ಕೊಲ್ಲಾಪುರ ಪಟ್ಟಣದ ಇಂದಿರಾನಗರ ಕಾಲೋನಿಯ ಸ್ವರ್ಣಲತಾ ಜೀವನ ಸಾಗಿಸುತ್ತಿದ್ದರು. ಸ್ವರ್ಣಲತಾ ತನ್ನ ಪತಿಗೆ ವಿಚ್ಛೇದನ ನೀಡಿದ ನಂತರ ಕಳೆದ ಏಳು ವರ್ಷಗಳಿಂದ ಒಂಟಿಯಾಗಿ ವಾಸಿಸುತ್ತಿದ್ದರು. ಈ ವೇಳೆ ಅವರು ಅದೇ ಕಾಲೋನಿಯ ವಿಜಯ್ ಕುಮಾರ್ (23) ಎಂಬ ಯುವಕನ ಸ್ನೇಹ ಬೆಳೆಸಿದರು.ಅವನಿಗಿಂತ ಮಹಿಳೆ ಸುಮಾರು 15 ವರ್ಷ ದೊಡ್ಡವರು. ಆದರೆ ಸ್ನೇಹ ಮಿತಿ ಮೀರಿತು. ಅವರು ದೈಹಿಕವಾಗಿ ಹತ್ತಿರವಾದರು.ಆರೋಪಿಯನ್ನು ಬಂಧಿಸಿ ರಿಮಾಂಡ್ಗೆ ಕಳುಹಿಸಿದರು. ಪ್ರಕರಣದ ತನಿಖೆಯ ಸಮಯದಲ್ಲಿ ಆಘಾತಕಾರಿ ಸಂಗತಿಗಳು …
Read More »ಗೆಳೆಯರ ಜತೆಗೂಡಿ ತಾಯಿ ಕೊಂದ ಅಪ್ರಾಪ್ತೆ ಮಗಳು
ಮನೆಯಲ್ಲಿ ರಾತ್ರಿ ‘ಸ್ನೇಹ ಕೂಟ’ಕ್ಕೆ ಆಕ್ಷೇಪಿಸಿದ್ದರಿಂದ ಸಿಟ್ಟಿಗೆದ್ದು ತಾಯಿಯನ್ನೇ ತನ್ನ ಅಪ್ರಾಪ್ತ ಗೆಳೆಯರ ಜತೆ ಸೇರಿ ಕೊಂದು ಬಳಿಕ ಆತ್ಮ*ತ್ಯೆ ಎಂದು ಮಗಳೊಬ್ಬಳು ಕತೆ ಹೆಣೆದಿದ್ದ ಕೃತ್ಯ ನಗರದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.ಉತ್ತರಹಳ್ಳಿ ನಿವಾಸಿ ನೇತ್ರಾವತಿ (34) ಕೊಲೆಯಾದ ದುರ್ದೈವಿ. ಹತ್ಯೆ ಸಂಬಂಧ ಮೃತರ ಅಪ್ರಾಪ್ತ ಮಗಳು ಸೇರಿದಂತೆ ಆಕೆಯ 16-17 ವರ್ಷದ ಐವರು ಗೆಳೆಯರನ್ನು ಬಂಧಿಸಿ ಬಾಲ ಮಂದಿರಕ್ಕೆ ಸುಬ್ರಹ್ಮಣ್ಯಪುರ ಠಾಣೆ ಪೊಲೀಸರು ಕಳುಹಿಸಿದ್ದಾರೆ.
Read More »ಬೆಡ್ ರೂಂಗೆ ಪೆಟ್ರೋಲ್ ಸುರಿದು ಕಿಚ್ಚಿಟ್ಟು ಪತ್ನಿ, ಮೊಮ್ಮಗಳ ಹ*ತ್ಯೆಗೆ ಯತ್ನ
ಕಾಸರಗೋಡು :ಪ್ರತ್ಯೇಕವಾಗಿ ವಾಸಿಸುವ ಪತ್ನಿ ಹಾಗು ಆರು ವರ್ಷದ ಮೊಮ್ಮಗಳು ನಿದ್ದೆ ಮಾಡಿದ್ದ ಕೊಠಡಿಗೆ ಪೆಟ್ರೋಲ್ ಸುರಿದು ಕಿಚ್ಚಿಟ್ಟು ಕೊಲೆಗೈಯ್ಯಲು ಯತ್ನಿಸಿದ ಘಟನೆ ನಡೆದಿದೆ. ಕಿಚ್ಚಿಟ್ಟ ವ್ಯಕ್ತಿ ಸುಟ್ಟು ಗಾಯಗೊಂಡು ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದಾರೆ.ಪತ್ನಿ ಮತ್ತು ಮೊಮ್ಮಗಳು ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ.ಪಾಣತ್ತೂರು ನೆಲ್ಲಿಕುನ್ನು ನಿವಾಸಿ ಜೋಸೆಫ್(65) ಆಸ್ಪತ್ರೆಗೆ ದಾಖಲಾಗಿದ್ದಾರೆ. ಅ.30 ರಂದು ರಾತ್ರಿ 10.30 ಕ್ಕೆ ಈ ಘಟನೆ ನಡೆದಿದೆ. ಜೋಸೆಫ್ ಹಾಗು ಪತ್ನಿ ಸಿಸಿಲಿ ಹಲವು ವರ್ಷಗಳಿಂದ ಬೇರೆ …
Read More »ಅಡುಗೆ ಮಾಡಲು ಗ್ಯಾಸ್ ಹಚ್ಚಿದ ವೇಳೆ ಸಿಲಿಂಡರ್ ಸ್ಪೋಟ
ಬೆಳಗ್ಗೆ ಟೀ ಮಾಡಲು ಗ್ಯಾಸ್ ಹಚ್ಚಿದ ವೇಳೆ ಸಿಲಿಂಡರ್ ಸ್ಪೋಟಗೊಂಡಿರುವ ಘಟನೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಲಕ್ಷ್ಮೀಪುರ ಗ್ರಾಮದಲ್ಲಿ ನಡೆದಿದೆ.ಲಕ್ಷ್ಮೀಪುರ ಗ್ರಾಮದ ರಿಹಾನ ಎಂಬುವರ ಮನೆಯಲ್ಲಿ ದುರಂತ ಸಂಭವಿಸಿದೆ. ರಿಹಾನಾಳಿಗೆ ಗಾಯಗಳಾಗಿದ್ದು, ಸ್ಥಳೀಯ ಲಕ್ಷ್ಮೀಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಸ್ಥಳಕ್ಕೆ ಅಗ್ನಿ ಶಾಮಕ ದಳ ದಾವಿಸಿ ಬೆಂಕಿ ನಂದಿಸಿದೆ. ಘಟನೆಯಿಂದ ಮನೆಯಲ್ಲಿನ ಗೃಹೋಪಯೋಗಿ ವಸ್ತುಗಳು ಸುಟ್ಟು ಕರಕಲಾಗಿವೆ.
Read More »ಧರ್ಮಸ್ಥಳ ಗ್ರಾಮದ ಬುರುಡೆ ಪ್ರಕರಣ ; ನಾಲ್ವರಿಗೆ ಮತ್ತೆ ಎಸ್ಐಟಿಯಿಂದ ನೋಟಿಸ್
ಧರ್ಮಸ್ಥಳ ಗ್ರಾಮದ ಬುರುಡೆ ಪ್ರಕರಣದ ತನಿಖೆಯ ಭಾಗವಾಗಿ ನೋಟಿಸ್ ನೀಡಿದರೂ ವಿಚಾರಣೆಗೆ ಹಾಜರಾಗದ ನಾಲ್ವರಿಗೆ ಎಸ್ಐಟಿ ಇದೀಗ ಮತ್ತೆ ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ. ಮರು ನೋಟಿಸ್ನಲ್ಲಿ ವಿಠಲ್ ಗೌಡ ಅ. 31ರಂದು ವಿಚಾರಣೆಗೆ ಹಾಜರಾಗಬೇಕು ಎಂದು ಹೇಳಲಾಗಿದ್ದು, ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣನವರ್, ಜಯಂತ್ ಟಿ.ಅವರನ್ನು ನ. 3ರಂದು ವಿಚಾರಣೆಗೆ ಹಾಜರಾಗಲು ತಿಳಿಸಿದೆ. ಉಜಿರೆ ತಿಮರೋಡಿ ಮನೆ ಹಾಗೂ ವಿಠಲ್ ಗೌಡ ಮನೆಯ ಬಾಗಿಲಿಗೆ ನೋಟಿಸ್ …
