ಬೆಂಗಳೂರಿನ ಬಸವೇಶ್ವರ ನಗರದ ಭೋವಿ ಕಾಲೋನಿಯಲ್ಲಿ ಘಟನೆ ನಡೆದಿದ್ದು, ಮಗಳನ್ನು ಮದುವೆ ಮಾಡಿಕೊಡದಿದ್ದಕ್ಕೆ ಮಹಿಳೆಗೆ ಪೆಟ್ರೋಲ್ ಸುರಿದು ವ್ಯಕ್ತಿಯೊಬ್ಬ ಬೆಂಕಿ ಹಚ್ಚಿದ್ದಾನೆ.ನಿನ್ನೆ ಮಧ್ಯರಾತ್ರಿ 1 ಗಂಟೆಗೆ ಗೀತಾ ಎಂಬ ಮಹಿಳೆ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲಾಗಿದೆ. 19 ವರ್ಷದ ಮಗಳನ್ನು ಮದುವೆ ಮಾಡಿಕೊಡುವಂತೆ ಪೀಡಿಸುತ್ತಿದ್ದ ವ್ಯಕ್ತಿ, ಯುವತಿ ತಾಯಿ ಒಪ್ಪದಿರುವುದಕ್ಕೆ ಸಿಟ್ಟಿಗೆದ್ದು ಮಹಿಳೆಗೆ ಬೆಂಕಿ ಹಚ್ಚಿದ್ದಾನೆ.ಶೇ.50 ರಷ್ಟು ಗಾಯಗೊಂಡ ಗೀತಾ ಸ್ಥಿತಿ ಗಂಭೀರವಾಗಿದೆ. ಸದ್ಯ ಗೀತಾರನ್ನು ಆಸ್ಪತ್ರೆಗೆ ದಾಖಲಿಸಿ …
Read More »ಸೈನಿಕನಿಂದ 6 ಲಕ್ಷ ರೂ. ಲಪಟಾವಣೆ
ಕಾಸರಗೋಡು: ವ್ಯಾಪಾರದಲ್ಲಿ ಪಾಲುದಾರನಾಗಿಸುವುದಾಗಿ ತಿಳಿಸಿ ಆರು ಲಕ್ಷ ರೂ. ಪಡೆದು ವಂಚಿಸಿದ ಉತ್ತರಾಖಂಡ್ ನಿವಾಸಿ ವಿರುದ್ಧ ಪೊಲೀಸರು ಕೇಸು ದಾಖಲಿಸಿದ್ದಾರೆ. ಪಡನ್ನಕ್ಕಾಡ್ ನಿವಾಸಿಯೂ, ಸೈನಿಕರಾಗಿರುವ ಸಿ.ಜೆ.ವಿಷ್ಣು (28) ಅವರು ವಂಚಿತರಾಗಿದ್ದಾರೆ. ಇವರು ನೀಡಿದ ದೂರಿನಂತೆ ಉತ್ತರಾಖಂಡ್ ನೈನಿತಾಲ್ ನಿವಾಸಿ ರಾಹುಲ್ ಭಟ್ ವಿರುದ್ಧ ಹೊಸದುರ್ಗ ಪೊಲೀಸರು ಕೇಸು ದಾಖಲಿಸಿದ್ದಾರೆ.
