ನಾಲ್ವರು ಕಾಲ್ ಸೆಂಟರ್ ಉದ್ಯೋಗಿಗಳನ್ನುನ್ನು ಕಿಡ್ನ್ಯಾಪ್ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಪ್ರಕರಣದಲ್ಲಿ ಕಾನ್ಸ್ ಟೇಬಲ್ ಸೇರಿ 8 ಆರೋಪಿಗಳನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.ಛಲಪತಿ, ಭರತ್, ಪವನ್, ಪ್ರಸನ್ನ, ಅತೀಕ್, ಜಭಿವುಲ್ಲ ಸೇರಿದಂತೆ 8 ಆರೋಪಿಗಳನ್ನು ಕೋರಮಂಗಲ ಪೊಲೀಸರು ಬಂಧಿಸಿದ್ದಾರೆ.ಹೊಸಕೋಟೆಯ ಲಾಡ್ಜ್ ನಲ್ಲಿ ನಾಲ್ವರು ಉದ್ಯೋಗಿಗಳನ್ನು ಕೂಡಿ ಹಾಕಿದ್ದರು. ನಾಲ್ವರನ್ನು ರಕ್ಷಿಸಲಾಗಿದ್ದು, 8 ಆರೋಪಿಗಳನ್ನು ಬಂಧಿಸಲಾಗಿದೆ.
Read More »ಜೆಡಿಎಸ್ ಮುಖಂಡನ ಕೊಲೆ ಯತ್ನ ಕೇಸ್: ಕಾಂಗ್ರೆಸ್ ನಾಯಕಿ ಸೆರೆ.
ಜೆಡಿಎಸ್ ಮುಖಂಡ ಟಿ.ಅಸ್ಗರ್ ಕೊಲೆ ಯತ್ನ ಪ್ರಕರಣದ ಆರೋಪಿಗೆ ನೆರವು ನೀಡಿದ ಆರೋಪದಡಿ ಕಾಂಗ್ರೆಸ್ ನಾಯಕಿ ಸವಿತಾಬಾಯಿ ಮಲ್ಲೇಶ್ ನಾಯ್ಕ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ತಲೆಮರೆಸಿಕೊಂಡಿರುವ ಆರೋಪಿ ಬಂಧನಕ್ಕೆ ಪೊಲೀಸರು ಬಲೆ ಬೀಸಿದಾಗ ಆತನಿಗೆ ಸವಿತಾಬಾಯಿ ಹಣಕಾಸು ಹಾಗೂ ಆಶ್ರಯ ನೀಡಿ ಸಹಾಯ ಮಾಡಿದ್ದು ಬಯಲಿಗೆ ಬಂದಿತ್ತು. ಸವಿತಾಬಾಯಿ ಮಾಯಕೊಂಡ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ನ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದರು. ಟಿಕೆಟ್ ಸಿಗದೆ ಇದ್ದಾಗ ಪಕ್ಷೇತರರಾಗಿ ಸ್ಪರ್ಧಿಸಿ ಪರಾಭವಗೊಂಡಿದ್ದರು. ಬಳಿಕ ಮರಳಿ …
Read More »ಉಚ್ಚಿಲ : ಎಕ್ಸ್ ಪ್ರೆಸ್ ಬಸ್ ನಿಂದ ಬಿದ್ದು ವ್ಯಕ್ತಿ ಸಾವು.
ಮಂಗಳೂರಿನಿಂದ ಉಡುಪಿಗೆ ಬರುತ್ತಿದ್ದ ಖಾಸಗಿ ಎಕ್ಸ್ಪ್ರೆಸ್ ಬಸ್ನಿಂದ ಕೆಳಗೆ ಬಿದ್ದು ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಉಚ್ಚಿಲದಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದೆ.ಮಂಗಳೂರಿನ ಹೊಟೇಲೊಂದರ ನೌಕರ ಕಾಪು ಪಡುಗ್ರಾಮದ ನಿವಾಸಿ ಸಕೇಂದ್ರ ಪೂಜಾರಿ (52) ಮೃತಪಟ್ಟವರು.ಬಸ್ ಉಚ್ಚಿಲಕ್ಕೆ ತಲುಪಿದಾಗ ಇಳಿಯಲು ಸಿದ್ಧರಾಗಿ ಮುಂಭಾಗದ ಬಾಗಿಲ ಬಳಿ ನಿಂತಿದ್ದರು. ಅಷ್ಟರಲ್ಲಿ ಚಾಲಕನು ಎದುರಿನಿಂದ ಹೋಗುತ್ತಿದ್ದ ಮತ್ತೂಂದು ವಾಹನವನ್ನು ಹಿಂದಿಕ್ಕಿಲು ಬಸ್ಸನ್ನು ಒಮ್ಮೆಲೇ ನಿರ್ಲಕ್ಷ್ಯದಿಂದ ಬಲಕ್ಕೆ ತಿರುಗಿಸಿದ ಪರಿಣಾಮ ಬಾಗಿಲ ಮೂಲಕ …
Read More »ಸೇಬು ಸಾಗಾಟ ಲಾರಿ ಬೆಂಕಿಗಾಹುತಿ; ಭಾರೀ ನಷ್ಟ.
