Breaking News

BigTv News

ಸಿಕ್ಕಿಂನಲ್ಲಿ ನಿಂತಿದ್ದ ಟ್ರಕ್ ಗೆ ಟ್ಯಾಕ್ಸಿ ಡಿಕ್ಕಿಯಾಗಿ ಭೀಕರ ಅಪಘಾತ: ಮೂವರು ಸಾವು, 8 ಮಂದಿಗೆ ಗಾಯ

ಸಿಕ್ಕಿಂನ ರಾಷ್ಟ್ರೀಯ ಹೆದ್ದಾರಿ 10 ರಲ್ಲಿ ಟ್ಯಾಕ್ಸಿಯೊಂದು ನಿಂತಿದ್ದ ಟ್ರಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ ಮೂವರು ಸಾವನ್ನಪ್ಪಿದ್ದು, ಎಂಟು ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ನವೆಂಬರ್ 22 ಮತ್ತು 23 ರ ಮಧ್ಯರಾತ್ರಿ ಸಿಕ್ಕಿಂ ನಿವಾಸಿಗಳನ್ನು ಕರೆದೊಯ್ಯುತ್ತಿದ್ದ ವಾಹನವು ಪಕ್ಕದ ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಭಾಗವಹಿಸಿ ಹಿಂತಿರುಗುತ್ತಿದ್ದಾಗ ಈ ಘಟನೆ ನಡೆದಿದೆ.11 ಪ್ರಯಾಣಿಕರಲ್ಲಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಚಾಲಕ ಸೇರಿದಂತೆ ಉಳಿದವರು ಗಂಭೀರವಾಗಿ ಗಾಯಗೊಂಡು …

Read More »

ಟ್ರೇಡಿಂಗ್ ಆಯಪ್‌ನಲ್ಲಿ 46.5 ಲಕ್ಷ ವಂಚನೆ | ಬ್ಯಾಂಕ್ ಮ್ಯಾನೇಜರ್ ಸೇರಿ ನಾಲ್ವರು ಅರೆಸ್ಟ್‌!

ಕಾರವಾರ: ಆನ್‌ಲೈನ್‌ನಲ್ಲಿ ಅತಿ ಹೆಚ್ಚು ಹಣ ಗಳಿಸಬಹುದು ಎಂದು ನಂಬಿಸಿ, ಫಾರೆಕ್ಸ್‌ ಟ್ರೇಡಿಂಗ್ ಆಯಪ್ ಮೂಲಕ ಹೊನ್ನಾವರದ ಉದ್ಯಮಿಯೊಬ್ಬರಿಗೆ ಬರೋಬ್ಬರಿ 46.50 ಲಕ್ಷ ರೂ. ವಂಚಿಸಿದ್ದಾರೆ.ಹೊನ್ನಾವರದ ಪ್ರಭಾತನಗರದ ನಿವಾಸಿ ಗಿರೀಶ್ (35) ಎಂಬವರು ಫೇಸ್‌ಬುಕ್‌ನಲ್ಲಿ ಟ್ರೇಡಿಂಗ್ ಜಾಹೀರಾತು ನೋಡಿ, ‘MarketAxess’ ಎಂಬ ಆಯಪ್ ಡೌನ್‌ಲೋಡ್ ಮಾಡಿಕೊಂಡಿದ್ದರು. ಬಳಿಕ ಆರೋಪಿಗಳು ವಾಟ್ಸ್​ಆಯಪ್ ಮೂಲಕ ಸಂಪರ್ಕಿಸಿ, ಮೇ 28, 2025 ರಿಂದ ಜುಲೈ 23, 2025 ರ ಅವಧಿಯಲ್ಲಿ ಹಂತ, ಹಂತವಾಗಿ ಒಟ್ಟು …

Read More »