Read More »ಮಹಾರಾಷ್ಟ್ರ| ಡಿಜಿಟಲ್ ಅರೆಸ್ಟ್: ಹಿರಿಯ ನಾಗರಿಕನಿಗೆ 23.5 ಲಕ್ಷ ರೂ.ವಂಚನೆ
ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ 68 ವರ್ಷದ ವೃದ್ಧರೋರ್ವರಿಗೆ ಸೈಬರ್ ವಂಚಕರು ಡಿಜಿಟಲ್ ಅರೆಸ್ಟ್ನ ಬೆದರಿಕೆ ಒಡ್ಡಿ 23.5 ಲಕ್ಷ ರೂ. ವಂಚಿಸಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.ಥಾಣೆ ಜಿಲ್ಲೆಯಲ್ಲಿ ಈ ವಾರ ವರದಿಯಾಗುತ್ತಿರುವ ಎರಡನೇ ಘಟನೆ ಇದಾಗಿದೆ ಎಂದು ಅವರು ಹೇಳಿದ್ದಾರೆ.ದೂರಿನ ಆಧಾರದಲ್ಲಿ ಕಲ್ಯಾಣ್ ಪೊಲೀಸರು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸಂಬಂಧಿತ ನಿಯಮಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಎಂದು ಮಹಾತ್ಮಾ ಫುಲೆ ಪೊಲೀಸ್ ಠಾಣೆಯ ಸಹಾಯಕ ಇನ್ಸ್ಪೆಕ್ಟರ್ ವಿನೋದ್ ಪಾಟೀಲ್ …
Read More »ವ್ಯಕ್ತಿ ನಾಪತ್ತೆ; ದೂರು ದಾಖಲು
ಬೈಂದೂರು: ಗುಡ್ಡಮ್ಮಾಡಿ ಸೇನಾಪುರ ಗ್ರಾಮದ ಕುಂದಾಪುರ ವಿಟ್ಠಲ ಶೇಟ್ (63) ಅವರು ಉಪ್ಪುಂದದ ಮನೆಯಿಂದ ಹೋದವರು ಹೊರಗೆ ಹೋಗದೇ ಕಾಣೆಯಾಗಿರುತ್ತರೆ. ಅವರಿಗೆ ಕಳೆದ 9 ವರ್ಷಗಳಿಂದ ಮಾನಸಿಕ ಕಾಯಿಲೆ ಇದ್ದು ಔಷಧೋಪಚಾರ ನಡೆಯುತ್ತಿತ್ತು. ಆದರೆ ಸುಮಾರು 6 ತಿಂಗಳಿನಿಂದ ಔಷಧ ತಗೆದುಕೊಳ್ಳುತ್ತಿರಲಿಲ್ಲ ಎನ್ನಲಾಗಿದೆ.ಈ ಹಿಂದೆಯೂ ಇದೇ ರೀತಿ ಮನೆಯಿಂದ ಹೋದವರು ಸಂಬಂಧಿಕರ ಮನೆಗೆ ಹೋಗಿ ಬಳಿಕ ಮರಳುತ್ತಿದ್ದರು. ಆದರೆ ಈ ಬಾರಿ ಬಾರದ ಕಾರಣ ಪೊಲೀಸರಿಗೆ ದೂರು ನೀಡಲಾಗಿದ್ದು ಬೈಂದೂರು …
Read More »ಬೆಂಗಳೂರಲ್ಲಿ ಮತ್ತೊಂದು ಅಪಘಾತ : ನೀರಿನ ಟ್ಯಾಂಕರ್ ಗೆ ಆಯಿಲ್ ಟ್ಯಾಂಕರ್ ಡಿಕ್ಕಿಯಾಗಿ ಸ್ಥಳದಲ್ಲೇ ಚಾಲಕ ಸಾವು
ಬೆಂಗಳೂರಲ್ಲಿ ಮತ್ತೊಂದು ಭೀಕರವಾದ ಅಪಘಾತ ಸಂಭವಿಸಿದ್ದು, ನೀರಿನ ಟ್ಯಾಂಕರ್ ಗೆ ಆಯಿಲ್ ಟ್ಯಾಂಕರ್ ಡಿಕ್ಕಿಯಾಗಿ ಸ್ಥಳದಲ್ಲೇ ಚಾಲಕ ಸಾವನ್ನಪ್ಪಿದ್ದಾನೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಪೇಟೆ ತಾಲೂಕಿನ ಸಾದಪ್ಪನಹಳ್ಳಿ ಬಳಿ ಈ ಅಪಘಾತ ಸಂಭವಿಸಿದೆ.ಹೆದ್ದಾರಿಯಲ್ಲಿ ಟ್ಯಾಂಕರ್ ಸಿಬ್ಬಂದಿ ಗಿಡಗಳಿಗೆ ನೀರು ಹಾಕುತ್ತಿದ್ದ. ಈ ವೇಳೆ ವೇಗವಾಗಿ ಬಂದು ಟ್ಯಾಂಕರ್ ಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಆಯಿಲ್ ಟ್ಯಾಂಕರ್ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಹೊಸಕೋಟೆ-ದಾಬಸ್ಪೇಟೆ ನಡುವಿನ ರಾಷ್ಟೀಯ ಹೆದ್ದಾರಿಯಲ್ಲಿ …
Read More »ಬೆಂಗಳೂರಲ್ಲಿ ಕೋರ್ಟ್ ಆವರಣದಲ್ಲೇ ಲಾಂಗ್ ತೋರಿಸಿ ಆರೋಪಿಗೆ ಜೀವ ಬೆದರಿಕೆ : ರೌಡಿಶೀಟರ್ ಅರೆಸ್ಟ್!
