Breaking News

BigTv News

ವಿದ್ಯುತ್‌ ಸ್ಪರ್ಶಿಸಿ ಕಬ್ಬಿನ ಲಾರಿ ಭಸ್ಮ

ಮಂಡ್ಯ: ಲಾರಿಯಲ್ಲಿ ಕಬ್ಬಿನ ತರಗು ತುಂಬಿಕೊಂಡು ಬರುತ್ತಿದ್ದಾಗ ವಿದ್ಯುತ್‌ ತಂತಿ ಸ್ಪರ್ಶಿಸಿ, ಸುಟ್ಟು ಹೋಗಿರುವ ಘಟನೆ ತಾಲ್ಲೂಕಿನ ದೊಡ್ಡಬಾಣಸವಾಡಿ ಗ್ರಾಮದ ಬಳಿ ಶುಕ್ರವಾರ ನಡೆದಿದೆ. ಸದ್ಯಕ್ಕೆ ಲಾರಿ ಚಾಲಕ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಲಾರಿಯು ಕೆರಗೋಡು ಮುಖ್ಯ ರಸ್ತೆಯಲ್ಲಿ ಮಂಡ್ಯ ಕಡೆಗೆ ಬರುತ್ತಿದ್ದಾಗ ರಸ್ತೆ ಬದಿಯಲ್ಲಿದ್ದ ವಿದ್ಯುತ್‌ ತಂತಿ ಸ್ಪರ್ಶವಾಗಿದೆ. ಇದರ ಪರಿಣಾಮ ಲಾರಿ ಹಾಗೂ ಕಬ್ಬಿನ ತರಗು ಸಂಪೂರ್ಣವಾಗಿ ಸುಟ್ಟುಹೋಗಿದೆ. ಬೆಂಕಿಯ ಕೆನ್ನಾಲಿಗೆ ಹೆಚ್ಚಾಗುವಷ್ಟರಲ್ಲಿ ಅಗ್ನಿ ಶಾಮಕ ಸಿಬ್ಬಂದಿ …

Read More »

ಮುಂಬೈ ಮೆಟ್ರೊ: ಗರ್ಡರ್‌ನ ಸ್ಲ್ಯಾಬ್‌ ಬಿದ್ದು ವ್ಯಕ್ತಿ ಸಾವು

ಇಲ್ಲಿನ ಮುಲುಂಡ್‌ ಪ್ರದೇಶದಲ್ಲಿ ನಿರ್ಮಾಣ ಹಂತದಲ್ಲಿರುವ ಮೆಟ್ರೊ ರೈಲು ಮಾರ್ಗದ 4ರ ಗರ್ಡರ್‌ನ ಸ್ಲ್ಯಾಬ್‌ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, ಮೂವರು ಗಾಯಗೊಂಡಿದ್ದಾರೆ. ರಾಮಧಾನ್‌ ಯಾದವ್‌ ಮೃತರು. ರಾಜ್‌ಕುಮಾರ್‌ ಇಂದ್ರಜಿತ್‌ ಯಾದವ್‌ (45), ಮಹೇಂದ್ರ ಪ್ರತಾಪ್‌ ಯಾದವ್‌ (52) ಹಾಗೂ ದೀಪಾ ರುಹಿಯಾ (40) ಗಾಯಗೊಂಡವರು. ‌ರಾಜ್‌ಕುಮಾರ್‌ ಅವರ ಸ್ಥಿತಿ ಗಂಭೀರವಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿದೆ. ಮಹೇಂದ್ರ ಹಾಗೂ ರುಹಿಯಾ ಅಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಶನಿವಾರ ಮಧ್ಯಾಹ್ನ …

Read More »

ಶಿವಮೊಗ್ಗದಲ್ಲಿ ಭೀಕರ ಮರ್ಡರ್ : ಅಂಗನವಾಡಿ ಸಹಾಯಕಿಯ ಬರ್ಬರ ಹತ್ಯೆ!

