Breaking News

BigTv News

ಮದುವೆ ದಿನವೇ ಯುವತಿ ನಾಪತ್ತೆ!

ಬಂಟ್ವಾಳ: ಬಿ.ಸಿ.ರೋಡಿನ ಪಲ್ಲಮಜಲಿನ ಯುವತಿಯೋರ್ವಳು ತನ್ನ ಮದುವೆಯ ದಿನವೇ ಮುಂಜಾನೆ ನಾಪತ್ತೆಯಾಗಿದ್ದಾಳೆ.ಪಲ್ಲಮಜಲು ನಿವಾಸಿ ಅಶ್ಪಿಯ (21) ನಾಪತ್ತೆಯಾದವರು. ಆಕೆ ವಿವಾಹ ಮಂಗಳೂರಿನ ಯುವಕನೊಂದಿಗೆ ಡಿ. 14ರಂದು ತೊಕ್ಕೊಟ್ಟಿನ ಸಭಾಂಗಣದಲ್ಲಿ ನಡೆಯಬೇಕಿತ್ತು. ಮುಂಜಾನೆ 3.30ರ ಸುಮಾರಿಗೆ ಆಕೆ ಮಲಗಿರುವುದನ್ನು ಮನೆಮಂದಿ ಕಂಡಿದ್ದರು.ಮತ್ತೆ 4.30ರ ಸುಮಾರಿಗೆ ನೋಡಿದಾಗ ನಾಪತ್ತೆಯಾಗಿದ್ದರು. ಎಲ್ಲೆಡೆ ಹುಡುಕಿದರೂ ಪತ್ತೆಯಾಗಿಲ್ಲ ಎಂದು ಸಹೋದರ ಅರ್ಶದ್ ಪೊಲೀಸರಿಗೆ ದೂರು ನೀಡಿದ್ದಾರೆ. ಬಂಟ್ವಾಳ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆಕೆಗಾಗಿ ಶೋಧ ನಡೆಸುತ್ತಿದ್ದಾರೆ. …

Read More »

ಕಾರು ಢಿಕ್ಕಿ; ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

ಮಂಗಳೂರು: ಕಾರು ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಯೆಯ್ಯಾಡಿಯಲ್ಲಿ ಸಂಭವಿಸಿದೆ.ಸ್ಥಳೀಯ ನಿವಾಸಿ ಫೆಡ್ರಿಕ್ ಅಲ್ವಿನ್ ಫೆರ್ನಾಂಡಿಸ್ ಮೃತಪಟ್ಟವರು. ಅವರು ಶನಿವಾರ ಸಂಜೆ ಯೆಯ್ಯಾಡಿಯ ತನ್ನ ಫ್ಲ್ಯಾಟ್‌ನಿಂದ ಎದುರುಗಡೆ ಇರುವ ಅಂಗಡಿಗೆ ಹಾಲು ತರಲೆಂದು ಹರಿಪದವು ಕಡೆಗೆ ಹಾದು ಹೋಗುವ ರಸ್ತೆಯನ್ನು ದಾಟುತ್ತಿದ್ದಾಗ ಯೆಯ್ಯಾಡಿ ಕಡೆಯಿಂದ ಚಾಲಕಿ ನಿರ್ಲಕ್ಷ್ಯದಿಂದ ಚಲಾಯಿಸಿಕೊಂಡು ಬಂದ ಕಾರು ಢಿಕ್ಕಿ ಹೊಡೆಯಿತು.ಗಂಭೀರವಾಗಿ ಗಾಯಗೊಂಡ ಫೆಡ್ರಿಕ್ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಅಲ್ಲಿ ಮೃತಪಟ್ಟರು.

Read More »

ಮನೆ ಭೋಗ್ಯ ಸಂಬಂಧ ಇಬ್ಬರ ನಡುವೆ ಗಲಾಟೆ, ಸಾಕ್ಷಿಯಾಗಿದ್ದಕ್ಕೆ ಮೂರನೆಯವರಿಗೆ ಬಿತ್ತು ಗೂಸಾ!

