Breaking News

BigTv News

ಗೆಳೆಯ ಅಂತ ನಂಬಿಕೆ ಇಟ್ಟದ್ದೇ ತಪ್ಪಾಯ್ತು: ಸ್ನೇಹಿತನ ಅಕೌಂಟ್ ಬಳಸಿ 7 ಕೋಟಿ ರೂ. ವರ್ಗಾವಣೆ

ಬೆಂಗಳೂರು: ಸ್ನೇಹದ ಹೆಸರಿನಲ್ಲಿ ಯುವಕನೊಬ್ಬ ತನ್ನ ಸ್ನೇಹಿತನ ಬ್ಯಾಂಕ್ ಖಾತೆಯನ್ನು ದುರುಪಯೋಗಪಡಿಸಿಕೊಂಡು ಸುಮಾರು 7 ಕೋಟಿ ರೂಪಾಯಿ ಸೈಬರ್ ವಂಚನೆ ನಡೆಸಿದ ಘಟನೆ ನಗರದಲ್ಲಿ ಬೆಳಕಿಗೆ ಬಂದಿದೆ. ವಂಚನೆಗೊಳಗಾದ ವಿದ್ಯಾರ್ಥಿ ಹಾಗೂ ಆಯುಷ್ ಎಂಬ ಯುವಕ ಕಳೆದ ಒಂದು ವರ್ಷದಿಂದ ಪರಿಚಯದಲ್ಲಿದ್ದರು. ತನ್ನ ಖಾತೆ ಸ್ಥಗಿತಗೊಂಡಿದೆ ಎಂದು ಹೇಳಿ ಆಯುಷ್, ವಿದ್ಯಾರ್ಥಿಯಿಂದ ಬ್ಯಾಂಕ್ ವಿವರಗಳನ್ನು ಪಡೆದಿದ್ದಾನೆ. ನಂಬಿಕೆಯ ಮೇರೆಗೆ ವಿದ್ಯಾರ್ಥಿ ಪಾಸ್‌ಬುಕ್, ಎಟಿಎಂ ಕಾರ್ಡ್ ಮತ್ತು ಮೊಬೈಲ್ ಸಿಮ್ ನೀಡಿದ್ದಾನೆ …

Read More »

ಆನ್ ಲೈನ್ ಗೇಮ್ ಚಟಕ್ಕೆ ಒಂಟಿ ವೃದ್ಧೆ ಕೊಲೆ ಮಾಡಿ ಆಭರಣ ದೋಚಿದ್ದ ಆರೋಪಿ ಬಂಧನ: ರೂ. 8.44 ಲಕ್ಷ ಮೌಲ್ಯದ ಚಿನ್ನ ಜಪ್ತಿ

ದಾವಣಗೆರೆ: ಆನ್ ಲೈನ್ ಗೇಮ್‌ ಆಡಿ ಮಾಡಿಕೊಂಡಿದ್ದ ಸಾಲ ತೀರಿಸಲು ಒಂಟಿ ವೃದ್ಧೆಯನ್ನು ಕತ್ತು ಹಿಸುಕಿ ಕೊಲೆ ಮಾಡಿ, ಆಭರಣ ದೋಚಿದ್ದ ಪ್ರಕರಣವನ್ನು ನ್ಯಾಮತಿ ಪೊಲೀಸರು ಭೇದಿಸಿದ್ದಾರೆ. ಪ್ರಕರಣದ ಆರೋಪಿ ಅಭಿಷೇಕ್ ಕೆ. (23) ಎಂಬಾತನನ್ನು ಬಂಧಿಸಿರುವ ಪೊಲೀಸರು, ಆತನಿಂದ ಸುಮಾರು 8,44,000 ರೂ.ಮೌಲ್ಯದ 67.1 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಫೆಬ್ರವರಿ 2 ರಂದು ಆರುಂಡಿ ಗ್ರಾಮದ ಕಮಲಮ್ಮ (64) ಎಂಬುವವರನ್ನು ಅವರ ಮನೆಯಲ್ಲೇ ಕೊಲೆ ಮಾಡಲಾಗಿತ್ತು. ದೇವರ ಪಲ್ಲಕ್ಕಿ …