ಶಿರಾಳಕೊಪ್ಪ ಬಳಿ ಬೆಳಗಿಯಲ್ಲಿ ಅಂಗನವಾಡಿ ಸಹಾಯಕಿಯ ಭೀಕರವಾಗಿ ಕೊಲೆ ಮಾಡಲಾಗಿದೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪ ಗ್ರಾಮದಲ್ಲಿ ಈ ಒಂದು ಬರ್ಬರ ಕೊಲೆ ನಡೆದಿದೆ. ನಿನ್ನೆ ರಾತ್ರಿ ಪ್ರೇಮ (52) ಕೊಲೆಗೈದು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಕೊಲೆಯಾದ ಪ್ರೇಮಾ ನಾಲ್ವರು ಮಕ್ಕಳ ಜೊತೆಗೆ ವಾಸವಿದ್ದರು. ಮೂವರು ಹೆಣ್ಣು ಮಕ್ಕಳ ಹಾಗೂ ಓರ್ವ ಮಗನ ಜೊತೆಗೆ ಪ್ರೇಮ ವಾಸವಿದ್ದರು. ಘಟನೆ ಸಂಭಂದ ಶಿರಾಳಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »

ನಗರಕ್ಕೆ ಕಾಲಿಟ್ಟಿದೆ ಲೇಡಿಸ್ ರಾಬರಿ ಗ್ಯಾಂಗ್‌ – ಕಳ್ಳಿಯರ ಟೀಂ ವರ್ಕ್‌ ಸಿಸಿಟಿವಿಯಲ್ಲಿ ಸೆರೆ!

ಬೆಂಗಳೂರು: ನಗರದಲ್ಲಿ ಮಹಿಳೆಯರ ದರೋಡೆ ಗ್ಯಾಂಗ್ ಸಕ್ರಿಯವಾಗಿರುವ ಘಟನೆ ಬೆಳಕಿಗೆ ಬಂದಿದೆ. ಒಟ್ಟಾಗಿ ಗುಂಪಾಗಿ ಬರುವ ಈ ಮಹಿಳೆಯರು ನಕಲಿ ಕಾರಣ ಹೇಳಿಕೊಂಡು ಅಪಾರ್ಟ್‌ಮೆಂಟ್‌ಗಳಿಗೆ ನುಗ್ಗಿ ಕಳ್ಳತನ ಮಾಡಿ ಪರಾರಿಯಾಗುತ್ತಿರುವುದು ಆತಂಕ ಹುಟ್ಟಿಸಿದೆ. ಯಶವಂತಪುರದ ಗೋಲ್ಡನ್ ಅಪಾರ್ಟ್‌ಮೆಂಟ್‌ನಲ್ಲಿ ನಡೆದ ಈ ಘಟನೆಯಲ್ಲಿ, ಆರು ಮಹಿಳೆಯರು ಅಪಾರ್ಟ್‌ಮೆಂಟ್‌ಗೆ ಪ್ರವೇಶಿಸಲು ಪ್ರಯತ್ನಿಸಿದ್ದಾರೆ. ಅಪಾರ್ಟ್‌ಮೆಂಟ್ ಸೆಕ್ಯುರಿಟಿ ಅವರನ್ನು ಒಳಗೆ ಬಿಡಲು ನಿರಾಕರಿಸಿದಾಗ, ನಾಲ್ವರು ಮಹಿಳೆಯರು ಸೆಕ್ಯುರಿಟಿಯ ಜೊತೆ ಮಾತನಾಡುತ್ತಾ ಗಮನ ಬೇರೆಡೆ ಸೆಳೆದಿದ್ದಾರೆ. ಅದೇ …

Read More »

ಶ್ರೀಶೈಲಕ್ಕೆ ತೆರಳುತ್ತಿದ್ದಾಗ ಭೀಕರ ಅಪಘಾತ: ಕರ್ನಾಟಕ ಮೂಲದ ಮೂವರು ದುರ್ಮರಣ

ಕರ್ನೂಲ್: ಮತ್ತೊಂದು ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಶ್ರೀಶೈಲಕ್ಕೆ ತೆರಳುತ್ತಿದ್ದ ಮೂವರು ಭಕ್ತರು ಸಾವನ್ನಪ್ಪಿರುವ ಘಟನೆ ಆಂಧ್ರಪ್ರದೇಶದ ನಾಗರ್ ಕರ್ನೂಲು ಜಿಲ್ಲೆಯಲ್ಲಿ ಸಂಭವಿಸಿದೆ. ಇಲ್ಲಿನ ಉರ್ಕೊಂಡ ಮಂಡಲ್ ಪ್ರದೇಶದ ತಿಮ್ಮಣ್ಣಪಲ್ಲಿ ಬಳಿ ವ್ಯಾನ್ ಪಲ್ಟಿಯಾಗಿ ಬಿದ್ದು, ಸ್ಥಳದಲ್ಲೇ ಮೂವರು ಸಾವನ್ನಪ್ಪಿದ್ದಾರೆ. ಮೃತರು ಕರ್ನಾಟಕ ಮೂಲದವರಾಗಿದ್ದು, ಕರ್ನಾಟಕದಿಂದ ಶ್ರೀಶೈಲಕ್ಕೆ ವ್ಯಾನ್ ನಲ್ಲಿ ತೆರಳುತ್ತಿದ್ದಾಗ ಈ ದುರಂತ ಸಂಭವಿಸಿದೆ. ಮೃತರಲ್ಲಿ ಇಬ್ಬರು ಮಹಿಳೆಯರು ಸೇರಿದ್ದಾರೆ. ಮೂವರು ಸಾವನ್ನಪ್ಪಿದ್ದು, ವ್ಯಾನ್ ನಲ್ಲಿದ್ದ ಹಲವರು ಗಾಯಗೊಂಡಿದ್ದಾರೆ. …

