Breaking News

BigTv News

ದೇವನಹಳ್ಳಿಯಲ್ಲಿ ಭೀಕರ ರಸ್ತೆ ಅಪಘಾತ; ಬೈಕ್ ಸವಾರ ಸಾವು

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ದಾಬಸ್ ಪೇಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರನೋರ್ವ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಡಿಯೋ ಮತ್ತು ಸ್ಪ್ಲೆಂಡರ್ ಪ್ಲಸ್ ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಡಿಕ್ಕಿಯ ತೀವ್ರತೆಗೆ ಎರಡು ಬೈಕ್‌ಗಳು ಸಂಪೂರ್ಣವಾಗಿ ನಜ್ಜುಗುಜ್ಜಾಗಿವೆ. ಅಪಘಾತದಲ್ಲಿ ನರಸಿಂಹಪ್ಪ ಎಂಬುವವರು ಸಾವನ್ನಪ್ಪಿರುವುದು ದೃಢಪಟ್ಟಿದೆ. ಮೃತ ನರಸಿಂಹಪ್ಪ ಅವರು ಮದುವೆ ಸಮಾರಂಭ ಮುಗಿಸಿಕೊಂಡು ಮನೆಗೆ ವಾಪಸ್ಸಾಗುತ್ತಿದ್ದ ವೇಳೆ, ದೇವನಹಳ್ಳಿಯ ಚಪ್ಪರದಕಲ್ಲು ಸಮೀಪ ಈ …

Read More »

ಪೋಕ್ಸೋ ಕೇಸ್ ದಾಖಲಿಸಿದಕ್ಕೆ ದ್ವೇಷ: ಮಹಿಳೆ ಸಾವು! ನಾಲ್ವರ ವಿರುದ್ಧ FIR ದಾಖಲು

ದೇವನಹಳ್ಳಿ: ಹಳೆ ವೈಷಮ್ಯದ ಹಿನ್ನೆಲೆ ನಡೆದ ಗಲಾಟೆಯಲ್ಲಿ ಮಹಿಳೆ ಮೃತಪಟ್ಟಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲ್ಲೂಕಿನ ಕುಂದಾಣ ಗ್ರಾಮದಲ್ಲಿ ನಡೆದಿದೆ. ರೇಣುಕಾ (37) ಮೃತ ಮಹಿಳೆಯಾಗಿದ್ದಾರೆ. ಆರೋಪಿ ರಂಜಿತ್ ಅಪ್ರಾಪ್ತ ಬಾಲಕಿಯನ್ನು ಮದುವೆಯಾಗುವುದಾಗಿ ಪೋಷಕರನ್ನು ಕೇಳಿದ್ದನು.ಆದರೆ ಬಾಲಕಿ ಇನ್ನೂ 18 ವರ್ಷ ಪೂರೈಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಪೋಷಕರು ವಿರೋಧ ವ್ಯಕ್ತಪಡಿಸಿ, ರಂಜಿತ್ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದರು. ಪ್ರಕರಣ ದಾಖಲಾಗಿದ ನಂತರ ರಂಜಿತ್ ಜೈಲಿಗೆ ಹೋಗಿ, …

Read More »

ಮಹಾಲಿಂಗಪುರ: ಕಲ್ಲು ತೂರಾಟ ಘಟನೆ ಖಂಡಿಸಿ ಪ್ರತಿಭಟನೆ

ಬಾಗಲಕೋಟೆಯಲ್ಲಿ ಶಿವಾಜಿ ಜಯಂತಿ ಮೆರವಣಿಗೆ ವೇಳೆ ನಡೆದ ಕಲ್ಲು ತೂರಾಟ ಘಟನೆ ಖಂಡಿಸಿ ಪಟ್ಟಣದ ಅಕ್ಕಿಮರಡಿ-ಢವಳೇಶ್ವರ ಕೂಡು ರಸ್ತೆಯ ಶಿವಾಜಿ ವೃತ್ತದಲ್ಲಿ ಮರಾಠ ಸಮಾಜ ಹಾಗೂ ಹಿಂದೂ ಸಂಘಟನೆಗಳ ವತಿಯಿಂದ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು. ಮುಖಂಡ ರವಿ ಜವಳಗಿ ಮಾತನಾಡಿ, ‘ಶಾಂತಿಯುತವಾಗಿ ನಡೆದ ಮೆರವಣಿಗೆ ವೇಳೆ ಕಿಡಿಗೇಡಿಗಳು ಕಲ್ಲು ಎಸೆದಿದ್ದಾರೆ. ಪೂರ್ವ ನಿಯೋಜಿತವಾಗಿ ಈ ಕೃತ್ಯ ನಡೆದಿದೆ. ಕಲ್ಲು ತೂರಾಟ ಮಾಡಿದ ಎಲ್ಲರನ್ನೂ ಬಂಧಿಸಿ ಅವರ ಮೇಲೆ ಕಾನೂನು ಕ್ರಮ …

