Breaking News

BigTv News

1.8 ಲಕ್ಷ ರೂ. ಮೊಬೈಲ್ ಫೋನ್ ಬುಕ್ ಮಾಡಿದ್ದ ಗ್ರಾಹಕನಿಗೆ ಶಾಕ್: ಬಾಕ್ಸ್ ನಲ್ಲಿತ್ತು ಚೌಕಾಕಾರದ ಕಲ್ಲು..!

ವ್ಯಕ್ತಿಯೊಬ್ಬರು ಅಮೆಜಾನ್ ನಲ್ಲಿ ಸ್ಯಾಮ್ಸಂಗ್ ಮೊಬೈಲ್ ಫೋನ್ ಮಾಡಿದ್ದು, ಅವರಿಗೆ ಡೆಲಿವರಿ ಆಗಿದ್ದ ಬಾಕ್ಸ್ ತೆಗೆದು ನೋಡಿದಾಗ ಕಲ್ಲು ಕಂಡು ಬಂದಿದೆ.ಗ್ರಾಹಕ ಅಕ್ಟೋಬರ್ 14ರಂದು ಅಮೆಜಾನ್ ಮೂಲಕ ಆನ್ಲೈನ್ ನಲ್ಲಿ 1.8 ಲಕ್ಷ ರೂಪಾಯಿ ಮೌಲ್ಯದ ಸ್ಯಾಮ್ಸಂಗ್ ಗ್ಯಾಲಕ್ಸಿ ಜೆಡ್ ಫೋಲ್ಡ್ -7 ಮೊಬೈಲ್ ಫೋನ್ ಬುಕ್ ಮಾಡಿದ್ದಾರೆ.ಅದಕ್ಕೆ ಟ್ರ್ಯಾಕಿಂಗ್ ಐಡಿ ಕೂಡ ಬಂದಿದೆ. ಅಕ್ಟೋಬರ್ 19ರಂದು ರಾತ್ರಿ 8 ಗಂಟೆಗೆ ಪ್ಯಾಕೇಜ್ ಡೆಲಿವರಿ ಆಗಿದೆ. ವಿಡಿಯೋ ಮಾಡುವ ಮೂಲಕ …

Read More »

ಬೆಂಗಳೂರಿನಲ್ಲಿ ಘೋರ ಘಟನೆ : `ಲಿವಿಂಗ್ ಟುಗೆದರ್’ನಲ್ಲಿದ್ದ ಜೋಡಿ ಆತ್ಮಹತ್ಯೆ.!

ಬೆಂಗಳೂರಿನಲ್ಲಿ ಲಿವಿಂಗ್ ಟುಗೆದರ್ ನಲ್ಲಿದ್ದ ಜೋಡಿಯೊಂದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಕಲ್ಲುಬಾಳು ಗ್ರಾಮದಲ್ಲಿ ಒಡಿಶಾ ಮೂಲದ ಸೀಮಾ ನಾಯಕ್ (25), ರಾಕೇಶ್ (23) ಮೃತರು ಎಂದು ಗುರುತಿಸಲಾಗಿದೆ.ಎರಡು ದಿನಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ. ಬಾಗಿಲು ತೆರೆಯದ ಹಿನ್ನೆಲೆಯಲ್ಲಿ ಅನುಮಾನಗೊಂಡು ಕಿಟಕಿ ಗಾಜು ಒಡೆದು ನೋಡಿದಾಗ ಬೆಳಕಿಗೆ ಬಂದಿದೆ. ಕೂಡಲೇ ಜಿಗಣಿ ಪೊಲೀಸರಿಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಪದೇ ಪದೇ ಕುಡಿದು ಬಂದು …

Read More »

ಆಟೋ ಚಾಲಕನನ್ನು ಭೀಕರವಾಗಿ ಕೊಂದು, ಆತನ ಆಟೋದಲ್ಲೇ ಶವ ಬಿಟ್ಟು ಹೋದ ರಾಕ್ಷಸರು!

