Breaking News

BigTv News

ಶ್ರೀರಾಮ, ಬಿ.ಆರ್. ಅಂಬೇಡ್ಕರ್ ಕುರಿತಾದ ಆಕ್ಷೇಪಾರ್ಹ ‘AI ವಿಡಿಯೋ’ ಸೃಷ್ಟಿಸಿದ ಯುವಕ ಅರೆಸ್ಟ್.

AI ದುರುಪಯೋಗ ದಿನೇ ದಿನೇ ಹೆಚ್ಚುತ್ತಿದ್ದು, ಇದು ಆತಂಕಕಾರಿ ವಿಷಯವಾಗಿದೆ. ಉತ್ತರ ಪ್ರದೇಶದ ಅಂಬೇಡ್ಕರ್ನಗರದಲ್ಲಿ ಭಗವಾನ್ ರಾಮ ಮತ್ತು ಭಾರತೀಯ ಸಂವಿಧಾನದ ಪ್ರಮುಖ ಶಿಲ್ಪಿ ಡಾ. ಭೀಮರಾವ್ ಅಂಬೇಡ್ಕರ್ ಅವರನ್ನು ಒಳಗೊಂಡ ಆಕ್ಷೇಪಾರ್ಹ AI-ರಚಿತ ವೀಡಿಯೊವು ಉದ್ವಿಗ್ನತೆಯನ್ನು ಉಂಟುಮಾಡಿದೆ.ಜಲಾಲ್ಪುರದ ಸೆಹ್ರಾ ನಿವಾಸಿ ವಿಜಯ್ ಕುಮಾರ್ ಎಂಬುವವರು ಈ ವಿಡಿಯೋವನ್ನು ಸೃಷ್ಟಿಸಿ ಆನ್ಲೈನ್ನಲ್ಲಿ ಹಂಚಿಕೊಂಡಿದ್ದಾರೆ ಎನ್ನಲಾಗಿದೆ. ಇದು ಬಿಜೆಪಿ ಬೆಂಬಲಿಗರು ಮತ್ತು ರಾಮನ ಭಕ್ತರಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಈ ವಿಡಿಯೋವನ್ನು …

Read More »

ಪಿಎಸ್‌ಐ ಆಗಿ 10ವರ್ಷ ಪೊರೈಸಿದ ಖುಷಿಯಲ್ಲಿ ಮಾಡ್ಬರ್ದು ಮಾಡಿ ಅಮಾನತು ಆದ ಪೋಲಿಸ್ ಅಧಿಕಾರಿ.

ಪಿಎಸ್‌ಐ ಆಗಿ 10 ವರ್ಷ ಪೂರೈಸಿದ್ದ ಖುಷಿಯಲ್ಲಿ ರೌಡಿಶೀಟರ್ ಜತೆ ಕೇಕ್ ಕಟ್ ಮಾಡಿ ಸಂಭ್ರಮಿಸಿದ್ದ ಅಧಿಕಾರಿಗೆ ಯಾದಗಿರಿ ಎಸ್ಪಿ ಪೃಥ್ವಿಕ್ ಶಂಕರ್ ಬಿಗ್ ಶಾಕ್ ನೀಡಿದ್ದಾರೆ.ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರ ಠಾಣೆಯ ಪಿಎಸ್‌ಐ ಆಗಿರುವ ರಾಜಶೇಖರ್ ರಾಠೋಡ್ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.ಪಿಎಸ್‌ಐ ಆಗಿ ಹತ್ತು ವರ್ಷ ಪೊರೈಸಿದ್ದ ಖುಷಿಯಲ್ಲಿ ಅದೇ ಠಾಣೆಯಲ್ಲಿ ರೌಡಿಶೀಟರ್ ಆಗಿರುವ ನಾಗರಾಜ್ ಜೊತೆ ಕೇಕ್ ಕಟ್ ಮಾಡಿ ಸೆಲೆಬ್ರೇಷನ್ ಮಾಡಿದ್ದರು.

Read More »

