Breaking News

BigTv News

ರಾಜ್ಯದಲ್ಲಿ ಮತ್ತೊಂದು ದುರಂತ: ನಡುರಸ್ತೆಯಲ್ಲೇ ಹೊತ್ತಿ ಉರಿದ ಖಾಸಗಿ ಸ್ಲೀಪರ್​​ ಬಸ್​​

ಶಿವಮೊಗ್ಗ: ಚಿತ್ರದುರ್ಗದ ಬಳಿ ನಡೆದ ಬಸ್​​ ದುರಂತ ಮಾಸುವ ಮುನ್ನವೇ ಮತ್ತೊಂದು ಅವಘಡ ನಡೆದಿದೆ. ಆಕಸ್ಮಿಕವಾಗಿ ಕಾಣಿಸಿಕೊಂಡಿದ್ದ ಬೆಂಕಿಯಿಂದ ಖಾಸಗಿ ಸ್ಲೀಪರ್​​ ಬಸ್ಸೊಂದು ಸಂಪೂರ್ಣವಾಗಿ ಅಗ್ನಿಗೆ ಆಹುತಿಯಾಗಿರುವ ಘಟನೆ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಸೂಡುರು ಬಳಿ ನಡೆದಿದೆನಿಟ್ಟೂರಿಂದ ಬೆಂಗಳೂರಿಗೆ ಹೊರಟಿದ್ದ ಅನ್ನಪೂರ್ಣೇಶ್ವೇರಿ ಟ್ರಾವಲ್ಸ್​​ಗೆ ಸೇರಿದ ಖಾಸಗಿ ಬಸ್​​​ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಈ ವೇಳೆ ಬಸ್​​ ನಿಲ್ಲಿಸಲು ಚಾಲಕ ಮುಂದಾದಾಗ ಮರಕ್ಕೆ ಡಿಕ್ಕಿಯಾಗಿದೆ. ಬಸ್​​ನಲ್ಲಿದ್ದ 36 ಪ್ರಯಾಣಿಕರು ಕೂಡಲೇ ಕೆಳಗಿಳಿದ …

Read More »

ನೇಣು ಬಿಗಿದುಕೊಂಡು ಮೆಡಿಕಲ್​​ ಪಿಜಿ ವಿದ್ಯಾರ್ಥಿನಿ ಆತ್ಮಹತ್ಯೆ; ಕಾರಣ ನಿಗೂಢ

ಧಾರವಾಡ: ಮೆಡಿಕಲ್​​ ಪಿಜಿ ವಿದ್ಯಾರ್ಥಿನಿಯೋರ್ವಳು ಹಾಸ್ಟೆಲ್‌ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಧಾರವಾಡದಲ್ಲಿ ನಡೆದಿದೆ. ಧಾರವಾಡ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆಯಲ್ಲಿ(ಡಿಮ್ಹಾನ್ಸ್) ಸೈಕಿಯಾಟ್ರಿಕ್ ಪಿಜಿ ವಿಭಾಗದ ಮೊದಲನೇ ವರ್ಷದ ಡಾ.ಪ್ರಜ್ಞಾ ಪಾಲೇಗರ್(24) ಮೃತ ವಿದ್ಯಾರ್ಥಿನಿಯಾಗಿದ್ದಾಳೆ. ಶಿವಮೊಗ್ಗ ಮೂಲದ ಯುವತಿ ಎರಡು ವಾರಗಳ ಹಿಂದಷ್ಟೇ ಬಂದಿದ್ದಳು. ನಿನ್ನೆ ಆಕೆಯ ತಂದೆ-ತಾಯಿ ಕೂಡ ಬಂದು ಹೋಗಿದ್ದರು ಎನ್ನಲಾಗಿದೆ. ಇನ್ನು ಡಾ. ಪ್ರಿಯಾ ಪಾಟೀಲ್ ಜೊತೆ ಪ್ರಜ್ಞಾ ಹಾಸ್ಟೆಲ್​​ ರೂಮ್​​ …

Read More »

ವಿಮಾನ ದುರಂತದಲ್ಲಿ ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್‌ ಸಾವು

ಮಹಾರಾಷ್ಟ್ರದ ಬಾರಾಮತಿ ಬಳಿ ಸಂಭವಿಸಿದ ವಿಮಾನ ದುರಂತದಲ್ಲಿ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಪವಾರ್‌ ಸೇರಿದಂತೆ ಐದು ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಅಜಿತ್ ಪವಾರ್ ಸೇರಿದಂತೆ ಪಿಎಸ್‌ಒ ಜಾಧವ್, ಓರ್ವ ಸಹಾಯಕ, ಇಬ್ಬರು ಪೈಲೈಟ್‌ಗಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ಖಚಿತಪಡಿಸಿದೆ.ಮಹಾರಾಷ್ಟ್ರದಲ್ಲಿ ನಿಗದಿಯಾಗಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆ ಹಿನ್ನೆಲೆಯಲ್ಲಿ ಪ್ರಚಾರ ಸಮಾವೇಶದಲ್ಲಿ ಪಾಲ್ಗೊಳ್ಳಲು ಅಜಿತ್ ಅವರು ಮುಂಬೈಯಿಂದ ಬಾರಾಮತಿಗೆ ಹೊರಟಿದ್ದರು ಎನ್ನಲಾಗಿದೆ. ಪ್ರಧಾನಿ ನರೇಂದ್ರ …

Read More »

ಅಪರಿಚಿತ ವಾಹನ ಡಿಕ್ಕಿ: ಸ್ಕೂಟರ್‌ ಸವಾರ ಸಾವು

ಚಿಕ್ಕಮಗಳೂರಿನಲ್ಲಿ ಗಾರೆ ಕೆಲಸ ಮುಗಿಸಿಕೊಂಡು ತಾಲ್ಲೂಕಿನ ಸಖರಾಯಪಟ್ಟಣ ಬಳಿಯಿಂದ ದೇವನೂರು ಕಡೆಗೆ ತೆರಳುತ್ತಿದ್ದ ಸ್ಕೂಟರ್‌ಗೆ ಅಪರಿಚಿತ ವಾಹನ ಡಿಕ್ಕಿಯಾಗಿ ಸ್ಕೂಟರ್‌ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಶನಿವಾರ ರಾತ್ರಿ ನಡೆದಿದೆ. ಕಾಮೇನಹಳ್ಳಿಯ ಕುಮಾರ್‌ (35) ಮೃತಪಟ್ಟವರು. ಶನಿವಾರ ರಾತ್ರಿ 8 ಗಂಟೆ ಸುಮಾರಿಗೆ ಸಖರಾಯಪಟ್ಟಣದ ಬಾಣಾವರ ರಸ್ತೆ ಬಳಿಯ ದಾಭಾ ಬಳಿ ಎದುರಿನಿಂದ ಬಂದ ಅಪರಿಚಿತ ವಾಹನ ಡಿಕ್ಕಿಯಾದ ಪರಿಣಾಮ ನಿಯಂತ್ರಣ ತಪ್ಪಿದ ಸ್ಕೂಟಿ ರಸ್ತೆ ಪಕ್ಕದ ವಿದ್ಯುತ್‌ ಕಂಬಕ್ಕೆ …

Read More »

ಜೂಜಾಟ: 6 ಜನರ ಮೇಲೆ ಪ್ರಕರಣ ದಾಖಲು

ಯಳಂದೂರು: ತಾಲ್ಲೂಕಿನ ಕೆಸ್ತೂರು ಹೊರವಲಯದ ಕುಂತೂರು ನಾಲೆ ಬಳಿ ಭಾನುವಾರ ರಾತ್ರಿ ಜೂಜಾಟದಲ್ಲಿ ತೊಡಗಿದ್ದ 6 ಜನರ ಮೇಲೆ ಪಟ್ಟಣ ಠಾಣೆಯಲ್ಲಿ ದೂರು ದಾಖಲಾಗಿದೆ.ಪಿಎಸ್‌ಐ ಆಕಾಶ್ ಅವರು ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದಾಗ ಕುಂತೂರು ಗ್ರಾಮದ ಮದೇಶ, ಮಹದೇವ, ಬಳೆಪೇಟೆ ಬಸವರಾಜು, ಕೆಸ್ತೂರು ಪ್ರಭುಸ್ವಾಮಿ, ಬಸವಪುರ ರವಿ ಜೂಜಾಟದ ಸಮಯದಲ್ಲಿ ಪೊಲೀಸರ ದಾಳಿಯಲ್ಲಿ ಸಿಕ್ಕಿಬಿದ್ದಿದ್ದಾರೆ. ಕೆಸ್ತೂರು ಪ್ರಮೋದ್ ಪರಾರಿಯಾಗಿದ್ದಾರೆ. ಆಟದ ಸ್ಥಳಕ್ಕೆ ತೆರಳಲು ಬಳಸಿದ್ದ 4 ಬೈಕ್ ಹಾಗೂ …

Read More »

