ಗದಗ: ‘ಏರ್ ಫ್ರೆಶ್ನರ್ ಸ್ಫೋಟಿಸಿ ಬಾಲಕಿಯ ಮುಖ ಸುಡುವಂತೆ ಮಾಡಿದ ಆರೋಪದ ಮೇಲೆ ಅಲ್ತಾಫ್ ಎಂಬುವನನ್ನು ಬಂಧಿಸಿ, ಕ್ರಮ ಕೈಗೊಳ್ಳಲಾಗಿದೆ’ ಎಂದು ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ತಿಳಿಸಿದ್ದಾರೆ. ಬಾಲಕಿಯನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.ಆಕೆಯ ಮುಖ ಮತ್ತು ಎದೆ ಭಾಗಕ್ಕೆ ಸುಟ್ಟ ಗಾಯಗಳಾಗಿವೆ. ಆದರೆ, ಅದು ಆಯಸಿಡ್ ದಾಳಿಯಲ್ಲ ಎಂಬುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ’ ಎಂದು ಅವರು ಬುಧವಾರ ಸುದ್ದಿಗಾರರಿಗೆ ತಿಳಿಸಿದರು. ‘ಘಟನಾ ಸ್ಥಳದಲ್ಲಿ ಆಯಸಿಡ್ ಅಂಶ …
Read More »ಕಲಬುರಗಿಯಲ್ಲಿ ಚಲಿಸುತ್ತಿದ್ದ ‘KKRTC’ ಬಸ್ ನಲ್ಲಿ ಬೆಂಕಿ : ತಪ್ಪಿದ ಭಾರಿ ಅನಾಹುತ.!
ಚಲಿಸುತ್ತಿದ್ದ ಕೆಕೆಆರ್ ಟಿಸಿ (KKRTC) ‘ಬಸ್ ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಭಾರಿ ಅನಾಹುತವೊಂದು ತಪ್ಪಿದೆ. ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಮದರಿ ಬಳಿ ಈ ಘಟನೆ ನಡೆದಿದೆ.ಚಲಿಸುತ್ತಿದ್ದ ಕೆಕೆಆರ್ ಟಿಸಿ ಬಸ್ ಇಂಜಿನ್ ನಲ್ಲಿ ಬೆಂಕಿ ಕಾಣಿಸಿಕೊಂಡು ಹೊಗೆ ಬಂದಿದೆ.ಕೂಡಲೇ ಅಲರ್ಟ್ ಆದ ಚಾಲಕ ಬಸ್ ನಿಲ್ಲಿಸಿ ಎಲ್ಲಾ ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಗೆ ಇಳಿಸಿದ್ದಾರೆ. ಶಾರ್ಟ್ ಸರ್ಕ್ಯೂಟ್ ನಿಂದ ಬಸ್ ಗೆ ಬೆಂಕಿ ತಗುಲಿರುವ ಶಂಕೆಯಾಗಿದೆ. ತಕ್ಷಣ ಸ್ಥಳೀಯರು ಬಸ್ …
Read More »ಪ್ರೀತಿಸಿ ಮದುವೆಯಾಗಿದ್ದ ಪತ್ನಿಯನ್ನೇ ಬರ್ಬರವಾಗಿ ಕೊಲೆಗೈದು ಪರಾರಿ: ಆರೋಪಿ ಪತಿ ಅರೆಸ್ಟ್