ಎಂಟು ವರ್ಷಗಳ ದಾಂಪತ್ಯದ ದುರಂತ ಅಂತ್ಯ: ಪತ್ನಿ ಶೀಲ ಶಂಕಿಸಿ ಪತಿಯಿಂದ ಕೊಲೆ

ಪತ್ನಿಯ ಶೀಲದ ಬಗ್ಗೆ ಶಂಕೆ ಪಟ್ಟು, ಪತಿ ತಾನೇ ಪತ್ನಿಯನ್ನು ಹತ್ಯೆ ಮಾಡಿದ ಹೃದಯ ಕಲುಕುವ ಘಟನೆ ಕೋಲಾರ ತಾಲ್ಲೂಕಿನ ಜನ್ನಘಟ್ಟ ಗ್ರಾಮದಲ್ಲಿ ನಡೆದಿದೆ.ದಂಪತಿಗೆ ಆರು ವರ್ಷದ ಒಂದು ಹೆಣ್ಣು ಮಗು ಸಹ ಇದೆ. ಕುಟುಂಬದಲ್ಲಿ ಆಗಾಗ ಜಗಳಗಳು ನಡೆಯುತ್ತಿದ್ದು, ಪತ್ನಿಯ ನಡತೆಯ ಮೇಲೆ ಶಂಕೆ ಹೊಂದಿದ್ದ ಶಿವರಾಜ್, ಆಕ್ರೋಶದಿಂದಲೇ ಕಾವ್ಯಾಳ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಬಳಿಕ ಪತ್ನಿ ಪ್ರಜ್ಞೆ ತಪ್ಪಿದ್ದಾಳೆ ಎಂದು ನಾಟಕವಾಡಿದ ಶಿವರಾಜ್, ಕೊನೆಗೂ ಪೊಲೀಸರ …

Read More »

ಬೈಕ್ ಸವಾರನ ಅಡ್ಡಗಟ್ಟಿ ದರೋಡೆ… ಪೊಲೀಸರಿಂದ ಮೂವರ ಬಂಧನ

ಬೈಕ್ ಸವಾರನ ಅಡ್ಡಗಟ್ಟಿ ಮಾರಕಾಸ್ತ್ರದಿಂದ ಹಲ್ಲೆ ನಡೆಸಿ ದರೋಡೆಗೆ ಯತ್ನಿಸಿದ್ದ ಮೂವರು ಆರೋಪಿಗಳನ್ನು ವಿಲ್ಸನ್‌ ಗಾರ್ಡನ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.ಆರೋಪಿಗಳು ನ.15 ರಂದು ಮುಂಜಾನೆ ಶಾಂತಿನಗರದ ಅಯ್ಯಪ್ಪಸ್ವಾಮಿ ದೇವಾಲಯ ಬಳಿ ದ್ವಿಚಕ್ರ ವಾಹನ ಸವಾರನೊಬ್ಬನನ್ನು ಅಡ್ಡಗಟ್ಟಿ ಮಾರಕಾಸ್ತ್ರದಿಂದ ಹಲ್ಲೆ ನಡೆಸಿ ಮೊಬೈಲ್‌ ಸೇರಿ ಇತರೆ ವಸ್ತುಗಳನ್ನು ದರೋಡೆ ಯತ್ನಿಸಿದ್ದರು. ಅದಕ್ಕೆ ಬೈಕ್‌ ಸವಾರ ಪ್ರತಿರೋಧ ವ್ಯಕ್ತಪಡಿಸಿದ್ದರಿಂದ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದರು. ಈ ಸಂಬಂಧ ದಾಖಲಾಗಿದ್ದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು …

Read More »

