ಟೋಲ್ ಸಿಬ್ಬಂದಿ ಮೇಲೆ ಬಿಜೆಪಿ ಮುಖಂಡನ ಪುತ್ರ ಮತ್ತು ಆತನ ಸ್ನೇಹಿತರು ಹಲ್ಲೆ ನಡೆಸಿದ್ದಾರೆ. ವಿಜಯಪುರ ತಾಲೂಕಿನ ಕನ್ನೊಳ್ಳಿ ಗ್ರಾಮದ ಸಮೀಪ ಇರುವ ವಿಜಯಪುರ -ಕಲಬುರಗಿ ಟೋಲ್ ನಲ್ಲಿ ಘಟನೆ ನಡೆದಿದೆ.ಬಳಿಕ ಟೋಲ್ ಸಿಬ್ಬಂದಿ ಮಧ್ಯಪ್ರವೇಶಿಸಿ ಗಲಾಟೆ ಬಿಡಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಸಿಂದಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.ನನ್ನ ಮಗ ಮಾಡಿದ್ದು ತಪ್ಪು, ಸಿಬ್ಬಂದಿ ಕೂಡ ಆ ರೀತಿ ಮಾತನಾಡಿದ್ದು ತಪ್ಪು. ಅವರು ಕೇಸು ದಾಖಲಿಸಿದ್ರೆ ನಾವು ಕೇಸು …
Read More »ಹೆಣ ಮುಂದಿಟ್ಟುಕೊಂಡು ಲಂಚಕ್ಕೆ ಬೇಡಿಕೆ: ತಂದೆಯ ಭಾವುಕ ಪೋಸ್ಟ್ ವೈರಲ್ ಬಳಿಕ ಎಸ್ಐ, ಕಾನ್ಸ್ಟೆಬಲ್ ಅಮಾನತು!
ಇದ್ದೊಬ್ಬಳೇ ಮಗಳು ಸಾವಿಗೀಡಾದ ಸಮಯದಲ್ಲಿ ಎದುರಿಸಿದ ಕಿರುಕುಳ ಮತ್ತು ಭ್ರಷ್ಟಾಚಾರವನ್ನು ಎದುರಿಸಿದ ಬಗ್ಗೆ ತಂದೆಯೊಬ್ಬರು ಸಾಮಾಜಿಕ ಮಾಧ್ಯಮದಲ್ಲಿ ಅಳಲು ತೋಡಿಕೊಂಡಿದ್ದ ಪೋಸ್ಟ್ ವೈರಲ್ ಆದ ನಂತರ, ಪೊಲೀಸ್ ಸಬ್ಇನ್ಸ್ಪೆಕ್ಟರ್ ಮತ್ತು ಕಾನ್ಸ್ಟೆಬಲ್ರನ್ನು ಅಮಾನತುಗೊಳಿಸಲಾಗಿದೆ.ಬೆಳ್ಳಂದೂರು ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಮತ್ತು ಕಾನ್ಸ್ಟೆಬಲ್ ಲಂಚ ಕೇಳಿದ್ದರು ಮತ್ತು ನಮ್ಮೊಂದಿಗೆ ಅತ್ಯಂತ ಕೆಟ್ಟದಾಗಿ ನಡೆದುಕೊಂಡರು ಎಂದು ಆರೋಪಿಸಿದ್ದರು.ಪೊಲೀಸರೇ ಲಂಚ ಕೇಳುವುದು ಮತ್ತು ಅಸಭ್ಯವಾಗಿ ಮಾತನಾಡುವುದು ಎಷ್ಟು ಸರಿ ಎಂದು ಅವರು ಪೋಸ್ಟ್ನಲ್ಲಿ ಕೇಳಿದ್ದಾರೆ.
Read More »ಒತ್ತೆಯಾಳುಗಳನ್ನಾಗಿ ಇರಿಸಿಕೊಂಡಿದ್ದ 17 ಮಕ್ಕಳ ರಕ್ಷಣೆ-ಅಪಹರಣಕಾರ ಗುಂಡೇಟಿಗೆ ಸಾವು!