ಸಿರುಗುಪ್ಪದಲ್ಲಿ ರಸ್ತೆ ಅಪಘಾತ ; ಇಬ್ಬರು ವಿದ್ಯಾರ್ಥಿಗಳು ಸ್ಥಳದಲ್ಲೇ ಸಾವು

ರಾಷ್ಟ್ರೀಯ ಹೆದ್ದಾರಿ 150ರಲ್ಲಿ ಇರುವ ಸಿರುಗುಪ್ಪ ನಗರದ ಶ್ರೀಮತಿ ದಿ. ಹೊನ್ನೂರಮ್ಮ ದಿ. ಶ್ರೀ ಎಂ. ಸಿದ್ದಪ್ಪ ಪ್ರಥಮ ದರ್ಜೆ ಕಾಲೇಜು ಬಳಿ ದ್ವಿಚಕ್ರ ವಾಹನಕ್ಕೆ ಕೆಕೆಆರ್‍ಟಿಸಿ ಬಸ್ ಮಂಗಳವಾರ ಮಧ್ಯಾಹ್ನ ಡಿಕ್ಕಿ ಹೊಡೆದ ಕಾರಣ ದ್ವಿಚಕ್ರ ವಾಹನ ಸವಾರಿ ಮಾಡುತ್ತಿದ್ದ ಇಬ್ಬರು ವಿದ್ಯಾರ್ಥಿಗಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರು ಕುರುವಳ್ಳಿ ಗ್ರಾಮದ ಗುರು ಮಹರ್ಷಿ ಕಾಲೇಜಿನ ಡಿಪ್ಲೊಮಾ ವಿದ್ಯಾರ್ಥಿಗಳಾದ ಶಿವಲಿಂಗಮ್ಮ (20) ಮತ್ತು ಅಭಿ (22). ಅಪಘಾತ ನಡೆದಾಗ ವಿದ್ಯಾರ್ಥಿಗಳು …

Read More »

ಜಗಳ ತಾಯಿ ಕೊಲೆಯಲ್ಲಿ ಅಂತ್ಯ

ಮುದಗಲ್: ಸಮೀಪದ ಜ್ಕಕೇರಮಡು ತಾಂಡಾದ ಮನೆಯೊಂದರಲ್ಲಿ ಸೋಮವಾರ ಉಂಟಾದ ಜಗಳ, ತಾಯಿ ಕೊಲೆಯಲ್ಲಿ ಅಂತ್ಯವಾಗಿದೆ. ಚಂದವ್ವ ಬೂದೆಪ್ಪ (45) ಮೃತೆ. ಕುಮಾರ್ ಬೂದೆಪ್ಪ ಕೊಲೆ ಮಾಡಿದ ಪುತ್ರ. ಸೋಮವಾರ ಸಂಜೆ ಕುಡಿದು ಮನೆಗೆ ಬಂದ ಕುಮಾರ್, ತಾಯಿ ಹಾಗೂ ತಮ್ಮ ಸಂತೋಷ್ ಜತೆ ಜಗಳ ತೆಗೆದಿದ್ದಾನೆ. ಈ ವೇಳೆ ಕುಮಾರ್ ತಳ್ಳಿದ್ದರಿಂದ ತಾಯಿ ತಲೆಗೆ ಪೆಟ್ಟಾಗಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಸದ್ಯ ಕುಮಾರ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಈ …

Read More »

ಮನೆಗೆ ನುಗ್ಗಿ ಹಣ, ಚಿನ್ನ ದೋಚುತ್ತಿದ್ದಾಗಲೇ ಕಳ್ಳರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಗ್ರಾಮಸ್ಥರು!

ಮನೆಯೊಂದರ ಒಳಗೆ ಕಳ್ಳತನಕ್ಕೆ ನುಗ್ಗಿ, ಚಿನ್ನಾಭರಣ ಕದಿಯುತ್ತಿದ್ದಂತ ಸಂದರ್ಭದಲ್ಲಿಯೇ ಕಳ್ಳರನ್ನು ರೆಡ್ ಹ್ಯಾಂಡ್ ಆಗಿ ಗ್ರಾಮಸ್ಥರು ಹಿಡಿದಿರುವಂತ ಘಟನೆ ತುರುವೇಕೆರೆಯಲ್ಲಿ ನಡೆದಿದೆ. ಹೀಗೆ ಹಿಡಿದಂತ ಕಳ್ಳರನ್ನು ಗ್ರಾಮಸ್ಥರು ಪೊಲೀಸರಿಗೆ ಒಪ್ಪಿಸಿದ್ದಾರೆ. ತುಮಕೂರು ಜಿಲ್ಲೆಯ ತುರುವೇಕೆರೆ ತಾಲ್ಲೂಕಿನ ಮಾಯಸಂದ್ರ ಗ್ರಾಮದಲ್ಲಿ ಸೋಮವಾರ ತಡರಾತ್ರಿ ಮನೆಯೊಂದಕ್ಕೆ ಆಂಧ್ರಪ್ರದೇಶದ ಚಿತ್ತೂರು ಮೂಲದ ಇಬ್ಬರು ಕಳ್ಳರು ನುಗ್ಗಿದ್ದಾರೆ. ಮನೆಯ ಒಳಗೆ ಶಬ್ದವಾಗುತ್ತಿದ್ದದ್ದು ಗಮನಿಸಿದಂತ ಗ್ರಾಮಸ್ಥರು, ಇಡೀ ಮನೆಯನ್ನೇ ಹಿಡಿಯೋದಕ್ಕೆ ಸುತ್ತುವರೆದಿದ್ದಾರೆ. ಮನೆಯ ಒಳಗೆ ಹಣ, ಒಡವೆ …