ಮಾಗಡಿಯಲ್ಲೇ ಸೋಲೂರು ಉಳಿಸಿಕೊಳ್ಳಲು ಮನವಿ | ಸಿಗದ ಸ್ಪಂದನೆ: ಹರಿಹಾಯ್ದ ಶಾಸಕ

ಸೋಲೂರು ಹೋಬಳಿಯನ್ನು ಮಾಗಡಿ ತಾಲ್ಲೂಕಿನಲ್ಲಿಯೇ ಉಳಿಸಿಕೊಳ್ಳಲು ಆರಂಭದಲ್ಲಿಯೇ ನಾನು ಎತ್ತಿದ ಧ್ವನಿಗೆ ಯಾರಿಂದಲೂ ಸೂಕ್ತ ಸ್ಪಂದನೆ ಸಿಗಲಿಲ್ಲ. ಈಗ ಸೋಲೂರು ಬೇಕು ಎಂದು ಪ್ರತಿಭಟನೆ ಮಾಡಿ ಏನು ಪ್ರಯೋಜನ? ರೈಲು ಹೋದ ಮೇಲೆ ಟಿಕೆಟ್ ಕೊಂಡಂತೆ ಆಗಿದೆ ನಿಮ್ಮ ಸ್ಥಿತಿ’ ಎಂದು ಶಾಸಕ ಎಚ್.ಸಿ. ಬಾಲಕೃಷ್ಣ ಅಸಹಾಯಕತೆ ವ್ಯಕ್ತಪಡಿಸಿದರು.ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಕಂಡು ಸೋಲೂರನ್ನು ಮಾಗಡಿ ತಾಲ್ಲೂಕಿನಲ್ಲಿಯೇ ಉಳಿಸಿಕೊಡುವಂತೆ ಮನವಿ ಮಾಡಿದ್ದೆ. ಜನರು ಬೆಂಬಲಿಸಲಿಲ್ಲ. ಬದಲಾಗಿ ಅಸಹಕಾರ ತೋರಿದರು. ಈ …

Read More »

ಪ್ರವಾಹದಲ್ಲಿ ಸಿಲುಕಿದ್ದ ಮರಿ ಆನೆಯನ್ನು ರಕ್ಷಿಸಿದ ಅರಣ್ಯ ಸಿಬ್ಬಂದಿ.!

ಪಶ್ಚಿಮ ಬಂಗಾಳದಲ್ಲಿ ಇತ್ತೀಚಿಗೆ ಸಂಭವಿಸಿದ ಪ್ರವಾಹದಲ್ಲಿ ತಾಯಿಯಿಂದ ಬೇರ್ಪಟ್ಟಿದ್ದ 15 ದಿನಗಳ ಮರಿ ಆನೆಯನ್ನು ಭಾರತೀಯ ಅರಣ್ಯ ಸೇವೆ ಅಧಿಕಾರಿಗಳು ರಕ್ಷಣೆ ಮಾಡಿದ್ದು, ಸದ್ಯ ಇದರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.ಭಾರತೀಯ ಅರಣ್ಯ ಸೇವೆ (ಐಎಫ್‌ಎಸ್) ಅಧಿಕಾರಿ ಪರ್ವೀನ್ ಕಸ್ವಾನ್ ಹಂಚಿಕೊಂಡ 29 ಸೆಕೆಂಡುಗಳ ಕ್ಲಿಪ್‌ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ. ಪಶ್ಚಿಮ ಬಂಗಾಳದಲ್ಲಿ ಸಂಭವಿಸಿದ ಪ್ರವಾಹದಲ್ಲಿ ಮರಿಯಾನೆ ಸಿಲುಕಿಕೊಂಡಿತ್ತು.ಇದನ್ನೂ ಗಮನಿಸಿದ ಅರಣ್ಯಾಧಿಕಾರಿಗಳು ಕೂಡಲೇ ಕಾರ್ಯಪ್ರವೃತ್ತರಾಗಿ …

Read More »

ಮೈಸೂರು | ಬೌದ್ಧ ಸಮ್ಮೇಳನ: ಹರಿದು ಬಂದ ಜನ..

ಅಂಬೇಡ್ಕರ್ ಬೌದ್ಧ ಧರ್ಮ ಸ್ವೀಕರಿಸಿದ 69ನೇ ವರ್ಷಾಚರಣೆ ಪ್ರಯುಕ್ತ ನಗರ ಮಹಾರಾಜ ಕಾಲೇಜು ಮೈದಾನದಲ್ಲಿ ಮಂಗಳವಾರ ಆರಂಭವಾದ ಬೌದ್ಧ ಮಹಾ ಸಮ್ಮೇಳನಕ್ಕೆ ನಾಡಿನ ವಿವಿಧೆಡೆಯಿಂದ ಬೌದ್ಧರು, ಅಂಬೇಡ್ಕರ್ ಅಭಿಮಾನಿಗಳು ಸಾಗರದಂತೆ ಹರಿದು ಬಂದರು. ಹಳೆ ಮೈಸೂರು ಭಾಗದ ಜಿಲ್ಲೆಗಳಲ್ಲದೇ ಕಲಬುರಗಿ, ಬಾದಾಮಿ, ಬಾಗಲಕೋಟೆ ಸೇರಿದಂತೆ ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಬಂದಿದ್ದ ಜನರು, ಪುರಭವನದ ಅಂಬೇಡ್ಕರ್ ಪ್ರತಿಮೆಯಿಂದ ಆರಂಭವಾದ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು

Read More »