ವ್ಯಕ್ತಿಯೊಬ್ಬ ಒತ್ತೆಯಾಳುಗಳನ್ನಾಗಿ ಇರಿಸಿಕೊಂಡಿದ್ದ ಕನಿಷ್ಠ 17 ಮಕ್ಕಳನ್ನು ಮುಂಬೈಯ ಪೂವೈ ಪ್ರದೇಶದಲ್ಲಿ ಗುರುವಾರ (ಅ.30) ರಕ್ಷಿಸಲಾಗಿದ್ದು, ಅಪಹರಣಕಾರನನ್ನು ರೋಹಿತ್ ಆರ್ಯ ಎಂದು ಗುರುತಿಸಲಾಗಿದೆ. ಕಾರ್ಯಾಚರಣೆ ಸಂದರ್ಭ ಆರ್ಯ ಪೊಲೀಸರ ಮೇಲೆ ಗುಂಡು ಹಾರಿಸಿದ್ದು, ಇದಕ್ಕೆ ಪ್ರತಿಯಾಗಿ ಗುಂಡಿನ ದಾಳಿ ನಡೆಸಿದ ಪರಿಣಾಮ ಆರೋಪಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿರುವ ಘಟನೆ ನಡೆದಿದೆ.ಅಪಹರಣಕಾರ ರೋಹಿತ್ ಜತೆ ಪೊಲೀಸರು ಮಾತುಕತೆ ನಡೆಸಿ, ಯಾಕೆ ಇಂತಹ ನಿರ್ಧಾರ ತೆಗೆದುಕೊಂಡಿದ್ದಾನೆ ಎಂಬುದನ್ನು ಪತ್ತೆಹಚ್ಚಲು ಪ್ರಯತ್ನಿಸಿರುವುದಾಗಿ ಮುಂಬೈ ಪೊಲೀಸರು ಈ …
Read More »ಮಾದಕವಸ್ತು ಮಾರಾಟ ಜಾಲ ನಡೆಸುತ್ತಿದ್ದ ದಾವೂದ್ ಸಹಚರ ಗೋವಾದಲ್ಲಿ ಸೆರೆ
ದೇಶಭ್ರಷ್ಟ ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಸಹಚರ ಮತ್ತು ಮಾದಕ ವಸ್ತು ಸಿಂಡಿಕೇಟ್ನ ಕಿಂಗ್ಪಿನ್ ಡ್ಯಾನಿಶ್ ಚಿಕ್ನಾ ಸೇರಿ ನಾಲ್ವರನ್ನು ಮಾದಕ ವಸ್ತು ನಿಯಂತ್ರಣ ಬ್ಯುರೋ (ಎನ್ಸಿಬಿ) ಅಧಿಕಾರಿಗಳು ಗೋವಾದಲ್ಲಿ ಬಂಧಿಸಿದ್ದಾರೆ ಎಂದು ಬುಧವಾರ ಅಧಿಕಾರಿಗಳು ತಿಳಿಸಿದ್ದಾರೆ.ಈ ವೇಳೆ ಬಂಧಿತರಿಂದ 1.34 ಕೆ.ಜಿ. ಮೆಫೆಡ್ರೋನ್ ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ. ತನಿಖೆ ವೇಳೆ ಕಿಂಗ್ಪಿನ್ ಡ್ಯಾನಿಶ್ ಮತ್ತು ಅವನ ಪತ್ನಿ ಮಾದಕವಸ್ತು ಸಿಂಡಿಕೇಟ್ ಅನ್ನು ನಡೆಸುತ್ತಿದ್ದರು ಎಂದು ಗುರುತಿಸಲಾಗಿದೆ. ಈ ನಡುವೆ …
Read More »ಎಜುಕೇಶನ್ ಟ್ರಸ್ಟ್ ಹೆಸರಿನಲ್ಲಿ ವಂಚನೆ – 12 ಮಂದಿ ವಿರುದ್ಧ ಎಫ್ಐಆರ್!
