Breaking News

BigTv News

ಡುಮ್ಮಿ ಎಂದು ಮಾಜಿ ಪತ್ನಿ ಫೋನ್ ನಂಬರ್ ಸೇವ್ ಮಾಡಿದ ಪತಿಗೆ ದಂಡ ವಿಧಿಸಿದ ಕೋರ್ಟ್!

ಮೊಬೈಲ್ ಫೋನ್‌ನಲ್ಲಿ ನಂಬರ್ ಸೇವ್ ಮಾಡುವಾಗ ಚಿತ್ರ ವಿಚಿತ್ರವಾಗಿ ಸೇವ್ ಮಾಡುವುದು ಭಾರತೀಯರ ಅಭ್ಯಾಸ. ಹೆಸರಿನ ಜೊತೆಗೆ ನ್ಯೂ, ಜಿಯೋ, ಏರ್ಟೆಲ್, ಬಿಎಸ್‌ಎನ್‌ಎಲ್, ಅಡ್ಡ ಹೆಸರು, ನೀವು ಕರೆಯುವ ಹೆಸರು ಸೇರಿದಂತೆ ಸುಲಭವಾಗಿ ಗುರುತುಪತ್ತೆಯಾಗಲು ಹಲವು ಹೆಸರುಗಳನ್ನು ಸೇರಿಸಲಾಗುತ್ತದೆ.ಮಾಜಿ ಪತ್ನಿಯನ್ನು ವ್ಯಂಗ್ಯವಾಡಿದ್ದಾರೆ ಎಂದು ಕೋರ್ಟ್ ಪತಿಗೆ ದಂಡ ವಿಧಿಸಿದ ಘಟನೆ ಟರ್ಕಿಯಲ್ಲ ನಡೆದಿದೆ.

Read More »

ಅಕ್ರಮ ಸಂಬಂಧ ಆರೋಪದಡಿ ಮಹಿಳೆ ಬೆತ್ತಲೆಗೊಳಿಸಿ ದೌರ್ಜನ್ಯ: ತಲೆ ಕೂದಲು ಕತ್ತರಿಸಿ, ಸುಣ್ಣ ಹಚ್ಚಿ ಹಲ್ಲೆ

ಅಕ್ರಮ ಸಂಬಂಧ ಆರೋಪದಡಿ ಮಹಿಳೆಯನ್ನು ಬೆತ್ತಲೆಗೊಳಿಸಿ ದೌರ್ಜನ್ಯ ನಡೆಸಲಾಗಿದೆ. ಯಾದಗಿರಿ ಜಿಲ್ಲೆ ಶಹಾಪುರ ತಾಲ್ಲೂಕಿನ ಚಾಮನಾಳ ತಾಂಡಾದಲ್ಲಿ ಘಟನೆ ನಡೆದಿದೆ.ಅಕ್ಟೋಬರ್ 16ರಂದು ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. 35 ವರ್ಷದ ಮಹಿಳೆ ಮೇಲೆ 11 ಜನರು ದೌರ್ಜನ್ಯ ನಡೆಸಿದ್ದಾರೆ.ತಲೆ ಕೂದಲು ಕತ್ತರಿಸಿ, ಸುಣ್ಣ ಹಚ್ಚಿ, ಕಾರದಪುಡಿ ಎರಚಿ ದೌರ್ಜನ್ಯ ನಡೆಸಿದ್ದಾರೆ. ಆರೋಗ್ಯ ಸಮಸ್ಯೆ ಹಿನ್ನೆಲೆ ಆಗಾಗ ಕಲಬುರಗಿಯಲ್ಲಿರುವ ಚಿಕ್ಕಮ್ಮನ ಮನೆಗೆ ಮಹಿಳೆ ಹೋಗುತ್ತಿದ್ದಳು. ಚಿಕ್ಕಮ್ಮನ ಅಳಿಯ ಅನಿಲ್ ಜೊತೆಗೆ …

Read More »

ಮುಸ್ಲಿಂ ವಿವಾಹಿತನಿಂದ ನನ್ನ ಮಗಳ ಬಚಾವ್​ ಮಾಡಿ: ಕಮ್ಯುನಿಸ್ಟ್​ ಲೀಡರ್ ಕಣ್ಣೀರು! ರಾಜ್ಯಾದ್ಯಂತ ಸಂಚಲನ