ಹಾಸನಾಂಬಾ ಸನ್ನಿಧಿಯಲ್ಲಿ ಡಿಕೆಶಿ ಖಡ್ಗಮಾಲಾ ಸ್ತ್ರೋತ್ರ ಪಠಣೆ, ಪೂಜೆ: ಸಿಎಂ ಗದ್ದುಗೆಗೇರುವ ಪ್ರಶ್ನೆಗೆ ಮಾರ್ಮಿಕ ಉತ್ತರ

ಸಿಎಂ ರೇಸ್‌ನಲ್ಲಿರುವ ಡಿಕೆ ಶಿವಕುಮಾರ್ ಪತ್ನಿ ಉಷಾ ಅವರ ಜೊತೆ ಹಾಸನಾಂಬೆ ದೇವಿಯ ಗರ್ಭಗುಡಿಯಲ್ಲಿ ಸುಮಾರು 15 ನಿಮಿಷ ಆಸೀನರಾಗಿ ವಿಶೇಷ ಪೂಜೆಸಲ್ಲಿಸಿದರು. ಶಕ್ತಿಯುತವಾದ ನಾರಾಯಣಿ ನಮಸ್ಕಾರ ಮಂತ್ರ ಮತ್ತು ಖಡ್ಗಮಾಲಾ ಸ್ತ್ರೋತ್ರ ಪಠಿಸಿದರು. ನಾರಾಯಣಿ ನಮಸ್ಕಾರ ಮಂತ್ರ ದುರ್ಗಾ ಸಪ್ತಸತಿಯ 11ನೇ ಅಧ್ಯಾಯದಲ್ಲಿ ಬರುವ ಮಂತ್ರವಾಗಿದೆ. ಇದು ಅತ್ಯಂತ ಪ್ರಬಲ ಪೂಜೆಯಾಗಿದ್ದು ತಮ್ಮ ಇಷ್ಟಾರ್ಥ ಸಿದ್ದಿಗಾಗಿ ಚಂಡಿಕಾ ಹೋಮ ಮಾಡುವ ವೇಳೆ ಪಠಿಸುವ ಮಂತ್ರವಾಗಿದೆ. ಸುಮಾರು 5 ನಿಮಿಷಗಳ …

Read More »

ದಿವಂಗತ ನಟ ನವೀನ್‌ ಮಯೂರ್‌ ಕುಟುಂಬದಲ್ಲಿ ಮತ್ತೊಂದು ಅಕಾಲಿಕ ಸಾವು, ತಮ್ಮ ಶ್ರೇಯಸ್‌ ಕೂಡ ನಿಧನ!

ಕನ್ನಡದ ಅತ್ಯಂತ ಸ್ಪುರದ್ರೂಪಿ ನಟರಲ್ಲಿ ಒಬ್ಬರಾಗಿದ್ದ ನಟ ನವೀನ್‌ ಮಯೂರ್‌ ತಮ್ಮ 31ನೇ ವಯಸ್ಸಿನಲ್ಲಿ ಜಾಂಡೀಸ್‌ನಿಂದ ಅಕಾಲಿಕವಾಗಿ ಸಾವು ಕಂಡಿದ್ದರು. 2010ರ ಅಕ್ಟೋಬರ್‌ 3 ರಂದು ಅವರ ಸಾವಿನ ಬಳಿಕ ನವೀನ್‌ ಮಯೂರ್‌ ಅವರ ಇಡೀ ಕುಟುಂಬವೇ ಕುಸಿದು ಹೋಗಿತ್ತು.ಮಗನ ನೆನಪಿನಲ್ಲಿಯೇ ಅವರ ತಾಯಿ ಕೂಡ ಕೆಲ ದಿನಗಳ ಬಳಿಕ ಸಾವು ಕಂಡಿದ್ದರು. ನಂತರ ಇದ್ದಿದ್ದು, ಇಡೀ ಮನೆಗೆ ಹಿರಿಯರಾಗಿದ್ದ ನವೀನ್‌ ಮಯೂರ್‌ ಅವರ ತಂದೆ ರಘುರಾಮನ್‌ ಹಾಗೂ ತಮ್ಮ …

Read More »

ನವವಿವಾಹಿತೆಯ ಆತ್ಮಹತ್ಯೆ: ಅತ್ತೆ-ಮಾವನ ಕಿರುಕುಳ ಆರೋಪ- ಪೊಲೀಸರ ನಿರ್ಲಕ್ಷ್ಯಕ್ಕೆ ಆಕ್ರೋಶ!