Read More »

ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಕೊರಿಯನ್ ಗೇಮ್ ನಿಂದ ಸೂಸೈಡ್

ಧಾರವಾಡದಲ್ಲಿ 20 ವರ್ಷದ ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಕೊರಿಯನ್ ಗೇಮ್ ಅಡಿಕ್ಷನ್ ಗೆ ಯುವಕ ಬಲಿಯಾಗಿದ್ದಾನೆ ಎಂದು ತನಿಖೆ ವೇಳೆ ಬಯಲಾಗಿದೆ,ಧಾರವಡದ ಮಂಗಳಕಟ್ಟಿ ಪ್ಲಾಟ್ ನಲ್ಲಿ 20 ವರ್ಷದ ಯುವಕ ಆತ್ಮಹತ್ಯೆಗೆ ಶರಣಾಗಿದ್ದ. ಸಾವಿಗೂ ಮುನ್ನ ನನ್ನ ಸಾಅವಿಗೆ ನಾನೇ ಕಾರಣ ಎಂದು ಡೆತ್ ನೋಒಟ್ ಕೂಡ ಬರೆದಿಟ್ಟಿದ್ದ. ವಿಕಾಸ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂದ ವಿದ್ಯಾರ್ಥಿ. ಸಾವಿನ ಬಳಿಕ ತನಿಖೆ ಆರಂಭಿಸಿದ ಪೊಲೀಸರು ಆತನ …

Read More »

ಯಾದಗಿರಿ | ಭೀಕರ ರಸ್ತೆ ಅಪಘಾತ: ಮೂವರು ಸ್ಥಳದಲ್ಲೇ ಮೃತ್ಯು

ದೇವರ ದರ್ಶನಕ್ಕೆ ತೆರಳುತ್ತಿದ್ದ ವೇಳೆ ಕ್ರೂಸರ್ ವಾಹನ ರಸ್ತೆ ಬದಿಯ ತಡೆಗೋಡೆಗೆ ಗುದ್ದಿದ ಪರಿಣಾಮ ಮೂವರು ಸ್ಥಳದಲ್ಲೇ ಮೃತಪಟ್ಟ ಘಟನೆ ಆಂಧ್ರಪ್ರದೇಶದ ಜಡಚರ್ಲಾ ಬಳಿಯ ರಾಜ್ಯ ಹೆದ್ದಾರಿಯಲ್ಲಿ ನಡೆದಿದೆ. ಮೃತರನ್ನು ಯಾದಗಿರಿ ಜಿಲ್ಲೆಯ ಶಾಹಪುರ ತಾಲೂಕಿನ ಗೋಗಿ ಗ್ರಾಮದ ನಿವಾಸಿಗಳಾದ ರಾಮರೆಡ್ಡಿ (52), ಅವರ ಪತ್ನಿ ಮೇಘಾ (50) ಹಾಗೂ ರಾಮರೆಡ್ಡಿಯ ಅತ್ತೆ, ವಿಜಯಪುರ ಜಿಲ್ಲೆ ಮೂಲದ ಮಹಾದೇವಪ್ಪ (65) ಎಂದು ಗುರುತಿಸಲಾಗಿದೆ. ಮೃತ ರಾಮರೆಡ್ಡಿ ಕುಟುಂಬಸ್ಥರು ಹಾಗೂ ಸಂಬಂಧಿಕರೊಂದಿಗೆ …

Read More »