ಶಿವಮೊಗ್ಗದಿಂದ ಮಂಗಳೂರು ಕಡೆಗೆ ಸೇಬು ಸಾಗಾಟ ಮಾಡುತ್ತಿದ್ದ ಲಾರಿಯೊಂದು ಶನಿವಾರ ನಸುಕಿನ ಜಾವದಲ್ಲಿ ಬೆಂಕಿಗಾಹುತಿಯಾಗಿ ಭಾರೀ ನಷ್ಟ ಉಂಟಾಗಿದೆ.ಲಕ್ಷಾಂತರ ಮೌಲ್ಯದ ಲಾರಿ ಹಾಗೂ ಇತರ ಪರಿಕರಗಳು ನಷ್ಟವಾಗಿದೆ. ಕಾರ್ಕಳ ಅಗ್ನಿಶಾಮಕ ದಳದ ಸಹಾಯಕ ಠಾಣಾಧಿಕಾರಿ ಚಂದ್ರಶೇಖರ್, ಸಿಬ್ಬಂದಿಗಳಾದ ಅಚ್ಚತ ಕರ್ಕೇರಾ, ಹರಿಪ್ರಸಾದ್ ಶೆಟ್ಟಿಗಾರ್, ಮಹಮ್ಮದ್ ಮುಜಾಬಿಲ್, ದಿನೇಶ್, ನಿತ್ಯಾನಂದ ಇವರು ಕಾರ್ಯಚರಣೆಯಲ್ಲಿ ಪಾಲ್ಗೊಂಡರು.
Read More »ನಡು ರಸ್ತೆಯಲ್ಲೇ ಮಗುವಿನ ಕಿಡ್ನ್ಯಾಪ್ ವಿಫಲ: ಮಾಸ್ಕ್ ವ್ಯಕ್ತಿಯ ವಿರುದ್ಧ ತಂದೆಯ ಹೋರಾಟ,
ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾದ ಸಿಸಿಟಿವಿ ಕ್ಲಿಪ್ನಲ್ಲಿ, ವ್ಯಕ್ತಿಯೊಬ್ಬ ವಸತಿ ಓಣಿಯ ಬಳಿ ಮಗುವನ್ನು ಸಮೀಪಿಸುತ್ತಾನೆ ಮತ್ತು ಸ್ಥಳೀಯರು ಮಧ್ಯಪ್ರವೇಶಿಸುತ್ತಿದ್ದಂತೆ ಪಲಾಯನ ಮಾಡುವ ಮೊದಲು ಅವಳನ್ನು ಎಳೆಯಲು ಸಂಕ್ಷಿಪ್ತವಾಗಿ ಪ್ರಯತ್ನಿಸುತ್ತಾನೆ.ವೀಡಿಯೊದಲ್ಲಿ ಕಂಡುಬರುವ ವ್ಯಕ್ತಿ ವಿವಾದದ ಒಂದು ಬದಿಗೆ ಸಂಬಂಧಿಸಿದೆ ಮತ್ತು ವೈರಲ್ ಕ್ಲಿಪ್ ಸೂಚಿಸುವುದಕ್ಕಿಂತ ಪರಿಸ್ಥಿತಿ ಹೆಚ್ಚು ಸಂಕೀರ್ಣವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಭೀತಿಯನ್ನು ಹರಡದಂತೆ ಅಧಿಕಾರಿಗಳು ಸಾರ್ವಜನಿಕರನ್ನು ಒತ್ತಾಯಿಸಿದ್ದಾರೆ ಮತ್ತು ತನಿಖೆ ಪೂರ್ಣಗೊಂಡ ನಂತರ ಸೂಕ್ತ ಕಾನೂನು ಕ್ರಮ …
Read More »ಎಟಿಎಂ ವಾಹನ ರಾಬರಿ ಗ್ಯಾಂಗ್ ಸಿಕ್ಕಿಬೀಳಲು ಅಣ್ಣಪ್ಪನ ಅತಿವಿನಯವೇ ಕಾರಣ!