Read More »

ಭದ್ರಾವತಿ: ಅಪಪ್ರಚಾರಕ್ಕೆ ಮನನೊಂದು ಮಹಿಳೆ ಆತ್ಮಹತ್ಯೆ

ಇಲ್ಲಿನ ಹೊಸ ಸಿದ್ದಾಪುರದಲ್ಲಿ ಪತಿ ಆತ್ಮಹತ್ಯೆ ಮಾಡಿಕೊಂಡ ವಾರ ಕಳೆಯುವುದರೊಳಗೆ ಅಪಪ್ರಚಾರಕ್ಕೆ ಮನನೊಂದು ಪತ್ನಿ ಸ್ವಾತಿ ಜೆ. (36) ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಇವರ ಪತಿ ಜಗದೀಶ್ ಫೆ.14ರಂದು ಜೀವನದಲ್ಲಿ ಜಿಗುಪ್ಸೆ ಹೊಂದಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಸ್ವಾತಿ ತನ್ನ ತಾಯಿಗೆ ಮೊಬೈಲ್ ಫೋನಿನಲ್ಲಿ ಸಂದೇಶ ಕಳಿಸಿದ್ದು, ತನ್ನ ಪತಿಯ ಮರಣದ ನಂತರ ಮೋಹನ್ ಎಂಬ ಹೆಸರಿನ ಪೊಲೀಸ್ …

Read More »

ಗುಪ್ತಚರ ವರದಿ ಬೆನ್ನಲ್ಲೇ ಪಂಜಾಬ್‌ ಮತ್ತು ಕಾಶ್ಮೀರದಲ್ಲಿ ಎರಡು ಐಇಡಿ ಪತ್ತೆ

ರಾಷ್ಟ್ರ ರಾಜಧಾನಿ ಹೊಸದಿಲ್ಲಿಯಲ್ಲಿ ಪಾಕಿಸ್ತಾನ ಮೂಲದ ಲಷ್ಕರ್-ಎ-ತೈಬಾ (ಎಲ್‌ಇಟಿ) ಭಯೋತ್ಪಾದಕ ದಾಳಿ ಮಾಡುವ ಬಗ್ಗೆ ಯೋಜನೆ ರೂಪಿಸಿದೆ ಎಂಬ ಗುಪ್ತಚರ ವರದಿ ಬೆನ್ನಲ್ಲೇ ಭದ್ರತಾ ಸಂಸ್ಥೆಗಳು ಹೈ ಅಲರ್ಟ್ ಘೋಷಿಸಿದ್ದು, ಪಂಜಾಬ್ ಮತ್ತು ಕಾಶ್ಮೀರದಲ್ಲಿ ಎರಡು ಐಇಡಿಗಳು ಪತ್ತೆಯಾಗಿವೆ. ಐಇಡಿ ಪತ್ತೆಯಾದ ಘಟನೆಯನ್ನು ಭಯೋತ್ಪಾದಕ ದಾಳಿಯ ಎಚ್ಚರಿಕೆಗೆ ಅಧಿಕಾರಿಗಳು ಸಂಬಂಧಿಸದಿದ್ದರೂ, ಘಟನೆಗಳ ಸಮಯವು ಕಳವಳವನ್ನುಂಟು ಮಾಡಿದೆ. ಪಂಜಾಬ್‌ನಲ್ಲಿ, ಶುಕ್ರವಾರ ಅಮೃತಸರದ ರಯಾ ಪೊಲೀಸ್ ಠಾಣೆ ಬಳಿ ಅನುಮಾನಾಸ್ಪದ ಚೀಲದಲ್ಲಿ ಐಇಡಿ …

Read More »

ಚಾಕೊಲೇಟ್ ಆಸೆ ತೋರಿಸಿ ಅಪ್ರಾಪ್ತೆಯರ ಮೇಲೆ ಲೈಂಗಿಕ ಕಿರುಕುಳ; ಕಾಮುಕ ವೃದ್ಧನ ಬಂಧನ!