ಮನೆ ಭೋಗ್ಯ ಸಂಬಂಧ ಇಬ್ಬರ ನಡುವೆ ನಡೆದ ಗಲಾಟೆಗೆ ಸಾಕ್ಷಿಯಾಗಿದ್ದಕ್ಕೆ ಮಹಿಳೆ ಮತ್ತು ಆಕೆಯ ಪುತ್ರಿ ಮೇಲೆ ಹಲ್ಲೆ ನಡೆಸಿರುವ ಘಟನೆ ಚಿಕ್ಕಮಗಳೂರಿನ ಮೂಡಿಗೆರೆ ಸಮೀಪದ ಬೀಜುವಳ್ಳಿಯಲ್ಲಿ ನಡೆದಿದೆ.ಆರೋಪಿ ಅರುಣ್​​ ಎಂಬಾತ ಹಲ್ಲೆ ನಡೆಸಿರುವ ದೃಶ್ಯಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಸಬೀನ ಎಂಬುವವರು ಅರುಣ್​​ ತಾಯಿಯಿಂದ ಮನೆ ಭೋಗ್ಯಕ್ಕೆ ಪಡೆದಿದ್ದರು. ಈ ಸಂಬಂಧ ಹಣದ ವಿಚಾರವಾಗಿ ಸಬೀನ ಮತ್ತು ಅರುಣ್​​ ನಡುವೆ ನಿತ್ಯವೂ ಗಲಾಟೆ ನಡೆಯುತ್ತಿತ್ತು. ಈ ಕುರಿತ ಪ್ರಕರಣ …

Read More »

ಬೆಂಗಳೂರಲ್ಲಿ ಮಗಳಿಗಾಗಿ ತನ್ನ ಹೆಂಡತಿಯನ್ನೇ ಅಪಹರಿಸಿದ ನಿರ್ಮಾಪಕ ಹರ್ಷವರ್ಧನ್

ಬೆಂಗಳೂರಲ್ಲಿ ಮಗಳಿಗಾಗಿ ತನ್ನ ಹೆಂಡತಿಯನ್ನೇ ಪತಿ ಅಪರಣ ಮಾಡಿರುವ ಘಟನೆ ವರದಿಯಾಗಿದೆ. ನಟಿ ಚೈತ್ರಾಳನ್ನು ಅಪಹರಿಸಿ ತನ್ನ ಮಗು ನೀಡುವಂತೆ ಪತಿ ಬೇಡಿಕೆ ಇಟ್ಟಿದ್ದಾನೆ. ಮೈಸೂರಿನಲ್ಲಿ ಶೂಟಿಂಗ್ ಇದೆ ಎಂದು ಹೇಳಿಸಿ ಪತ್ನಿಯನ್ನು ಅಪಹರಣ ಮಾಡಿದ್ದಾನೆ.ಬೆಂಗಳೂರಿನ ನೈಸ್ ರೋಡ್ ನಲ್ಲಿ ಸ್ನೇಹಿತನ ಮೂಲಕ ಹೇಳಿಸಿ ನಟಿ ಚೈತ್ರಳನ್ನು ಇದೀಗ ಅಪಹರಣ ಮಾಡಲಾಗಿದೆ. ಪ್ರೀತಿಸಿ ನಟಿ ಚೈತ್ರ ಮತ್ತು ನಿರ್ಮಾಪಕ ಹರ್ಷವರ್ಧನ್ ಮದುವೆ ಆಗಿದ್ದರು. ಕೌಟುಂಬಿಕ ಕಲಹದಿಂದ ಬೇರೆ ಬೇರೆಯಾಗಿದ್ದಾರೆ. ಒಂದು …

Read More »

ರಾಜ್ಯದಲ್ಲಿ ಮತ್ತೊಂದು `ಪೈಶಾಚಿಕ ಕೃತ್ಯ’ : ಅಪ್ರಾಪ್ತ ತಂಗಿ ಮೇಲೆ ಅಣ್ಣನಿಂದಲೇ ಅತ್ಯಾಚಾರ.!

ದಕ್ಷಿಣ ಕನ್ನಡ : ರಾಜ್ಯದಲ್ಲಿ ಮತ್ತೊಂದು ಪೈಶಾಚಿಕ ಕೃತ್ಯ ನಡೆದಿದ್ದು, ದೊಡ್ಡಪ್ಪನ ಮಗಳಾದ ಅಪ್ರಾಪ್ತ ಬಾಲಕಿಯನ್ನು ಬೆದರಿಸಿ ಸೋದರನೇ ಅತ್ಯಾಚಾರ ನಡೆಸಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಕುಳಾಯಿಯಲ್ಲಿ ನಡೆದಿದೆ.ಕುಳಾಯಿ ನಿವಾಸಿ ವಿಠಲ ಕುಂಬಾರ ಆರೋಪಿಯು ದೊಡ್ಡಪ್ಪನ ಮಗಳನ್ನು ಬೆದರಿಸಿ ಮನೆಯಲ್ಲಿ ಯಾರೂ ಇಲ್ಲದಾಗ ಅತ್ಯಾಚಾರ ಎಸಗಿ ಗರ್ಭಿಣಿಯಾಗಿಸಿದ್ದಾನೆ.ಈ ವಿಚಾರವನ್ನು ಮನೆಯಲ್ಲಿ ಯಾರಿಗಾದರೂ ತಿಳಿಸಿದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ ಎಂದು ಸಂತ್ರಸ್ತೆಯ ತಾಯಿ ಪೊಲೀಸರಿಗೆ …