ಶಿವಮೊಗ್ಗ: ಎರಡನೇ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದಕ್ಕೆ ಪ್ರೀತಿಸಿ ಮದುವೆಯಾಗಿದ್ದ ಪತ್ನಿಯನ್ನೇ ಕತ್ತು ಹಿಸಿಕಿ ಕೊಲೆಗೈದು ಪರಾರಿಯಾಗಿದ್ದ ಪತಿ ಮಹಾಶಯನನ್ನು ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಪೊಲೀಸರು ಬಂಧಿಸಿದ್ದಾರೆ.ಗೋಪಿ ಬಂಧಿತ ಆರೋಪಿ. ಜ.11ರಂದು ಪತ್ನಿ ಚಂದನಬಾಯಿಯನ್ನು ಪತಿ ಗೋಪಿ ಕತ್ತು ಹಿಸುಕಿ ಕೊಲೆಗೈದು ಎಸ್ಕೇಪ್ ಆಗಿದ್ದ.ಹೊಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಚಂದನಬಾಯಿ ಹಾಗೂ ಗೋಪಿ ಪರಸ್ಪರ ಪ್ರೀತಿಸಿ ಓಡಿಹೋಗಿ ಮದುವೆಯಾಗಿದ್ದರು. ದಂಪತಿಗೆ ಇಬ್ಬರು ಮಕ್ಕಳು. ಮದುವೆಯಾಗಿ ಇಬ್ಬರು ಮಕ್ಕಳಿದ್ದರೂ ಗೋಪಿ, ಮತ್ತೋರ್ವ ಯುವತಿಯ …
Read More »ಮಾಜಿ ಶಾಸಕರ ತೋಟದ ಮನೆಯಲ್ಲಿದ್ದ ಡಬಲ್ ಬ್ಯಾರಲ್ ಗನ್ ಕಳ್ಳತನ
ಕಾರವಾರ: ಮಾಜಿ ಶಾಸಕ ವಿ.ಎಸ್.ಪಾಟೀಲ್, ಅವರ ತೋಟದ ಮನೆಯಲ್ಲಿಟ್ಟಿದ್ದ ಡಬಲ್ ಬ್ಯಾರಲ್ ಗನ್ ಕಳ್ಳತನವಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಅಂದಲಗಿಯಲ್ಲಿ ನಡೆದಿದೆ.ಮಾಜಿ ಶಾಸಕ ವಿ.ಎಸ್.ಪಾಟೀಲ್ ಸ್ವರಕ್ಷಣೆಗಾಗಿ ಇಟ್ಟುಕೊಂಡಿದ್ದ ಬಂದೂಕು ಇದ್ದಕ್ಕಿದ್ದಂತೆ ನಾಪತ್ತೆಯಾಗಿದೆ.ಡಿ.31ರಂದು ತೋಟದ ಮನೆಯಲ್ಲಿರುವ ಪಂಪ್ ಹೌಸ್ ನಲ್ಲಿ ಬಂದೂಕು ಇಟ್ಟಿದ್ದರು. ಜನವರಿ 1ರಂದು ಬೆಳಿಗ್ಗೆ ನೋಡಿದಾಗ ಡಬಲ್ ಬ್ಯಾರಲ್ ಬಂದೂಕು ಅಲ್ಲಿರಲಿಲ್ಲ. ಮನೆಯಲ್ಲಿ ಅಥವಾ ತೋಟದಲ್ಲಿ ಇಟ್ಟಿರಬಹುದು ಎಂದು ಕೆಲ ದಿಗಳ ಕಾಲ ಹುಡುಕಾಡಿದ್ದರು. …
Read More »ಅಂತ್ಯಸಂಸ್ಕಾರಕ್ಕೆ ತಯಾರಿ ನಡೆಸುವಾಗ ಕಣ್ಣು ತೆರೆದ 103 ವರ್ಷ ವಯಸ್ಸಿನ ಅಜ್ಜಿ
ಯಾರದ್ದಾದರೂ ಅಂತ್ಯಸಂಸ್ಕಾರ ನಡೆಯುತ್ತಿದ್ದು, ಸಡನ್ ಆಗಿ ಆ ವ್ಯಕ್ತಿ ಕಣ್ಣು ತೆಗೆದು ಎಲ್ಲರನ್ನೂ ನೋಡಿದರೆ, ಹೇಗನ್ನಿಸುತ್ತದೆ..? ಕೆಲವರಿಗೆ ಖುಷಿಯಾಗುತ್ತದೆ. ಇನ್ನು ಕೆಲವರಿಗೆ ಹೆದರಿಕೆಯಾಗುತ್ತದೆ. ಸ್ವಲ್ಪ ಸಮಯದ ಬಳಿಕ, ವ್ಯಕ್ತಿ ಸತ್ತಿಲ್ಲ, ಬದುಕಿದ್ದಾನೆಂದು ಅರ್ಥವಾಗುತ್ತದೆ.ಇದೇ ರೀತಿ ಘಟನೆ ನಾಗ್ಪುರದ ರಾಮ್ಟೆಕ್ ಎಂಬಲ್ಲಿ ನಡೆದಿದೆ. ಗಂಗಾಬಾಯಿ ಸಾವ್ಜಿ ಸಖ್ರಾ ಎಂಬ 103 ವರ್ಷದ ವೃದ್ಧೆ ಅನಾರೋಗ್ಯದ ಕಾರಣ ಹಾಸಿಗೆ ಹಿಡಿದಿದ್ದರು. ಪ್ರತಿದಿನ 2 ಸ್ಪೂನ್ ನೀರು ಸೇವಿಸುತ್ತಿದ್ದರು. ಆದರೆ ಸೋಮವಾರ ಅವರ ದೇಹದ …