ಬೆಂಗಳೂರು: ಆನೇಕಲ್‌ನಲ್ಲಿ ಚಾಕೊಲೇಟ್ ಆಸೆ ತೋರಿಸಿ ಮೂವರು ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ 64 ವರ್ಷದ ವೃದ್ಧನನ್ನು ಪೊಲೀಸರು ಬಂಧಿಸಿದ್ದಾರೆ. ಬಾಲಕಿಯರ ಪೋಷಕರು ಪ್ರತಿದಿನ ಬೆಳಗ್ಗೆ ಕೆಲಸಕ್ಕೆ ಹೋಗುವ ಸಂದರ್ಭದಲ್ಲಿ ಮಕ್ಕಳನ್ನು ಶಾಲೆಯ ಬಳಿ ಬಿಟ್ಟು ಹೋಗುತ್ತಿದ್ದರು. ಶಾಲೆ ಆರಂಭವಾಗಲು ಇನ್ನು ಸಮಯವಿದೆ ಎಂಬುದನ್ನು ಗಮನಿಸಿದ ವೃದ್ಧ, ಒಂಟಿಯಾಗಿದ್ದ ಬಾಲಕಿಯರನ್ನು ಚಾಕೊಲೇಟ್ ನೀಡುವುದಾಗಿ ನಂಬಿಸಿ ತನ್ನ ವಿಕೃತ ಚಟಕ್ಕೆ ಬಳಸಿಕೊಳ್ಳುತ್ತಿದ್ದ ಎಂದು ತಿಳಿದುಬಂದಿದೆ. ಎರಡನೇ ತರಗತಿಯ …

Read More »

ದಲಿತ ದಂಪತಿಗೆ ದೇವಾಲಯ ಪ್ರವೇಶಕ್ಕೆ ತಡೆ; ವ್ಯಕ್ತಿಯ ಬಂಧನ

ತುಮಕೂರು : ಪೂಜೆ ಮಾಡಿಸಲು ಗ್ರಾಮದ ಗುಡಿಗೆ ಹೋದ ಸಂದರ್ಭದಲ್ಲಿ ವ್ಯಕ್ತಿಯೊಬ್ಬ ಮೈಮೇಲೆ ದೇವರು ಬಂದಂತೆ ನಟಿಸಿ, ದಲಿತ ಸಮುದಾಯಕ್ಕೆ ಸೇರಿದ ನವ ದಂಪತಿಗಳನ್ನು ಗುಡಿಯಿಂದ ಹೊರಗೆ ಕಳುಹಿಸಿರುವ ಘಟನೆ ತುರುವೇಕೆರೆ ತಾಲ್ಲೂಕಿನ ಗೋಣಿ ತುಮಕೂರು ಗ್ರಾಮದಲ್ಲಿ ನಡೆದಿದೆ. ಗ್ರಾಮದ ಕೆಪಿಟಿಸಿಎಲ್ ನೌಕರ ಜಗದೀಶ್ ಎಂಬವರು ಇತ್ತೀಚೆಗೆ ವಿವಾಹವಾಗಿದ್ದ ತನ್ನ ತಂಗಿ ಹಾಗೂ ಆಕೆಯ ಪತಿಯನ್ನು ಗ್ರಾಮದ ಆದಿಶಕ್ತಿ ಅರಸಮ್ಮ ದೇವಾಲಯಕ್ಕೆ ಪೂಜೆ ಸಲ್ಲಿಸಲು ಕರೆದುಕೊಂಡು ಹೋಗಿದ್ದರು. ಈ ವೇಳೆ …

Read More »

