ಬೆಂಗಳೂರಿನಿಂದ ತುಮಕೂರಿಗೆ ಪ್ರಯಾಣಿಸುತ್ತಿದ್ದ ಕೆಎಸ್ಆರ್ಟಿಸಿ ಬಸ್ನಲ್ಲಿ (ಕೆಎ 06 ಎಫ್ 1235) 25 ವರ್ಷದ ಯುವಕ ಜೀವನ್ ರಾಜ್ ಎಂಬಾತನಿಂದ ಯುವತಿಯೊಬ್ಬರಿಗೆ ಲೈಂಗಿಕ ಕಿರುಕುಳವಾದ ಘಟನೆ ನಡೆದಿದೆ.ತುಮಕೂರು ಸಮೀಪದ ಕ್ಯಾತಸಂದ್ರ ಟೋಲ್ಗೆ ಬಂದಿತ್ತು. ಪೊಲೀಸರು ತಕ್ಷಣ ಸ್ಥಳಕ್ಕೆ ಆಗಮಿಸಿ ಜೀವನ್ ರಾಜ್ನನ್ನು ವಶಕ್ಕೆ ಪಡೆದಿದ್ದಾರೆ. ಸಂತ್ರಸ್ತ ಯುವತಿ ತುಮಕೂರು ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದು, ಆರೋಪಿ ವಿರುದ್ಧ ಬಿಎನ್ಎಸ್ ಕಲಂ 64 ಮತ್ತು 79 ರ ಅಡಿಯಲ್ಲಿ ಎಫ್ಐಆರ್ ದಾಖಲಾಗಿದೆ.
Read More »ಪಾಕ್ – ಅಪ್ಘಾನಿಸ್ತಾನ ನಡುವೆ ಘೋರ ಸಂಘರ್ಷ
ಉಗ್ರರಿಗೆ ಆಶ್ರಯ ನೀಡಿದ ಆರೋಪದ ಮೇಲೆ ಪರಸ್ಪರ ಮೇಲೆ ದಾಳಿ ನಡೆಸುತ್ತಿರುವ ಪಾಕಿಸ್ತಾನ ಮತ್ತು ಆಫ್ಘಾನಿಸ್ತಾನದ ನಡುವೆ ಶನಿವಾರದಿಂದೀಚೆಗೆ ಭಾರೀ ಸಂಘರ್ಷ ಆರಂಭವಾಗಿದೆ. ಪರಸ್ಪರ ಮೇಲಿನ ದಾಳಿಯಲ್ಲಿ ಉಭಯ ದೇಶಗಳ ಮುಂಚೂಣಿ ಸೇನಾ ಠಾಣೆಗಳು ಧ್ವಂಸಗೊಂಡಿವೆ.ಶನಿವಾರದಿಂದೀಚೆಗೆ ಮತ್ತಷ್ಟು ತೀವ್ರಗೊಂಡಿದೆ. ಅಫ್ಘಾನಿಸ್ತಾನದ 19 ಸೈನಿಕ ಹೊರಠಾಣೆ ಮತ್ತು ಉಗ್ರ ಅಡಗುತಾಣಗಳನ್ನು ವಶಪಡಿಸಿಕೊಂಡಿದ್ದಾಗಿ ಪಾಕಿಸ್ತಾನ ಹೇಳಿದೆ. ಅಲ್ಲದೆ 200ಕ್ಕೂ ಹೆಚ್ಚು ತಾಲಿಬಾನ್ ಹೋರಾಟಗಾರರು ಮತ್ತು ಅವರ ಬೆಂಬಲಿತ ಉಗ್ರರನ್ನು ಹತ್ಯೆ ಮಾಡಿದ್ದಾಗಿ ಹೇಳಿದೆ. …
Read More »ಅಮೆರಿಕದಲ್ಲಿ ಮತ್ತೊಂದು ಗುಂಡಿನ ದಾಳಿ : ನಾಲ್ವರು ಸಾವು, 20 ಕ್ಕೂ ಹೆಚ್ಚು ಜನರಿಗೆ ಗಾಯ
ದಕ್ಷಿಣ ಅಮೆರಿಕದ ದಕ್ಷಿಣ ಕೆರೊಲಿನಾದಲ್ಲಿ ಜನದಟ್ಟಣೆಯ ಬಾರ್ನಲ್ಲಿ ನಡೆದ ಸಾಮೂಹಿಕ ಗುಂಡಿನ ದಾಳಿಯಲ್ಲಿ ನಾಲ್ವರು ಜನರು ಸಾವನ್ನಪ್ಪಿದ್ದಾರೆ ಮತ್ತು ಕನಿಷ್ಠ 20 ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಇದರಲ್ಲಿ ನಾಲ್ವರನ್ನು ಗಂಭೀರ ಸ್ಥಿತಿಯಲ್ಲಿ ಸ್ಥಳೀಯ ಆಸ್ಪತ್ರೆಗಳಿಗೆ ಕಳುಹಿಸಲಾಗಿದೆ ಎಂದು ಶೆರಿಫ್ ಕಚೇರಿ ತಿಳಿಸಿದೆ.
