಸ್ಕೂಟರ್‌ನಲ್ಲಿ ಸಾಗಿಸುತ್ತಿದ್ದ 36 ಬಾಟಲಿ ಗೋವಾ ಪೆನ್ನಿ 12 ಕಿಂಗ್ ಫಿಶರ್ ಸ್ಟ್ರಾಂಗ್‌ ಬಿಯರ್ ಬಾಟಲಿಗಳು ಹಾಗೂ ಸ್ಕೂಟರ್ ವಶಕ್ಕೆ ಪಡೆದಿದ್ದಾರೆ. ಬೈಕ್ ಪಲ್ಟಿಯಾಗುತ್ತಿದ್ದಂತೆ ಚಾಲಕ ಪರಾರಿಯಾಗಿದ್ದಾನೆ. ಸೋಮವಾರ ಮಧ್ಯಾಹ್ನ ಮಾಜಾಳಿ ತನಿಖಾ …

Read More »