ಗಾಜನೂರು; ಗಾರೆ ಕೆಲಸಗಾರನ ಕೊಲೆ, ಇಬ್ಬರ ಬಂಧನ

ಶಿವಮೊಗ್ಗ: ತಾಲ್ಲೂಕಿನ ಗಾಜನೂರಿನ ಸೊಸೈಟಿ ಬಳಿ ಗುರುವಾರ ರಾತ್ರಿ ಕುಡಿದ ಮತ್ತಿನಲ್ಲಿ ಸ್ನೇಹಿತನನ್ನು ಕೊಲೆ ಮಾಡಿದ್ದ ಇಬ್ಬರನ್ನು ತುಂಗಾ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಶಿವಮೊಗ್ಗದ ಹೊಸಮನೆ 6ನೇ ಕ್ರಾಸ್‌ನ ಬೋವಿ ಕಾಲೊನಿ ನಿವಾಸಿ, ಗಾರೆ ಕೆಲಸಗಾರ ಶ್ರೀನಿವಾಸ (36) ಎಂಬುವವರನ್ನು ಕೊಲೆ ಮಾಡಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಗಾಜನೂರಿನ ದೊಡ್ಡಕೇರಿ ಬೀದಿ ನಿವಾಸಿ ಬಟ್ಟೆ ಅಂಗಡಿ ಕೆಲಸಗಾರ ಕೃಷ್ಣಮೂರ್ತಿ (44), ಹಾಗೂ ಗಾರೆ ಕೆಲಸಗಾರ ಮಾಲತೇಶ (21) ಎಂಬುವವರನ್ನು ಬಂಧಿಸಲಾಗಿದೆ. …

Read More »

ಬೆಳ್ತಂಗಡಿಯಲ್ಲಿ ಹೀಲಿಯಂ ಗ್ಯಾಸ್ ಸೋರಿಕೆಯಾಗಿ ಬೆಂಕಿ ಅವಘಡ

ಮಂಗಳೂರು: ಹೀಲಿಯಂ ಗ್ಯಾಸ್ ಸೋರಿಕೆಯಾಗಿ ಬೆಂಕಿ ಅವಘಡ ಸಂಭವಿಸಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ಹೇರಾಜೆ ಕಾಂಪ್ಲೆಕ್ಸ್ ನಲ್ಲಿ ನಡೆದಿದೆ. ಅಗ್ನಿ ಅವಘಡದಿಂದಾಗಿ ಕೆ ಎ ಎಫ್ ಕ್ರಿಯೇಟಿವ್ ಶಾಪ್ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ಪಟ್ಟು ಬೆಂಕಿ ನಂದಿಸಿದ್ದಾರೆ. ಘಟನಾಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.

Read More »

ಶಿವಮೊಗ್ಗ : ಚಿನ್ನಾಭರಣ ಕದ್ದ ಕಳ್ಳನಿಗೆ ಥಳಿಸಿ, ಗೂಡ್ಸ್ ವಾಹನದಲ್ಲಿ ಅರೆಬೆತ್ತಲೆ ಮೆರವಣಿಗೆ ಮಾಡಿದ ಗ್ರಾಮಸ್ಥರು!

ಶಿವಮೊಗ್ಗದಲ್ಲಿ ಕಳ್ಳನೊಬ್ಬ ಚಿನ್ನಾಭರಣ ನಗದು ಹಣ ಕದ್ದು ಪುರಾರಿಯಾಗುತ್ತಿದ್ದವನು ಸ್ಥಳೀಯರು ಹಿಡಿದು ಗೋಸ ಕೊಟ್ಟಿರುವ ಘಟನೆ ಸಾಗರದ ಕಾಣಲಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಹೋಂಕೇರಿ ಎಂಬಲ್ಲಿ ಈ ಒಂದು ಘಟನೆ ನಡೆದಿದೆ. ಚಿನ್ನಾಭರಣ ಕದ್ದು ಪರಾರಿ ಆಗುತ್ತಿದ್ದ ಕಳ್ಳನನ್ನು ಗ್ರಾಮಸ್ಥರು ಹಿಡಿದು ಗೂಸ ಕೊಟ್ಟಿದ್ದಾರೆ. ಅರೆಬೆತ್ತಲೆ ಆಗಿ ಮೆರವಣಿಗೆ ಮಾಡಿಕೊಂಡು ತಂದಿದ್ದಾರೆ. ಸಾಗರದ ಕನಲೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಹೊಂಕೇರಿ ಎಂಬಲ್ಲಿ ಈ ಒಂದು ಘಟನೆ ನಡೆದಿದ್ದು ರೈತ ಕಬ್ಬಳ್ಳಿ …

Read More »