ರಾಮಲಿಂಗಾಪುರ ಗ್ರಾಮದಲ್ಲಿ 22 ವರ್ಷದ ನವವಿವಾಹಿತೆ ಸಿರೀಶಾ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜರುಗಿದೆ.ಅತ್ತೆ ಹಾಗೂ ಮಾವನ ನಿರಂತರ ಕಿರುಕುಳದಿಂದ ಮನೋನೊಂದು ಬಾಳದುಡಿದ ಸಿರೀಶಾ, ಕ್ರಿಮಿನಾಶಕ ಸೇವಿಸಿ ಜೀವ ಕೊಳೆದಿದ್ದಾರೆ ಎಂದು ಶಂಕಿಸಲಾಗಿದೆ.ಶ್ರೀನಾಥ್ ಕುಟುಂಬವು ಆತನ ಮಾವನ ಮಗಳೊಂದಿಗೆ ಮದುವೆ ಮಾಡಬೇಕೆಂಬ ನಿರೀಕ್ಷೆಯಲ್ಲಿ ಸಿರೀಶಾಗೆ ಬೇಧಭಾವ ತೋರಿದದ್ದಾಗಿ ಆರೋಪವಿದೆ. ಸಿರೀಶಾ ಕುಟುಂಬವು ಸ್ಥಳೀಯ ದಿಬ್ಬೂರಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದರೂ, ಪೊಲೀಸರು ಸೂಕ್ತ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯವಾಹಿಸಿದ್ದಾರೆ ಎಂಬ ಆಕ್ರೋಶ ಹುಟ್ಟಿಕೊಂಡಿದೆ.

Read More »

ಮೊಬೈಲ್‌ ರಿಚಾರ್ಜ್ ಮಾಡಿಸದ ಪತಿ: ಸಿಟ್ಟಿಗೆದ್ದ ಪತ್ನಿ ಆತ್ಮಹತ್ಯೆ!

ಮೊಬೈಲ್ ರಿಚಾರ್ಜ್ ಮಾಡಿಸಲಿಲ್ಲ ಎಂಬ ಕಾರಣಕ್ಕೆ ಪತಿಯ ಮೇಲೆ ಕೋಪಗೊಂಡು ಪತ್ನಿ ಮನೆಯ ಮೂರನೇ ಮಹಡಿಯಿಂದ ಕಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಉತ್ತರ ಪ್ರದೇಶದ ಮೂಲದ ಶಿಖಾ ದೇವಿ (28) ಮೃತ ಮಹಿಳೆ.ನಗರದ ಪೊಲೀಸರಿಗೆ ಮಾಹಿತಿ ನೀಡಿರುವ ಶಿಖಾ ಅವರ ತಂದೆ ಅನಿಲ್ ಕುಮಾರ್ ತ್ರಿಪಾಠಿ, ‘ದಂಪತಿ ಈ ಹಿಂದೆ ಜಗಳವಾಡಿರಲಿಲ್ಲ. ಸಾವಿನ ಹಿಂದೆ ಯಾವುದೇ ಅನುಮಾನವಿಲ್ಲ’ ಎಂದು ತಿಳಿಸಿದ್ದಾರೆ.

Read More »

ಮಾತು ಬಾರದ ಮಗನ ಕಾರಣಕ್ಕೆ ದಂಪತಿ ಮಧ್ಯೆ ಕಿತ್ತಾಟ!

ಸಾಯಿಲಕ್ಷ್ಮಿ ಹಾಗೂ ಆಕೆಯ ಪತಿ ಅನಿಲ್‌ಕುಮಾರ್ ಅವರು ಆಗಾಗ ಗಲಾಟೆ ಮಾಡುತ್ತಿದ್ದರು. ಅವಳಿಗಳಲ್ಲಿ ಒಂದು ಮಗು ಚೇತನ್‌ಗೆ ಮಾತನಾಡುವುದಕ್ಕೆ ಬರುತ್ತಿರಲಿಲ್ಲ, ಇದುವೇ ದಂಪತಿಯ ನಡುವಿನ ಕಾದಾಟಕ್ಕೆ ಕಾರಣವಾಗಿತ್ತು. ಮಾತಿನ ದೋಷದಿಂದ ಚೇತನ್ ಬಳಲುತ್ತಿದ್ದು, ಕುಟುಂಬದವರು ಆ ಮಗುವನ್ನು ಯಾವಾಗಲೂ ಸ್ಪೀಚ್ ಥೆರಪಿ ಕೇಂದ್ರಕ್ಕೆ ಕರೆದೊಯ್ಯುತ್ತಿದ್ದರು. ಆದರೆ ಸಾಯಿಲಕ್ಷ್ಮಿ ಹಾಗೂ ಅನಿಲ್‌ಕುಮಾರ್ ಮಧ್ಯೆ ಮಗುವಿನ ಮಾತಿನ ವಿಚಾರಕ್ಕೆ ಸಂಬಂಧಿಸಿದಂತೆ ಆಗಾಗ ಗಲಾಟೆ ನಡೆಯುತ್ತಿತ್ತು ಎಂದು ಅವರು ಹೇಳಿದ್ದಾರೆ.

Read More »