Breaking News

BigTv News

ರಾಜ್ಯದಲ್ಲಿ ಮತ್ತೊಂದು ಪೈಶಾಚಿಕ ಕೃತ್ಯ : ಅಪ್ರಾಪ್ತೆ ಮೇಲೆ ಗ್ಯಾಂಗ್ ರೇಪ್, ಮೂವರು ಬಾಲಕರು ಅರೆಸ್ಟ್!

ಹುಬ್ಬಳ್ಳಿ : ರಾಜ್ಯದಲ್ಲಿ ಮತ್ತೊಂದು ಪೈಶಾಚಿಕ ಕೃತ್ಯ ನಡೆದಿದ್ದು, ಹುಬ್ಬಳ್ಳಿ ನಗರದಲ್ಲಿ ಅಪ್ರಾಪ್ತೆ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ. ಹುಬ್ಬಳ್ಳಿಯ ಶಹರ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದ್ದು, ಒಂದು ವಾರದಲ್ಲಿ ಪರಿಚಯಸ್ಥ ಮೂವರು ಬಾಲಕರಿಂದ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ನಡೆದಿದೆ.ಕಳೆದ ವಾರ ನಡೆದಿದ್ದ ಘಟನೆ ಇದೀಗ ತಡವಾಗಿ ಬೆಳಕಿಗೆ ಬಂದಿದೆ. ನೊಂದ ಬಾಲಕಿ ಮತ್ತು ಆಕೆಯ ತಾಯಿ ದೂರು ನೀಡಿದ್ದು ಮೂವರು ಅಪ್ರಾಪ್ತ …

Read More »

ಹುಬ್ಬಳ್ಳಿಯಲ್ಲಿ ಭೀಕರ ಅಪಘಾತ : ಚಿಗರಿ ಬಸ್, ಕಾರು ಮುಖಾಮುಖಿ ಡಿಕ್ಕಿಯಾಗಿ ಚಾಲಕ ಸ್ಥಳದಲ್ಲೇ ಸಾವು!

ಹುಬ್ಬಳ್ಳಿಯಲ್ಲಿ ಭೀಕರವಾದ ಅಪಘಾತ ಸಂಭವಿಸಿದ್ದು, ಚಿಗರಿ ಬಸ್ ಹಾಗೂ ಕಾರು ಮುಖಾಮುಖಿ ಡಿಕ್ಕಿಯಾಗಿ ಕಾರು ಚಾಲಕ ಸ್ಥಳದಲ್ಲೆ ಸಾವನ್ನಪ್ಪಿರುವ ಘಟನೆ ಹುಬ್ಬಳ್ಳಿಯ ಉಣಕಲ್ ಚಿಗರಿ ಪಥದಲ್ಲಿ ಈ ಒಂದು ಅಪಘಾತ ಸಭವಿಸಿದೆ. ನೆಕ್ಸಾನ್ ಕಾರು ಚಾಲಕ ಗಿರೀಶ್ ಬಣವಿ (62) ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ.ಮೃತ ಗಿರೀಶ್ ಧಾರವಾಡ ನಗರದ ಸರಸ್ವತಿಪುರ ನಿವಾಸಿ ಎಂದು ತಿಳಿದು ಬಂದಿದ್ದು, ಹುಬ್ಬಳ್ಳಿ ಕಡೆಯಿಂದ ಚಿಗರಿ ಬಸ್ ಧಾರವಾಡ ಕಡೆಗೆ ಹೊರಟಿತ್ತು. ಧಾರವಾಡ ಕಡೆಯಿಂದ ಗಿರೀಶ್ ಅವರು …

Read More »

