ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಅಪಘಾತಗಳ ಸಂಖ್ಯೆ ಮತ್ತೆ ಹೆಚ್ಚುತ್ತಿದೆ. ಟಿಪ್ಪರ್ ಲಾರಿ ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ. ಯಲಹಂಕ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಟಿಪ್ಪರ್ ಬೈಕ್ ಗೆ ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ ಸವಾರನ ದೇಹ ಛಿದ್ರ ಛಿದ್ರಗೊಂಡಿದೆ. ಸ್ಥಳದಲ್ಲೇ ವ್ಯಕ್ತಿ ಸಾವನ್ನಪ್ಪಿದ್ದಾರೆ. ಮೃತ ಬೈಕ್ ಸವಾರ ಹೊರ ರಾಜ್ಯದವನೆಂದು ತಿಳಿದುಬಂದಿದೆ. ಮೃತನ …
Read More »ಬೆಂಗಳೂರಲ್ಲಿ 4 ಲಕ್ಷ ಲಂಚ ಸ್ವೀಕರಿಸುವಾಗಲೇ ಇನ್ಸ್ ಪೆಕ್ಟರ್ ಲೋಕಾಯುಕ್ತ ಬಲೆಗೆ
ಬೆಂಗಳೂರಿನ ಕೆ.ಪಿ ಅಗ್ರಹಾರ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಗೋವಿಂದರಾಜು 4 ಲಕ್ಷ ಲಂಚ ಸ್ವೀಕರಿಸುತ್ತಿದ್ದಾಗಲೇ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಚೀಟಿ ವ್ಯವಹಾರ ಕೇಸ್ ಸಂಬಂಧ ಲಂಚ ಪಡೆಯುವಾಗ ಅವರನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬೆಂಗಳೂರಿನ ಕೆ.ಪಿ ಅಗ್ರಹಾರ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಗೋವಿಂದರಾಜು ವ್ಯಕ್ತಿಯೊಬ್ಬರನ್ನು ಚೀಟಿ ವ್ಯವಹಾರದ ಪ್ರಕರಣದಲ್ಲಿ ಸೇರಿಸುವುದಾಗಿ ಬೆದರಿಸಿ 4 ಲಕ್ಷಕ್ಕೆ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಇಂದು ಹಣ ಪಡೆಯುತ್ತಿದ್ದಂತ ಸಂದರ್ಭದಲ್ಲಿ ಲೋಕಾಯುಕ್ತ …
Read More »ಹೆದ್ದಾರಿ ಭೀಕರ ರಸ್ತೆ ಅಪಘಾತ – ಇಬ್ಬರು ಸ್ಥಳದಲ್ಲೇ ಸಾವು!
ಗೋವಾ-ಬೆಳಗಾವಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ರಾಮನಗರ ಸಮೀಪದ ಅಸ್ತೋಲಿಯಲ್ಲಿ ನಡೆದಿದೆ. ರೆನಾಲ್ಟ್ ಕ್ವಿಡ್ ಕಾರಿನಲ್ಲಿದ್ದ ಚಾಲಕ ರುದ್ರಯ್ಯ ಶಿವನವರ (77) ಹಾಗೂ ರೇಣುಕಾ ಹಿರೇಮಠ (60) ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಪಘಾತದಲ್ಲಿ ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ರಾಮನಗರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗೋವಾದಿಂದ ಹುಬ್ಬಳ್ಳಿಯತ್ತ ತೆರಳುತ್ತಿದ್ದ ಇನೋವಾ ಕಾರು ಹಾಗೂ …
Read More »ಬಳ್ಳಾರಿ: ರೈಲಿನಲ್ಲಿ 8.4 ಕೆ.ಜಿ ಗಾಂಜಾ ಪತ್ತೆ
ಬಳ್ಳಾರಿ ಕೇಂದ್ರ ರೈಲು ನಿಲ್ದಾಣದ ಮೂಲಕ ತೆರಳುತ್ತಿದ್ದ ವಾಸ್ಕೊ-ಡಿ-ಗಾಮ – ಅಮರಾವತಿ ಎಕ್ಸ್ಪ್ರೆಸ್ ರೈಲಿನಲ್ಲಿ ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ₹4.20 ಲಕ್ಷ ಮೌಲ್ಯದ 8.4 ಕೆ.ಜಿ ಗಾಂಜಾವನ್ನು ರೈಲ್ವೆ ಪೊಲೀಸರು ಸೋಮವಾರ ವಶಪಡಿಸಿಕೊಂಡಿದ್ದಾರೆ. ಅಮರಾವತಿ ಎಕ್ಸ್ಪ್ರೆಸ್ ರೈಲಿನಲ್ಲಿ ಗಾಂಜಾ ಸಾಗಣೆ ಮಾಡುತ್ತಿರುವ ಬಗ್ಗೆ ಗಣರಾಜ್ಯೋತ್ಸವದ ಹಿಂದಿನ ದಿನ ರೈಲ್ವೆ ಪೊಲೀಸರಿಗೆ ಖಚಿತ ಮಾಹಿತಿ ಸಿಕ್ಕಿತ್ತು. ಈ ಹಿನ್ನೆಲೆಯಲ್ಲಿ ರೈಲಿನಲ್ಲಿ ಪರಿಶೀಲನೆ ನಡೆಸುವಂತೆ ರೈಲ್ವೆ ಪೊಲೀಸ್ ವರಿಷ್ಠಾಧಿಕಾರಿ ಸಾರಾ ಫಾತೀಮಾ ಅಧಿಕಾರಿಗಳಿಗೆ …
Read More »ಪತಿ, ಸಹೋದರ ಮಾವ ಆತ್ಮಹತ್ಯೆ: ಮದ್ವೆಯಾಗಿ 45 ದಿನಕ್ಕೆ ಬೇರೊಬ್ಬನೊಂದಿಗೆ ಓಡಿಹೋಗಿದ್ದ ಮಹಿಳೆ ಅರೆಸ್ಟ್
ದಾವಣಗೆರೆ: ಪತ್ನಿ ಬೇರೊಬ್ಬನ ಜೊತೆ ಪರಾರಿ ಹಿನ್ನೆಲೆ ಪತಿ ಮತ್ತು ಸಹೋದರ ಮಾವ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪ್ರೇಮಿ ಶಿವಕುಮಾರ ಹಾಗೂ ಸರಸ್ವತಿ ವಿರುದ್ಧ ಎಫ್ಐಆರ್ ದಾಖಲಾಗಿದೆ. ಆರೋಪಿ ಪತ್ನಿ ಸರಸ್ವತಿಯನ್ನು ಪೊಲೀಸರು ಬಂಧಿಸಿದ್ದಾರೆ. ಶಿವಕುಮಾರಗಾಗಿ ಶೋಧ ನಡೆದಿದೆ. ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಎಸ್ಪಿ ಉಮಾ ಪ್ರಶಾಂತ್, ಪ್ರೀತಿಸಿದ ಯುವಕನೊಂದಿಗೆ ಓಡಿ ಹೋಗಿದ್ದ ಸರಸ್ವತಿ ಮದುವೆಗೂ ಮೊದಲೇ ಆರೋಪಿ ಶಿವಕುಮಾರನನ್ನ ಪ್ರೀತಿಸುತ್ತಿದ್ದಳು. ಜನವರಿ 23ರಂದು ಗುಮ್ಮನೂರ ಗ್ರಾಮದಿಂದ …
Read More »ಡಿಜಿಪಿ ರಾಮಚಂದ್ರರಾವ್ ವಿರುದ್ಧ ಆತುರಾತುರ ಕ್ರಮ: ದಸಂಸ ಕಿಡಿ