ಬೆಂಗಳೂರಿನ ಎಟಿಎಂ ವಾಹನವನ್ನು ದರೋಡೆ ಮಾಡಿದ್ದ ಗ್ಯಾಂಗ್ ಸಿಕ್ಕಿಬೀಳಲು ಕಿಂಗ್ ಪಿನ್ ಕಾನ್ಸ್ ಟೇಬಲ್ ಅಣ್ಣಪ್ಪನ ಅತಿವಿನಯವೇ ಹಾಗೂ ಅತಿ ಬುದ್ದಿವಂತಿಕೆಯೇ ಕಾರಣವಾಗಿತ್ತು ಎಂಬ ಮಾಹಿತಿ ಬೆಳಕಿಗೆ ಬಂದಿದೆ. ತಾನು ಭಾರೀ ಬುದ್ದಿವಂತ ಎಂದು ತೋರಿಸಲು ಹೋಗಿದ್ದ ಅಣ್ಣಪ್ಪ, ಸುಳಿವು ಇಲ್ಲದೇ ಪರದಾಡುತ್ತಿದ್ದ ಪೊಲೀಸರ ಕಾಲಬುಡಕ್ಕೆ ದೊಡ್ಡ ಕ್ಲೂ ನೀಡಿದ್ದ ಎಂದು ತಿಳಿದುಬಂದಿದೆ.ಆತ ಬೀಟ್ ಇರಲಿ ಡ್ಯೂಟಿಯಲ್ಲೇ ಇಲ್ಲ ಎಂಬ ಮಾಹಿತಿ ಸಿಕ್ಕಿತ್ತು. ಇದರಿಂದ ಅನುಮಾನ ಗಟ್ಟಿಗೊಂಡ ಪೊಲೀಸರು ಅಣ್ಣಪ್ಪನನ್ನು …
Read More »ರೈಲು ಹಳಿ ಮೇಲೆ ಕಬ್ಬಿಣದ ರಾಡ್ ಇಟ್ಟ ಕಿಡಿಗೇಡಿಗಳು: ಅದೃಷ್ಟವಶಾತ್ ತಪ್ಪಿದ ಭಾರಿ ಅನಾಹುತ.
ರಾಮನಗರ -ಚನ್ನಪಟ್ಟಣ ನಡುವಿನ ವಂದರಗೂಪ್ಪೆ ಗ್ರಾಮದ ಬಳಿ ರೈಲು ಹಳಿ ಮೇಲೆ ಕಿಡಿಗೇಡಿಗಳು ಕಬ್ಬಿಣದ ರಾಡ್ ಇಟ್ಟಿದ್ದಾರೆ.ರಾಡ್ ಇದೇ ಮಾರ್ಗವಾಗಿ ಚಲಿಸುತ್ತಿದ್ದ ಹಂಪಿ ಎಕ್ಸ್ ಪ್ರೆಸ್ ರೈಲಿನ ಡೀಸೆಲ್ ಟ್ಯಾಂಕ್ ಗೆ ಬಡಿದ ಪರಿಣಾಮ ಡೀಸೆಲ್ ಲೀಕ್ ಆಗಿ ಇಂಜಿನ್ ತಾಂತ್ರಿಕ ವೈಫಲ್ಯ ಕಂಡುಬಂದಿದ್ದು, ಸುಮಾರು 2 ಗಂಟೆ ಕಾಲ ರೈಲು ನಿಂತಿದೆ.ಮೈಸೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಹಂಪಿ ಎಕ್ಸ್ಪ್ರೆಸ್ ರೈಲು ರಾಮನಗರ- ಚನ್ನಪಟ್ಟಣ ನಡುವಿನ ವಂದರಗೂಪ್ಪೆ ಗ್ರಾಮದಲ್ಲಿ ಕೆಟ್ಟು ನಿಂತಿದೆ. …
Read More »ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರಕ್ಕೆ ತಂದೆಯಿಂದಲೇ ಕುಮ್ಮಕ್ಕು: ತಂದೆ ಹಾಗೂ ಆತನ ಸ್ನೇಹಿತನ ವಿರುದ್ಧ ಪೊಕ್ಸೋ ಕೇಸ್ ದಾಖಲು
ಕೊಪ್ಪಳ: ಮಗಳಿಗೆ ರಕ್ಷನಾಗಬೇಕಿದ್ದ ತಂದೆಯೇ ಮಗಳನ್ನು ಸ್ನೇಹಿತನ ಮನೆಗೆ ಕರೆದೊಯ್ದು, ಆಕೆಯ ಮೇಲೆ ಅತ್ಯಾಚಾರವೆಸಗುವಂತೆ ಕುಮ್ಮಕ್ಕು ನೀಡಿರುವ ವಿಕೃತ ಘಟನೆ ಕೊಪ್ಪಳದಲ್ಲಿ ನಡೆದಿದೆ.ಅಪ್ರಾಪ್ತ ಮಗಳು ನೀಡಿದ ದೂರಿನ ಹಿನ್ನೆಲೆಯಲ್ಲಿ ಕೊಪ್ಪಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ತಂದೆ ಹಾಗೂ ಆತನ ಸ್ನೇಹಿತನ ವಿರುದ್ಧ ಮಗಳು ದೂರು ದಾಖಲಿಸಿದ್ದಾಳೆ. ತಂದೆ ತನ್ನನ್ನು ತನ್ನ ಸ್ನೇಹಿತನ ಮನೆಗೆ ಕರೆದೊಯ್ದಿದ್ದ. ಈ ವೇಳೆ ಸ್ನೇಹಿತನಿಗೆ ಮಗಳ ಮೇಲೆ ಅತ್ಯಾಚಾರ ನಡೆಸುವಂತೆ ಪರೋಕ್ಷವಾಗಿ ತಂದೆ ಕುಮ್ಮಕ್ಕು ನೀಡಿದ್ದು, …