Read More »ಬೆಂಗಳೂರಿನಲ್ಲಿ ಘೋರ ದುರಂತ: ಆಟವಾಡುತ್ತಿದ್ದ ವೇಳೆ ಕೆರೆಗೆ ಬಿದ್ದ ಅಣ್ಣ-ತಮ್ಮ: ಇಬ್ಬರು ಮಕ್ಕಳು ದುರ್ಮರಣ
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಘೋರ ಘಹ್ಟನೆ ನಡೆದಿದೆ. ಕೆರೆಯ ಬಳಿ ಆಟವಾಡುತ್ತಿದ್ದ ಇಬ್ಬರು ಬಾಲಕರು, ಕೆರೆ ನೀರಿಗೆ ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ.ಬೆಂಗಳೂರಿನ ವಿಶ್ವೇಷ್ವರಯ್ಯ ಲೇಔಟ್ ನಲ್ಲಿ ಈ ದುರಂತ ಸಂಭವಿಸಿದೆ. 10 ವರ್ಷದ ಜಗನ್ನಾಥ್ ಹಾಗೂ 8 ವರ್ಷದ ಸಂಜಯ್ ಮೃತ ಬಾಲಕರು.ಇಬ್ಬರೂ ಅಣ್ಣ-ತಮ್ಮಂದಿರು. ಮನೆಯ ಬಳಿಯೇ ಇದ್ದ ಕೆರೆಯ ಬಳಿ ಆಟವಾಡುತ್ತಿದ್ದ ಮಕ್ಕಳು ಆಕಸ್ಮಿಕವಾಗಿ ಕೆರೆ ನೀರಿಗೆ ಬಿದ್ದಿದ್ದಾರೆ. ತಕ್ಷಣ ಪೋಷಕರು ಮಕ್ಕಳನ್ನು ಮೇಲಕೆತ್ತಿದ್ದಾರೆ. ಅಷ್ಟರಲ್ಲಿ ಬಾಲಕ …
Read More »ಚಿತ್ರದುರ್ಗದಲ್ಲಿ ‘ವಿಕೃತ ಕಾಮಿ’ ಪ್ರತ್ಯಕ್ಷ : ನಡುರಸ್ತೆಯಲ್ಲೇ ನಗ್ನವಾಗಿ ಓಡಾಡಿ ಮಹಿಳೆಯರಿಗೆ ಕಿರುಕುಳ.!
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಲ್ಲಿ ವಿಕೃತ ಕಾಮಿಯೋರ್ವ ನಡುರಸ್ತೆಯಲ್ಲೇ ನಗ್ನವಾಗಿ ಓಡಾಡಿ ಮಹಿಳೆಯರಿಗೆ ಕಿರುಕುಳ ನೀಡುತ್ತಿರುವ ಘಟನೆ ವರದಿಯಾಗಿದೆ. ನಡುರಸ್ತೆಯಲ್ಲೇ ಬೆತ್ತಲಾಗಿ ಓಡಾಡುವ ಯುವಕ ಮಹಿಳೆಯನ್ನು ನೋಡಿದಾಕ್ಷಣ ಅಸಭ್ಯವಾಗಿ ವರ್ತಿಸುತ್ತಾನೆ.ಯುವಕನ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಕಾಮುಕನ ಕಾಟಕ್ಕೆ ಮಹಿಳೆಯರು ರೋಸಿ ಹೋಗಿದ್ದಾರೆ.ಯುವಕನ ವರ್ತನೆಯಿಂದ ಭಯಗೊಂಡ ಮಹಿಳೆಯರು, ಯುವತಿಯರು ರಸ್ತೆಯಲ್ಲಿ ಒಬ್ಬಂಟಿಯಾಗಿ ಓಡಾಡಲು ಭಯಪಡುವ ಸ್ಥಿತಿ ನಿರ್ಮಾಣವಾಗಿದೆ. ಚಳ್ಳಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
Read More »ವರದಕ್ಷಿಣ ಕಿರುಕುಳಕ್ಕೆ ಯುವತಿ ಬಲಿ?: ಮೃತಳ ಪೋಷಕರಿಂದ ಗಂಭೀರ ಆರೋಪ
ನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಎನ್.ಆರ್.ಪುರ ಮೂಲದ ಗೃಹಿಣಿ ಮೃತಪಟ್ಟಿದ್ದು, ಪತಿ ಮನೆಯವರೇ ಕೀಟನಾಶಕ ಕೊಟ್ಟು ಮಗಳನ್ನ ಕೊಲೆ ಮಾಡಿದ್ದಾರೆ ಎಂದು ಮಹಿಳೆಯ ಪೋಷಕರು ಆರೋಪಿಸಿದ್ದಾರೆ. ಚಿಕಿತ್ಸೆ ಫಲಿಸದೆ ಗೃಹಿಣಿ ಪೂಜಾ(30) ಇಹಲೋಕ ತ್ಯಜಿಸಿದ್ದು, ಇವರಿಗೆ ಎನ್.ಆರ್.ಪುರ ತಾಲೂಕಿನ ಮಾವಿನಕೆರೆ ಶೆಟ್ಟಿಕೊಪ್ಪದ ನಿವಾಸಿ ಶರತ್ ಎಂಬವರ ಜೊತೆ 3 ವರ್ಷದ ಹಿಂದೆ ವಿವಾಹವಾಗಿತ್ತು. ಶರತ್-ಪೂಜಾ ದಂಪತಿಗೆ ಎರಡು ವರ್ಷದ ಗಂಡು ಮಗುವೂ ಇದ್ದು, ವರದಕ್ಷಿಣಿಗಾಗಿ ಪೂಜಾ ಮೇಲೆ ಹಲ್ಲೆ ನಡೆಸಲಾಗುತ್ತಿತ್ತು. …
Read More »ಲೈಂಗಿಕ ಕಿರುಕುಳ’ ನೀಡಿದ ಪೊಲೀಸ್ ಸಿಬ್ಬಂದಿಗೆ ಧರ್ಮದೇಟು ನೀಡಿದ ಯುವತಿ : ವಿಡಿಯೋ ವೈರಲ್
ಪೋಲೀಸರ ಕೆಲಸ ಮಹಿಳೆಯರನ್ನು ರಕ್ಷಿಸುವುದು ಮತ್ತು ಮಹಿಳೆಯರ ತಂಟೆಗೆ ಹೋದವರ ವಿರುದ್ಧ ಕ್ರಮ ಕೈಗೊಳ್ಳುವುದು, ಆದರೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ಕಥೆ ಬೇರೆನೆ. ಲೈಂಗಿಕ ಕಿರುಕುಳ ನೀಡಿದ ಪೊಲೀಸ್ ಸಿಬ್ಬಂದಿಗೆ ಧರ್ಮದೇಟು ನೀಡಿದ ಘಟನೆ ಕಾನ್ಪುರದಲ್ಲಿ ನಡೆದಿದ್ದು, ವಿಡಿಯೋ ವೈರಲ್ ಆಗಿದೆ.ಓರ್ವ ಯುವತಿ ಕಾನ್ಪುರದ ಗೋಲ್ ಚೌರಾಹಾಗೆ ಸ್ಟಾಂಪ್ ಪೇಪರ್ ಖರೀದಿಸಲು ಹೋದಾಗ ಅಲ್ಲಿದ್ದ ಒಬ್ಬ ಪೊಲೀಸ್ ಅವಳಿಗೆ ಕಿರುಕುಳ ನೀಡಲು ಮತ್ತು ಅವಳ ಕಡೆಗೆ ಅಶ್ಲೀಲ ಸನ್ನೆಗಳನ್ನು ಮಾಡಲು …
Read More »ATMನಲ್ಲಿ ಹಣ ವಿತ್ ಡ್ರಾ ಮಾಡುವಾಗ ಎಚ್ಚರ. ಎಚ್ಚರ: ಯಾಮಾರಿದ್ರೆ ಬಕ್ರಾ ಆಗೋದು ಫಿಕ್ಸ್!
ಕ್ಯಾಶ್ ಡ್ರಾ ಮಾಡಲು ಬಂದವರಿಗೆ ನೆರವಾಗುವ ನೆಪದಲ್ಲಿ ATM ಕಾರ್ಡ್ ಬದಲಾಯಿಸಿ ವಂಚನೆ ಮಾಡಿರುವ ಘಟನೆ ಚಿತ್ರದುರ್ಗ (Chitradurga) ಜಿಲ್ಲೆ ಚಳ್ಳಕೆರೆಯ ಕೆನರಾ ಬ್ಯಾಂಕ್ ATMನಲ್ಲಿ ನಡೆದಿದೆ.ಪಾಸ್ ವರ್ಡ್ ನೋಡಿ ಕ್ಷಣಾರ್ಧದಲ್ಲಿ ATM ಕಾರ್ಡ್ ಎಕ್ಸ್ ಚೇಂಜ್ ಮಾಡಿರುವ ವಂಚಕ ಬೇರೊಂದು ATMನಲ್ಲಿ ಹಣ ಡ್ರಾ ಮಾಡಿಕೊಂಡು ಎಸ್ಕೇಪ್ ಆಗಿದ್ದಾನೆ. ATMನಲ್ಲಿ ಕಾರ್ಡ್ ಬದಲಿಸಿದ ವಂಚಕನ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವಿಡಿಯೋ ವೈರಲ್ ಆಗಿದೆ.
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