Read More »

ಸರ್ಕಾರಿ ಆಸ್ಪತ್ರೆಯಲ್ಲಿ ಇಂಜೆಕ್ಷನ್‌ ಪಡೆದ ಕೆಲವೇ ಕ್ಷಣದಲ್ಲಿ ಪ್ರಾಣಬಿಟ್ಟ ಮಹಿಳೆ

ದಾವಣಗೆರೆಯ ಚನ್ನಗಿರಿಯ ಸರ್ಕಾರಿ ಆಸ್ಪತ್ರೆಯಲ್ಲಿ ಮಹಿಳೆಯೊಬ್ಬರು ಇಂಜೆಕ್ಷನ್‌ ಪಡೆದ ಕೆಲವೇ ಕ್ಷಣದಲ್ಲಿ ಮೃತಪಟ್ಟಿದ್ದಾರೆ. ತಿಪ್ಪಗೊಂಡನಹಳ್ಳಿ ನಿವಾಸಿ ಅನುಷಾ ಮೃತರು. ಹೃದಯ ಸಂಬಂಧಿ ಸಮಸ್ಯೆಯಿಂದ ಅನುಷಾ ಬಳಲುತ್ತಿದ್ದು, ಪ್ರತಿ ತಿಂಗಳು ಇಂಜೆಕ್ಷನ್‌ ಪಡೆಯುತ್ತಿದ್ದರು. ಅಂತೆಯೇ ಆಸ್ಪತ್ರೆಗೆ ಬಂದು ಇಂಜೆಕ್ಷನ್‌ ಹಾಕಿಸಿಕೊಂಡಿದ್ದಾರೆ. ಆದರೆ ಅದನ್ನು ಪಡೆದ ಕೆಲವೇ ಕ್ಷಣದಲ್ಲಿ ಮೃತಪಟ್ಟಿದ್ದಾರೆ. ಖಾಸಗಿ ಮೆಡಿಕಲ್‌ ಸ್ಟೋರ್‌ನಿಂದ ಇಂಜೆಕ್ಷನ್‌ ಖರೀದಿ ಮಾಡಿ ತಂದು ಆಸ್ಪತ್ರೆಗೆ ಕೊಟ್ಟಿದ್ದಾರೆ. ಇಂಜೆಕ್ಷನ್‌ ಸರಿ ಇದೆಯೋ? ಅವಧಿ ಮುಗಿದಿದೆಯೋ? ಮೆಡಿಕಲ್‌ ಸ್ಟೋರ್‌ನವರು …

Read More »

ನಶೆ, ಮಾದಕ ಮಾತ್ರೆ ನೀಡಿ 19 ವರ್ಷದ ವಿದ್ಯಾರ್ಥಿನಿ ಮೇಲೆ ಗ್ಯಾಂಗ್ ರೇಪ್

ಬೆಂಗಳೂರಿನಲ್ಲಿ 19 ವರ್ಷದ ಖಾಸಗಿ ಕಾಲೇಜು ವಿದ್ಯಾರ್ಥಿನಿ ಮೇಲೆ ಆಕೆಯ ಸ್ನೇಹಿತರೇ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಸಂತ್ರಸ್ತೆಗೆ ನಶೆ ಹಾಗೂ ಮಾದಕ ಮಾತ್ರೆ ನೀಡಿ ಈ ಕೃತ್ಯ ಎಸಗಲಾಗಿದ್ದು, ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಸಂಬಂಧ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬನ್ನೇರುಘಟ್ಟ ಖಾಸಗಿ ಕಾಲೇಜು ವಿದ್ಯಾರ್ಥಿನಿಯಾಗಿರುವ ಸಂತ್ರಸ್ತೆ, ಪಶ್ಚಿಮ ಬಂಗಾಳ ಮೂಲದ ಡಿಕ್ಸಿನ್ ಎಂಬಾತನನ್ನು ಪ್ರೀತಿಸುತ್ತಿದ್ದಳು. ಇತ್ತೀಚೆಗೆ ಡಿಕ್ಸಿನ್ ಮತ್ತು …

