ಕೌಟುಂಬಿಕ ಜಗಳದ ಹಿನ್ನೆಲೆಯಲ್ಲಿ 6 ತಿಂಗಳ ಮಗುವನ್ನು ತಂದೆಯೇ ಅಪಹರಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.ಬೆಂಗಳೂರಿನ ಮಾಗಡಿ ರೋಡ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. 6 ತಿಂಗಳ ಮಗುವನ್ನು ಗಂಡ ಮತ್ತು ಮಾವ ಕಿಡ್ನಾಪ್ ಮಾಡಿದ್ದಾರೆ. ದೀಪಾ ಎಂಬ ಮಹಿಳೆಯ ಮಗುವನ್ನು ಕಿಡ್ನಾಪ್ ಮಾಡಲಾಗಿದೆ.ಮಾಗಡಿ ರೋಡ್ ಠಾಣೆಯಲ್ಲಿ ಪತಿ ಶಿಲ್ಪಿಕುಮಾರ್ ಮತ್ತು ಮಾವ ನರೇಶ್ ವಿರುದ್ಧ ಕಿಡ್ನಾಪ್ ಕೇಸ್ ದಾಖಲಾಗಿದೆ. ತಾಯಿ ಬಳಿ ಇದ್ದ 6 ತಿಂಗಳ ಮಗುವನ್ನು ಕಿಡ್ನಾಪ್ ಮಾಡಲಾಗಿದೆ.
Read More »ಚಿಕ್ಕಬಳ್ಳಾಪುರದಲ್ಲಿ ಭೀಕರ ಸರಣಿ ಅಪಘಾತ.. ವೃದ್ಧ ಬಲಿ
ಲಾರಿ, ಬಸ್, ಆಟೋ ನಡುವೆ ಸಂಭವಿಸಿದ ಭೀಕರ ಸರಣಿ ಅಪಘಾತದಲ್ಲಿ ಓರ್ವ ವೃದ್ದ ಮೃತಪಟ್ಟಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಭಾಗ್ಯನಗರ ಬಳಿ ರಾಷ್ಟ್ರೀಯ ಹೆದ್ದಾರಿ 44ರಲ್ಲಿ ನಡೆದಿದೆ. ಚಿಲುವೆಂದುಲ ಗ್ರಾಮದ 68 ವರ್ಷದ ವೃದ್ದ ಮೃತ ದುರ್ದೈವಿಯಾಗಿದ್ದಾರೆ.ಸುಂಕುಲಮ್ಮ ದೇಗುಲದಿಂದ ಬರುತ್ತಿದ್ದ ಆಟೋ ತಿರುವು ಪಡೆದುಕೊಳ್ಳುವ ವೇಳೆ ಲಾರಿ ಡಿಕ್ಕಿಯಾಗಿದೆ. ಈ ವೇಳೆ ಡಿಕ್ಕಿಯ ರಭಸಕ್ಕೆ ಪಲ್ಟಿಯಾದ ಆಟೋ ಬಸ್ಗೆ ಡಿಕ್ಕಿ ಹೊಡೆದಿದ್ದು, ಅಪಘಾತದಲ್ಲಿ ವೃದ್ದ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. 10 ಜನರಿಗೆ …
Read More »ಹುಬ್ಬಳ್ಳಿ: ಆನ್ಲೈನ್ನಲ್ಲಿ ₹65.70 ಲಕ್ಷ ವಂಚನೆ
ಆನ್ಲೈನ್ ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚು ಲಾಭ ಪಡೆಯಬಹುದು ಎಂದು ಹಳೇ ಗಬ್ಬೂರಿನ ಚಂದ್ರಶೇಖರ ಎಸ್. ಅವರಿಗೆ ವಾಟ್ಸ್ಆಯಪ್ ಸಂದೇಶ ಕಳುಹಿಸಿದ ವ್ಯಕ್ತಿ, ₹65.70 ಲಕ್ಷ ವರ್ಗಾಯಿಸಿಕೊಂಡು ವಂಚಿಸಿದ್ದಾನೆ.