ಕೆಕೆಆರ್‌ಟಿಸಿ ಸಾರಿಗೆ ಬಸ್‌ಗೆ ಬುಲೆರೋ ಡಿಕ್ಕಿ

ರಾಯಚೂರು ತಾಲೂಕಿನ ತುಂಗಭದ್ರಾ ಗ್ರಾಮದ ಹತ್ತಿರ ಕೆಕೆಆರ್‌ಟಿಸಿ ಸರ್ಕಾರಿ ಸಾರಿಗೆ ಬಸ್‌ಗೆ ಬುಲೆರೋ ವಾಹನ ಡಿಕ್ಕಿ ಹೊಡೆದು ಚಾಲಕ ತೀವ್ರ ಗಾಯಗೊಂಡಿರುವ ಘಟನೆ ಗುರುವಾರ ನಡೆದಿದೆ.ಆಂಧ್ರಪ್ರದೇಶದ ಮಾಧವರಂನ ರವಿ ಗಾಯಗೊಂಡ ಬುಲೆರೋ ಚಾಲಕ. ಹೊಸ ವರ್ಷದ ನಿಮಿತ್ತ ರಾಯಚೂರಿನಿಂದ ಮಂತ್ರಾಲಯಕ್ಕೆ ಹೊರಟಿದ್ದ ನಗರ ಸಾರಿಗೆ ರಾಯರಥ ಬಸ್‌ಗೆ ಹೊಲದ ದಾರಿಯಿಂದ ಏಕಾಏಕಿ ಹೆದ್ದಾರಿಗೆ ಬಂದ ಬುಲೆರೋ ವಾಹನ ಡಿಕ್ಕಿ ಹೊಡೆದಿದ್ದು,ಬಸ್ ಜಖಂಗೊಂಡಿದೆ. ಬಸ್‌ನ ಡ್ರೈವರ್ ಕಂ. ಕಂಡಕ್ಟರ್ ಮಲ್ಲಪ್ಪ ಸಮಯ …

Read More »

ಬೈಕ್ ಡಿಕ್ಕಿಯಾಗಿ ಪಾದಚಾರಿ ಸ್ಥಳದಲ್ಲೇ ಸಾವು

ಕೋಲಾರ ಜಿಲ್ಲೆ, ಮಾಲೂರು ತಾಲೂಕಿನ ಕಣಗಲ ಸಮೀಪ ಬೈಕ್ ಡಿಕ್ಕಿಯಾಗಿ ಪಾದಚಾರಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.ರಮೇಶ್(48) ಮೃತಪಟ್ಟವರು ಎಂದು ಹೇಳಲಾಗಿದೆ. ಅತಿ ವೇಗ ಮತ್ತು ಅಜಾಗರೂಕತೆಯಿಂದ ಬೈಕ್ ಸವಾರ ಚಾಲನೆ ಮಾಡಿಕೊಂಡು ಬಂದು ಡಿಕ್ಕಿ ಹೊಡೆದಿದ್ದಾನೆ.ಬೈಕ್ ಹಾಗೂ ಸವಾರನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಪದೇ ಪದೇ ಅಪಘಾತ ಸಂಭವಿಸುತ್ತಿದ್ದು, ಗ್ರಾಮದಲ್ಲಿ ಸ್ಪೀಡ್ ಹಂಪ್ ಹಾಕುವಂತೆ ಜನರು ಒತ್ತಾಯಿಸಿದ್ದಾರೆ. ಮಾಸ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »

ಬೆದರಿಸಿ ಮೊಬೈಲ್‌- ನಗದು ದರೋಡೆ

ಶಿವಮೊಗ್ಗ: ಬಾಡಿಗೆಗಾಗಿ ಕಾಯುತ್ತ ಲಾರಿಯಲ್ಲೇ ಮಲಗಿದ್ದ ಡ್ರೈವರ್, ಕ್ಲೀನರ್‌ಗೆ ಇಬ್ಬರು ದುಷ್ಕರ್ಮಿಗಳು ಲಾಂಗ್ ತೋರಿಸಿ, ಮೊಬೈಲ್ ಮತ್ತು ನಗದು ದರೋಡೆ ಮಾಡಿಕೊಂಡು ಹೋಗಿರುವ ಘಟನೆ ನಗರದ ಸಾಗರ ರಸ್ತೆಯಲ್ಲಿ ನಡೆದಿದೆ. ಮೈಸೂರು ಮೂಲದ ಲಾರಿ ಚಾಲಕ ಚಂದ್ರಶೇಖರ ಮತ್ತು ಕ್ಲೀನರ್ ಹಿತೇಶ್ ನಾಯಕ ಎಂಬವರನ್ನು ಬೆದರಿಸಲಾಗಿದೆ.ಇಬ್ಬರೂ ಬಾಡಿಗೆಗಾಗಿ ಕಾಯುತ್ತ ಶಿವಮೊಗ್ಗದ ಸಾಗರ ರಸ್ತೆಯಲ್ಲಿ ಲಾರಿ ನಿಲ್ಲಿಸಿದ್ದರು. ಬೆಳಗಿನ ಜಾವ 4.30ರ ಹೊತ್ತಿಗೆ ಲಾರಿಯೊಳಗೆ ನುಗ್ಗಿದ ಇಬ್ಬರು ದುಷ್ಕರ್ಮಿಗಳು ಲಾಂಗ್ ತೋರಿಸಿ …

Read More »

ಸಿದ್ದಗಂಗಾ ಮಠದ ಹೆಸರಲ್ಲಿ ವಂಚನೆ- ಬಂಜೆತನಕ್ಕೆ ನಕಲಿ ಮದ್ದು ಕೊಟ್ಟು ದೇಣಿಗೆ ಸಂಗ್ರಹ!