ಕಾಸರಗೋಡಿನ ಉದುಮದಲ್ಲಿ ಸಿಪಿಎಂ ನಾಯಕರಾಗಿರುವ ಪಿ.ವಿ ಭಾಸ್ಕರನ್ ಅವರ ಸ್ಥಿತಿ ಈಗ ಅಯೋಮಯವಾಗಿದೆ. ಮುಸ್ಲಿಂ ವಿವಾಹಿತನೊಬ್ಬ ತನ್ನ ಮಗಳ ತಲೆಕೆಡಿಸಿ, ಆಕೆಯನ್ನು ತನ್ನ ವಿರುದ್ಧವೇ ಎತ್ತಿ ಕಟ್ಟಿರುವ ಬಗ್ಗೆ ಕಣ್ಣೀರು ಇಡುತ್ತಿದ್ದಾರೆ ಭಾಸ್ಕರನ್​. ಸೊಂಟದ ಕೆಳಭಾಗದಿಂದ ಸಂಪೂರ್ಣ ಸ್ವಾಧೀನ ಕಳೆದುಕೊಂಡಿರುವ ತಮ್ಮ ವಿಚ್ಛೇದಿತ ಪುತ್ರಿಗೆ ಚಿಕಿತ್ಸೆ ನೀಡುವ ನೆಪದಲ್ಲಿ ಬಂದ ನಕಲಿ ವೈದ್ಯ ರಶೀದ್ ಆಕೆಯ ತಲೆ ಕೆಡಿಸಿದ್ದು, ಆಕೆ ಈಗ ತಮ್ಮ ಮಾತನ್ನು ಕೇಳುವ ಸ್ಥಿತಿಯಲ್ಲಿ ಇಲ್ಲ ಎಂದು …

Read More »

ಹಾಡಹಗಲೇ ನಡು ರಸ್ತೆಯಲ್ಲೇ ಪತ್ನಿಯನ್ನು ಮಚ್ಚಿನಿಂದ ಕೊಚ್ಚಿದ ಪತಿ

ಪತಿ ಮಹಾಶಯನೊಬ್ಬ ಹಾಡಹಗಲೇ ನಡು ರಸ್ತೆಯಲ್ಲಿಯೇ ಪತ್ನಿಯನ್ನು ಮಚ್ಚಿನಿಂದ ಕೊಚ್ಚಿರುವ ಘಟನೆ ವಿಜಯಪುರದಲ್ಲಿ ನಡೆದಿದೆ.ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದಲ್ಲಿ ಆನಂದ ಟಾಕೀಸ್ ಬಳಿ ಈ ಘಟನೆ ನಡೆದಿದೆ. ರಸ್ತೆಯಲ್ಲಿ ನಡೆದು ಬರುತ್ತಿದ್ದ ಪತ್ನಿಯನ್ನು ಹಿಂದಿನಿಂದ ಬಂದ ಪತಿ ಮಚ್ಚಿನಿಂದ ಹಲ್ಲೆ ನಡೆಸಿದ್ದಾನೆ.ನಡು ರಸ್ತೆಯಲ್ಲಿಯೇ ಪತ್ನಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದು, ಪತ್ನಿ ರಸ್ತೆಯಲ್ಲಿಯೇ ರಕ್ತದ ಮಡುವಲ್ಲಿ ಬಿದ್ದರೂ ಹಲ್ಲೆ ನಡೆಸುವುದನ್ನು ನಿಲ್ಲಿಸಿಲ್ಲ. ಸ್ಥಳೀಯರು ಬಂದು ಪತ್ನಿ ಮಹಾಶಯನನ್ನು ತಡೆಯಲು ಯತ್ನಿಸಿದ್ದಾರೆ.ಯಾವ …

Read More »

6 ಕೆ.ಜಿ ಗಿಂತ ಹೆಚ್ಚು ಗಾಂಜಾ ವಶ : ಪ್ರಕರಣ ದಾಖಲು

ನಗರದ ರೈಲ್ವೆ ನಿಲ್ದಾಣದಿಂದ ಗಾಂಧಿ ಗಂಜ್ ಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಸಾರ್ವಜನಿಕವಾಗಿ ಮಾರಾಟ ಮಾಡಲಾಗುತ್ತಿದ್ದ ಸುಮಾರು 6,46,800 ರೂ. ಮೌಲ್ಯದ 6 ಕೆ. ಜಿ 468 ಗ್ರಾಂ ತೂಕದ ಗಾಂಜಾ ವಶಕ್ಕೆ ಪಡೆಯಲಾಗಿದೆ.ಕಲಬುರಗಿ ಮೂಲದ ವ್ಯಕ್ತಿಯೊಬ್ಬ ಬೈಕ್ ಮೇಲೆ ಪ್ಲಾಸ್ಟಿಕ್ ಚೀಲದಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದರು.ಸಮವಸ್ತ್ರದಲಿದ್ದ ಪೊಲೀಸರನ್ನು ನೋಡಿ ಗಾಂಜಾ ಖರೀದಿ ಮಾಡುವ ಸಾರ್ವಜನಿಕರು ಓಡಿದ್ದಾರೆ.ಅವರ ಜೊತೆಗೆ ಗಾಂಜಾ …

Read More »

ಆಸ್ಪತ್ರೆ ಅಧಿಕಾರಿಗಳ ಕಳ್ಳಾಟ – ರೋಗಿಗಳ‌ ಜೀವದೊಡನೆ ಚೆಲ್ಲಾಟ.!

ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲ್ಲೂಕು ಆಸ್ಪತ್ರೆಯಲ್ಲಿ ಮೂಲಭೂತ ಸೌಕರ್ಯ ಕೂಡ ಇಲ್ಲದೇ ರೋಗಿಗಳು ಪರದಾಡುತ್ತಿದ್ದು, ಶಾಸಕರು, ಆರೋಗ್ಯ ಇಲಾಖೆ ವಿರುದ್ಧ ಜನ ಆಕ್ರೋಶ ಹೊರಹಾಕಿದ್ದಾರೆ.ಕಳೆದ ಎರಡು ದಿನಗಳಿಂದ ಆಸ್ಪತ್ರೆಯ ವಿದ್ಯುತ್ ಸಂಪರ್ಕ ಕಡಿತವಾಗಿದ್ದು, ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳದೆ ರೋಗಿಗಳ ಜೊತೆ ವೈದ್ಯರ ಚೆಲ್ಲಾಟವಾಡುತ್ತಿದ್ದಾರೆ ಎಂದು ರೋಗಿಗಳು ಆರೋಪಿಸಿದ್ದಾರೆ ಆಸ್ಪತ್ರೆಯ ವೈದ್ಯಾಧಿಕಾರಿ ನಿರ್ಲಕ್ಷಕ್ಕೆ ರಾತ್ರಿ ಸ್ಥಳೀಯರಿಂದ ಪ್ರತಿಭಟನೆ ನಡೆಸಿದ್ದು, ಮುಖ್ಯ ವೈದ್ಯಾಧಿಕಾರಿ ಡಾ.ವಿರೇಶ್ ಶೆಟ್ಟರ್ ವಿರುದ್ಧ ರೋಗಿಗಳು, ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.ಅಸಮರ್ಪಕ …

Read More »

ಬೆಂಗಳೂರಲ್ಲಿ ಆಸ್ತಿ ವಿಚಾರಕ್ಕೆ ಗಲಾಟೆ : ಮಗನ ತಲೆಗೆ ಗುಂಡು ಹಾರಿಸಿದ ತಂದೆ!

ಆಸ್ತಿ ವಿಚಾರವಾಗಿ ತಂದೆ ಹಾಗು ಮಗನ ನಡುವೆ ಗಲಾಟೆ ನಡೆದಿದೆ. ಈ ವೇಳೆ ಗಲಾಟೆ ವಿಕೋಪಕ್ಕೆ ತಿರುಗಿ ತಂದೆ ಮಗನ ಮೇಲೆ ಫೈರಿಂಗ್ ನಡೆಸಿದ್ದಾರೆ.ತಲೆಗೆ ಶೂಟ್ ಮಾಡಿದ್ದು, ಹರೀಶ್ (30) ತಲೆಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಮಗನ ಮೇಲೆ ತಂದೆ ಸುರೇಶ್ ಫೈರಿಂಗ್ ಮಾಡಿದ್ದಾರೆ. ಹಳೆ ಲೋಡ್ ಗನ್ ನಿಂದ ಶೂಟ್ ಮಾಡಿದ್ದಾರೆ. ತಕ್ಷಣ ಸ್ಥಳೀಯರು ಹರೀಶ್ ನನ್ನ ಆಸ್ಪತ್ರೆಗೆ ದಾಖಲಿಸಿದ್ದಾರೆ. ತಂದೆ ಸುರೇಶ್ ಮದ್ಯ ಸೇವಿಸಿ ಜಮೀನು …

Read More »

ಹಾವೇರಿ – ನೀರು ತುಂಬಿದ್ದ ಬಕೆಟ್ ಗೆ ಬಿದ್ದು ಮಗು ಸಾವು

ಮನೆಯ ಎದುರು ನೀರು ತುಂಬಿಟ್ಟಿದ್ದ ಬಕೆಟ್ ಗೆ ಬಿದ್ದು ಅಸ್ವಸ್ಥಗೊಂಡಿದ್ದ 14 ತಿಂಗಳ ಮಗು ಹಾವೇರಿ‌ ಜಿಲ್ಲಾಸ್ಪತ್ರೆಯಲ್ಲಿ ಗುರುವಾರ ರಾತ್ರಿ ಮೃತಪಟ್ಟಿದೆ.ದಕ್ಷಿತ್ ಎಂಬ ಮಗು ಮನೆಯ ಮುಂಭಾಗದಲ್ಲಿ ಅಕ್ಟೋಬರ್ 19ರಂದು ಆಟವಾಡುತ್ತಿತ್ತು.ಮನೆಯ ಎದುರು ನೀರು ತುಂಬಿದ್ದ ಬಕೆಟ್‌ನಲ್ಲಿ ತಲೆ ಕೆಳಗಾಗಿ ಮಗು ಬಿದ್ದಿತ್ತು. ಅಲ್ಲಿಯೇ ಪ್ರಜ್ಞೆ ತಪ್ಪಿತ್ತು. ಬಕೆಟ್‌ನಲ್ಲಿ ಮಗುವಿನ ಕಾಲು ನೋಡಿದ್ದ ಪೋಷಕರು ಹಾಗೂ ಸ್ಥಳೀಯರು, ಮಗುವನ್ನು‌ ಮೇಲಕ್ಕೆ ಎತ್ತಿ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದಿದ್ದರು. ಅಲ್ಲಿಯೇ ಚಿಕಿತ್ಸೆಗೆ ಸ್ಪಂದಿಸದೇ …