ಚಂದ್ರಶೇಖರ ಅವರು ಫೇಸ್ಬುಕ್ ಹಾಗೂ ಇನ್ಸ್ಟಾಗ್ರಾಮ್ ನೋಡುತ್ತಿದ್ದಾಗ ಹಣ ಹೂಡಿಕೆ ಕುರಿತು ಜಾಹೀರಾತು ವೀಕ್ಷಿಸಿದ್ದ ಅವರು, ಮೊಬೈಲ್ಗೆ ಬಂದ ಲಿಂಕ್ ಒತ್ತಿ ಹಣ ಹೂಡಿಕೆ ಮಾಡಿದ್ದಾರೆಹೆಚ್ಚಿನ ಲಾಭಾಂಶ ನೀಡುವುದಾಗಿ ನಂಬಿಸಿದ ವ್ಯಕ್ತಿ ಹಣ ವರ್ಗಾಯಿಸಿಕೊಂಡು ವಂಚಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. …
Read More »ಮಾನಸಿಕ ಅಸ್ವಸ್ಥ ಯುವತಿ ನಾಪತ್ತೆ
ಮಂಗಳೂರು: ಶೇಡಿಗುರಿ ಅಶೋಕನಗರದ ಸತೀಶ್ ಕುಮಾರ್ ಪಿ.ಕೆ. ಅವರ ಪುತ್ರಿ, ಮುಂಬಯಿಯಲ್ಲಿ ವಾಸವಾಗಿದ್ದ ಶ್ರದ್ಧಾ (27) ಎಂಬಾಕೆ ಡಿ. 1ರಿಂದ ನಾಪತ್ತೆಯಾಗಿದ್ದಾರೆ.ಆಕೆ 14 ವರ್ಷ ಇರುವಾಗಿನಿಂದ ಒಬ್ಸೆಸಿವ್ ಕಂಪಲ್ಸಿವ್ ಡಿಸ್ಆರ್ಡರ್ (ಒಸಿಡಿ) ಎನ್ನುವ ಎಂಬ ಕಾಯಿಲೆಯಿಂದ ಬಳಲುತ್ತಿದ್ದರು.ಹಲವಾರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ಆಕೆಯ ಇಚ್ಛೆಯಂತೆ ಸುಮಾರು 2 ವರ್ಷಗಳಿಂದ ಮುಂಬಯಿಯಲ್ಲಿ ನೆಲೆಸಿದ್ದರು. ಡಿ. 1ರಂದು ಆಕೆ ಅಲ್ಲಿಂದ ನಾಪತ್ತೆಯಾಗಿದ್ದಾರೆ. ಪ್ರಸ್ತುತ ಆಕೆ ಲೇಹ್ನಲ್ಲಿ ಇರುವುದು ಆಕೆಯು ಬ್ಯಾಂಕ್ ಖಾತೆಯಿಂದ ಹಣ …
Read More »ಮಂಗಳೂರು | ಕೋಮುದ್ವೇಷದ ಪೋಸ್ಟ್: ಪ್ರಕರಣ ದಾಖಲು
ನಕಲಿ ಖಾತೆಯ ಮೂಲಕ ಫೇಸ್ಬುಕ್ನಲ್ಲಿ ಕೋಮು ದ್ವೇಷದ ಪೋಸ್ಟ್ ಮಾಡಿರುವ ಬಗ್ಗೆ ಕಾವೂರು ಠಾಣೆ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ.ಠಾಣೆಯ ಕಾನ್ಸ್ಟೇಬಲ್ ನಾಗರಾಜ್ ಭೈರಗೊಂಡ ಅವರು ಡಿ.8ರಂದು ಸಂಜೆ ಸಾಮಾಜಿಕ ಜಾಲತಾಣಗಳನ್ನು ಪರಿಶೀಲಿಸುತ್ತಿರುವಾಗ ಮುಹಮ್ಮದ್ ಫಾರೂಕ್ ಅಬ್ದುಲ್ಲಾ ಎಂಬ ಹೆಸರಿನ ನಕಲಿ ಫೇಸ್ಬುಕ್ ಖಾತೆ ಹೊಂದಿರುವ ವ್ಯಕ್ತಿ ಮುಸ್ಲಿಂ ಧರ್ಮಗುರುಗಳ ರೀತಿಯಲ್ಲಿ ಕಾಣುವ ವ್ಯಕ್ತಿಯ ಭಾವ ಚಿತ್ರಕ್ಕೆ ಹಂದಿಯ ಮುಖ ಎಡಿಟ್ ಮಾಡಿ ಪೋಸ್ಟ್ ಮಾಡಿರುವುದು ಕಂಡು ಬಂದಿದೆ.ಸಾರ್ವಜನಿಕರಿಗೆ …
Read More »ಮಹಿಳೆಗೆ ಲೈಂಗಿಕ ಕಿರುಕುಳ: ಖಾಸಗಿ ಕಂಪನಿ ಮಾಲೀಕನ ವಿರುದ್ಧ ದೂರು
