ತುಮಕೂರು: ಮಾಜಿ ಗಂಡನಿಂದಲೇ ಪತ್ನಿಯ ಪ್ರಿಯಕರನ ಭೀಕರ ಕೊಲೆ ನಡೆದಿರುವ ಘಟನೆ ನಗರದ ಜನತಾ ಕಾಲೋನಿಯಲ್ಲಿ ನಡೆದಿದೆ. 26 ವರ್ಷದ ದಸ್ತಗೀರ್ ಎಂಬಾತ ಕೊಲೆಯಾಗಿದ್ದು, 36 ವರ್ಷದ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಮಹಿಳೆ ಗಂಡನಿಂದ ವಿಚ್ಛೇದನ ಪಡೆದು ದಸ್ತಗೀರ್ ಜೊತೆ ವಾಸಿಸುತ್ತಿದ್ದಳು. ಸೆ.16ರಂದು ಮಹಿಳೆಯೊಂದಿಗೆ ಗಲಾಟೆ ವೇಳೆ ಅಡ್ಡ ಬಂದ ದಸ್ತಗೀರ್ಗೆ ಗೌಸ್ ಚಾಕುವಿನಿಂದ ಇರಿದಿದ್ದಾನೆ. ಗಂಭೀರವಾಗಿ ಗಾಯಗೊಂಡ ದಸ್ತಗೀರ್ ಮೃತಪಟ್ಟಿದ್ದಾನೆ. ಗೌಸ್ ಹಾಗೂ ದಸ್ತಗೀರ್ ಪರಿಚಯಸ್ಥರಾಗಿದ್ದು, ಇಬ್ಬರೂ ಹಿಂದೆ ಒಟ್ಟಿಗೆ ಕೆಲಸ ಮಾಡುತ್ತಿದ್ದರು. ಈ ವೇಳೆ ದಸ್ತಗೀರ್ಗೆ ಗೌಸ್ ಪತ್ನಿಯ ಪರಿಚಯವಾಗಿ ಪ್ರೀತಿ ಬೆಳೆದಿದ್ದು, ಆಕೆ ದಸ್ತಗೀರ್ ಜೊತೆ ಮದುವೆಯಾಗಲು ಮುಂದಾಗಿದ್ದಳು ಎನ್ನಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

