Breaking News

BigTv News

ಡಿಜಿಟಲ್ ಅರೆಸ್ಟ್ | ಮಾಜಿ ನ್ಯಾಯಾಧೀಶರಿಗೆ ಒಂದು ಕೋಟಿ.ರೂ.ಗೂ ಅಧಿಕ ವಂಚನೆ

ಹೈದರಾಬಾದ್: ಮಾಜಿ ಜಿಲ್ಲಾ ನ್ಯಾಯಾಧೀಶರೋರ್ವರು ಡಿಜಿಟಲ್ ಅರೆಸ್ಟ್ ವಂಚನೆಗೆ ಬಲಿಯಾಗಿ ಒಂದು ಕೋಟಿ ರೂ.ಗೂ ಅಧಿಕ ಹಣವನ್ನು ಕಳೆದುಕೊಂಡಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದರು. 69 ವರ್ಷದ ನಿವೃತ್ತ ನ್ಯಾಯಾಧೀಶರ ಮೊಬೈಲ್ ಫೋನ್ ಸಂಖ್ಯೆ ಮಹಿಳೆಯರ ಕಳ್ಳ ಸಾಗಣೆ ಮತ್ತು ಇತರ ಅಪರಾಧಗಳಲ್ಲಿ ಒಳಗೊಂಡಿದೆ ಎಂದು ಸೈಬರ್ ಕ್ರಿಮಿನಲ್‌ಗಳು ವಾರದ ಹಿಂದೆ ಅವರಿಗೆ ಬೆದರಿಸಿದ್ದರು. ಇಲ್ಲಿಯ ಮಲ್ಕಾಜ್ಗಿರಿ ನಿವಾಸಿಯಾಗಿರುವ ಅವರು ಒಂದು ಕೋಟಿ ರೂ.ಗೂ ಅಧಿಕ ಹಣವನ್ನು ವಂಚಕರಿಗೆ ವರ್ಗಾಯಿಸಿದ್ದರು. …

Read More »

ದಾವಣಗೆರೆ | ಹನಿಟ್ರ್ಯಾಪ್ ಮಾಡಿ ಸುಲಿಗೆಗೆ ಯತ್ನ: ನಾಲ್ವರ ಬಂಧನ

ಉದ್ಯಮಿಯೊಬ್ಬರನ್ನು ಹನಿಟ್ರ್ಯಾಪ್ ಮಾಡಿ ಲಕ್ಷಾಂತರ ರೂಪಾಯಿ ವಸೂಲಿಗೆ ಯತ್ನಿಸಿದ ಪ್ರಕರಣದಲ್ಲಿ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ದಾವಣಗೆರೆ ನಿವಾಸಿಗಳಾದ ಸುಷ್ಮಿತಾ, ಚನ್ನಬಸಪ್ಪ, ಕೃಷ್ಣಾ ಹಾಗೂ ರಾಹುಲ್‌ ಬಂಧಿತರು. ಆರೋಪಿ ಸಂಜನಾ ತಲೆಮರೆಸಿಕೊಂಡಿದ್ದಾರೆ. ಸಂಚು ರೂಪಿಸಿದ್ದರು: ವೃತ್ತಿಯಲ್ಲಿ ಶುಶ್ರೂಷಕಿ ಆಗಿದ್ದ ಸುಷ್ಮಿತಾ, ರಾಜಕೀಯ ಪಕ್ಷವೊಂದರಲ್ಲಿ ಗುರುತಿಸಿಕೊಂಡಿರುವ 66 ವರ್ಷದ ಉದ್ಯಮಿಯೊಬ್ಬರ ಸ್ನೇಹ ಬೆಳೆಸಿದ್ದರು. ಕ್ರಮೇಣ ಸಲುಗೆಗೆ ತಿರುಗಿತ್ತು. ಕಷ್ಟ ಎಂದು ಕೆಲ ದಿನಗಳ ಹಿಂದೆ ಆರ್ಥಿಕ ನೆರವು ಕೇಳಿದ್ದರು. ಈ ಬಗ್ಗೆ …

Read More »

ಉತ್ತರಕನ್ನಡದಲ್ಲಿ ಚಲಿಸುತ್ತಿದ್ದ ಕಾರಿನ ಮೇಲೆ ಕಂಟೇನರ್ ಪಲ್ಟಿ : 5 ವರ್ಷದ ಮಗು ಸಾವು, ದಂಪತಿಗೆ ಗಾಯ!

ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಬಿಣಗಿ ಗ್ರಾಮದಲ್ಲಿ ಈ ಒಂದು ಅಪಘಾತ ಸಂಭವಿಸಿದ್ದು, ಅಪಘಾತದಲ್ಲಿ ವೈದ್ಯ ದಂಪತಿ ಮತ್ತು ಮತ್ತೊಂದು ಮಗುವಿಗೆ ಗಂಭೀರವಾದ ಗಾಯಗಳಾಗಿದ್ದು, ಮೂವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಕಾರವಾರದಿಂದ ಅಂಕೋಲ ಕಡೆಗೆ ಕಾರು ಹಾಗೂ ಕಂಟೇನರ್ ತೆರಳುತ್ತಿತ್ತು ಮಾತನಾಡಲು ಸಾಧ್ಯವಾಗದಷ್ಟು ಕಂಟೇನರ್ ಚಾಲಕ ಮಧ್ಯ ಸೇವಿಸಿದ್ದ ಎಂದು ತಿಳಿದುಬಂದಿದೆ. ಪ್ರವಾಸಕ್ಕೆ ಎಂದು ಮಹಾರಾಷ್ಟ್ರ …

Read More »

T20 ವಿಶ್ವಕಪ್ ಸೆಲೆಬ್ರೇಶನ್ ವೇಳೆ ಕಿರಿಕ್, ಯುವಕರ ಗುಂಪಿನ ನಡುವೆ ಹೊಡಿಬಡಿ

ಬೆಂಗಳೂರು ಗ್ರಾಮಾಂತರ: ಟೀಮ್ ಇಂಡಿಯಾ T20 ಫೈನಲ್ ಪಂದ್ಯ ಉತ್ಸಾಹದ ಮಧ್ಯೆ ನೆಲಮಂಗಲದಲ್ಲಿ ಯುವಕರ ನಡುವೆ ತೀವ್ರ ಗಲಾಟೆ ನಡೆದಿದೆ. ಕುಣಿಗಲ್ ಬೈಪಾಸ್ ಬಳಿ ಭಾನುವಾರ (ಮಾ.8) ನಡುರಾತ್ರಿ ಈ ಘಟನೆ ನಡೆದಿದ್ದು, ಎರಡು ಗುಂಪುಗಳು ಪರಸ್ಪರ ಹಲ್ಲೆ ನಡೆಸಿದ ದೃಶ್ಯಗಳು ಸಿಸಿಟಿವಿಯಲ್ಲಿ ದಾಖಲಾಗಿವೆ. ಕೈಯಲ್ಲಿ ಬಿಯರ್ ಬಾಟಲಿ ಮತ್ತು ದೊಣ್ಣೆಗಳನ್ನು ಹಿಡಿದು ಯುವಕರು ಒಬ್ಬರ ಮೇಲೆ ಒಬ್ಬರು ದಾಳಿ ಮಾಡಿದ್ದಾರೆ. ನೆಲಮಂಗಲ ಮತ್ತು ದೊಡ್ಡಬಳ್ಳಾಪುರ ಪ್ರದೇಶದ ಯುವಕರ ನಡುವೆ …

Read More »

ಆಕಸ್ಮಿಕ ಅಗ್ನಿ ದುರಂತ : ಒಮಿನಿ ಕಾರು ಭಸ್ಮ

ರಿಪ್ಪನ್ ಪೇಟೆ: ಬೆಳ್ಳೂರು ಗ್ರಾಮದ ಬಂಗ್ಲೆ ದಿಂಬದ ಬಳಿ ಶನಿವಾರ ತಡರಾತ್ರಿ ಚಲಿಸುತ್ತಿದ್ದ ಓಮಿನಿಯಲ್ಲಿ ಅಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಸಂಪೂರ್ಣ ಸುಟ್ಟು ಹೋಗಿದೆ. ಶಿವಮೊಗ್ಗದಿಂದ ಕೋಣಂದೂರು ಸಮೀಪದ ದೆಮ್ಲಾಪುರಕ್ಕೆ ತೆರಳುತ್ತಿದ್ದ ಕಾರಿನಲ್ಲಿ ಇಬ್ಬರು ಪ್ರಯಾಣಿಸುತ್ತಿದ್ದರು. ಚಾಲಕ ಶ್ರೀಕಾಂತ್ ಹಾಗೂ ಮಾಲಿಕ ಗಂಗಾಧರ್ ಇಬ್ಬರು ವಾಹನದಿಂದ ಇಳಿದು ಅಪಾಯದಿಂದ ಪಾರಾಗಿದ್ದಾರೆ. ಗಂಗಾಧರ್ ಅವರ ಮನೆಯಲ್ಲಿ ಮಾರ್ಚ್ 12ರಂದು ನಡೆಯಲಿದ್ದ ಶುಭ ಕಾರ್ಯಕ್ಕೆ ಶಿವಮೊಗ್ಗದಿಂದ ದಿನಸಿ ಸಾಮಗ್ರಿ ಹಾಗೂ ತರಕಾರಿಗಳನ್ನು ತುಂಬಿಕೊಂಡು ಬಂದಿದ್ದರು. …