Read More »ರಾಜ್ಯ ಸಚಿವ ಸಂಪುಟ ವಿಸ್ತರಣೆ, ಪುನರ್ರಚನೆ ಮುಖ್ಯಮಂತ್ರಿಗಳ ಪರಮಾಧಿಕಾರ ಹಾಗೂ ಅವರ ವಿವೇಚನೆಗ ಬಿಟ್ಟಿರುವ ವಿಚಾರ
ವಿಮಾನ ನಿಲ್ದಾಣದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಆಯ್ಕೆಯಾಗಿರುವ ಎಲ್ಲಾ ಶಾಸಕರಿಗೂ ಮಂತ್ರಿಗಳಾಬೇಕು ಎನ್ನುವ ಆಸೆಯಿರುತ್ತದೆ. ಮುಖ್ಯಮಂತ್ರಿಗಳು, ಸಚಿವರು ಔತಣಕೂಟ ಕರೆಯುವುದು ಸಾಮಾನ್ಯ. ಇನ್ನು ಸೋಮವಾರ ಊಟಕ್ಕೆ ಕರೆದಿದ್ದಾರೆ ಎನ್ನುವುದಕ್ಕೆ ಮಹತ್ವ ಕೊಡಬೇಕಾಗಿಲ್ಲ. ಬಿಜೆಪಿಯವರಿಗೆ ಮಾಡಲು ಕೆಲಸವಿಲ್ಲ. ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದ್ದಾರೆ. ಮುಖ್ಯಮಂತ್ರಿಗಳು, ಸಚಿವರು ಊಟಕ್ಕೆ ಕರೆದು ಒಂದು ಸಭೆ ಮಾಡಿದರೆ ದೊಡ್ಡ ವಿಚಾರ ಎಂದು ತಿಳಿದಿರುವುದು ಬಿಜೆಪಿಯವರ ಮನಸ್ಥಿತಿಯಿಂದಾಗಿ. ಬಿಜೆಪಿಯವರು ಎಲ್ಲದರಲ್ಲೂ ರಾಜಕಾರಣ ಹುಡುಕುತ್ತಾರೆ …
Read More »ತಾಲಿಬಾನ್ ದಾಳಿಯಲ್ಲಿ ಪಾಕಿಸ್ತಾನದ 12 ಸೈನಿಕರು ಬಲಿ .