ಬೇಳೂರು ಎಜುಕೇಶನ್ ಟ್ರಸ್ಟ್ ಎಂದು ಎರಡು ಸುಳ್ಳು ಟ್ರಸ್ಟ್ ಡೀಡ್ಗಳನ್ನು ನೋಂದಾಯಿಸಿಕೊಂಡು, ಕುಂದಾಪುರ ತಾಲ್ಲೂಕಿನ ಬೇಳೂರು ಗ್ರಾಮದ ವ್ಯಾಪ್ತಿಯಲ್ಲಿ ಬರುವ ಪ್ರಾಥಮಿಕ ಶಾಲೆ ಹಾಗೂ ಪ್ರೌಢ ಶಾಲೆಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಲಕ್ಷಾಂತರ ರೂಪಾಯಿ ಹಣವನ್ನು ಡೊನೇಷನ್ ರೂಪದಲ್ಲಿ ಪಡೆದು ವಂಚನೆ ಮಾಡಿರುವ ಆರೋಪ ಕೇಳಿಬಂದಿದೆ.ಅದಕ್ಕೆ ಸಂಬಂಧಿಸಿದಂತೆ ಪ್ರತಿ ವರ್ಷ ಆಡಿಟ್ ಮಾಡದೆ ಹಣವನ್ನ ಪಡೆದು ವಂಚಿಸಿ ಗ್ರಾಮ ಪಂಚಾಯತ್ ಕಟ್ಟಡವನ್ನೇ ಟ್ರಸ್ಟಿನ ಕಚೇರಿಯೆಂದು ಟ್ರಸ್ಟ್ ಡೀಡ್ ನಲ್ಲಿ ನಮೂದಿಸಿ, …
Read More »ದರ್ಗಾ ಮೆರವಣಿಗೆಯಲ್ಲಿ ಡಿಜೆ ಬಳಕೆ, ದರ್ಗಾ ಸಮಿತಿ ಸೇರಿ ಮೂವರ ವಿರುದ್ಧ ಕೇಸ್ ದಾಖಲು
ರಾಮನಗರದ ಮೋತಿ ನಗರದಲ್ಲಿ ಪೀರಾನ್ ಶಾ ವಲಿ ದರ್ಗಾದ ಮೆರವಣಿಗೆಯ ವೇಳೆ ಡಿಜೆ ಬಳಕೆ ಮಾಡಲಾಗಿದೆ.ಅಕ್ಟೋಬರ್ 28 ರಂದು ರಾತ್ರಿ ಡಿಜೆ ಬಳಸಿ ಮೆರವಣಿಗೆ ಮಾಡಿದ್ದರು. ದರ್ಗಾ ಸಮಿತಿಯ ವಿರುದ್ಧ ರಾಮನಗರದ ಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.ಆಡಳಿತ ಮಂಡಳಿ ಸೇರಿ ದುರ್ಗಾ ಸಮಿತಿಯ ಮೂವರ ವಿರುದ್ಧ ರಾಮನಗರದ ಪುರ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.ರಾಮನಗರದ ಪೀರಾನ್ ಶಾ ವಲಿ ದರ್ಗಾದ ಮೆರವಣಿಗೆಯಲ್ಲಿ ಅನುಮತಿ ಇಲ್ಲದೇ ಡಿಜೆ ಬಳಕೆ ಮಾಡಿದ್ದ ಹಿನ್ನೆಲೆಯಲ್ಲಿ …
Read More »ಅಕ್ರಮ ಲಕ್ಕಿ ಸ್ಕೀಂ; ಪ್ರಕರಣ ದಾಖಲು
ಕರಪತ್ರಗಳ ಮೂಲಕ ಪ್ರಚಾರ ಮಾಡಿ ಅಕ್ರಮವಾಗಿ ಲಕ್ಕಿಸ್ಕೀಂ ಮಾಡುತ್ತಿರುವ ಬಗ್ಗೆ ಸಾರ್ವಜನಿಕರಿಂದ ಮಾಹಿತಿ ಪಡೆದ ಪುತ್ತೂರು ನಗರ ಪೊಲೀಸರು ಬಿಗ್ ಟಿಕೆಟ್ ಲಕ್ಕಿ ಸ್ಕೀಂ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.ಪೊಲೀಸರು ಗಸ್ತು ನಿರತರಾಗಿದ್ದ ಸಂದರ್ಭದಲ್ಲಿ ಸಾರ್ವಜನಿಕರು ಕರಪತ್ರ ಹಿಡಿದು ಚರ್ಚಿಸುತ್ತಿರುವುದನ್ನು ಗಮನಿಸಿ ಈ ಬಗ್ಗೆ ಮಾಹಿತಿ ಕಲೆ ಹಾಕಿದರು.ಉಕ್ಕಿನಡ್ಕದ ಮೊಹಮ್ಮದ್ ಶಫೀಕ್, ಪುತ್ತೂರಿನ ಶರೀಫ್, ಆಶೀಕ್ ಎಂಬವರು ಜತೆಗೂಡಿ ನಡೆಸುತ್ತಿರುವ ಅಕ್ರಮ ಸ್ಕೀಂ ಇದಾಗಿದ್ದು, ಗ್ರಾಹಕರಿಂದ 1 ಸಾವಿರ ರೂ. ಸಂಗ್ರಹಿಸುತ್ತಿರುವುದು …
Read More »ಮಹಿಳೆಗೆ ಕಿರುಕುಳ: ಆರೋಪಿ ಬಂಧನ