Read More »

ಇಸ್ಪಿಟ್ ಅಡ್ಡೆಗೆ ದಾಳಿ

ಕುಂದಾಪುರ: ಗ್ರಾಮಾಂತರ ಠಾಣೆ ಪೊಲೀಸರು ದೇವಲ್ಕುಂದ ಗ್ರಾಮದ ಬಗ್ವಾಡಿ ಚಕ್ರ ನದಿಯ ಬದಿ ಹಾಡಿಯಲ್ಲಿ ನಡೆಯುತ್ತಿದ್ದ ಇಸ್ಪಿಟ್ ಅಡ್ಡೆಗೆ ದಾಳಿ ನಡೆಸಿದ್ದಾರೆ. ಗುಡುಗುಡಿ (ಗರಗರ ಮಂಡಲ) ಆಟ ಆಡುತ್ತಿದ್ದ ಹರೀಶ್ (41) ನೂಜಾಡಿ, ಗ ಗಣೇಶ ಎನ್. (31) ಬಗ್ವಾಡಿ, ರಾಘವೇಂದ್ರ (37) ನೂಜಾಡಿ, ಪ್ರವೀಣ್‌ ಎಮ್ (32) ದೇವಲ್ಕುಂದ ಅವರನ್ನು ವಶಕ್ಕೆ ಪಡೆಯಲಾಗಿದೆ. ಗುಡುಗುಡಿ (ಗರಗರ ಮಂಡಲ) ಆಟಕ್ಕೆ ಬಳಸಿದ ‌7,630ರೂ. ಹಾಗೂ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

Read More »

ಕುರಿ ಕಳ್ಳತನಕ್ಕೆ ಯತ್ನ: ವ್ಯಕ್ತಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಗ್ರಾಮಸ್ಥರು

ಯಾದಗಿರಿ : ಜಿಲ್ಲೆಯ ಗುರುಮಠಕಲ್ ತಾಲ್ಲೂಕಿನ ಚಂಡರಕ್ಕಿ ಗ್ರಾಮದಲ್ಲಿ ಕುರಿ ಕಳ್ಳತನಕ್ಕೆ ಯತ್ನಿಸುತ್ತಿದ್ದ ವ್ಯಕ್ತಿಯನ್ನು ಗ್ರಾಮಸ್ಥರು ರೆಡ್‌ ಹ್ಯಾಂಡ್‌ ಆಗಿ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ.ರಾತ್ರಿ ವೇಳೆ ಕುರಿ ಕಳ್ಳತನ ಮಾಡಲು ಬಂದಿದ್ದ ಶಂಕಿತ ವ್ಯಕ್ತಿ ಗ್ರಾಮಸ್ಥರ ಅನುಮಾನಕ್ಕೆ ಸಿಲುಕಿ ಸಿಕ್ಕಿಬಿದ್ದಿದ್ದಾನೆ. ತಕ್ಷಣವೇ ಕೆಲವರು ಆತನನ್ನು ಹಿಡಿದು ವಿದ್ಯುತ್ ಕಂಬಕ್ಕೆ ಕಟ್ಟಿ ಹೊಡೆದಿರುವುದಾಗಿ ತಿಳಿದುಬಂದಿದೆ. ಮಾಹಿತಿ ತಿಳಿದ ಬಳಿಕ ಗುರುಮಠಕಲ್ ಪೊಲೀಸ್ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಶಂಕಿತನನ್ನು …

Read More »

ತುಮಕೂರಿನಲ್ಲಿ ಮನಕಲಕುವ ಘಟನೆ: 5 ದಿನಗಳ ಮಗುವನ್ನು ಬ್ಯಾಗ್‌ನಲ್ಲಿ ಬಿಟ್ಟು ಹೋದ ತಾಯಿ!