Read More »

ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ಪುಂಡರ ರಾದ್ಧಾಂತ: RPF ಸಿಬ್ಬಂದಿ ಮೇಲೆ ಹಲ್ಲೆ

ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ಪುಂಡರು ರಾದ್ಧಾಂತ ಮಾಡಿದ್ದಾರೆ. ಬೆಂಗಳೂರಿನಿಂದ ಗೋವಾಗೆ ಹೊರಟಿದ್ದ ರೈಲಿನಲ್ಲಿ ಪುಂಡಾಟಿಕೆ ಮೆರೆಯಲಾಗಿದೆ.ಚೈನ್ ಎಳೆದಿರುವುದನ್ನು ಪ್ರಶ್ನೆ ಮಾಡಿದ್ದ ಆರ್.ಪಿ.ಎಫ್. ಸಿಬ್ಬಂದಿಯೊಂದಿಗೆ ಜಗಳವಾಡಿದ ಪುಂಡರು ಹಲ್ಲೆ ಮಾಡಿದ್ದಾರೆ, ಯಶವಂತಪುರ ರೈಲ್ವೆ ಠಾಣೆಗೆ ಆರ್.ಪಿ.ಎಫ್.ಸಿಬ್ಬಂದಿ ದೂರು ನೀಡಿದ್ದಾರೆ. ರೈಲು ತಡೆದು ಹಲ್ಲೆ ಆರೋಪದಡಿ ಮೂವರ ವಿರುದ್ಧ ದೂರು ದಾಖಲಾಗಿದೆ. ಚೈನ್ ಎಳೆದಿದ್ದ ಮೂವರು ಪುಂಡರನ್ನು ಆರ್.ಪಿ.ಎಫ್. ಸಿಬ್ಬಂದಿ ವಶಕ್ಕೆ ಪಡೆದುಕೊಂಡಿದ್ದು, ಯಶವಂತಪುರ ರೈಲ್ವೆ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಸ್ವಲ್ಪ …

Read More »

ಮಂಜು ಕವಿದ ರಸ್ತೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾಲುವೆಗೆ ಬಿದ್ದ ಕಾರು: ಶಿಕ್ಷಕ ದಂಪತಿ ಸಾವು

ಮಂಜು ಕವಿದ ರಸ್ತೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾಲುವೆಗೆ ಬಿದ್ದ ಕಾರು: ಶಿಕ್ಷಕ ದಂಪತಿ ಸಾವುಜಸ್ ಕರಣ್ ಸಿಂಗ್ ಹಾಗೂ ಪತ್ನಿ ಕಮಲ್ ಜಿತ್ ಕೌರ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.ಸರ್ಕಾರಿ ಶಾಲೆ ಶಿಕ್ಷಕರಾಗಿದ್ದ ಇಬ್ಬರೂ ಪಂಜಾಬ್ ನ ಜಿಲ್ಲಾ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಸಂಗತ್ ಪುರ ಗ್ರಾಮದಿಂದ ಮತಗಟ್ಟೆಗೆ ಚುನಾವಣಾ ಕರ್ತವ್ಯಕ್ಕೆ ಹೋಗುತ್ತಿದ್ದರು. ಈ ವೇಳೆ ಈ ಅಪಘಾತ ಸಂಭವಿಸಿದೆ. ದಟ್ಟ ಮಂಜಿನಿಂದಾಗಿ ರಸ್ತೆ ಗೋಚರಿಸುತ್ತಿರಲಿಲ್ಲ. ಮುಂದಿನ ರಸ್ತೆ ಕಾಣದೇ ನಿಯಂತ್ರಣ …

Read More »