ಬೆಂಗಳೂರು: ಡಿಜಿಪಿ ರಾಮಚಂದ್ರರಾವ್ ವಿಚಾರದಲ್ಲಿ ಸರ್ಕಾ ರ ಆತುರದ ಕ್ರಮ ಕೈಗೊಂಡಿದ್ದು, ಈ ಹಿನ್ನೆಲೆಯಲ್ಲಿ ಪುನಃ ಅವರನ್ನು ಹುದ್ದೆಗೆ ತೆಗೆದುಕೊಳ್ಳಬೇಕೆಂದು ಕರ್ನಾಟಕ ರಾಜ್ಯ ದಲಿತ ಸಂಘಟನೆಗಳ ಒಕ್ಕೂಟ ಸರ್ಕಾರವನ್ನು ಒತ್ತಾಯಿಸಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾ ಡಿದ ಒಕ್ಕೂಟದ ಮುಖಂಡ ರಾದ ಆರ್.ಕಿರಣ್ ಕುಮಾರ್, ವಿ.ವಿಜಯನ್ ಸೇರಿದಂತೆ ಮತ್ತಿತರರು ಸರ್ಕಾರದ ನಿರ್ಧಾರ ನೋವುಂಟು ಮಾಡಿದೆ. ಜಾಲತಾಣದಲ್ಲಿ ಹರಿಬಿಡಲಾಗಿರುವ ವಿಡಿಯೋಗಳನ್ನು ಸುಳ್ಳು-ನಿಜವೋ ಎಂದು ಪರಿಶೀಲನೆ ನಡೆಸದೆ, ವಿಧಿ ವಿಜ್ಞಾನ ಪರೀಕ್ಷೆಗೆ ಕಳುಹಿಸದೇ ಸರ್ಕಾರ ಕ್ರಮ ಜರುಗಿಸಿರುವುದು ಸರಿಯಲ್ಲ. ನಕಲಿ …
Read More »ಅಕ್ರಮ ಗೋಮಾಂಸ ಮಾರಾಟ: ಮೂವರು ಆರೋಪಿಗಳ ಬಂಧನ
ಶಿರಹಟ್ಟಿ: ಸ್ಥಳೀಯ ಮಖಾನ ಗಲ್ಲಿಯ ಮೂವರು ನಿವಾಸಿಗಳು ಕಸಾಯಿಖಾನೆಯಿಂದ ಯಾವುದೇ ಪರವಾನಗಿ ಇಲ್ಲದೆ ಅಕ್ರಮವಾಗಿ ಲಕ್ಷಾಂತರ ರೂಪಾಯಿ ಬೆಲೆಬಾಳುವ ದನ- ಕರುಗಳನ್ನು ಕಡಿದು ಮಾಂಸವನ್ನು ಮಾರಾಟ ಮಾಡುತ್ತಿರುವಾಗ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ಗುಲಾಮ ಹುಸೇನ ದಸ್ತಗೀರಸಾಬ ಆದ್ರಳ್ಳಿ, ಅಮಜಾದ ದಸ್ತಗೀರಸಾಬ ಆದ್ರಳ್ಳಿ, ಅಲ್ಲಾಭಕ್ಷ ದಸ್ತಗೀರಸಾಬ ಆದ್ರಳ್ಳಿ ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳು ಸ್ವಂತ ಲಾಭಕೋಸ್ಕರ ಅಕ್ರಮವಾಗಿ ಗೋಮಾಂಸ ಮಾರಾಟ ದಂಧೆಯಲ್ಲಿ ತೊಡಗಿದ್ದರು. ಆರೋಪಿಗಳಿಂದ 3 ಆಕಳು, 1 ಆಕಳು ಕರ, 1 ಹೋರಿಕರ, …
Read More »ಡ್ರಗ್ಸ್ ಶಂಕೆ: ಮೈಸೂರು ಕೆಮಿಕಲ್ ಫ್ಯಾಕ್ಟ್ರಿ ಮೇಲೆ ದಿಲ್ಲಿ ಪೊಲೀಸ್ ದಾಳಿ