Read More »

ಚಿನ್ನದ ಸರ ಕದ್ದವನ ಬಂಧನ

ಹಾರೋಹಳ್ಳಿ: ಮೂರು ತಿಂಗಳ ಹಿಂದೆ ಮನೆಯಲ್ಲಿ ಚಿನ್ನಾಭರಣ ದೋಚಿದ್ದ ಖದೀಮನನ್ನು ಹಾರೋಹಳ್ಳಿ ಪೊಲೀಸರು ಬಂಧಿಸಿ, 30 ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ. ಮೈಸೂರು ಜಿಲ್ಲೆಯ ಉದಯಗಿರಿಯ ಅಲೀಂ(35) ಬಂಧಿತ. 2025ರ ಡಿಸೆಂಬರ್ 13ರಂದು ಹಾರೋಹಳ್ಳಿ ಠಾಣಾ ವ್ಯಾಪ್ತಿಯ ಚಿಕ್ಕೆರೆದೊಡ್ಡಿ ಆದಿಶಕ್ತಿ ಬಡಾವಣೆಯ ಮನೆಯೊಂದರ ಬಾಗಿಲನ್ನು ಮೀಟಿ ಒಳ ನುಗ್ಗಿದ ಖದೀಮ, ಮನೆಯಲ್ಲಿನ ಚಿನ್ನದ ಸರ ದೋಚಿದ್ದ. ಈ ಸಂಬಂಧ ಮನೆ ಮಾಲೀಕರು ನೀಡಿದ ದೂರು ಆಧರಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಆರೋಪಿ …

Read More »

ಅಕ್ರಮ ಕೋಳಿ ಅಂಕಕ್ಕೆ ಪೊಲೀಸ್ ದಾಳಿ

ಕಡಬ:ಅಕ್ರಮವಾಗಿ ಕೋಳಿ ಅಂಕ ನಡೆಯುತ್ತಿದ್ದ ಸ್ಥಳಕ್ಕೆ ಸುಬ್ರಹ್ಮಣ್ಯ ಪೊಲೀಸರು ದಾಳಿ ನಡೆಸಿದ ಘಟನೆ ಕಡಬ ತಾಲೂಕಿನ ಯೇನೆಕಲ್ಲು ಗ್ರಾಮದಲ್ಲಿ ನಡೆದಿದೆ. ಮಾರ್ಚ್ 6ರಂದು ಸಂಜೆ, ಯೇನೆಕಲ್ಲು ಗ್ರಾಮದ ಸಂಕಡ್ಕ ಎಂಬಲ್ಲಿ ತೋಟವೊಂದರಲ್ಲಿ ಹಣವನ್ನು ಪಣಕ್ಕಿಟ್ಟು ಕೋಳಿ ಅಂಕ ನಡೆಯುತ್ತಿದೆ ಎಂಬ ಎಂಬ ಖಚಿತ ಮಾಹಿತಿ ಮೇರೆಗೆ ಸುಬ್ರಹ್ಮಣ್ಯ ಠಾಣಾ ಪೊಲೀಸರು ದಾಳಿ ನಡೆಸಿದ್ದಾರೆ‌. ಈ ಸಂದರ್ಭ ಸ್ಥಳದಲ್ಲಿದ್ದವರು ಪರಾರಿಯಾಗಿದ್ದಾರೆ ಎನ್ನಲಾಗಿದೆ. ದಾಳಿ ಸಂದರ್ಭ ಸ್ಥಳದಲ್ಲಿ 2 ಕೋಳಿಗಳು ಪತ್ತೆಯಾಗಿದ್ದು, ಇವುಗಳ …

Read More »

ಧಾರವಾಡದಲ್ಲಿ ಯಾವುದೇ ಕೇಸ್ ದಾಖಲಾಗದಿದ್ದರೂ, ಪೊಲೀಸರ ವಿಚಾರಣೆಗೆ ಹೆದರಿ ರೈತ ಆತ್ಮಹತ್ಯೆ!

