ತುಮಕೂರು: ಮಾಜಿ ಗಂಡನಿಂದಲೇ ಪತ್ನಿಯ ಪ್ರಿಯಕರನ ಭೀಕರ ಕೊಲೆ ನಡೆದಿರುವ ಘಟನೆ ನಗರದ ಜನತಾ ಕಾಲೋನಿಯಲ್ಲಿ ನಡೆದಿದೆ. 26 ವರ್ಷದ ದಸ್ತಗೀರ್ ಎಂಬಾತ ಕೊಲೆಯಾಗಿದ್ದು, 36 ವರ್ಷದ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಮಹಿಳೆ ಗಂಡನಿಂದ ವಿಚ್ಛೇದನ ಪಡೆದು ದಸ್ತಗೀರ್ ಜೊತೆ ವಾಸಿಸುತ್ತಿದ್ದಳು. ಸೆ.16ರಂದು ಮಹಿಳೆಯೊಂದಿಗೆ ಗಲಾಟೆ ವೇಳೆ ಅಡ್ಡ ಬಂದ ದಸ್ತಗೀರ್ಗೆ ಗೌಸ್ ಚಾಕುವಿನಿಂದ ಇರಿದಿದ್ದಾನೆ. ಗಂಭೀರವಾಗಿ ಗಾಯಗೊಂಡ ದಸ್ತಗೀರ್ ಮೃತಪಟ್ಟಿದ್ದಾನೆ. ಗೌಸ್ ಹಾಗೂ ದಸ್ತಗೀರ್ ಪರಿಚಯಸ್ಥರಾಗಿದ್ದು, ಇಬ್ಬರೂ …
Read More »ಮಾದಕ ವಸ್ತು ಪ್ರಕರಣ: ಉಡುಪಿ ಪೊಲೀಸರ ಬೃಹತ್ ಕಾರ್ಯಾಚರಣೆ; 9 ಮಂದಿ ಬಂಧನ
ಉಡುಪಿ: ಶಿರ್ವ ಹಾಗೂ ಉಡುಪಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಪ್ರತ್ಯೇಕ ಕಾರ್ಯಾಚರಣೆಯಲ್ಲಿ 9 ಮಂದಿಯನ್ನು ಬಂಧಿಸಿ, ಗಾಂಜಾ, ಮೆಥಾಂಫೆಟಮೈನ್, ನಗದು ಹಾಗೂ ವಾಹನಗಳು ಸೇರಿದಂತೆ ₹16.01 ಲಕ್ಷ ಮೌಲ್ಯದ ಸೊತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಶಿರ್ವ ಠಾಣಾ ವ್ಯಾಪ್ತಿಯಲ್ಲಿ 8 ಮಂದಿಯನ್ನು ಬಂಧಿಸಿ, 1.35 ಕೆಜಿ ಗಾಂಜಾ, 32.74 ಗ್ರಾಂ ಮೆಥಾಂಫೆಟಮೈನ್, ಎರಡು ಕಾರು, ಸ್ಕೂಟರ್, 9 ಮೊಬೈಲ್ಗಳು ಹಾಗೂ ₹75,010 ನಗದು ಜಪ್ತಿ ಮಾಡಲಾಗಿದೆ. ಆರೋಪಿಗಳು ಕೇರಳದ …
Read More »ಡ್ಯಾನ್ಸ್ ಮಾಡಬೇಡ ಎಂದಿದ್ದಕ್ಕೆ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ
ಕೊಪ್ಪಳ: ಡ್ಯಾನ್ಸ್ ಮಾಡಬೇಡ ಎಂದು ಪೋಷಕರು ಬುದ್ಧಿವಾದ ಹೇಳಿದ್ದಕ್ಕೆ ಮನನೊಂದ 16 ವರ್ಷದ ವಿದ್ಯಾರ್ಥಿನಿ ಜಯಶ್ರೀ ಆತ್ಮಹತ್ಯೆ ಮಾಡಿಕೊಂಡ ಘಟನೆ ಕೊಪ್ಪಳ ತಾಲೂಕಿನ ಅಗಳಗೇರಿ ಗ್ರಾಮದಲ್ಲಿ ನಡೆದಿದೆ. ಡ್ಯಾನ್ಸ್ ಮಾಡದಂತೆ ಪೋಷಕರು ಬುದ್ಧಿವಾದ ಹೇಳಿದ್ದರಿಂದ ಮನನೊಂದ ಜಯಶ್ರೀ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿದುಬಂದಿದೆ.
