Breaking News

ತೋವಿನಕೆರೆ: ನೇಣು ಬಿಗಿದುಕೊಂಡು ಶಿಕ್ಷಕ ಆತ್ಮಹತ್ಯೆ

ಕೊರಟಗೆರೆ ತಾಲ್ಲೂಕು ಕುರಂಕೋಟೆ ಗ್ರಾಮದ ಚಿನ್ನೇನಹಳ್ಳಿ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದ ದೇವರಾಜು (56) ಎಂಬುವರು ಸೋಮವಾರ ರಾತ್ರಿ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಶಾಲೆ ವಿದ್ಯಾರ್ಥಿನಿ ಜತೆಗೆ ದೇವರಾಜು ಅಸಭ್ಯವಾಗಿ ವರ್ತಿಸಿದ್ದರು ಎನ್ನಲಾಗಿದೆ.ಈ ಸಂಬಂಧ ಕೆಲವು ಹಿರಿಯರು ಸೇರಿಕೊಂಡು ವಿದ್ಯಾರ್ಥಿನಿ ಕುಟುಂಬದವರ ಜತೆಗೆ ರಾಜಿ ಸಂಧಾನ ನಡೆಸಿದ್ದರು. ಇದರ ನಡುವೆ ಕೆಲವು ಮಧ್ಯವರ್ತಿಗಳು, ಯೂಟೂಬ್ ಪತ್ರಕರ್ತರು ಎಂದು ಹೇಳಿಕೊಂಡವರು ಹಣಕ್ಕಾಗಿ ಪೀಡಿಸಿದ್ದರು. ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

Share News

About BigTv News

Check Also

ವಿಟ್ಲ: 35 ಬಾರಿ ವಾರಂಟ್ ಜಾರಿಯಾಗಿದ್ದ ಆರೋಪಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂಧನ

ಕಳೆದ ಒಂಬತ್ತು ವರ್ಷಗಳಿಂದ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ, ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಕುಖ್ಯಾತ ಆರೋಪಿಯನ್ನು ವಿಟ್ಲ …

Leave a Reply

Your email address will not be published. Required fields are marked *