ಕೋಲಾರ : ರಾಜ್ಯದಲ್ಲಿ ಮತ್ತೊಂದು ಬೆಚ್ಚಿಬಿಳಿಸುವಂತಹ ಘಟನೆ ನಡೆದಿದ್ದು, ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿ ಗರ್ಭಿಣಿ ಮಾಡಿದ ಆರೋಪದ ಮೇಲೆ ರೈತ ಸಂಘದ ಕೋಲಾರ ಜಿಲ್ಲಾಧ್ಯಕ್ಷ ರಾಮೇಗೌಡನನ್ನು ಇದೀಗ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಕೋಲಾರ ಜಿಲ್ಲೆಯ ಬಂಗಾರಪೇಟೆ ಠಾಣೆ ಪೊಲೀಸರು ರಾಮೇಗೌಡನನು ಅರೆಸ್ಟ್ ಮಾಡಿದ್ದಾರೆ. 15 ವರ್ಷದ ಬಾಲಕಿಯನ್ನು ಬೆದರಿಸಿ ರಾಮೇಗೌಡ ಅತ್ಯಾಚಾರ ಎಸೆಗಿದ್ದಾನೆ ಎಂದು ಸಂತ್ರಸ್ತೆಯ ತಂದೆ ದೂರು ನೀಡಿದ್ದರು. ಈ ಹಿನ್ನೆಲೆ ಬಾಲಕಿಯ ತಂದೆ ನೀಡಿದ ದೂರನ್ನು …
Read More »ಮೈಸೂರಿನಲ್ಲಿ ಬೈಕ್ಗೆ ಡಿಕ್ಕಿ ಹೊಡೆದ KSRTC ಬಸ್ | ಮಹಿಳೆ ಸಾವು, ಇಬ್ಬರಿಗೆ ಗಾಯ!
ಬೈಕ್ಗೆ ಕೆಎಸ್ಆರ್ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಓರ್ವ ಮಹಿಳೆ ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿರುವ ಘಟನೆ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಯಶೋಧರಪುರ ಗೇಟ್ ಬಳಿ ನಡೆದಿದೆ. ತಾಲೂಕಿನ ನಾಗಮಂಗಲ ಗ್ರಾಮದ ನಿವಾಸಿ ಜೀವನ್ ಪತ್ನಿ ಅಶ್ವಿನಿ (36) ಮೃತ ದುರ್ದೈವಿ. ಹಿಂಬದಿ ಸವಾರರಾಗಿದ್ದ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಆಕೆಯ ಪತಿ ಹಾಗೂ ಮಗು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಜೀವನ್ ಬೈಕಿನಲ್ಲಿ ಪತ್ನಿ ಹಾಗೂ ಮಗುವಿನೊಂದಿಗೆ ಹುಣಸೂರು ಕಡೆಗೆ ಬರುತ್ತಿದ್ದ …
Read More »ನೆಲ್ಲಿಕಾರು ಬಳಿ ಕಾರು – ಟೆಂಪೋ ಢಿಕ್ಕಿ: ಮೂವರಿಗೆ ಗಾಯ
ಮೂಡುಬಿದಿರೆ: ಸೋಮವಾರ ಬೆಳಗ್ಗೆ ನೆಲ್ಲಿಕಾರು-ಕಾರ್ಕಳ ಮುಖ್ಯ ರಸ್ತೆಯಲ್ಲಿ ಹೊಸ್ಮಾರು ಕಡೆಗೆ ಸಾಗುತ್ತಿದ್ದ ಗೂಡ್ಸ್ ಟೆಂಪೋ ಮತ್ತು ಎದುರಿನಿಂದ ಬರುತ್ತಿದ್ದ ಕಾರು ಮುಖಾಮುಖಿ ಢಿಕ್ಕಿ ಹೊಡೆದು ಮೂವರು ಗಾಯಗೊಂಡಿದ್ದಾರೆ. ಟೆಂಪೋ ಚಾಲಕ ಕೃಷ್ಣರಾಜ್, ಕಾರು ಚಾಲಕ ಲಲಿತೇಶ್ ಗೌಡ ಹಾಗೂ ಬಾಲಕ ಪ್ರವೀಣ್ ಗಾಯಗೊಂಡವರು. ಕಾರು ಹಾಗೂ ಟೆಂಪೋ ಎರಡೂ ಜಖಂಗೊಂಡಿವೆ. ಗೂಡ್ಸ್ ಟೆಂಪೋದಲ್ಲಿ ಕಾರ್ಕಳ ಕಡೆಯಿಂದ ಮನೆ ಖಾಲಿ ಮಾಡಿ ಸಾಮಗ್ರಿಗಳನ್ನು ಸ್ಥಳಾಂತರಿಸಲು ತೆರಳುತ್ತಿದ್ದ ಕುಟುಂಬ ಪ್ರಯಾಣಿಸುತ್ತಿತ್ತು. ಗಾಯಾಳುಗಳನ್ನು ಉಡುಪಿಯ …
Read More »ಪಶ್ಚಿಮ ಬಂಗಾಳದಲ್ಲಿ ಅಗ್ನಿ ದುರಂತ: 7 ಮಂದಿ ಸಾವು, ಹಲವರು ನಾಪತ್ತೆ
ಕೊಲ್ಕತ್ತ: ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣದ ಜಿಲ್ಲೆಯ ಗೋದಾಮುಗಳಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಕನಿಷ್ಠ ಏಳು ಜನರು ಮೃತಪಟ್ಟಿದ್ದು, ಹಲವರು ನಾಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕೋಲ್ಕತ್ತದ ಹೊರವಲಯದಲ್ಲಿರುವ ನರೇಂದ್ರಪುರ ಪೊಲೀಸ್ ಠಾಣೆ ವ್ಯಾಪ್ತಿಯ ನಜೀರಾಬಾದ್ನಲ್ಲಿ ಸೋಮವಾರ ಅಗ್ನಿ ಅವಘಡ ಸಂಭವಿಸಿದೆ. ಏಳು ಗಂಟೆಗಳ ನಿರಂತರ ಕಾರ್ಯಾಚರಣೆ ನಂತರ ಬೆಂಕಿಯನ್ನು ನಂದಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಶೋಧ ಕಾರ್ಯಾಚರಣೆ ವೇಳೆ ಏಳು ಮಂದಿಯ ಸುಟ್ಟ ಮೃತದೇಹಗಳು ಪತ್ತೆಯಾಗಿದ್ದು, ಹಲವರು …
Read More »ನೆಲಮಂಗಲ | ರೌಡಿ ‘ಆಟೊ’ ನಾಗನ ಕೊಲೆ: ಹಣಕಾಸು ವಿಚಾರಕ್ಕೆ ಕೃತ್ಯ
ಪಾರ್ಟಿ ನಡೆಸಲು ರೌಡಿಯನ್ನು ಫಾರ್ಮ್ ಹೌಸ್ಗೆ ಕರೆಸಿಕೊಂಡು, ಕೊಲೆ ಮಾಡಿ ಆರೋಪಿಗಳು ಪರಾರಿ ಆಗಿದ್ಧಾರೆ. ನಾಗರಾಜ್ ಅಲಿಯಾಸ್ ಆಟೊ ನಾಗ (32) ಕೊಲೆ ಆದವರು. ಸಮೀಪದ ನಗರೂರಿನ ಬಾಲಾಜಿ ಫಾರ್ಮ್ ಹೌಸ್ನಲ್ಲಿ ಪಾರ್ಟಿ ಮಾಡುತ್ತಿದ್ದಾಗ ಹಣಕಾಸು ವಿಚಾರಕ್ಕೆ ನಾಗರಾಜ್ ಅವರನ್ನು ಮೂರರಿಂದ ನಾಲ್ಕು ಮಂದಿ ಸ್ನೇಹಿತರು ಕೊಲೆ ಮಾಡಿದ್ದಾರೆ. ಕೊಲೆಗೆ ಸಂಚು ರೂಪಿಸಿದ್ದ ಆರೋಪಿಗಳು ನಾಗರಾಜ್ ಅವರಿಗೆ ವಿಪರೀತ ಮದ್ಯ ಕುಡಿಸಿದ್ದರು ಎಂದು ಮೂಲಗಳು ಹೇಳಿವೆ. ಲಗ್ಗೆರೆ ಮತ್ತು ಹುಲಿಯೂರುದುರ್ಗ …