ಅಕ್ಟೋಬರ್ 9 ರಂದು, ಪಾಕಿಸ್ತಾನವು ಕಾಬೂಲ್, ಖೋಸ್ಟ್, ಜಲಾಲಾಬಾದ್ ಮತ್ತು ಅಫ್ಘಾನಿಸ್ತಾನದ ಪಕ್ತಿಕಾದಲ್ಲಿ ಟಿಟಿಪಿ ಮುಖ್ಯಸ್ಥ ನೂರ್ ವಾಲಿ ಮೆಹ್ಸೂದ್ ಅವರನ್ನು ಗುರಿಯಾಗಿಸಿಕೊಂಡು ಹಲವಾರು ವಾಯುದಾಳಿಗಳನ್ನು ನಡೆಸಿತು. ಈ ಪಾಕಿಸ್ತಾನಿ ವಾಯುದಾಳಿಗಳಿಗೆ ಅಫ್ಘಾನಿಸ್ತಾನವು ಪ್ರತೀಕಾರ ತೀರಿಸಿಕೊಂಡಿತು. ಅಫ್ಘಾನಿಸ್ತಾನದ 201 ನೇ ಖಾಲಿದ್ ಬಿನ್ ವಾಲಿದ್ ಸೇನಾ ದಳವು ಅಕ್ಟೋಬರ್ 11 ರ ತಡರಾತ್ರಿ ನಂಗರ್ಹಾರ್ ಮತ್ತು ಕುನಾರ್ ಪ್ರಾಂತ್ಯಗಳಲ್ಲಿನ ಡುರಾಂಡ್ ಲೈನ್ ಬಳಿಯ ಪಾಕಿಸ್ತಾನಿ ಮಿಲಿಟರಿ ಠಾಣೆಗಳ ಮೇಲೆ ದಾಳಿ …
Read More »₹3 ಸಾವಿರ ದಾಟಿದ ಹಸಿಶುಂಠಿ ದರ: ಅವಧಿಪೂರ್ವ ಕೊಯ್ಲಿಗೆ ಮುಂದಾದ ರೈತರು.
ಹಸಿಶುಂಠಿ ಧಾರಣೆಯು ಈ ಹಂಗಾಮಿನಲ್ಲಿ ಮೊದಲ ಬಾರಿಗೆ ₹3 ಸಾವಿರದ ಗಡಿ ದಾಟಿದ್ದು, ರೈತರು ಅವಧಿ ಪೂರ್ವ ಕೊಯ್ಲಿಗೆ ಮುಂದಾಗಿದ್ದಾರೆ.ಕಳೆದ ತಿಂಗಳಷ್ಟೇ ಹಸಿಶುಂಠಿ ದರ ಪ್ರತಿ ಚೀಲಕ್ಕೆ (60 ಕೆ.ಜಿ.) ₹1500-1800 ಇತ್ತು. ಶನಿವಾರ ಚೀಲಕ್ಕೆ ₹3,000-3,200ರಂತೆ ಖರೀದಿ ನಡೆಯಿತು.ಒಂದೆರಡು ವಾರದಲ್ಲೇ ಪ್ರತಿ ಚೀಲಕ್ಕೆ ಸರಾಸರಿ ₹1,000-1,500ರಷ್ಟು ಬೆಲೆ ಹೆಚ್ಚಾಗಿದೆ
Read More »ಐಪಿಎಸ್ ಅಧಿಕಾರಿ ಡೆತ್ ನೋಟ್ ನಲ್ಲಿ ಹೆಸರಿಸಿದ್ದ ಹಿರಿಯ ಪೊಲೀಸ್ ಅಧಿಕಾರಿ ಸೇವೆಯಿಂದ ವಜ!
ಐಪಿಎಸ್ ಅಧಿಕಾರಿ ವೈ ಪೂರಣ್ ಕುಮಾರ್ ಅವರ ಆತ್ಮಹತ್ಯೆ ಪ್ರಕರಣದಲ್ಲಿ ಹೆಸರು ಕೇಳಿ ಬಂದ ನಂತರ ಹರಿಯಾಣದ ಹಿರಿಯ ಪೊಲೀಸ್ ಅಧಿಕಾರಿ ನರೇಂದ್ರ ಬಿಜರ್ನಿಯಾ ಅವರನ್ನು ವಜಾಗೊಳಿಸಲಾಗಿದೆ, ಇದು ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿದೆ.ಕುಮಾರ್ ಅವರ ಪತ್ನಿ ಐಎಎಸ್ ಅಧಿಕಾರಿ ಅಮ್ನೀತ್ ಪೂರಣ್ ಕುಮಾರ್ ಅವರು ಪೊಲೀಸ್ ಠಾಣೆಯಲ್ಲಿ ಔಪಚಾರಿಕ ದೂರು ದಾಖಲಿಸಿದ ನಂತರ, ಹರಿಯಾಣ ಡಿಜಿಪಿ ಶತ್ರುಜೀತ್ ಕಪೂರ್, ರೋಹ್ಟಕ್ ಎಸ್ಎಸ್ಪಿ ಮತ್ತು ಇತರ ಹಿರಿಯ ಅಧಿಕಾರಿಗಳ ವಿರುದ್ಧ ಕಿರುಕುಳ …
Read More »ಹುಬ್ಬಳ್ಳಿ ಬ್ರೇಕಿಂಗ್: ಎರಡು ಲಾರಿಗಳ ನಡುವೆ ಅಪಘಾತ..!