ಧಾರವಾಡ : ಹುಬ್ಬಳ್ಳಿ -ಧಾರವಾಡದ ಪೊಲೀಸ್ ಠಾಣೆಯ ವ್ಯಾಪ್ತಿಯ ಒಂದು ವಿಚಾರಣೆಗೆ ಹೆದರಿ ರೈತನೊಬ್ಬ ತನ್ನ ಹೊಲದಲ್ಲಿಯೇ ನೇಣು ಬಿಗಿದುಕೊಂಡಿರುವ ಘಟನೆ ಧಾರವಾಡ ಜಿಲ್ಲೆ ಹುಬ್ಬಳ್ಳಿ ತಾಲೂಕಿನ ಉಮಚಗಿ ಗ್ರಾಮದಲ್ಲಿ ಶನಿವಾರ ನಡೆದಿದೆ. ಉಮಚಗಿ ಗ್ರಾಮದ ನಿವಾಸಿ ನಿಂಗಪ್ಪ ಕೋಟೆಪ್ಪ ಅಂಗಡಿ (48) ಮೃತ ವ್ಯಕ್ತಿ ಎಂದು ತಿಳಿದುಬಂದಿದೆ. ಇತ್ತೀಚೆಗೆ ಗ್ರಾಮ ಪಂಚಾಯಿತಿ ಸದಸ್ಯರೊಬ್ಬರು ನಿಂಗಪ್ಪನ ಮೇಲೆ ಗ್ರಾಮೀಣ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ಅದರನ್ವಯ ನಿಂಗಪ್ಪನಿಗೆ ವಿಚಾರಣೆಗೆ ಬರುವಂತೆ ಹುಬ್ಬಳ್ಳಿ …

Read More »

ವರದಕ್ಷಿಣೆ ಕಿರುಕುಳ: 7 ತಿಂಗಳ ಗರ್ಭಿಣಿ ಕೊಲೆ, ಗಂಡನ ಮೇಲೆ ಗುಮಾನಿ

ಬೆಳಗಾವಿ: ಅಲಖನೂರ ಗ್ರಾಮದಲ್ಲಿ ನಡೆದ ಭೀಕರ ಘಟನೆಯಲ್ಲಿ ಏಳು ತಿಂಗಳ ಗರ್ಭಿಣಿ ದೀಪಾವರ ಸಾವಿನ ಆರೋಪ ಗಂಡ ಅಭಿಷೇಕನ ಮೇಲೆ ಹೇರಲಾಗಿದೆ. ದೀಪಾ ತವರುಮನೆಯವರ ತಿಳಿವಳಿಕೆಯಂತೆ, ಗಂಡ ಅಭಿಷೇಕ ತಮಗೆ ಬಂಗಾರ ಮತ್ತು ಹಣವನ್ನು ತರುವಂತೆ ಮನೆಯಿಂದ ಪೀಡಿಸುತ್ತಿದ್ದ. ಈ ಮಧ್ಯೆ ದೀಪಾ ಮೃತಪಟ್ಟಿದ್ದು, ಕುಟುಂಬದವರು ಗಂಡನ ಜೊತೆಗೆ ಆತನ ತಂದೆಯ ವಿರುದ್ಧವೂ ಗಂಭೀರ ಆರೋಪ ನೀಡಿದ್ದಾರೆ. ಈ ಪ್ರಕರಣದ ಹಿನ್ನೆಲೆಯಲ್ಲಿ, ಪೊಲೀಸರು ದೀಪಾಳ ಗಂಡ ಅಭಿಷೇಕ ಮತ್ತು ಆತನ …

Read More »

ಖಾಸಗಿ ವಿಡಿಯೊ ಹರಿಬಿಟ್ಟ ಇಬ್ಬರ ಬಂಧನ

ಶಿವಮೊಗ್ಗ: ಫೇಸ್‌ಬುಕ್‌ನಲ್ಲಿ ನಕಲಿ ಖಾತೆ ಸೃಷ್ಟಿಸಿ ವ್ಯಕ್ತಿಯೊಬ್ಬರ ಖಾಸಗಿ ವಿಡಿಯೊವನ್ನು ಹರಿಬಿಟ್ಟಿದ್ದ ಆರೋಪದ ಮೇಲೆ ಇಬ್ಬರು ಆರೋಪಿಗಳನ್ನು ಶಿವಮೊಗ್ಗ ಕ್ರೈಂ ಪೊಲೀಸರು ಬಂದಿಸಿದ್ದಾರೆ. ಕಳೆದ ಫೆ.6ರಂದು ಶಿವಮೊಗ್ಗ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ವ್ಯಕ್ತಿಯೊಬ್ಬರು ತನ್ನ ಖಾಸಗಿ ವಿಡಿಯೊವನ್ನು ಫೇಸ್‌ಬುಕ್‌ನಲ್ಲಿ ಅಪಲೋಡ್ ಮಾಡಿದ್ದಾರೆ ಎಂದು ದೂರು ದಾಖಲಿಸಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳ ಪತ್ತೆಗಾಗಿ ತಂಡ ರಚಿಸಿ ಕಾರ್ಯಾಚರಣೆ ಕೈಗೊಂಡಿದ್ದರು. ತಾಂತ್ರಿಕ ದಾಖಲೆಗಳ ಆಧಾರದ ಮೇಲೆ ಕಾರ್ಯಾಚರಣೆ …

Read More »