Read More »

ಶಿವಮೊಗ್ಗದಲ್ಲಿ ಸರ್ಕಾರಿ ಶಾಲೆಯಲ್ಲಿ ಮಾತ್ರೆ ಸೇವಿಸಿದ್ದ 59 ವಿದ್ಯಾರ್ಥಿಗಳು ಅಸ್ವಸ್ಥ

ಸರ್ಕಾರಿ ಶಾಲೆಯೊಂದರಲ್ಲಿ ವಿದ್ಯಾರ್ಥಿಗಳಿಗೆ ನೀಡಿದ್ದಂತ ಮಾತ್ರೆಯನ್ನು ಸೇವಿಸಿ 59 ಮಕ್ಕಳು ಅಸ್ವಸ್ಥಗೊಂಡಿರುವಂತ ಘಟನೆ ಅರಳಿಹಳ್ಳಿಯಲ್ಲಿ ನಡೆದಿದೆ. ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲ್ಲೂಕಿನ ಅರಳಿಹಳ್ಳಿಯಲ್ಲಿ ಮಧ್ಯಾಹ್ನ ಶಾಲೆಯಲ್ಲಿ ಮಕ್ಕಳಿಗೆ ಖನಿಜಾಂಶದ ಮಾತ್ರೆ ನೀಡಲಾಗಿತ್ತು. ಅನಿಮಿಯಾ ತಡೆಗಟ್ಟೋ ಸಂಬಂಧ ವಾರಕ್ಕೊಮ್ಮೆ ಖನಿಜಾಂಶದ ಮಾತ್ರೆಯನ್ನು ನೀಡಲಾಗುತ್ತಿತ್ತು. ಇಂದು ಕೂಡ ಖನಿಜಾಂಶ ಯುಕ್ತ ಮಾತ್ರೆಯನ್ನು ಶಾಲೆಯಲ್ಲಿ ಮಕ್ಕಳಿಗೆ ನೀಡಲಾಗಿತ್ತು. ಈ ಮಾತ್ರೆಯನ್ನು ಸೇವಿಸಿದ್ದಂತಿಂದ 59 ಮಕ್ಕಳು ಅಸ್ವಸ್ಥಗೊಂಡಿದ್ದಾರೆ. ಅವರನ್ನು ಸಮೀಪದ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.

Read More »

ಮುಂಬೈ: ₹55 ಕೋಟಿ ಮೌಲ್ಯದ ಡ್ರಗ್‌ ವಶಕ್ಕೆ

ಮಹಾರಾಷ್ಟ್ರದ ಸತಾರಾ ಜಿಲ್ಲೆಯಲ್ಲಿ ಮೊಬೈಲ್‌ ಮೆಫೆಡ್ರೋನ್‌ ಉತ್ಪಾದನಾ ಘಟಕವನ್ನು ಪತ್ತೆ ಮಾಡಿರುವ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ), ಐವರನ್ನು ಬಂಧಿಸಿ, ₹55 ಕೋಟಿ ಮೌಲ್ಯದ ಮಾದಕ ವಸ್ತುವನ್ನು ವಶಕ್ಕೆ ಪಡೆದಿದೆ. ಖಚಿತ ಮಾಹಿತಿ ಮೇರೆಗೆ ಡಿಆರ್‌ಐ ಅಧಿಕಾರಿಗಳು ಶುಕ್ರವಾರ ‘ಆಪರೇಷನ್‌ ಸಹ್ಯಾದ್ರಿ ಚಕ್‌ಮೇಟ್‌’ ಕಾರ್ಯಾಚರಣೆಯನ್ನು ಕೈಗೊಂಡಿದ್ದರು ಎಂದು ಅಧಿಕಾರಿಗಳು ತಿಳಿಸಿದರು.₹11.848 ಕೆ.ಜಿ ದ್ರವರೂಪದ ಡ್ರಗ್‌ ಮತ್ತು 9.326 ಕೆ.ಜಿ ಅರೆ ದ್ರವ ರೂಪದ ಡ್ರಗ್‌ ಮತ್ತು 738 ಗ್ರಾಂ ಘನ …

Read More »