ಮೈಸೂರು: ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಖಾಸಗಿ ಕಂಪನಿ ಮಾಲೀಕನ ವಿರುದ್ಧ ಹೆಬ್ಬಾಳು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಕೂರ್ಗಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಕಂಪನಿಯ ಮಾಲೀಕ ಮುರಳೀಧರ್ ವಿರುದ್ಧ ಅದೇ ಕಂಪನಿಯ ಮಹಿಳಾ ಉದ್ಯೋಗಿ ದೂರು ನೀಡಿದ್ದಾರೆ.ನಿನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತದೆ ಎಂದು ಕೆಲಸದ ವೇಳೆ ಕಂಪನಿ ಮಾಲೀಕ ಮುರಳಿಧರ್ ಲೈಂಗಿಕ ಕಿರುಕುಳ ನೀಡಿದ್ದು, ಇದರಿಂದ ಬೇಸತ್ತ ಮಹಿಳೆ ಕೆಲಸ ಬಿಟ್ಟು ಮನೆಯಲ್ಲಿದ್ದರು. ಮಹಿಳೆಯ ಮನೆಗೂ ಬಂದಿದ್ದ ಆರೋಪಿ ಕೆಲಸಕ್ಕೆ …
Read More »ಕರ್ನಾಟಕಕ್ಕೆ ಬೇಕಾಗಿದ್ದ ಕ್ರಿಮಿನಲ್ ಉತ್ತರ ಪ್ರದೇಶದಲ್ಲಿ ಎನ್ಕೌಂಟರ್
ಮುಜಾಫರ್ನಗರ: ಹಲವು ಪ್ರಕರಣಗಳಲ್ಲಿ ಕರ್ನಾಟಕ ಪೊಲೀಸರು ಹುಡುಕುತ್ತಿದ್ದ ಕುಖ್ಯಾತ ಕ್ರಿಮಿನಲ್ವೊಬ್ಬ ಉತ್ತರ ಪ್ರದೇಶದಲ್ಲಿ ಪೊಲೀಸರ ಗುಂಡಿಗೆ ಬಲಿಯಾಗಿದ್ದಾನೆ. ಈತನ ತಲೆಗೆ 50000 ರೂ. ಬಹುಮಾನ ಘೋಷಿಸಲಾಗಿತ್ತು. ಇಟ್ಟಿಗೆ ಗೂಡೊಂದರ ಬಳಿ ಡಕಾಯಿತರು ಅಡಗಿಕೊಂಡಿದ್ದಾರೆ ಎಂಬ ಮಾಹಿತಿಯನ್ನು ಆಧರಿಸಿ ಪೊಲೀಸರು ದಾಳಿ ನಡೆಸಿದರು.ಈ ವೇಳೆ ಗುಂಡಿನ ಚಕಮಕಿ ನಡೆದಿದ್ದು, ಎನ್ಕೌಂಟರ್ನಲ್ಲಿ ಕ್ರಿಮಿನಲ್ ಸಮಯ್ದೀನ್ (35) ಮೃತಪಟ್ಟಿದ್ದಾನೆ. ಆದರೆ ಆತನ 5 ಮಂದಿ ಸಹಚರರು ತಪ್ಪಿಸಿಕೊಂಡರು. ಅವರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು …
Read More »ತೋವಿನಕೆರೆ: ನೇಣು ಬಿಗಿದುಕೊಂಡು ಶಿಕ್ಷಕ ಆತ್ಮಹತ್ಯೆ
ಕೊರಟಗೆರೆ ತಾಲ್ಲೂಕು ಕುರಂಕೋಟೆ ಗ್ರಾಮದ ಚಿನ್ನೇನಹಳ್ಳಿ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದ ದೇವರಾಜು (56) ಎಂಬುವರು ಸೋಮವಾರ ರಾತ್ರಿ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಶಾಲೆ ವಿದ್ಯಾರ್ಥಿನಿ ಜತೆಗೆ ದೇವರಾಜು ಅಸಭ್ಯವಾಗಿ ವರ್ತಿಸಿದ್ದರು ಎನ್ನಲಾಗಿದೆ.