ಪಾಕಿಸ್ತಾನದಲ್ಲಿ ಉಗ್ರರಿಂದ ಆತ್ಮಾಹುತಿ ಬಾಂಬ್ ದಾಳಿ : ಮೂವರು ಸಾವು

ಪಾಕಿಸ್ತಾನದ ಪೇಶಾವರದಲ್ಲಿರುವ ಫ್ರಾಂಟಿಯರ್ ಕಾನ್‌ಸ್ಟಾಬ್ಯುಲರಿ ಪ್ರಧಾನ ಕಚೇರಿಯನ್ನು ಗುರಿಯಾಗಿಸಿಕೊಂಡು ಸೋಮವಾರ ಬೆಳಿಗ್ಗೆ ಬಂದೂಕುಧಾರಿಗಳು ಮತ್ತು ಶಂಕಿತ ಆತ್ಮಹತ್ಯಾ ಬಾಂಬರ್‌ಗಳು ನಡೆಸಿದ ದಾಳಿಯಲ್ಲಿ ಮೂವರು ಕಮಾಂಡೋಗಳು ಮತ್ತು ಮೂವರು ದಾಳಿಕೋರರು ಸೇರಿದಂತೆ ಆರು ಜನರು ಸಾವನ್ನಪ್ಪಿದರು.ಈ ದಾಳಿಯು ವ್ಯಾಪಕ ಭದ್ರತಾ ಕಾರ್ಯಾಚರಣೆಗೆ ನಾಂದಿ ಹಾಡಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅರೆಸೈನಿಕ ಕಟ್ಟಡದ ಮುಖ್ಯ ದ್ವಾರದಲ್ಲಿ ಎರಡು ಸ್ಫೋಟಗಳೊಂದಿಗೆ ದಾಳಿ ಪ್ರಾರಂಭವಾಯಿತು, ನಂತರ ಶಸ್ತ್ರಸಜ್ಜಿತ ವ್ಯಕ್ತಿಗಳು ಆವರಣಕ್ಕೆ ನುಗ್ಗಿ ಭದ್ರತಾ ಸಿಬ್ಬಂದಿಯೊಂದಿಗೆ ಗುಂಡಿನ …

Read More »

ಸಾಲಬಾಧೆಯಿಂದ ಬೆಂಕಿ ಹಚ್ಚಿಕೊಂಡು ರೈತ ಆತ್ಮಹತ್ಯೆ

ಸಾಲಬಾಧೆಯಿಂದ ವೃದ್ಧ ರೈತ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೀದರ್ ಜಿಲ್ಲೆ ಚಿಟಗುಪ್ಪ ತಾಲೂಕಿನ ಬಶಿರಾಪೂರ ಗ್ರಾಮದಲ್ಲಿ ಭಾನುವಾರ ನಡೆದಿದೆ.ಭೀಮಣ್ಣ(92) ಆತ್ಮಹತ್ಯೆ ಮಾಡಿಕೊಂಡ ರೈತ. ಈ ಬಾರಿ ಅತಿವೃಷ್ಟಿಯಿಂದಾಗಿ ಬೆಳೆ ಹಾನಿಯಾದ ಹಿನ್ನೆಲೆಯಲ್ಲಿ ಸಾಲ ತೀರಿಸುವ ಚಿಂತೆಯಿಂದ ಭೀಮಣ್ಣ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.ನಿರ್ಣಾ ಪಿಕೆಪಿಎಸ್ ಬ್ಯಾಂಕ್ ನಲ್ಲಿ 1.30 ಲಕ್ಷ ರೂ., ಬೀದರ್ ಸೆಂಟ್ರಲ್ ಬ್ಯಾಂಕ್ ನಲ್ಲಿ 6.76 ಲಕ್ಷ ರೂ., ಎಸ್.ಬಿ.ಐ.ನಲ್ಲಿ 10,000 ರೂ. ಸೇರಿ ಇತರೆಡೆ …

Read More »

ಬೆಂಗಳೂರಲ್ಲಿ ಸಿಬ್ಬಂದಿಗೆ ಲೈಂಗಿಕ ದೌರ್ಜನ್ಯ: ಪೈಲಟ್ ವಿರುದ್ಧ ಕೇಸ್

ಬೆಂಗಳೂರಿನ ಹೋಟೆಲ್ ಒಂದರಲ್ಲಿ ಕ್ಯಾಬಿನ್ ಸಿಬ್ಬಂದಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಚಾರ್ಟರ್ಡ್ ವಿಮಾನದ ಪೈಲಟ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಿಎನ್‌ಎಸ್‌ನ ಸಂಬಂಧಿತ ವಿಭಾಗದ ಅಡಿಯಲ್ಲಿ ಶೂನ್ಯ ಎಫ್‌ಐಆರ್‌ (ಅಪರಾಧ ನಡೆದ ಸ್ಥಳವನ್ನು ಲೆಕ್ಕಿಸದೆ ಎಫ್‌ಐಆರ್‌ ದಾಖಲಿಸುವುದು) ದಾಖಲಿಸಲಾಗಿದ್ದು, ಬೆಂಗಳೂರಿನ ಹಲಸೂರು ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ. ಅವರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ ಎಂದು ಬೇಗಂಪೇಟೆ ಪೊಲೀಸ್‌ ಠಾಣೆಯ ಅಧಿಕಾರಿಗಳು ತಿಳಿಸಿದ್ದಾರೆ.