Read More »

ಸಕಲೇಶಪುರದಲ್ಲಿ 80 ಅಡಿ ಪ್ರಪಾತಕ್ಕೆ ಬಿದ್ದ ಕಾರು – ಪವಾಡ ಸದೃಶ್ಯವಾಗಿ ನಾಲ್ವರು ಪ್ರಾಣಾಪಾಯದಿಂದ ಪಾರು!

ಚಾಲಕನ ನಿಯಂತ್ರಣ ತಪ್ಪಿ ಕಾರು ಪ್ರಪಾತಕ್ಕೆ ಬಿದ್ದ ಪರಿಣಾಮ ಒಂದೇ ಕುಟುಂಬದ ನಾಲ್ವರು ಗಾಯಗೊಂಡಿರುವ ಘಟನೆ ಹಾಸನ ಜಿಲ್ಲೆಯ ಸಕಲೇಶಪುರದ ಮಾರಹಳ್ಳಿ ಗ್ರಾಮದ ಬಳಿ ನಡೆದಿದೆ. ಮಗನನ್ನು ಗುರುವಾಯಿನಕೆರೆಯಲ್ಲಿರುವ ನವೋದಯ ಶಾಲೆಗೆ ಬಿಡಲು ಪತ್ನಿ ಮತ್ತು ಇಬ್ಬರ ಮಕ್ಕಳ ಜೊತೆ ಶಿವಮೊಗ್ಗ ಮೂಲದ ಗೋವಿಂದನಾಯ್ಕ್ ತೆರಳುತ್ತಿದ್ದರು.ಈ ವೇಳೆ ಕಾರು ನಿಯಂತ್ರಣ ತಪ್ಪಿದ್ದು, ಮಾರನಹಳ್ಳಿ ಬಳಿ ತಡೆಗೋಡೆಯಿಲ್ಲದೆ ಕಾರಣ 80 ಅಡಿ ಆಳಕ್ಕೆ ಬಿದ್ದಿದೆ. ಕಾರು ಬಿದ್ದಿದ್ದನ್ನು ಕಂಡ ಸ್ಥಳೀಯರು ಹಾಗೂ …

Read More »

ಬಾರ್‌ನಲ್ಲಿ ಜಗಳವಾಡಿ ಚೂರಿ ಇರಿತ: ಇಬ್ಬರಿಗೆ ಗಾಯ

ಬಾರ್‌ನಲ್ಲಿ ಜಗಳವಾಡಿ ಇಬ್ಬರಿಗೆ ಚೂರಿಯಿಂದ ಇರಿದ ಘಟನೆ ಸುರತ್ಕಲ್‌ನಲ್ಲಿ ಗುರುವಾರ ರಾತ್ರಿ ನಡೆದಿದೆ. ಘಟನೆಯಲ್ಲಿ ಸುರತ್ಕಲ್‌ನ ನಿಜಾಮ್‌ಗೆ ಹೊಟ್ಟೆಯ ಭಾಗದಲ್ಲಿ ಗಂಭೀರವಾಗಿ ಗಾಯವಾಗಿದ್ದು ಮುಕ್ಷಿದ್‌ ಕೈಗೆ ಸಣ್ಣಪಟ್ಟ ಗಾಯಗಳಾಗಿವೆ. ಇಬ್ಬರೂ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.ರಾತ್ರಿ ಸುಮಾರು 11 ಗಂಟೆಯ ವೇಳೆ ಮುಕ್ಷಿದ್ ಮತ್ತು ನಿಜಾಮ್ ಸುರತ್ಕಲ್‌ನ ದೀಪಕ್‌ ಬಾರ್‌ನಲ್ಲಿ ಮದ್ಯ ಸೇವಿಸುತ್ತಿದ್ದಾಗ ರೌಡಿಶೀಟರ್ ಮತ್ತು ಬಜರಂಗದಳ ಕಾರ್ಯಕರ್ತ ಗುರುರಾಜ್‌, ಆತನ …

Read More »