ಬೆಂಗಳೂರಲ್ಲಿ ವಿಚಾರಣೆಗೆ ಎಂದು ಬಂದಿದ್ದ ರೌಡಿಶೀಟರ್ ಗೆ ಕೋರ್ಟ್ ಅವರಣದಲ್ಲೇ ಲಾಂಗ್ ತೋರಿಸಿ ದುಷ್ಕರ್ಮಿಗಳು ಜೀವ ಬೆದರಿಕೆ ಹಾಕಿರುವ ಘಟನೆ ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರದಲ್ಲಿ ನಡೆದಿದೆ.ರೌಡಿಶೀಟರ್ ಜಾಲಮಂಗಲ ಅಭಿ ಎಂಬಾತನಿಂದ ಬೆದರಿಕೆ ಹಾಕಲಗಿದ್ದು, ಹಾರೋಹಳ್ಳಿ ಮೂಲದ ಉದಯ್ ಗೆ ರೌಡಿಶೀಟರ್ ಬೆದರಿಕೆ ಹಾಕಿದ್ದಾನೆ.ಅಭಿ ಹಾಗು ಅಭಿಷೇಕ್ ಎಂಬುವವರ ಬಂಧನವಾಗಿದ್ದು, ಕಾರು ಜಪ್ತಿ ಮಾಡಿಕೊಳ್ಳಲಾಗಿದೆ. ರಾಮನಗರದ ಐಜೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Read More »10ನೇ ತರಗತಿ ವಿದ್ಯಾರ್ಥಿನಿ ಮೇಲೆ ನಿರಂತರ ಅತ್ಯಾಚಾರ : ಮಗುವಿಗೆ ಜನ್ಮ ನೀಡಿದ ಬಾಲಕಿ, ಆರೋಪಿ ಅರೆಸ್ಟ್!
ಹಾಸನ : ಕಳೆದ ಕೆಲವು ದಿನಗಳ ಹಿಂದೆ ಶಿವಮೊಗ್ಗ ಹಾಗೂ ಯಾದಗಿರಿ ಜಿಲ್ಲೆಯಲ್ಲಿ ಅಪ್ರಾಪ್ತ ಬಾಲಕಿಯರು ಮಗುವಿಗೆ ಜನ್ಮ ನೀಡಿದ್ದ ಘಟನೆ ವರದಿಯಾಗಿತ್ತು. ಈ ಘಟನೆ ಮಾಸುವ ಮುನ್ನವೇ ಹಾಸನ ಜಿಲ್ಲೆಯಲ್ಲೂ ಅಂತಹದ್ದೇ ವರದಿಯಾಗಿದೆ.ಅಪ್ರಾಪ್ತ ಬಾಲಕಿಯೊಬ್ಬಳಿಗೆ ನಿತ್ಯ ಚಾಕೋಲೆಟ್ ನೀಡಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದ ಹಿನ್ನೆಲೆಯಲ್ಲಿ ಆಕೆ ಮಗುವಿಗೆ ಜನ್ಮ ನೀಡಿದ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ.ಹಾಸನ ಜಿಲ್ಲೆಯ ಖಾಸಗಿ ಶಾಲೆಯೊಂದರಲ್ಲಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಬಾಲಕಿಯ …
Read More »ಎಂಡಿಎಂಎ ಮಾರಾಟ; ಆರೋಪಿ ಬಂಧನ