ಮೈಸೂರು: ಕೆಮಿಕಲ್ ಫ್ಯಾಕ್ಟರಿಯಲ್ಲಿ ಎಂಡಿಎಂಎ ಮಾದಕ ವಸ್ತು ತಯಾರಿಕೆ ಮಾಡುತ್ತಿರುವ ಶಂಕೆ ಮೇರೆಗೆ ಹೊಸದಿಲ್ಲಿ ಪೊಲೀಸರು, ಬುಧವಾರ ಬೆಳಗ್ಗೆ ಮೈಸೂರಿನ ಕೈಗಾರಿಕಾ ಪ್ರದೇಶದಲ್ಲಿರುವ ಕಾರ್ಖಾನೆ ಮೇಲೆ ದಾಳಿ ನಡೆಸಿದ್ದಾರೆಹೊಸ ದಿಲ್ಲಿಯ ನಾರ್ಕೊಟಿಕ್ ಕಂಟ್ರೋಲ್ ಬ್ಯುರೋದ (ಎಸ್ಸಿಬಿ) ಎಸ್ಐ ಸೇರಿ ಪೊಲೀಸರ ತಂಡ, ಎಂಡಿಎಂಎ ತಯಾರು ಮಾಡುತ್ತಿರುವ ಶಂಕೆಯ ಮೇರೆಗೆ ಹೆಬ್ಬಾಳ ಕೈಗಾರಿಕಾ ಪ್ರದೇಶದಲ್ಲಿರುವ ಕೆಮಿಕಲ್ ಫ್ಯಾಕ್ಟರಿಯ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದರು. ಆದರೆ, ಕಾರ್ಯಾಚರಣೆ ವೇಳೆ ಯಾವುದೇ ಬಗೆಯ …
Read More »ಶಾಲಾ ಬಸ್ ಹರಿದು 1 ವರ್ಷದ ಪುಟ್ಟ ಕಂದಮ್ಮ ಸಾವು
ಮುಂಬೈನ ಗಿರಗಾಂವ್ ಪ್ರದೇಶದಲ್ಲಿ ಶಾಲಾ ಬಸ್ವೊಂದು ಹರಿದ ಪರಿಣಾಮ ಒಂದು ವರ್ಷದ ಮಗು ಮೃತಪಟ್ಟಿದ್ದು, ಅಜ್ಜಿ ತೀವ್ರವಾಗಿ ಗಾಯಗೊಂಡಿರುವ ಹೃದಯವಿದ್ರಾವಕ ಘಟನೆ ನಡೆದಿದೆ. ಈ ಭೀಕರ ಘಟನೆಯು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಚಂದ್ರಕಲಾ ಶಿವರಾಂ ವ್ಯಾಸ್ ಎಂಬುವವರು ಅವರು ತಮ್ಮ ಮೊಮ್ಮಗಳನ್ನು ಶಾಲಾ ಬಸ್ನಿಂದ ಕರೆದೊಯ್ಯಲು ಬಸ್ ನಿಲ್ದಾಣಕ್ಕೆ ಬಂದಿದ್ದರು. ಈ ವೇಳೆ ಅವರು ತಮ್ಮ ಒಂದು ವರ್ಷದ ಮೊಮ್ಮಗ ಅವೀರ್ ವ್ಯಾಸ್ನನ್ನು ಕೈಯಲ್ಲಿ ಎತ್ತಿಕೊಂಡಿದ್ದರು. ಮೊಮ್ಮಗಳು ಬಸ್ನಿಂದ ಇಳಿದ …
Read More »ಮಹಿಳೆ ಜೊತೆ ಅನೈತಿಕ ಸಂಬಂಧ ವಿಚಾರವಾಗಿ ಗಲಾಟೆ : ಚಾಕುವಿನಿಂದ ಇರಿದು ಅಡುಗೆ ಕಾಂಟ್ರಾಕ್ಟರ್ ಹತ್ಯೆ!
ಹಾಸನ : ಅನೈತಿಕ ಸಂಬಂಧದ ವಿಚಾರಕ್ಕೆ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ. ಚಾಕುವಿನಿಂದ ಇರಿದು ಅಡುಗೆ ಕಾಂಟ್ರಾಕ್ಟರ್ ಅನ್ನು ಭೀಕರವಾಗಿ ಕೊಲೆ ಮಾಡಲಾಗಿದೆ. ಹಾಸನ ನಗರದ ಕೆಆರ್ ಪುರಂ ಬಡಾವಣೆಯಲ್ಲಿ ತಡರಾತ್ರಿ ಈ ಒಂದು ಘಟನೆ ಸಂಭವಿಸಿದೆ. ಚಾಕುವಿನಿಂದ ಇರಿದು ಅಡುಗೆ ಗುತ್ತಿಗೆದಾರ ಆನಂದ (48) ಎಂಬಾತ್ತನ್ನು ಕೊಲೆ ಮಾಡಲಾಗಿದೆ. ಐದಾರು ಬಾರಿ ಚಾಕುವಿನಿಂದ ಇರಿದು ಧರ್ಮೇಂದ್ರ ಎಂಬಾತ ಆನಂದನನ್ನು ಭೀಕರವಾಗಿ ಕೊಲೆ ಮಾಡಿದ್ದಾನೆ. ಮಹಿಳೆಯ ಜೊತೆಗೆ ಆನಂದ್ ಮತ್ತು …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