ತುಮಕೂರು ಜಿಲ್ಲೆಯ ಯಡಿಯೂರು ತಾಲ್ಲೂಕಿನಲ್ಲಿ ಹೃದಯವಿದ್ರಾವಕ ಘಟನೆ ನಡೆದಿದೆ. ಕೇವಲ 5 ದಿನಗಳ ಹಸುಗೂಸು ಗಂಡು ಮಗುವನ್ನು ರಾತ್ರಿ ಸಮಯದಲ್ಲಿ ಬ್ಯಾಗ್‌ನೊಳಗೆ ಇಟ್ಟು ಬೀದಿಯಲ್ಲಿ ಬಿಟ್ಟು ಹೋದ ತಾಯಿಯ ಘಟನೆಯು ಸಾರ್ವಜನಿಕರಲ್ಲಿ ಆಕ್ರೋಶ ಮತ್ತು ದುಃಖವನ್ನುಂಟುಮಾಡಿದೆ. ದೇವಾಲಯ ಸಮೀಪದ ವಿದ್ಯಾರ್ಥಿ ನಿಲಯದ ರಸ್ತೆಯಲ್ಲಿ ಮಗುವನ್ನು ಪತ್ತೆಹಚ್ಚಲಾಗಿದೆ. ರಾತ್ರಿ ಸಮಯದಲ್ಲಿ ಮಗು ಅಳುವ ಶಬ್ದ ಕೇಳಿ ಬಂದ ಸ್ಥಳೀಯ ವ್ಯಕ್ತಿಯೊಬ್ಬರು ನೋಡಲು ಹೋದಾಗ ಬ್ಯಾಗ್‌ನೊಳಗೆ ಅಳುತ್ತಿರುವ ನವಜಾತ ಶಿಶುವನ್ನು ಕಂಡರು. ತಕ್ಷಣವೇ …

Read More »

ಮನೆ ಬಳಕೆ ಎಲೆಕ್ಟ್ರಾನಿಕ್ ವಸ್ತುಗಳು ಭಸ್ಮ

ಹುಬ್ಬಳ್ಳಿ: ನಗರದ ಹೊರ ವಲಯದ ಕುಸುಗಲ್ ರಸ್ತೆಯ ಝಡೀಕೋ ಗೋದಾಮಿಗೆ ಭಾನುವಾರ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ತಗುಲಿದ್ದು, ಮನೆ ಬಳಕೆ ವಸ್ತುಗಳು ಸುಟ್ಟು ಕರಕಲಾಗಿವೆ. ಉಣಕಲ್‌ನ ರವಿ ಜೈನ್ ಎಂಬುವವರಿಗೆ ಈ ಎಲೆಕ್ಟ್ರಾನಿಕ್ ಗೋದಾಮು ಸೇರಿದೆ. ಮುಗಿಲೆತ್ತರಕ್ಕೆ ದಟ್ಟ ಹೊಗೆ ಹಾಗೂ ಬೆಂಕಿ ಆವರಿಸಿದ ಪರಿಣಾಮ ಕೆಲ ಹೊತ್ತು ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಪೊಲೀಸ್ ಹಾಗೂ ಅಗ್ನಿಶಾಮಕ ಸಿಬ್ಬಂದಿ ಸಾರ್ವಜನಿಕರ ಸಹಕಾರದಿಂದ ಬೆಂಕಿ ನಂದಿಸಲಾಯಿತು.