ಗೂಡ್ಸ್‌ ವಾಹನ ಡಿಕ್ಕಿ: ಖಾಸಗಿ ಸಂಸ್ಥೆಯ ಉದ್ಯೋಗಿ ಸಾವು

ಬೆಂಗಳೂರು: ಕೆ.ಆರ್‌.ಪುರ ಪೊಲೀಸ್ ಠಾಣಾ ವ್ಯಾಪ್ತಿಯ ಹಳೆ ಮದ್ರಾಸ್‌ ರಸ್ತೆ ಬಳಿ ಗೂಡ್ಸ್‌ ವಾಹನ ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನ ಸವಾರ ಮೃತಪಟ್ಟ ಘಟನೆ ಭಾನುವಾರ ಸಂಭವಿಸಿದೆ.ಗಾಯತ್ರಿ ಲೇಔಟ್‌ನ 2ನೇ ಮುಖ್ಯರಸ್ತೆಯ ನಿವಾಸಿ, ಖಾಸಗಿ ಸಂಸ್ಥೆಯ ಉದ್ಯೋಗಿ ಕಿರಣ್ (38) ಮೃತ ವ್ಯಕ್ತಿ.ಕಿರಣ್ ಅವರು ಬೈಕ್‌ನಲ್ಲಿ ಶನಿವಾರ ರಾತ್ರಿ 12.30ರ ವೇಳೆಗೆ ಮನೆಗೆ ತೆರಳುತ್ತಿದ್ದಾಗ, ಹೊಸಕೋಟೆಯಿಂದ ಕೆ.ಆರ್. ಪುರ ಕಡೆಗೆ ತೆರಳುತ್ತಿದ್ದ ಗೂಡ್ಸ್ ವಾಹನ, ಹಿಂದಿನಿಂದ ಬೈಕ್‌ಗೆ ಡಿಕ್ಕಿ …

Read More »

ಆಯ ತಪ್ಪಿ ಕೆಳಗೆ ಬಿದ್ದ ಬಾಲಕಿ ಮೇಲೆ ಹರಿದ ಬಸ್: 4 ವರ್ಷದ ಮಗು ಸ್ಥಳದಲ್ಲೇ ಸಾವು

ಹಾಸನ: ಬಸ್ ಹತ್ತುವಾಗ ಬಾಲಕಿಯೊಬ್ಬಳು ಆಯ ತಪ್ಪಿ ಕೆಳಗೆ ಬಿದ್ದಿದ್ದು, ಗೊತ್ತಾಗದೇ ಚಾಲಕ ಬಸ್ ಚಲಿಸಿದ ಪರಿಣಾಮ ಬಸ್ ಚಕ್ರದಡಿ ಸಿಲುಕಿ ಬಾಲಕಿ ಸಾವನ್ನಪ್ಪಿರುವ ಘಟನೆ ಹಾಸನದಲ್ಲಿ ನಡೆದಿದೆ.ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಹೊಳಲ್ಕೆರೆ ಗೇಟ್ ಬಳಿ ಬಾಲಕಿ ತನ್ನ ತಾಯಿ ಜೊತೆ ಬಸ್ ಹತ್ತುವಾಗ ಈ ದುರಂತ ಸಂಭವಿಸಿದೆ.4 ವರ್ಷದ ಭಾರ್ಗವಿ ಮೃತ ಬಾಲಕಿ. ಬಾಲಕಿ ಬಾರ್ಗವಿ ತನ್ನ ತಾಯಿ ಯಮುನಾ ಜೊತೆ ದೊಡ್ಡಮೇಟಿಕುರ್ಕೆಯಲ್ಲಿರುವ ಆಸ್ಪತ್ರೆಗೆ ತೆರಳುತ್ತಿದ್ದಳು. ಈ …

Read More »

ಕಾರು ಢಿಕ್ಕಿಯಾಗಿ ಸ್ಕೂಟರ್‌ ಸವಾರರಿಬ್ಬರಿಗೆ ಗಾಯ

ಉಡುಪಿ: ಕಾರು ಢಿಕ್ಕಿ ಹೊಡೆದು ದ್ವಿಚಕ್ರ ವಾಹನ ಸವಾರರು ಗಾಯಗೊಂಡ ಘಟನೆ ಕರಾವಳಿ ಬೈಪಾಸ್‌ ಸಂತೆಕಟ್ಟೆ ರಸ್ತೆಯಲ್ಲಿ ಸಂಭವಿಸಿದೆ. ಸ್ಕೂಟರ್‌ ಸವಾರರಾದ ಗೀತಾ (49) ಮತ್ತು ರಕ್ಷಾ (24) ಗಾಯಗೊಂಡವರು. ಚಂದಪ್ಪ ಅವರು ತಮ್ಮ ಕಾರನ್ನು ಕರಾವಳಿ ಬೈಪಾಸ್‌ ಕಡೆಯಿಂದ ಸಂತೆಕಟ್ಟೆಯತ್ತ ವೇಗವಾಗಿ ಚಲಾಯಿಸಿಕೊಂಡು ಬಂದು ಯಾವುದೇ ಸೂಚನೆ ನೀಡದೆ ಕೊಡಂಕೂರು ಅಡ್ಡರಸ್ತೆಗೆ ತಿರುಗಿಸಿದ ಪರಿಣಾಮ ಕರಾವಳಿ ಬೈಪಾಸ್‌ ಕಡೆಯಿಂದ ಸಂತೆಕಟ್ಟೆಯತ್ತ ಸಾಗುತ್ತಿದ್ದ ಸ್ಕೂಟರಿಗೆ ಢಿಕ್ಕಿ ಹೊಡೆಯಿತು ಎಂದು ಸಂಚಾರ ಠಾಣೆಯಲ್ಲಿ …

Read More »