Read More »ವರದಕ್ಷಿಣೆ ಕಿರುಕುಳ ತಾಳದೆ ಗೃಹಿಣಿ ಆತ್ಮಹತ್ಯೆ: ಪತಿ, ಅತ್ತೆಗೆ ಜೈಲು ಶಿಕ್ಷೆ
ಶಿವಮೊಗ್ಗ: ವರದಕ್ಷಿಣೆ ಕಿರುಕುಳ ತಾಳದೆ ಗೃಹಿಣಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣ ಸಂಬಂಧ ಪತಿ ಮತ್ತು ಅತ್ತೆಗೆ ಜೈಲು ಶಿಕ್ಷೆ ವಿಧಿಸಿ ಶಿವಮೊಗ್ಗದ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನ್ಯಾಯಾಧೀಶ ಯಶವಂತ್ ಕುಮಾರ್ ತೀರ್ಪು ನೀಡಿದ್ದಾರೆ. ಗೋಪಿಶೆಟ್ಟಿಕೊಪ್ಪದ ನಿವಾಸಿ ಪೃಥ್ವಿರಾಜ್(33), ಅವರ ತಾಯಿ ಟಿ. ಪುಷ್ಪಾ(58) ಶಿಕ್ಷೆಗೊಳಗಾದವರು. ವರದಕ್ಷಿಣೆ ತರುವಂತೆ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡುತ್ತಿದ್ದ ಕಾರಣ ಮನನೊಂದು 2022ರ ಜೂನ್ 16ರಂದು ಗೃಹಿಣಿ …
Read More »ಹಲಸಂಗಿ | ಚಿನ್ನದಂಗಡಿ ದರೋಡೆ: ವಿದ್ಯಾರ್ಥಿಗೆ ಗುಂಡು
ಚಡಚಣ(ವಿಜಯಪುರ ಜಿಲ್ಲೆ): ತಾಲ್ಲೂಕಿನ ಹಲಸಂಗಿಯಲ್ಲಿ ಸೋಮವಾರ ದುಷ್ಕರ್ಮಿಗಳು ಪಿಸ್ತೂಲ್ನಿಂದ ಗುಂಡು ಹಾರಿಸಿ, ಚಿನ್ನದ ಅಂಗಡಿ ದರೋಡೆ ಮಾಡಿದ್ದಾರೆ. ಆತ್ಮಲಿಂಗ ಹೂಗಾರ (18) ಎಂಬ ವಿದ್ಯಾರ್ಥಿಗೆ ಗುಂಡು ತಗುಲಿ ಗಾಯವಾಗಿದೆಹಲಸಂಗಿ ಮುಖ್ಯರಸ್ತೆಯಲ್ಲಿರುವ ಮಹಾರುದ್ರ ಕಂಚಾಗಾರ ಅವರ ‘ಭೂಮಿಕಾ’ ಜ್ಯುವೆಲ್ಲರಿ ಶಾಪ್ಗೆ ಇಬ್ಬರು ಮುಸುಕುಧಾರಿ ವ್ಯಕ್ತಿಗಳು ಬೈಕ್ ಮೇಲೆ ಬಂದು, 205 ಗ್ರಾಂ ಚಿನ್ನಾಭರಣ ಮತ್ತು 1 ಕೆಜಿ ಬೆಳ್ಳಿ ದೋಚಿದ್ದಾರೆ’ ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ಸುದ್ದಿಗಾರರಿಗೆ ತಿಳಿಸಿದರು. ಕೃತ್ಯವನ್ನು ಮೊಬೈಲ್ನಲ್ಲಿ …
Read More »ಮದುವೆಯಾದ 45 ದಿನಕ್ಕೇ ದುಡುಕಿದ ನವವಿವಾಹಿತ ಆತ್ಮಹತ್ಯೆ
ದಾವಣಗೆರೆ: ಮದುವೆಯಾದ 45 ದಿನಕ್ಕೆ ನವವಿವಾಹಿತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದಾವಣಗೆರೆ ತಾಲೂಕಿನ ಗುಮ್ಮನೂರಿನಲ್ಲಿ ಘಟನೆ ನಡೆದಿದೆ. ಹರೀಶ್(30) ಆತ್ಮಹತ್ಯೆ ಮಾಡಿಕೊಂಡವರು ಎಂದು ಹೇಳಲಾಗಿದೆ. ನನ್ನ ಸಾವಿಗೆ ಪತ್ನಿಯ ವರ್ತನೆ ಕಾರಣ ಎಂದು ಡೆತ್ ನೋಟ್ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತನ್ನ ಪತ್ನಿಯ ನಡತೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದು, ಕಿರುಕುಳ ನೀಡುತ್ತಿದ್ದ ಆರೋಪ ಮಾಡಿದ್ದಾರೆ. ಪತ್ನಿ ಹಾಗೂ ಆಕೆಯ ತಂದೆ, ತಾಯಿ, ಚಿಕ್ಕಪ್ಪನಿಗೆ ಜೀವಾವಧಿ ಶಿಕ್ಷೆಯಾಗಲಿ. ಪತ್ನಿ ಕಿರುಕುಳ ನೀಡುತ್ತಿದ್ದಳು. ಆಕೆಯ …
Read More »ಕನಕಪುರ: ನಾಡ ಬಾಂಬ್ ತಿಂದು ಹಸುವಿನ ಬಾಯಿ ಛಿದ್ರ
ಕನಕಪುರ: ತಾಲೂಕಿನ ಸೋಮೆಂದ್ಯಾಪನಹಳ್ಳಿಯಲ್ಲಿ ಸೋಮವಾರ ಹಸುವೊಂದು ನಾಡಬಾಂಬ್ ಸೇವಿಸಿದ್ದರಿಂದ ಅದರ ಬಾಯಿ ಛಿದ್ರಗೊಂಡಿದೆ. ರೈತ ಕಾಳಲಿಂಗೇಗೌಡ ಅವರ ಹಸುವಿಗೆ ಗಂಭೀರ ಗಾಯವಾಗಿದೆ ಮತ್ತು ಅದು ಗರ್ಭಿಣಿಯಾಗಿತ್ತು ಎಂದು ಪಶು ವೈದ್ಯರು ತಿಳಿಸಿದ್ದಾರೆ. ಹಸು ಮತ್ತು ಅದರ ಕರು ಎರಡನ್ನೂ ಉಳಿಸಲು ಸಾಧ್ಯವಿಲ್ಲ ಎನ್ನಲಾಗಿದೆ. ಕಾಡು ಹಂದಿ ಬೇಟೆಗಾಗಿ ಜಮೀನಿನಲ್ಲಿ ಇಡಲಾಗಿದ್ದ ಬಾಂಬ್ ಈ ಘಟನೆಗೆ ಕಾರಣ ಎನ್ನಲಾಗಿದೆ. ಕುಟುಂಬದ ಸದಸ್ಯರು ಪೊಲೀಸರಿಗೆ ದೂರು ನೀಡಿ, ಆರೋಪಿಗಳನ್ನು ಪತ್ತೆಹಚ್ಚಿ ಕಟ್ಟುನಿಟ್ಟಿನ ಕ್ರಮಕೈಗೊಳ್ಳುವಂತೆ …
Read More »ಬೆಂಗಳೂರಿನಲ್ಲಿ ಮತ್ತೊಂದು `ATM’ ವಾಹನ ದರೋಡೆ : `HITACHI’ ಕಂಪನಿ ಸಿಬ್ಬಂದಿಯಿಂದ 1.37 ಕೋಟಿ ರೂ. ಲೂಟಿ.!
ಬೆಂಗಳೂರಿನಲ್ಲಿ ಎಸ್ ಬಿಐ, ಎಕ್ಸಿಸ್ ಬ್ಯಾಂಕ್ ಎಟಿಎಂಗೆ ಹಣ ತುಂಬುವ ಕಂಪನಿ ಹಿಟಾಚಿ ಸಿಬ್ಬಂದಿಯಿಂದ ಎಟಿಎಂ ವಾಹನ ದರೋಡ ಮಾಡಲಾಗಿದೆ. ಎರಡು ತಂಡಗಳಿಂದ 1.37 ಕೋಟಿ ರೂ. ಹಣ ಲೂಟಿ ಮಾಡಲಾಗಿದೆ. ಒಂದು ತಂಡ 57 ಲಕ್ಷ ರೂ. ದೋಚಿದ್ರೆ, ಮತ್ತೊಂದು ತಂಡ 80 ಲಕ್ಷ ರೂ. ದರೋಡೆ ಮಾಡಿದೆ. ಜನವರಿ 19 ರಂದು ಎಟಿಎಂ ವಾಹನ ದರೋಡೆ ಮಾಡಲಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಪ್ರವೀಣ್, ಧನಶೇಖರ್, ರಾಮಕ್ಕ, ಹರೀಶ್ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