ತುಮಕೂರಿನ ಸಿದ್ದಗಂಗಾ ಮಠದ ಹೆಸರಿನಲ್ಲಿ ಕಿಡಿಗೇಡಿಗಳು ಸಾರ್ವಜನಿಕರಿಗೆ ವಂಚನೆ ಎಸಗಿದ ಘಟನೆ ನಡೆದಿದೆ. ಬಂಜೆತನಕ್ಕೆ ನಕಲಿ ಔಷಧಿ ಕೊಟ್ಟು ಜನರಿಂದ ಹಣ ವಸೂಲಿ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.ಸಿದ್ದಗಂಗಾ ಮಠದ ಹೆಸರು ದುರುಪಯೋಗಪಡಿಸಿಕೊಂಡು ಕಿಡಿಗೇಡಿಗಳು ದೇಣಿಗೆ ಸಂಗ್ರಹಿಸುತ್ತಿದ್ದಾರೆ ಎನ್ನುವ ಆರೋಪ ನಗರದಲ್ಲಿ ಕೇಳಿ ಬಂದಿದೆ. ಮಠದ ಹೆಸರಿನಲ್ಲಿ ಬಂಜೆತನಕ್ಕೆ ನಕಲಿ ಔಷಧಿ ವಿತರಣೆ ಮಾಡಿ ಜನರಿಂದ ಹಣ ವಸೂಲಿ ಮಾಡಿರುವ ಆರೋಪ ಕೇಳಿಬಂದಿದೆ. ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿರುವ …

Read More »

ಮಹಿಳೆಯೊಂದಿಗೆ ಅಕ್ರಮ ಸಂಬಂಧ, ಯುವಕನ ಮೇಲೆ ಮಾರಣಾಂತಿಕ ಹಲ್ಲೆ

ಬೆಳಗಾವಿ: ಮಹಿಳೆಯ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಯುವಕನ ಮೇಲೆ ಆಕೆಯ ಪತಿ ಹಾಗೂ ಪತಿಯ ಸಹೋದರ ಸೇರಿ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನಲ್ಲಿ ನಡೆದಿದೆ.ಮೂರು ಮಕ್ಕಳ ತಾಯಿಯ ಜೊತೆಗೆ ಕಳೆದ ನಾಲ್ಕು ವರ್ಷದಿಂದ ಈ ಯುವಕ ಅಕ್ರಮ ಸಂಬಂಧ ಹೊಂದಿದ್ದಾನೆ ಎಂದು ಆರೋಪಿಸಲಾಗಿದೆ. ಅಕ್ಷಯ ಕಲ್ಲಟಗಿ ತೀವ್ರವಾಗಿ ಹಲ್ಲೆಗೊಳಗಾದ ಯುವಕ ಎಂದು ಗುರುತಿಸಲಾಗಿದ್ದು ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ವಿವಾಹಿತ ಮಹಿಳೆ ಅಕ್ಷಯ್​ಗೆ …

Read More »

ಕೊಪ್ಪಳ | ಎರಡು ಬೈಕ್‌ಗಳು ಮುಖಾಮುಖಿ ಢಿಕ್ಕಿ : ಇಬ್ಬರು ಮೃತ್ಯು

ಎರಡು ಬೈಕ್ ಗಳ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿ ಇಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಕುಕನೂರು ತಾಲೂಕಿನ ಬನಾಪುರ ಕ್ರಾಸ್ ಬಳಿ ನಡೆದಿದೆ.ಮೃತರನ್ನು ಭಾನಾಪುರ ಗ್ರಾಮದ ಶ್ರೀಶೈಲ್ ಹಿರೇಮಠ (30) ಹಾಗೂ ಕೊಪ್ಪಳ ತಾಲೂಕಿನ ಹ್ಯಾಪಿ ಮುಂಡರಗಿ ಗ್ರಾಮದ ಮಾರುತಿ ಶಿವಪ್ಪನವರ (50) ಎಂದು ಗುರುತಿಸಲಾಗಿದೆ.ಭಾನಾಪುರದ ಕಾವೇರಿ ಪೆಟ್ರೋಲ್ ಬಂಕ್ ಎದುರು ಈ ಘಟನೆ ಸಂಭವಿಸಿದೆ. ಮಾರುತಿ ಶಿವಪ್ಪನವರ ಅವರು ಕೊಪ್ಪಳದಿಂದ ಕುಕನೂರು ಕಡೆಗೆ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದರೆ, ಶ್ರೀಶೈಲ್ ಹಿರೇಮಠ …