Read More »ಎಪಿಕೆ ಫೈಲ್ ಕ್ಲಿಕ್ ಮಾಡಿದ ಮಹಿಳೆಗೆ 2.44 ಲಕ್ಷ ರೂ. ವಂಚನೆ
ಕುಂಜಿಬೆಟ್ಟಿನ ಗಾಯತ್ರಿ ಅವರು ನ. 17ರಂದು ಫೇಸ್ಬುಕ್ನಲ್ಲಿ ಜೀವ ವಿಮೆ ಪಾಲಿಸಿಯನ್ನು ನವೀಕರಿಸುವ ಬಗ್ಗೆ ಜಾಹೀರಾತು ನೋಡಿದ್ದರು. ಅದರ ಲಿಂಕ್ ಒತ್ತಿದಾಗ ವಾಟ್ಸ್ಆಯಪ್ಗೆ ಎಪಿಕೆ ಫೈಲ್ ಬಂದಿತ್ತು. ಅದನ್ನು ತೆರೆದು ಇನ್ಸ್ಟಾಲ್ ಮಾಡಿದ ಕೂಡಲೇ ಅಪರಿಚಿತ ವ್ಯಕ್ತಿ ಕರೆ ಮಾಡಿ ಇಮೇಲ್ ಐಡಿ ಪಡೆದುಕೊಂಡನು. ಅದೇ ದಿನ ರಾತ್ರಿ ಗಾಯತ್ರಿ ಅವರ ಯೂನಿಯನ್ ಬ್ಯಾಂಕ್ ಖಾತೆಯಿಂದ ಹಂತಹಂತವಾಗಿ 2,44,000 ರೂ.ಗಳನ್ನು ಆನ್ಲೈನ್ ಮೂಲಕ ವರ್ಗಾಯಿಸಿಕೊಂಡಿದ್ದಾನೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Read More »ಥಾಣೆಯಲ್ಲಿ ಭೀಕರ ಅಪಘಾತ, ನಾಲ್ವರು ಸಾವು, ಫ್ಲೈಓವರ್ನಿಂದ ಕೆಳಗೆ ಬಿದ್ದ ವ್ಯಕ್ತಿ
ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿರುವ ಅಂಬರ್ನಾಥ್ ಫ್ಲೈಓವರ್ ಮೇಲೆ ಭೀಕರ ಅಪಘಾತವೊಂದು ಸಂಭವಿಸಿದೆ. ಟಾಟಾ ನೆಕ್ಸಾನ್ ಕಾರು ಇದ್ದಕ್ಕಿದ್ದಂತೆ ನಿಯಂತ್ರಣ ತಪ್ಪಿ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಹಲವಾರು ಬೈಕ್ಗಳಿಗೆ ಡಿಕ್ಕಿ ಹೊಡೆದಿದೆ.ಡಿಕ್ಕಿ ಎಷ್ಟು ಭೀಕರವಾಗಿತ್ತೆಂದರೆ, ಕಾರು ಚಾಲಕ ಸೇರಿದಂತೆ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಮತ್ತು ಇತರ ನಾಲ್ವರು ಗಂಭೀರವಾಗಿ ಗಾಯಗೊಂಡರು. ಈ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಅದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಪುರಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದ ಚೌಬೆ ಅವರ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