Read More »ಬೈಕ್ ಸವಾರನ ಸಾವು: ಬಸ್ ಚಾಲಕನಿಗೆ ಜೈಲು
ಕೂಡ್ಲಿಗಿ: ಅತಿವೇಗ ಹಾಗೂ ಅಜಾರೂಕತೆಯಿಂದ ಬಸ್ ಚಲಾಯಿಸಿ ಅಪಘಾತ, ಬೈಕ್ ಸವಾರನ ಸಾವಿಗೆ ಕಾರಣವಾಗಿದ್ದ ಚಾಲಕ ಆನಂದ್ ಸಿಂಗ್ ರಜಪೂತ್ಗೆ 6 ತಿಂಗಳು ಶಿಕ್ಷೆ ನೀಡಿ ನ್ಯಾಯಾಧೀಶರು ಆದೇಶಿಸಿದ್ದಾರೆ.2022ರ ಜ. 20ರಂದು ಗುರುಪ್ರಶಾಂತ ಎಂಬವರು ತಮ್ಮ ಬೈಕಿನಲ್ಲಿ ಸುದೀಪ್ ಹಾಗೂ ವೆಂಕಟೇಶ್ ಅವರನ್ನು ಕೂಡಿಸಿಕೊಂಡು ಕೂಡ್ಲಿಗಿ ಕಡೆಯಿಂದ ಕೊಟ್ಟೂರು ಕಡೆ ಹೋಗುವಾಗ ಬತ್ತನಹಳ್ಳಿ ಕ್ರಾಸ್ ಬಳಿ ಕೆಎಸ್ಆರ್ಟಿಸಿ ಬಸ್ ಚಾಲಕ ಆನಂದಸಿಂಗ್ ರಜಪೂತ್ ಎದುರಿಗೆ ಬರುತ್ತಿದ್ದ ಮೋಟರ್ ಸೈಕಲ್ಗೆ ಡಿಕ್ಕಿ …
Read More »ಹುಬ್ಬಳ್ಳಿಯಲ್ಲಿ ಅಣ್ಣ-ತಮ್ಮನ ನಡುವೆ ರಕ್ತಪಾತ: ಕ್ಷುಲ್ಲಕ ಕಾರಣಕ್ಕೆ ಅಣ್ಣನ ಮೇಲೆ ಚಾಕು ದಾಳಿ – ಸ್ಥಿತಿ ಗಂಭೀರ
ಹುಬ್ಬಳ್ಳಿ: ಕ್ಷುಲ್ಲಕ ಕಾರಣ ಹಾಗೂ ಹಳೆಯ ವೈಷಮ್ಯದ ಹಿನ್ನೆಲೆಯಲ್ಲಿ ಅಣ್ಣನ ಮೇಲೆಯೇ ತಮ್ಮನು ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ಹಳೇಹುಬ್ಬಳ್ಳಿಯ ಶಿವಶಂಕರ ಕಾಲೋನಿಯಲ್ಲಿ ನಡೆದಿದೆ.ಶಿವಶಂಕರ ಕಾಲೋನಿಯ ನಿವಾಸಿ ಮಲ್ಲೇಶ್ ಪೂಜಾರ (42) ಅವರ ಮೇಲೆ, ಅವರ ಸ್ವಂತ ತಮ್ಮ ಪ್ರದೀಪ್ ಎಂಬಾತ ಚಾಕುವಿನಿಂದ ಮನಬಂದಂತೆ ಇರಿದಿದ್ದಾನೆ. ಗಂಭೀರವಾಗಿ ಗಾಯಗೊಂಡಿರುವ ಮಲ್ಲೇಶ್ ಅವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸಾವು–ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.ಗುರುವಾರ ಬೆಳಿಗ್ಗೆ ಮಲ್ಲೇಶ್ ಅವರು ತಮ್ಮ ಮನೆಯ …
Read More »ರಾಜ್ಯದಲ್ಲಿ ಬೆಚ್ಚಿ ಬೀಳಿಸೋ ಘಟನೆ : 11 ಎಕರೆ ಆಸ್ತಿಗಾಗಿ ಅಜ್ಜಿಯನ್ನೇ ಭೀಕರವಾಗಿ ಕೊಲೆ ಮಾಡಿದ ಪಾಪಿಗಳು!
