Breaking News

ಮುಂಬೈ: ₹55 ಕೋಟಿ ಮೌಲ್ಯದ ಡ್ರಗ್‌ ವಶಕ್ಕೆ

ಮಹಾರಾಷ್ಟ್ರದ ಸತಾರಾ ಜಿಲ್ಲೆಯಲ್ಲಿ ಮೊಬೈಲ್‌ ಮೆಫೆಡ್ರೋನ್‌ ಉತ್ಪಾದನಾ ಘಟಕವನ್ನು ಪತ್ತೆ ಮಾಡಿರುವ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ), ಐವರನ್ನು ಬಂಧಿಸಿ, ₹55 ಕೋಟಿ ಮೌಲ್ಯದ ಮಾದಕ ವಸ್ತುವನ್ನು ವಶಕ್ಕೆ ಪಡೆದಿದೆ. ಖಚಿತ ಮಾಹಿತಿ ಮೇರೆಗೆ ಡಿಆರ್‌ಐ ಅಧಿಕಾರಿಗಳು ಶುಕ್ರವಾರ ‘ಆಪರೇಷನ್‌ ಸಹ್ಯಾದ್ರಿ ಚಕ್‌ಮೇಟ್‌’ ಕಾರ್ಯಾಚರಣೆಯನ್ನು ಕೈಗೊಂಡಿದ್ದರು ಎಂದು ಅಧಿಕಾರಿಗಳು ತಿಳಿಸಿದರು.₹11.848 ಕೆ.ಜಿ ದ್ರವರೂಪದ ಡ್ರಗ್‌ ಮತ್ತು 9.326 ಕೆ.ಜಿ ಅರೆ ದ್ರವ ರೂಪದ ಡ್ರಗ್‌ ಮತ್ತು 738 ಗ್ರಾಂ ಘನ ರೂಪದ ಮಾದಕ ವಸ್ತುವನ್ನು ಮತ್ತು 71.5 ಕೆ.ಜಿ ಕಚ್ಚಾ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದರು.

Share News

About BigTv News

Check Also

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ; ಕಾಮುಕನಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ ₹50,000 ದಂಡ ವಿಧಿಸಿದ ಮಂಗಳೂರು ಕೋರ್ಟ್!

ಮಂಗಳೂರು: ಕಡಬ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2021ರಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಜೀವ ಬೆದರಿಕೆ ಹಾಕಿದ ಪ್ರಕರಣದಲ್ಲಿ …

Leave a Reply

Your email address will not be published. Required fields are marked *