ಈ ಸಂಬಂಧ ಕೆಲವು ಹಿರಿಯರು ಸೇರಿಕೊಂಡು ವಿದ್ಯಾರ್ಥಿನಿ ಕುಟುಂಬದವರ ಜತೆಗೆ ರಾಜಿ ಸಂಧಾನ ನಡೆಸಿದ್ದರು. ಇದರ ನಡುವೆ ಕೆಲವು ಮಧ್ಯವರ್ತಿಗಳು, ಯೂಟೂಬ್ ಪತ್ರಕರ್ತರು ಎಂದು ಹೇಳಿಕೊಂಡವರು ಹಣಕ್ಕಾಗಿ ಪೀಡಿಸಿದ್ದರು. ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ …
Read More »ಹೈದರಾಬಾದ್: ಮೂರು ವಿಮಾನಗಳಿಗೆ ಹುಸಿ ಬಾಂಬ್ ಬೆದರಿಕೆ
ಇಲ್ಲಿನ ರಾಜೀವ್ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (ಆರ್ಜಿಐಎ) ಬರುತ್ತಿದ್ದ ಮೂರು ವಿಮಾನಗಳಲ್ಲಿ ಬಾಂಬ್ ಇರಿಸಿರುವುದಾಗಿ ದುಷ್ಕರ್ಮಿಗಳು ಬೆದರಿಕೆ ಸಂದೇಶ ಕಳುಹಿಸಿರುವ ಘಟನೆ ಭಾನುವಾರ ತಡರಾತ್ರಿ ನಡೆದಿದೆ. ತಪಾಸಣೆ ನಡೆಸಿದ ಬಳಿಕ ಇದು ಹುಸಿ ಸಂದೇಶ ಎಂಬುದು ದೃಢಪಟ್ಟಿದೆ ಎಂದು ಪೊಲೀಸರು ಸೋಮವಾರ ಹೇಳಿದ್ದಾರೆ.ಬ್ರಿಟನ್ನ ಹೀಥ್ರೋದಿಂದ ಬರುತ್ತಿದ್ದ ಬ್ರಿಟಿಷ್ ಏರ್ವೇಸ್ನ ವಿಮಾನ (ಬಿಎ277) ಹಾಗೂ ಫ್ರಾಂಕ್ಫರ್ಟ್ನಿಂದ ಆಗಮಿಸುತ್ತಿದ್ದ ಲುಫ್ತಾನ್ಸಾ (ಎಲ್ಎಚ್ 752), ಕಣ್ಣೂರಿನಿಂದ ಬರುತ್ತಿದ್ದ ಇಂಡಿಗೊ (6ಇ 7178) ವಿಮಾನಗಳಲ್ಲಿ …
Read More »*ಗ್ಯಾಸ್ ಗೀಸರ್ ಸೋರಿಕೆ: ತಾಯಿ-ಮಗು ಸಾವು*
ಗ್ಯಾಸ್ ಗೀಸರ್ ಸೋರಿಕೆಯಾಗಿ ತಾಯಿ ಹಾಗೂ ಮಗು ಸಾವನ್ನಪ್ಪಿರುವ ದಾರುಣ ಘಟನೆ ಬೆಂಗಳೂರಿನಲ್ಲಿ ನಡೆದಿದೆ.ಬೆಂಗಳೂರಿನ ಗೋವಿಂದರಾಜ ನಗರದಲ್ಲಿ ಈ ದುರಂತ ಸಂಭವಿಸಿದೆ. ಮೃತರನ್ನು ಚಾಂದಿನಿ (26) ಯುವಿ (4) ಎಂದು ಗುರುತಿಸಲಾಗಿದೆ. ಸ್ನಾನಕ್ಕೆ ಹೋಗಿದ್ದ ವೇಳೆ ಗ್ಯಾಸ್ ಗೀಸರ್ ಸೋರಿಕೆಯಾಗಿದ್ದು, ತೀವ್ರ ಅವಸ್ಥರಾಗಿದ್ದ ತಾಯಿ-ಮಗುವನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಆದರೆ ಚಿಕಿತ್ಸೆ ಫಲಕಾರುಯಾಗದೇ ಇಬ್ಬರೂ ಸಾವನ್ನಪ್ಪಿದ್ದಾರೆ. ಗೋವಿಂದರಾಜನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