Read More »ಬೆಂಗಳೂರಲ್ಲಿ ಉದ್ಯಮಿಯ ಭೀಕರ ಕೊಲೆ – ಅಂಗಡಿಯೊಳಗೆ ನುಗ್ಗಿ ಕೊಲೆಗೈದ ದುಷ್ಕರ್ಮಿ
ಪುಟ್ಟೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗೃಹೋಪಯೋಗಿ ವಸ್ತುಗಳ ಮಳಿಗೆ ನಡೆಸುತ್ತಿದ್ದ ರಾಜು ಸಿಂಗ್ ಎಂಬ ಉದ್ಯಮಿಯನ್ನು ಅಂಗಡಿಯೊಳಗೇ ಬರ್ಬರವಾಗಿ ಕೊಲೆ ಮಾಡಲಾಗಿದೆ. ಜೆ.ಪಿ.ನಗರ 7ನೇ ಹಂತದ ಗಂಗಾ ಇಂಡಸ್ಟ್ರೀಸ್ನ ಮೊದಲ ಮಹಡಿಯಲ್ಲಿ ರಾತ್ರಿ 7.30ರ ಸುಮಾರಿಗೆ ಘಟನೆ ನಡೆದಿದೆ. ಅಂಗಡಿಯಲ್ಲಿ ರಾಜು ಸಿಂಗ್ ಒಬ್ಬರೇ ಇದ್ದಾಗ ಒಳನುಗ್ಗಿದ ದುಷ್ಕರ್ಮಿ ಮಾರಕಾಸ್ತ್ರದಿಂದ ಅವರ ತಲೆಗೆ ಹೊಡೆದು ಕೊಲೆ ಮಾಡಿ ಪರಾರಿಯಾಗಿದ್ದಾನೆ. ರಾಜು ಸಿಂಗ್ ಕಳೆದ 30 ವರ್ಷಗಳಿಂದ ಬೆಂಗಳೂರಿನಲ್ಲಿ ವಾಸಿಸುತ್ತಿದ್ದರು. ಘಟನೆ …
Read More »ಪೊಲೀಸ್ ಠಾಣೆ ಸಮೀಪದಲ್ಲೇ ರೌಡಿ ಶೀಟರ್ ಬರ್ಬರ ಹತ್ಯೆ..!
ಗದಗ: ಲಕ್ಷ್ಮೇಶ್ವರ ಪಟ್ಟಣದಲ್ಲಿ ಪೊಲೀಸ್ ಠಾಣೆಯಿಂದ ಕೂಗಳತೆಯ ದೂರದಲ್ಲೇ ರೌಡಿ ಶೀಟರ್ ಇರ್ಫಾನ್ ತಹಶೀಲ್ದಾರ್ (32) ಎಂಬಾತನನ್ನು ಮೂವರು ದುಷ್ಕರ್ಮಿಗಳು ಅಟ್ಟಾಡಿಸಿಕೊಂಡು ಹೋಗಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಸೆ.23ರಂದು ಹಾಡಹಗಲೇ ನಡೆದ ಈ ಘಟನೆ ತಟ್ಟಿ ಲೇಔಟ್ನಲ್ಲಿ ನಡೆದಿದೆ. ಹಳೆಯ ವೈಷಮ್ಯದ ಹಿನ್ನೆಲೆಯಲ್ಲಿ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದ್ದು, ಮಹ್ಮದ್ ಶಫಿನ್, ಆಯಾಜ್ ಮುಲ್ಲಾ ಹಾಗೂ ಮಹ್ಮದ್ ವಾಸಿಮ್ ಮುಲ್ಲಾ ಎಂಬವರ ಮೇಲೆ ಆರೋಪ ಕೇಳಿಬಂದಿದೆ. ಇರ್ಫಾನ್ನ ಕೈಗಳನ್ನು ಕಟ್ಟಿ, …
Read More »ಹೈದಾರಾಬಾದ್ ನಿಂದ ವಿಮಾನದಲ್ಲಿ ಬಂದು ಬೆಂಗಳೂರಿನಲ್ಲಿ ಕಳ್ಳತನ ಮಾಡುತ್ತಿದ್ದ ಆರೋಪಿಯ ಬಂಧನ