ಮಂಗಳೂರು: ಉತ್ತರ ದಕ್ಕೆಯ ಗೋದಾಮು ಬಳಿ ಎಂಡಿಎಂಎ ಮಾರಾಟ ಮಾಡಲು ಯತ್ನಿಸುತ್ತಿದ್ದ ಅರ್ಕುಳ ಫರಂಗಿಪೇಟೆಯ ಮೊಹಮ್ಮದ್ ತೌಹಿದ್ (30) ಎಂಬಾತನನ್ನು ಮಂಗಳೂರು ಉತ್ತರ ಠಾಣೆಯ ಎಸ್ಐ ವನಜಾಕ್ಷಿ ಅವರು ಸಿಬಂದಿಯೊಂದಿಗೆ ದಾಳಿ ನಡೆಸಿ ಬಂಧಿಸಿದ್ದಾರೆ. ಅರೋಪಿಯಿಂದ 15.64 ಗ್ರಾಂ ತೂಕದ 1.56 ಲಕ್ಷ ರೂ.ಮೌಲ್ಯದ ಎಂಡಿಎಂಎ ವಶಪಡಿಸಿಕೊಳ್ಳಲಾಗಿದೆ.
Read More »ಬಾಗಲಕೋಟೆ | ಹಲ್ಲೆ: ಸ್ವಯಂಪ್ರೇರಿತ ಪ್ರಕರಣ ದಾಖಲು
ಇಲ್ಲಿನ ದಿವ್ಯಜ್ಯೋತಿ ಅಂಧ ಮಕ್ಕಳ ಶಾಲೆಯಲ್ಲಿ ಬಾಲಕನ ಮೇಲೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದೆ.ಮಕ್ಕಳ ಮೇಲೆ ಹಲ್ಲೆ ನಡೆಸಿರುವುದು ಬಾಲ ನ್ಯಾಯ ಕಾಯ್ದೆ ಅನ್ವಯ ಶಿಕ್ಷಾರ್ಹ ಅಪರಾಧ.ಈ ಬಗ್ಗೆ ಕೈಗೊಂಡ ಕ್ರಮದ ಬಗ್ಗೆ ವರದಿ ಸಲ್ಲಿಸುವಂತೆ ಸಂಬಂಧಿಸಿದವರಿಗೆ ಸೂಚಿಸಲಾಗಿದೆ’ ಎಂದು ಆಯೋಗದ ಅಧ್ಯಕ್ಷ ಶಶಿಧರ ಕೋಸುಂಬೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Read More »ಉಡುಪಿ: 28 ನಕ್ಸಲ್ ಪ್ರಕರಣ ವಿಲೇವಾರಿ
ಜಿಲ್ಲೆಯಲ್ಲಿ 68 ನಕ್ಸಲ್ ಪ್ರಕರಣಗಳಲ್ಲಿ 39 ಪ್ರಕರಣಗಳು ಕೋರ್ಟ್ ವಿಚಾರಣೆಯಲ್ಲಿದ್ದು, 28 ಪ್ರಕರಣಗಳು ವಿಲೇವಾರಿ ಆಗಿವೆ. 1 ಪ್ರಕರಣದಲ್ಲಿ ಹೆಚ್ಚುವರಿ ಆರೋಪಪಟ್ಟಿ ಸಲ್ಲಿಸಲು ಬಾಕಿ ಇದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ತಿಳಿಸಿದ್ದಾರೆ.ಮೂವರು ಆರೋಪಿಗಳ ವಿರುದ್ಧ ಹೆಚ್ಚುವರಿ ದಾಖಲಾತಿ ಸಲ್ಲಿಸಲು ಬಾಕಿ ಇದೆ. ಒಂದು ಪ್ರಕರಣ ಸಿಐಡಿ ತನಿಖೆಯಲ್ಲಿದೆ. ಕಳೆದ 6 ತಿಂಗಳಲ್ಲಿ 39 ಪ್ರಕರಣ ಗಳಲ್ಲಿ 11 ಜನ ನಕ್ಸಲ್ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