ಮಹಿಳೆ ಪೋಟೋಗಳನ್ನು ಎಡಿಟ್ ಮಾಡಿ ಆಕೆಯ ಸ್ನೇಹಿತರಿಗೆ ಕಳುಹಿಸಿ ಕಿರುಕುಳ ನೀಡುತ್ತಿದ್ದ ಆರೋಪಿಯನ್ನು ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.ನಗರದ ಶ್ರೀನಿವಾಸನಗರ ಬಡಾವಣೆಯ ನಿವಾಸಿ ಹಾಗೂ ಆಲ್ದೂರು ಹೋಬಳಿ ಯೂತ್ ಕಾಂಗ್ರೆಸ್ ಮಾಜಿ ಉಪಾಧ್ಯಕ್ಷ ಆದಿತ್ಯ (40) ಬಂಧಿತ ಆರೋಪಿ.ಜಯನಗರ ಬಡಾವಣೆಯ ಮಹಿಳೆ ಜತೆ ಫೋನ್ ನಲ್ಲಿ ಸಂಪರ್ಕ ಹೊಂದಿದ್ದ ಈತ ವಾಟ್ಸಾಪ್ ಕಾಲ್ ಮಾಡಿ ಕಿರುಕುಳ ನೀಡುತ್ತಿದ್ದಲ್ಲದೇ, ಫೋಟೋಗಳನ್ನು ಪಡೆದು ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಆಕೆಯ ಸ್ನೇಹಿತರಿಗೆ ಕಳಿಸಿ …
Read More »ಅನುಮಾನಾಸ್ಪದವಾಗಿ ಯುವಕ ಸಾವು
ಯುವಕನೊಬ್ಬ ಮಾವಿನ ಮರಕ್ಕೆ ನೇಣು ಬೀಗಿದ ಸ್ಥಿತಿಯಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ತಾಲೂಕಿನ ಬಂಡಪಲ್ಲಿ ಗ್ರಾಮದಲ್ಲಿ ನಡೆದಿದೆ. ಶ್ರೀನಿವಾಸಪುರ ತಾಲೂಕು ಆರಿಕುಂಟೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬಂಡಪಲ್ಲಿ ಗ್ರಾಮದ ಮಾವಿನ ತೋಟದಲ್ಲಿನ ಮಾವಿನ ಮರಕ್ಕೆ ನೇಣು ಹಾಕಿಕೊಂಡಿರುವುದು ಕಂಡು ಬಂದಿದೆ.ಮೃತ ಯುವಕ ಚಿಂತಾಮಣಿ ತಾಲೂಕು ಗಂಡ್ರಗಾನಹಳ್ಳಿ ಗ್ರಾಮದ ಆದರ್ಶ(33) ಟ್ರ್ಯಾಕ್ಟರ್ ಚಾಲಕನಾಗಿ ಕೆಲಸ ಮಾಡುತ್ತಿದ್ದನೆಂದು ತಿಳಿದು ಬಂದಿದೆ.ಸಂಬಂಧಿಸಿದಂತೆ ನೇಣು ಹಾಕಿಕೊಂಡಿರುವ ಯುವಕನ ಮೃತದೇಹ ಭೂಮಿಗೆ ಸ್ಪರ್ಶವಾಗಿರುವ ಕಾರಣ ಮೃತನ ಪೋಷಕರು …
Read More »ಮಾಂಸಾಹಾರ ಸೇವಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ಸ್ನೇಹಿತನ ಕೊಲೆ!
ಹಬ್ಬದ ದಿವಸ ಮನೆಯಲ್ಲಿ ಮಾಂಸಾಹಾರ ಸೇವಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ಸ್ನೇಹಿತನನ್ನು ಕೊಲೆ ಮಾಡಿರುವ ಘಟನೆ ಚಿಕ್ಕಜಾಲದ ನವರತ್ನ ಅಗ್ರಹಾರದಲ್ಲಿ ಸೋಮವಾರ ತಡರಾತ್ರಿ ನಡೆದಿದೆ.ಬಿಹಾರದ ಶಂಭು ತಂತಿ(29) ಕೊಲೆಯಾದವರು.ಕೃತ್ಯ ಎಸಗಿದ ಆರೋಪದ ಅಡಿ ಅಸ್ಸಾಂನ ರಾಜೇಶ್ ಎಂಬಾತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.ಮೂರು ವರ್ಷಗಳ ಹಿಂದೆ ಕೂಲಿ ಕಾರ್ಮಿಕರಾಗಿ ಶಂಭುತಂತಿ ಹಾಗೂ ರಾಜೇಶ್ ನಗರಕ್ಕೆ ಬಂದಿದ್ದರು. ಚಿಕ್ಕಜಾಲದ ನವರತ್ನ ಅಗ್ರಹಾರದ ಲೆಬರ್ ಶೆಡ್ನಲ್ಲಿ ಇಬ್ಬರೂ ವಾಸವಾಗಿದ್ದರು. ನಿರ್ಮಾಣ ಹಂತದ ಕಟ್ಟಡದಲ್ಲಿ ಕೆಲಸ ಮಾಡಿಕೊಂಡಿದ್ದರು. …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