ಕೋಲಾರದಲ್ಲಿ ಆಟೋ ಚಾಲಕನನ್ನ ಭೀಕರವಾಗಿ ಕೊಲೆ ಮಾಡಲಾಗಿದೆ. ಮಾರಕಾಸ್ತ್ರಗಳಿಂದ ಕೊಚ್ಚಿ ರಾಕ್ಷಸರು ಭೀಕರವಾಗಿ ಕೊಲೆ ಮಾಡಿದ್ದಾರೆ. ಬಂಗಾರಪೇಟೆಯ ಎಳೆಸಂದ್ರ ಗ್ರಾಮದ ಆಫ್ರಿದ್ ಕೊಲೆಯಾದ ವ್ಯಕ್ತಿ ಎಂದು ತಿಳಿದುಬಂದಿದೆ. ರಾಷ್ಟ್ರೀಯ ಹೆದ್ದಾರಿ 75 ರ ಕೆಂದಟ್ಟಿ ಬಳಿ ಈ ಒಂದು ಕೊಲೆ ನಡೆದಿದೆ.ಮೃತ ಆಫೀದ್ ಬೆಂಗಳೂರಿನಲ್ಲಿ ಆಟೋ ಓಡಿಸುತ್ತಿದ್ದ ಎಂದು ತಿಳಿದುಬಂದಿದೆ ಕಳೆದ ಎರಡು ದಿನಗಳ ಹಿಂದೆ ಆಫ್ರಿದ್ ಪತ್ನಿ ಜಗಳವಾಡಿ ಮನೆ ಸೇರಿದ್ದಾಳೆ. ಪತ್ನಿ ಗರ್ಭಿಣಿಯಾಗಿದ್ದು ಮೂರನೇ ಮಗುವಿನ ನಿರೀಕ್ಷೆಯಲ್ಲಿ …

Read More »

ಪೋಷಕರಿಗೆ ಕರೆ ಮಾಡಿ ಮಾತನಾಡಿದ ವೇದಾಧ್ಯನ ವಿದ್ಯಾರ್ಥಿ ; ಮುಖ್ಯ ಶಿಕ್ಷಕನಿಂದ ಹಲ್ಲೆ

ಚಿತ್ರದುರ್ಗದಲ್ಲಿ ಸಂಸ್ಕೃತ ಹಾಗೂ ವೇದಾಧ್ಯನ ಮಾಡುವ ವಿದ್ಯಾರ್ಥಿಯೊಬ್ಬ ದೂರದ ಊರಿನಲ್ಲಿರುವ ಅವರ ಪೋಷಕರಿಗೆ ಬೇರೊಬ್ಬರ ಮೊಬೈಲ್‌ನಿಂದ ಕರೆ ಮಾಡಿದಕ್ಕಾಗಿ ಅಲ್ಲಿನ ಮುಖ್ಯ ಶಿಕ್ಷಕ ವಿದ್ಯಾರ್ಥಿಯ ಮೇಲೆ ಹಲ್ಲೆ ಮಾಡಿದ್ದಾನೆ.ಈ ಘಟನೆ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕು ನಾಯಕನಹಟ್ಟಿಯ ತಿಪ್ಪೇರುದ್ರ ಸ್ವಾಮಿ ದೇವಾಲಯದ ಸುಪರ್ಧಿಯ ಸಂಸ್ಕೃತ ವೇಧಾಧ್ಯಯನ ಶಾಲೆಯಲ್ಲಿ ನಡೆದಿದೆ.ವಿದ್ಯಾರ್ಥಿ ಕೈ ಮುಗಿದರೂ ಬಿಡದೆ ಕಾಲಲ್ಲಿ ತುಳಿದು ಮುಖ್ಯ ಶಿಕ್ಷಕ ವೀರೇಶ್ ಹಿರೇಮಠ ಮನಸೋ ಇಚ್ಚೆಯಿಂದ ಹಲ್ಲೆವೆಸಗಿದ್ದಾರೆ.ವಿದ್ಯಾರ್ಥಿ ಮೇಲೆ ಕ್ರೌರ್ಯ ಮೆರೆದ …

Read More »

ಕೋಲಾರದಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯ ಬರ್ಬರ ಹತ್ಯೆ : ಬೆಚ್ಚಿ ಬಿದ್ದ ಜನತೆ!

ಕೋಲಾರದಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯಣ್ಣು ಬರ್ಬರವಾಗಿ ಕೊಲೆ ಮಾಡಲಾಗಿದೆ. ಕೋಲಾರ ತಾಲೂಕಿನ ರಾಷ್ಟ್ರೀಯ ಹೆದಾರಿ 75 ರ ಕೆಂದಟ್ಟಿ ಬಳಿ ಈ ಒಂದು ಭೀಕರ ಕೊಲೆ ನಡೆದಿದೆ.ಕೊಲೆಯಾದ ವ್ಯಕ್ತಿಯನ್ನು ಬಂಗಾರಪೇಟೆ ತಾಲೂಕಿನ ಎಳೆಸಂದ್ರ ಗ್ರಾಮದ (26) ಕೊಲೆಯಾದ ವ್ಯಕ್ತಿಯನ್ನು ತಿಳಿದು ಬಂದಿದೆ ಕೊಲೆ ಮಾಡಿ ಆಟೋದಲ್ಲಿ ಶವ ಬೀಸಾಡಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.ಕೊಲೆಗೆ ಇನ್ನೂ ನಿಖರವಾದ ಕಾರಣ ತಿಳಿದು ಬಂದಿಲ್ಲ. ಘಟನೆ ಕುರಿತಂತೆ ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »

ದೀಪಾವಳಿ ಪ್ರಯುಕ್ತ ಅಲಂಕಾರ ದೀಪ ಅಳವಡಿಸುತ್ತಿದ್ದಾಗ ವಿದ್ಯುತ್ ಆಘಾತ: ಯುವಕ ಮೃತ್ಯು

ಕಾಸರಗೋಡು ವಿದ್ಯುತ್ ಶಾಕ್ ತಗುಲಿ ಯುವಕನೋರ್ವ ಮೃತಪಟ್ಟ ಘಟನೆ ಸೀತಾಂಗೋಳಿ ಸಮೀಪದ ಪುತ್ತಿಗೆ ಎಂಬಲ್ಲಿ ಸೋಮವಾರ ರಾತ್ರಿ ನಡೆದಿದೆ.ಪುತ್ತಿಗೆ ಆಚಾರಿಮೂಲೆ ನಿವಾಸಿ ರಾಜೇಶ್ ಆಚಾರ್ಯ ಮೃತಪಟ್ಟವರು. ದೀಪಾವಳಿ ಅಂಗವಾಗಿ ಮನೆಯಂಗಳದಲ್ಲಿ ಅಲಂಕಾರ ವಿದ್ಯುದ್ದೀಪಗಳನ್ನು ಅಳವಡಿಸುತ್ತಿದ್ದಾಗ ರಾಜೇಶ್ ಶಾಕ್ ತಗುಲಿದೆ.ಗಂಭೀರಾವಸ್ಥೆಯಲ್ಲಿದ್ದ ಅವರನ್ನು ಮನೆಯವರು ಕೂಡಲೇ ಆಸ್ಪತ್ರೆಗೆ ತಲಪಿಸಿದರೂ ಜೀವ ಉಳಿಸಲಾಗಲಿಲ್ಲ.ಕುಂಬಳೆ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Read More »

ಕಟ್ ಬೆಲ್ತೂರು; ಕಾರು ಢಿಕ್ಕಿಯಾಗಿ ಪಾದಚಾರಿಗೆ ಗಾಯ

ಕುಂದಾಪುರದಲ್ಲಿ ಕಾರು ಢಿಕ್ಕಿಯಾಗಿ ಪಾದಚಾರಿ ಗಾಯಗೊಂಡ ಘಟನೆ ಅ. 18ರ ಸಂಜೆ ಹೆಮ್ಮಾಡಿ   ಕೊಲ್ಲೂರು ಮುಖ್ಯ ರಸ್ತೆಯ ಕಟ್ ಬೆಲ್ತೂರಿನಲ್ಲಿ ಸಂಭವಿಸಿದೆ.ಕನ್ಯಾನ ಗ್ರಾಮದ ಜಗದೀಶ್ಚಂದ್ರ ಶೆಟ್ಟಿ (50) ಗಾಯಗೊಂಡವರು. ಅ.18ರ ಸಂಜೆ 6.30ರ ಸುಮಾರಿಗೆ ಕುಂದಾಪುರಕ್ಕೆ ತೆರಳಿದ್ದವರು ವಾಪಸು ಬಸ್ಸಿನಲ್ಲಿ ಬಂದು ಕಟ್ ಬೆಲ್ತೂರಿನಲ್ಲಿ ಇಳಿದು ಮನೆಯತ್ತ ನಡೆದುಕೊಂಡು ಹೋಗುತ್ತಿದ್ದ ವೇಳೆ ರತ್ನಾಕರ ಶೆಟ್ಟಿಯವರು ಚಲಾಯಿಸುತ್ತಿದ್ದ ಕಾರು ಢಿಕ್ಕಿಯಾಗಿದೆ.ಪರಿಣಾಮ ಎಡಕಾಲಿನ ಮೂಳೆಗೆ ಪೆಟ್ಟಾಗಿದ್ದು, ಸೊಂಟಕ್ಕೆ ಗಾಯವಾಗಿದೆ. ಕುಂದಾಪುರ ಸಂಚಾರ …