Read More »

ಬೆಂಗಳೂರು ದರೋಡೆ ಕೇಸ್: ಹೊಸಕೋಟೆ ಕೆರೆ ಬಳಿ ಹಣ ಇರಿಸಿ ಎಸ್ಕೇಪ್ ಆಗಿತ್ತು ಗ್ಯಾಂಗ್!

ದರೋಡೆ ಪ್ರಕರಣದಲ್ಲಿ, ಕದ್ದ ಹಣವನ್ನು ಹೊಸಕೋಟೆಯ ಪಾಳು ಮನೆಯಲ್ಲಿ ಬಚ್ಚಿಡಲಾಗಿತ್ತು. ಸಿಎಂಎಸ್ ಉದ್ಯೋಗಿ ಹಾಗೂ ನಿರುದ್ಯೋಗಿ ಯುವಕರ ಜೊತೆ ಸೇರಿ ಗೋವಿಂದಪುರ ಠಾಣೆಯ ಕಾನ್ಸ್‌ಟೇಬಲ್‌ ಅಣ್ಣಪ್ಪನೇ ಈ ದರೋಡೆಯ ಸೂತ್ರಧಾರಿಯಾಗಿದ್ದನು.ಕಾರ್ ತೆಗೆದುಕೊಂಡು ಹೊಸಕೋಟೆ ಟೋಲ್‌ಗೆ ಹೋಗದೇ ಕೆರೆ ಬಳಿ ಹೋಗಿದ್ದರು. ಕೆರೆ ಬಳಿ ಹಣ ಬಚ್ಚಿಟ್ಟ ಗ್ಯಾಂಗ್ ಚಿತ್ತೂರು ಕಡೆ ಹೋಗಿತ್ತು. ಆರೋಪಿಗಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಹೊಸಕೋಟೆಯ ಪಾಳು ಮನೆಯಲ್ಲಿ ಹಣ ಇಟ್ಟಿರೋದಾಗಿ ಬಾಯಿ ಬಿಟ್ಟಿದ್ದರು.ಬರೋಬ್ಬರಿ 15 ದಿನ …

Read More »

ಜೂಜು ಅಡ್ಡೆ ಮೇಲೆ ದಾಳಿ: ಐವರ ಬಂಧನ

ಕನಕಪುರ: ಜೂಜು ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿ ಐವರನ್ನು ಬಂಧಿಸಿರುವ ಘಟನೆ ಕುರುಬಳ್ಳಿ ಗ್ರಾಮದಲ್ಲಿ ಶನಿವಾರ ನಡೆದಿದೆ.ಕುರುಬಳ್ಳಿ ನಂದೀಶ, ಮಾದೇಶ, ಪುಟ್ಟಸ್ವಾಮಿ, ನಾರಾಯಣ, ನಾಗೇಶ್ ಬಂಧಿತರು. ಗ್ರಾಮದ ಸರ್ಕಾರಿ ಗೋಮಾಳದ ಮಾವಿನ ಮರದ ಕೆಳಗಡೆ ಕುಳಿತು ಜೂಜಾಡುತ್ತಿದ್ದಾಗ ಸಾತನೂರು ಠಾಣೆ ಸಬ್ ಇನ್‌ಸ್ಪೆಕ್ಟರ್ ದುರ್ಗೆಗೌಡ ಮತ್ತು ತಂಡ ಶನಿವಾರ ದಾಳಿ ನಡೆಸಿದೆ.

Read More »

ಕೊಪ್ಪಳದಲ್ಲಿ ಘೋರ ದುರಂತ : ಕೆರೆಯಲ್ಲಿ ತೆಪ್ಪ ಮಗುಚಿ ಇಬ್ಬರು ಮೀನುಗಾರರು ನೀರುಪಾಲು

ಕೆರೆಯಲ್ಲಿ ತೆಪ್ಪ ಮಗುಚಿ ಇಬ್ಬರು ಮೀನುಗಾರರು ನೀರು ಪಾಲಾಗಿರುವ ಘಟನೆ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಮಲಕಸಮುದ್ರ ಗ್ರಾಮದಲ್ಲಿ ನಡೆದಿದೆ ಫಕೀರ್ ಸಾಬ್ (36) ಹಾಗೂ ಶರಣಪ್ಪ ಎಮ್ಮೆರ್ (32) ನಿರುಪಾಲಾಗಿದ್ದಾರೆ.

Read More »