Read More »

ಬಳ್ಳಾರಿ ಗಲಭೆಗೆ ತಲೆದಂಡ; ಅಧಿಕಾರ ಸ್ವೀಕರಿಸಿದ 1 ದಿನಕ್ಕೆ ಎಸ್ಪಿ ಪವನ್ ನೆಜ್ಜೂರು ಸಸ್ಪೆಂಡ್

ಬಳ್ಳಾರಿ ನಗರದಲ್ಲಿ ವಾಲ್ಮೀಕಿ ಮಹರ್ಷಿ ಪ್ರತಿಮೆ ಪ್ರತಿಷ್ಠಾಪನೆ ವೇಳೆ ನಡೆದ ಹಿಂಸಾಚಾರ ಹಾಗೂ ಕಲ್ಲು ತೂರಾಟದ ಘಟನೆಗೆ ಸಂಬOಧಿಸಿದOತೆ ಕರ್ತವ್ಯ ಲೋಪದ ಆರೋಪದಡಿ ಬಳ್ಳಾರಿ ಜಿಲ್ಲಾ ಎಸ್ಪಿಯಾಗಿದ್ದ ಪವನ್ ನೆಜ್ಜೂರು ಅವರನ್ನು ಅಮಾನತುಗೊಳಿಸಲಾಗಿದೆ ಗಲಭೆ ಪರಿಸ್ಥಿತಿ ನಿಭಾಯಿಸುವಲ್ಲಿ ಪೊಲೀಸರು ವಿಫಲರಾಗಿದ್ದು, ಘಟನೆಯನ್ನು ಸರಿಯಾಗಿ ನಿಭಾಯಿಸಿಲ್ಲ.ಅಲ್ಲದೆ ಹಿರಿಯ ಅಧಿಕಾರಿಗಳ ಗಮನಕ್ಕೂ ತಂದಿಲ್ಲ ಎಂದು ಡಿಜಿ-ಐಜಿಪಿ ವರದಿ ನೀಡಿದ್ದು, ಪವನ್ ನೆಜ್ಜೂರು ಅವರನ್ನು ಅಮಾನತು ಮಾಡುವಂತೆ ಬಳ್ಳಾರಿ ಡಿಐಜಿ ವರ್ತಿಕಾ ಕಟಿಯಾರ ಅವರು …

Read More »

ಬೆಳಗಾವಿ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕೆ.ರಾಮರಾಜನ್ ಅಧಿಕಾರ ಸ್ವೀಕಾರ

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕೆ.ರಾಮರಾಜನ್ ಗುರುವಾರ ರಾತ್ರಿ ಅಧಿಕಾರ ಸ್ವೀಕರಿಸಿದರು.ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಭೌಗೋಳಿಕವಾಗಿ ದೊಡ್ಡದಾಗಿರುವ ಬೆಳಗಾವಿ ಜಿಲ್ಲೆಯಲ್ಲಿ ಜನಸ್ನೇಹಿ ಆಡಳಿತ ನೀಡಲಾಗುವುದು. ತಮಗಾದ ಅನ್ಯಾಯದ ಕುರಿತು ಸಮಸ್ಯೆ ಹೇಳಿಕೊಳ್ಳಲು ಹಾಗೂ ದೂರು ನೀಡಲು ಪೊಲೀಸ್ ಇಲಾಖೆ ಎಲ್ಲ ಕಚೇರಿಗಳಿಗೆ ಸಾರ್ವಜನಿಕರಿಗೆ ಮುಕ್ತ ಅವಕಾಶ ನೀಡಲಾಗುವುದು’ ಎಂದರು.ಜನರಿಗೆ ಕಾನೂನಿನ ಭಯವಿರಬೇಕೇ ಹೊರತು, ಪೊಲೀಸರ ಭಯವಲ್ಲ. ಅಂಥ ವಾತಾವಾರಣವನ್ನು ಜಿಲ್ಲೆಯಲ್ಲಿ ಸೃಷ್ಟಿಸಲಾಗುವುದು’ ಎಂದರು. ‘ಜಿಲ್ಲೆಯ ಠಾಣೆಗಳಲ್ಲಿ ಯಾವುದೇ ಪ್ರಕರಣದ ಕುರಿತು …

Read More »