ಬಾಗಲಕೋಟೆ : ರಾಜ್ಯದಲ್ಲಿ ಬೆಚ್ಚಿ ಬೀಳಿಸೋ ಘಟನೆ ಒಂದು ನಡೆದಿದ್ದು 11 ಎಕರೆ ಆಸ್ತಿಗಾಗಿ ಅಜ್ಜಿಯನ್ನೇ ಭೀಕರವಾಗಿ ಆಕೆಯ ಅಣ್ಣನ ಮಕ್ಕಳು ಕೊಲೆ ಮಾಡಿದ್ದಾರೆ. ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಜಗಳದಾಳದಲ್ಲಿ ಈ ಒಂದು ಭೀಕರ ಕೊಲೆ ನಡೆದಿದೆ.ಆಸ್ತಿಗಾಗಿ ದಾನಜ್ಜಿ ಎಂದೇ ಖ್ಯಾತಿಯಾಗಿದ್ದ ಚಂದ್ರವ್ವ ನೀಲಗಿಯನ್ನು ಭೀಕರವಾಗಿ ಕೊಲೆ ಮಾಡಿದ್ದಾರೆ ದಾನಜ್ಜಿ ಎಂದೆ ಹೆಸರಾಗಿದ್ದ ಚಂದ್ರವ್ವ ನೀಲಗಿಯ ಭೀಕರ ಕೊಲೆಯಾಗಿದ್ದು, ಬಾಗಲಕೋಟೆ ಜಿಲ್ಲೆಯಲ್ಲಿ ದಾನಜ್ಜಿಯ ಅಣ್ಣನ ಮಕ್ಕಳು ಈ …
Read More »ಈಜಲು ತೆರಳಿದ್ದ ವಿದ್ಯಾರ್ಥಿಗಳಿಬ್ಬರು ಕೆರೆಯಲ್ಲಿ ಮುಳುಗಿ ಸಾವು
ಈಜಲು ತೆರಳಿದ್ದ ವಿದ್ಯಾರ್ಥಿಗಳಿಬ್ಬರು ಕೆರೆಯಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಕನಕಪುರ ತಾಲೂಕಿನ ಕಬ್ಬಾಳು ಕೆರೆಯಲ್ಲಿ ನಡೆದಿದೆ.ತನುಷ್ (18), ಸಂತೋಷ್ (19) ಮೃತ ವಿದ್ಯಾರ್ಥಿಗಳು. ಬುಧವಾರ ಕಬ್ಬಾಳು ದೇವಾಲಯಕ್ಕೆ ಬೆಂಗಳೂರಿನ ಬನಶಂಕರಿ ಕಾಲೇಜಿನ 11 ವಿದ್ಯಾರ್ಥಿಗಳು ಬಂದು ದೇವಿ ದರ್ಶನದ ಬಳಿಕ ಕಬ್ಬಾಳು ಕೆರೆಯಲ್ಲಿ ಈಜಲು ತೆರಳಿದ್ದಾರೆ.ಈ ವೇಳೆ ಓರ್ವ ವಿದ್ಯಾರ್ಥಿ ನೀರಿನಲ್ಲಿ ಮುಳುಗಿದ್ದು, ಆತನನ್ನ ರಕ್ಷಣೆ ಮಾಡಲು ಹೋದ ಮತ್ತೋರ್ವ ವಿದ್ಯಾರ್ಥಿ ಕೂಡಾ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಸ್ಥಳಕ್ಕೆ ಸಾತನೂರು …
Read More »ಬೆಂಗಳೂರಿನಲ್ಲಿ ಸಿಲಿಂಡರ್ ಸ್ಫೋಟ: ಅಕ್ರಮ ಬಾಂಗ್ಲಾ ವಲಸಿಗರು ನೆಲೆಸಿದ್ದ ಶೆಡ್ ಗಳು ಬೆಂಕಿಗಾಹುತಿ
ಬೆಂಗಳೂರಿನಲ್ಲಿ ಅಕ್ರಮವಾಗಿ ಬಾಂಗ್ಲಾ ವಲಸಿಗರು ನೆಲೆಸಿರುವ ಶೆಡ್ ಬಳಿ ಬೆಂಕಿ ಅವಘಡ ಸಂಭವಿಸಿದೆ. ಬೆಂಗಳೂರು ಹೊರವಲಯದ ಬೇಗೂರು ಬಳಿ ಈ ಘಟನೆ ನಡೆದಿದೆ.ಸಿಲಿಂಡರ್ ಸ್ಫೋಟಗೊಂಡು ಬೆಂಕಿ ಅವಘಡ ಸಂಭವಿಸಿದೆ ಎನ್ನಲಾಗಿದೆ. ಬೇಗೂರು ಬಳಿಯ ಯಲೇನಹಳ್ಳಿ ಬಳಿಯ ಡಂಪಿಂಗ್ ಯಾರ್ಡ್ ಬಳಿ ಈ ಘಟನೆ ನಡೆದಿದೆ.ಇಲ್ಲಿ ೫ ಎಕರೆ ಜಾಗದಲ್ಲಿ ಬಾಂಗ್ಲ ಅವಲಸಿಗರು ಅಕ್ರಮವಾಗಿ ನೆಲೆಸಿದ್ದರು. ಕೆಲ ದಿನಗಳ ಹಿಂದಷ್ಟೇ ಅವರನ್ನು ಖಾಲಿ ಮಾಡಿಸಿ ಶೆಡ್ ಗಳನ್ನು ತೆರವು ಮಾಡಲಾಗಿತ್ತು. ಆದರೆ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