ಬೆಂಗಳೂರು: ವಿಲ್ಸನ್ ಗಾರ್ಡನ್ ಪೊಲೀಸರು ಮನೆ ಕಳ್ಳತನ ಮಾಡುತ್ತಿದ್ದ ಹೈದರಾಬಾದ್ ಮೂಲದ ನೇನಾವತ್ ವಿನೋದ್ ಕುಮಾರ್ ಎಂಬಾತನನ್ನು ಬಂಧಿಸಿದ್ದಾರೆ. ಕೆಲ ದಿನಗಳ ಹಿಂದೆ 10ನೇ ಕ್ರಾಸ್ನ ಮನೆಯೊಂದಕ್ಕೆ ನುಗ್ಗಿ ವೃದ್ಧ ದಂಪತಿಯನ್ನು ಬೆದರಿಸಿ ಚಿನ್ನಾಭರಣ ಹಾಗೂ ನಗದು ಕದ್ದು ಪರಾರಿಯಾಗಿದ್ದ. ವಿಚಾರಣೆ ವೇಳೆ ಕಳ್ಳತನಕ್ಕಾಗಿ ಹೈದರಾಬಾದ್ನಿಂದ ವಿಮಾನದಲ್ಲಿ ಬೆಂಗಳೂರಿಗೆ ಬರುತ್ತಿದ್ದ ವಿಚಾರ ಬೆಳಕಿಗೆ ಬಂದಿದೆ. ಹೈದರಾಬಾದ್ನಲ್ಲಿ ಹಲವು ಪ್ರಕರಣಗಳು ದಾಖಲಾಗಿದ್ದು, ಪೊಲೀಸರ ಹುಡುಕಾಟ ಹೆಚ್ಚಾದ ಹಿನ್ನೆಲೆಯಲ್ಲಿ ಬೆಂಗಳೂರನ್ನು ಕಳ್ಳತನಕ್ಕೆ ಆಯ್ಕೆ …
Read More »ಬೆಂಗಳೂರಲ್ಲಿ ಅಂಗಡಿಯಲ್ಲೇ ಮಾಲೀಕನ ಬರ್ಬರ ಕೊಲೆ
ಬೆಂಗಳೂರು: ಪುಟ್ಟೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗೃಹೋಪಯೋಗಿ ವಸ್ತುಗಳ ಅಂಗಡಿ ಮಾಲೀಕ ರಾಜು ಸಿಂಗ್ ಅವರನ್ನು ಅಂಗಡಿಯೊಳಗೇ ಬರ್ಬರವಾಗಿ ಕೊಲೆ ಮಾಡಲಾಗಿದೆ. ಜೆ.ಪಿ.ನಗರ 7ನೇ ಹಂತದ ಗಂಗಾ ಇಂಡಸ್ಟ್ರೀಸ್ನಲ್ಲಿರುವ ಅಂಗಡಿಯಲ್ಲಿ ರಾತ್ರಿ 7.30ರ ಸುಮಾರಿಗೆ ಘಟನೆ ನಡೆದಿದೆ. ಅಂಗಡಿಯಲ್ಲಿ ಒಬ್ಬರೇ ಇದ್ದ ರಾಜು ಸಿಂಗ್ ಅವರ ತಲೆಗೆ ಹರಿತವಾದ ಆಯುಧದಿಂದ ಹೊಡೆದು ದುಷ್ಕರ್ಮಿ ಪರಾರಿಯಾಗಿದ್ದಾನೆ. ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಮಗಳು ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪುಟ್ಟೇನಹಳ್ಳಿ …
Read More »ಗರಗಸದಿಂದ ರುಂಡ-ಮುಂಡ ಬೇರ್ಪಡಿಸಿ, 2 ಚೀಲದಲ್ಲಿ ತುಂಬಿದ ರಾಕ್ಷಸರು : ಪೋಸ್ಟ್ ಮಾರ್ಟಂನಲ್ಲಿ ಬೆಚ್ಚಿ ಬೀಳಿಸುತ್ತೆ ಪ್ರಕಾಶ್ ಕುಂದರ್ ಹತ್ಯೆ!