Read More »

ಶಂಕರನಾರಾಯಣ: ವ್ಯಕ್ತಿ ಆತ್ಮಹತ್ಯೆ

ಶಂಕರನಾರಾಯಣ ಗ್ರಾಮದ ಸುಬ್ಬ ಕುಲಾಲ (64) ಅವರು ಮನೆಯ ಸಮೀಪದ ಹಾಡಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಕೃಷಿಕರಾಗಿದ್ದ ಅವರು ಕೈ, ಕಾಲು ನಡುಗುವ ಸಮಸ್ಯೆಯಿಂದ ಬಳಲುತ್ತಿದ್ದರು. ಚಿಕಿತ್ಸೆ ಮಾಡಿದರೂ ಗುಣವಾಗಿರಲಿಲ್ಲ. ಅ. 18ರಂದು ಆಸ್ಪತ್ರೆಗೆಂದು ಹೋದವರು ಮರಳಿ ಮನೆಗೆ ಬಂದಿರಲಿಲ್ಲ.ಅ. 19ರಂದು ಮನೆಯ ಸಮೀಪದ ಹಾಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡುಬಂದಿದೆ.ಕಾಯಿಲೆ ಗುಣವಾಗದ ಹಿನ್ನೆಲೆಯಲ್ಲಿ ಜೀವನದಲ್ಲಿ ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪುತ್ರ ಕರುಣಾಕರ ಅವರು ಪೊಲೀಸರಿಗೆ ದೂರು …

Read More »

ಚಿತ್ರದುರ್ಗದ DHO ಕಚೇರಿ ಬಳಿ ನವಜಾತ ಶಿಶುವಿನ ಶವ ಪತ್ತೆ!

ಒಂದು ವಾರದ ಹಿಂದೆ ಚಿತ್ರದುರ್ಗ ಜಿಲ್ಲಾಸ್ಪತ್ರೆಯ ಆವರಣದಲ್ಲಿ ನವಜಾತ ಶಿಶು ಪತ್ತೆಯಾಗಿತ್ತು. ಮಗು ಅಳುವುದನ್ನು ಕೇಳಿ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರು.ಇದೀಗ ನಿರ್ಮಾಣ ಹಂತದ ಕಟ್ಟಡದಲ್ಲಿ ನವಜಾತ ಶಿಶು ಪತ್ತೆಯಾಗಿದೆ.ಡಿಹೆಚ್ ಒ ಕಚೇರಿ ಬಳಿಯೇ ಇರುವ ಕಟ್ಟಡದಲ್ಲಿ ಮಗುವ್ನ ಶವ ಪತ್ತೆಯಾಗಿದ್ದು, ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಚಿತ್ರದುರ್ಗ ನಗರ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Read More »

ಊಟದ ಬಿಲ್ ಕೇಳಿದಕ್ಕೆ ಹೋಟೆಲ್ ಮಾಲೀಕ, ಮಗನ ಮೇಲೆ ಪುಂಡರ ಹಲ್ಲೆ!

ಬೆಳಗಾವಿ ಜಿಲ್ಲೆ ರಾಯಭಾಗ ತಾಲೂಕಿನ ಕುಡಚಿ ಪಟ್ಟಣದಲ್ಲಿ ನೈತಿಕ ಪೊಲೀಸ್‌ಗಿರಿ ಮಿತಿ ಮೀರಿ ಹೋಗಿದೆ. ಊಟದ ಬಿಲ್ ಕೇಳಿದ ಕಾರಣಕ್ಕೆ ಪಟ್ಟಣದ ರತ್ನಾ ಹೋಟೆಲ್ ಮಾಲೀಕ ಹಾಗೂ ಅವರ ಮಗನ ಮೇಲೆ ಪುಂಡರು ಹಲ್ಲೆ ನಡೆಸಿರುವ ಘಟನೆ ನಿನ್ನೆ ಮಧ್ಯಾಹ್ನ ನಡೆದಿದೆ.ಈ ದಾಳಿಯ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣವರ ತವರೂರಾದ ಈ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂಬ ಆರೋಪಗಳು ಕೇಳಿ …

Read More »