ಅಂತಾರಾಜ್ಯ ಮೊಬೈಲ್ ಕಳ್ಳರ ಬಂಧನ

ಕೊರಟಗೆರೆ: ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಜನರನ್ನು ಯಾಮಾರಿಸಿ ಮೊಬೈಲ್ ಕದಿಯುತ್ತಿದ್ದ ಅಂತಾರಾಜ್ಯ ಖದೀಮರನ್ನು ಕೊರಟಗೆರೆ ಪೊಲೀಸರು ಬಂಧಿಸಿದ್ದಾರೆ. ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ವೈ.ಎಸ್.ನಗರದ ಶಿವಶಂಕರ(19), ತಿರುಪತಿ ಜಿಲ್ಲೆ ಗುಂಡಕಲ್ಲು ಪಟ್ಟಣದ ಪರಶುರಾಮ(22), ಮದನಪಲ್ಲಿ ತಾಲೂಕು ರಾಮರಾವ್ ಕಾಲನಿಯ ರಾಮ(19) ಹಾಗೂ ಗೋಕಾಕ್ ತಾಲೂಕು ಘಟಪ್ರಭ ಗ್ರಾಮದ ಪವನ್(20) ಬಂಧಿತರು 6ರಂದು ಕೊರಟಗೆರೆ ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ಅಶೋಕ್ ಎಂಬುವವರ ಜೇಬಿನಿಂದ 25 ಸಾವಿರ ರೂ.ಬೆಲೆಬಾಳುವ ಮೊಬೈಲ್ ಕಳ್ಳತನದ …

Read More »

ಲೋಕಾಯುಕ್ತ ಬಲೆಗೆ ಬಿದ್ದ ಬಿಜೆಪಿ ಶಾಸಕ ಚಂದ್ರು ಲಮಾಣಿ

ಗದಗ: ಶಿರಹಟ್ಟಿ ಬಿಜೆಪಿ ಶಾಸಕ ಡಾ.ಚಂದ್ರು ಲಮಾಣಿ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಗದಗದಲ್ಲಿ ನಡೆದಿದೆ. ಗದಗ ಜಿಲ್ಲೆಯ ಲಕ್ಷ್ಮೀಶ್ವರ ಪಟ್ಟಣದಲ್ಲಿರುವ ಬಾಲಾಜಿ ಆಸ್ಪತ್ರೆಯ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ ಗುತ್ತಿಗೆದಾರರನಿಂದ 5 ಲಕ್ಷ ರೂಪಾಯಿ ಕಮಿಷನ್ ಹಣ ಪಡೆಯುತ್ತಿದ್ದಾಗ ಬಿಜೆಪಿ ಶಾಸಕ ಚಂದ್ರು ಲಮಾಣಿ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಬಾಲಾಜಿ ಆಸ್ಪತ್ರೆ ಚಂದ್ರು ಲಮಾಣಿ ಅವರ ಒಡೆತನ …

Read More »

ರಸ್ತೆ ಪಕ್ಕದ ಜೋಳದ ಜಮೀನಿನಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ

ಬೆಳಗಾವಿ: ರಾಜ್ಯದಲ್ಲಿ ಸಾಲು ಸಾಲು ಅಪರಾಧ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಸಂಗೊಳ್ಳಿಗೆ ಹೋಗುವ ಮಾರ್ಗದಲ್ಲಿ ರಸ್ತೆ ಬದಿಯ ಜೋಳದ ಜಮೀನಿನಲ್ಲಿ ವ್ಯಕ್ತಿಯ ಅಪರಿಚಿತ ಶವ ಪತ್ತೆಯಾಗಿದೆ. ಕಿತ್ತೂರು ಪಟ್ಟಣದಿಂದ ಸಂಗೊಳ್ಳಿಗೆ ಹೋಗುವ ಮಾರ್ಗ ಮಧ್ಯೆ ಈ ಘಟನೆ ನಡೆದಿದೆ. ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದ್ದು, ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಮೃತ ವ್ಯಕ್ತಿ 45 ವರ್ಷದ ವ್ಯಕ್ತಿ ಎಂದು ಗುರುತಿಸಲಾಗಿದೆ. ಐದಾರು ದಿನಗಳ ಹಿಂದೆಯೆ ವ್ಯಕ್ತಿಯನ್ನು ಕೊಲೆಗೈದು ಗೋವಿನ …

Read More »