ಶಾರ್ಜಾದಲ್ಲಿ ಉಡುಪಿ ಮೂಲದ ಆಲ್ವಿನ್ ಪ್ರಕಾಶ್ ಕುಂದರ್ ಎಂಬವರನ್ನು ಭೀಕರವಾಗಿ ಕೊಲೆ ಮಾಡಲಾಗಿದೆ. ರಸ್ತೆ ಬದಿ ನಿಲ್ಲಿಸಿದ್ದ ಕಾರಿನಲ್ಲಿ ಅವರ ಮೃತದೇಹ ಪತ್ತೆಯಾಗಿದ್ದು, ದೇಹವನ್ನು 9 ತುಂಡುಗಳಾಗಿ ಕತ್ತರಿಸಿರುವುದು ಮರಣೋತ್ತರ ಪರೀಕ್ಷೆಯಲ್ಲಿ ಬಹಿರಂಗವಾಗಿದೆ. ಘಟನೆ ಬಳಿಕ ಪ್ರಕಾಶ್ ಅವರ ಪತ್ನಿ ಟೀನಾ ಕುಂದರ್ ನಾಪತ್ತೆಯಾಗಿದ್ದು, ಪತಿಯ ಬ್ಯಾಂಕ್ ಖಾತೆಯಿಂದ ಹಣ ಡ್ರಾ ಮಾಡಿಕೊಂಡು ತೆರಳಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರಿಗೆ ಪತ್ನಿಯ ಮೇಲೂ ಅನುಮಾನ ಮೂಡಿದ್ದು, ತನಿಖೆ ಮುಂದುವರಿದಿದೆ. ಮೃತದೇಹವನ್ನು …
Read More »ಗಾರೆ ಕೆಲಸ ಬಿಟ್ಟು ಗಾಂಜಾ ಮಾರಾಟ – ಕಾಲೇಜು ಹುಡುಗರೇ ಇವರ ಟಾರ್ಗೆಟ್!
ದೊಡ್ಡಬಳ್ಳಾಪುರ: ಕಾಲೇಜುಗಳ ಸುತ್ತಮುತ್ತ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಆರೋಪದ ಮೇಲೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಮೂವರು ಅಂತರ್ರಾಜ್ಯ ಗಾಂಜಾ ಪೆಡ್ಲರ್ಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ ₹6 ಲಕ್ಷ ಮೌಲ್ಯದ 5.6 ಕೆಜಿ ಗಾಂಜಾ ಹಾಗೂ ದ್ವಿಚಕ್ರ ವಾಹನ ವಶಪಡಿಸಿಕೊಳ್ಳಲಾಗಿದೆ. ಬಂಧಿತರನ್ನು ಸುರೇಶ ಸಹಾನಿ (34), ರೋಹಿತ್ ಕುಮಾರ್ (25) ಹಾಗೂ ರೂಪೇಶ್ ಕುಮಾರ್ (30) ಎಂದು ಗುರುತಿಸಲಾಗಿದೆ. ಬಿಹಾರ ಮತ್ತು ಜಾರ್ಖಂಡ್ ಮೂಲದ ಇವರು ದೊಡ್ಡಬಳ್ಳಾಪುರದಲ್ಲಿ ಗಾರೆ ಕೆಲಸ ಮಾಡಿಕೊಂಡಿದ್ದು, ಕಾಲೇಜು …
Read More »ಅಪರಿಚಿತ ಕರೆ: ಖಾತೆಯಲ್ಲಿದ್ದ 96 ಸಾವಿರ ರೂ. ಖಾಲಿ!
ಕಾರ್ಕಳ: ಎಸ್ಬಿಐ ಖಾತೆ ಹೊಂದಿದ್ದ ಧರ್ಮರಾಜ ಭಂಗ ಅವರ ಖಾತೆಯಿಂದ ಸೈಬರ್ ವಂಚಕರು ಆನ್ಲೈನ್ ಮೂಲಕ ₹96 ಸಾವಿರ ವರ್ಗಾಯಿಸಿಕೊಂಡಿರುವ ಘಟನೆ ನಡೆದಿದೆ. ಈ ಕುರಿತು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸೆ.15ರಂದು ಮಧ್ಯಾಹ್ನ 12.51ಕ್ಕೆ ಧರ್ಮರಾಜ ಅವರಿಗೆ ಅಪರಿಚಿತ ವ್ಯಕ್ತಿಗಳಿಂದ ಕರೆ ಬಂದಿದ್ದು, ಹತ್ತಿರದ ಬ್ಯಾಂಕ್ಗೆ ತೆರಳಿ ವಿಚಾರಿಸುವಂತೆ ತಿಳಿಸಿದ್ದಾರೆ. ಬಳಿಕ ಮಧ್ಯಾಹ್ನ 2 ಗಂಟೆಗೆ ಫೋನ್ಪೇ ಮೂಲಕ ಖಾತೆಯ ಬ್ಯಾಲೆನ್ಸ್ ಪರಿಶೀಲಿಸಿದಾಗ ಹಣ ಕಡಿತವಾಗಿರುವುದು …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