Read More »

ಕೆಲಸಕ್ಕೆಂದು ಹೋದ ಮಹಿಳೆ ನಾಪತ್ತೆ

ಮಂಗಳೂರು: ನಗರದ ಹೊಯ್ಗೆ ಬಜಾರ್ ನ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದ ರೇಖಾ ಈಬಕ್ಕನವರ್ (40) ಎಂಬವರು ನಾಪತ್ತೆಯಾಗಿದ್ದರೆ. ಫೆ.18ರಂದು ಬೆಳಗ್ಗೆ 6ಗಂಟೆಗೆ ಆಕೆ ಕೆಲಸ ಮಾಡುತ್ತಿದ್ದ ಅಪಾರ್ಟ್ ಮೆಂಟ್ ಗೆ ಗಂಡ ಬಿಟ್ಟು ಹೋಗಿದ್ದಾರೆ. ಸ್ವಲ್ಪ ಹೊತ್ತಿನ ಅನಂತರ ಆಕೆಗೆ ಕರೆ ಮಾಡಿದಾಗ ಕೆಲಸ ಮಾಡುತ್ತಿರುವುದಾಗಿ ಹೇಳಿ ಕರೆ ಕಟ್ ಮಾಡಿದ್ದಾಳೆ.9.30ಕ್ಕೆ ಮತ್ತೆ ಕರೆ ಮಾಡಿದಾಗ ಸ್ವಿಚ್ ಆಫ್ ಆಗಿತ್ತು. ಆಕೆ ಕೆಲಸ ಮಾಡುತ್ತಿದ್ದ ಮನೆಗೆ ಹೋಗಿ ವಿಚಾರಿಸಿದಾಗ ಈ …

Read More »

ಸಿಗರೇಟ್ ಹಣ ಕೇಳಿದ್ದಕ್ಕೆ ಪುಂಡರ ಅಟ್ಟಹಾಸ: ಅಂಗಡಿ ಮಾಲೀಕ, ಗ್ರಾಹಕನ ಮೇಲೆ ಹಲ್ಲೆ, ಕಾಂಡಿಮೆಂಟ್ಸ್ ಧ್ವಂಸ

ಬೆಂಗಳೂರಿನ ಬ್ಯಾಟರಾಯನಪುರದಲ್ಲಿ ನಿನ್ನೆ ರಾತ್ರಿ ಘಟನೆ ನಡೆದಿದೆ. ರಾತ್ರಿ 9.30 ರ ಸುಮಾರಿಗೆ ಗ್ಯಾಲಕ್ಸಿ ಕಾಂಟಿಮೆಂಟ್ಸ್ ಬಳಿ ಬಂದಿದ್ದ ಮಂಜೇಶ್ ಅಲಿಯಾಸ್ ಬೆಣ್ಣೆ ಮತ್ತು ಸ್ನೇಹಿತ ಕಾಂಡಿಮೆಂಟ್ಸ್ ಮಾಲೀಕನ ಬಳಿ ಸಿಗರೇಟ್ ಕೇಳಿದ್ದಾರೆ. ಆದರೆ ಹಣ ಕೊಡದೆ ಅವಾಜ್ ಹಾಕಿದ್ದಾರೆ. ಈ ವೇಳೆ ಬಂದ ಗ್ರಾಹಕ ಬೆಣ್ಣೆಯ ಸ್ನೇಹಿತನನ್ನು ನೋಡಿದ್ದರು. ಇಷ್ಟಕ್ಕೆ ಗುರಾಯಿಸುತ್ತೀಯಾ ಎಂದು ಗ್ರಾಹಕನ ಮೇಲೆ ಹಲ್ಲೆ ಮಾಡಲಾಗಿದೆ. ರಸ್ತೆಯಲ್ಲಿ ಎಳೆದಾಡಿ ಪುಂಡರು ಹಲ್ಲೆ ನಡೆಸಿದ್ದಾರೆ. ನಂತರ ಕಾಂಡಿಮೆಂಟ್ಸ್ …

Read More »