ಫುಲ್ ಲೋಡ್ ಲಾರಿಗಳ ಪರಸ್ಪರ ಡಿಕ್ಕಿ ಸಂಭಾವಿಸಿದೆ.ಲಾರಿಯೊಳಗೆ ಸಿಕ್ಕಿ ಒದ್ದಾಡಿದ ಚಾಲಕ.ಹುಬ್ಬಳ್ಳಿ ಕಲಘಟಗಿ ಮಾರ್ಗ ಮಧ್ಯೆ ಧಾರವಾಡ ಕ್ರಾಸ್ ಬಳಿ ನಡೆದ ಅಪಘಾತ. ಲಾರಿಯಲ್ಲಿ ಸಿಕ್ಕು ನರಳಾಡುತ್ತಿದ್ದ ಚಾಲಕನನ್ನು ಸ್ಥಳೀಯರು ಅಗ್ನಿಶಾಮಕದಳ ರಕ್ಷಣೆ ಮಾಡಿದ್ದಾರೆ.
Read More »ಪ್ರೀತಿ ಬಲೆಗೆ ಬಿದ್ದ ಹಿಂದೂ ಯುವತಿ ಸಾವು: ಆತ್ಮಹತ್ಯೆಗೆ ಲವ್ ಜಿಹಾದ್ ಶಂಕೆ!
ಕೇರಳದಲ್ಲಿ ಹಿಂದೂ ಯುವತಿ ಲವ್ ಜಿಹಾದ್ ಗೆ ಬಲಿಯಾಗಿರುವ ಶಂಕೆ ವ್ಯಕ್ತವಾಗಿದೆ. ತನ್ನ ಸಹಪಾಠಿ ಹ್ಯಾರಿಸ್ ಎಂಬಾತನು ಬೀಸಿದ ಪ್ರೀತಿಯ ಬಲೆಗೆ ಬಿದ್ದಿದ್ದ ಯುವತಿಯ ಬದುಕು ದುರಂತ ಅಂತ್ಯ ಕಂಡಿದೆ.ಅಂಜನಾ ಸಾವು ಕಾಣುತ್ತಿದ್ದಂತೆ ಹ್ಯಾರಿಸ್ ಬೆಂಗಳೂರಿಗೆ ಓಡಿಹೋಗಿದ್ದಾನೆ ಎಂದು ವರದಿಯಾಗಿದೆ. ಹ್ಯಾರಿಸ್ ಅಥವಾ ಹ್ಯಾರಿಸ್ ಕಳುಹಿಸಿದ ಸ್ನೇಹಿತರು ಅಂಜನಾಳನ್ನು ಬಲವಂತವಾಗಿ ರೈಲಿನ ಮುಂದೆ ತಳ್ಳಿ ಕೊಂದಿರಬಹುದು ಎಂದು ಕುಟುಂಬವು ದೂರಿದೆ. ಮಾತ್ರವಲ್ಲ, ಕುಟುಂಬವು ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದು …
Read More »ಅಮೆರಿಕದ ಯುದ್ಧಸಾಮಗ್ರಿ ಸ್ಥಾವರದಲ್ಲಿ ಭಾರೀ ಸ್ಫೋಟ- 18 ಜನ ಸಾವು!
ಅಮೆರಿಕದ ಟೆನ್ನೆಸ್ಸೀ ಗ್ರಾಮೀಣ ಪ್ರದೇಶದ ಮಿಲಿಟರಿ ಯುದ್ಧಸಾಮಗ್ರಿ ಕೇಂದ್ರದಲ್ಲ ಶುಕ್ರವಾರ ಭಾರೀ ಸ್ಫೋಟ ಸಂಭವಿಸಿದ್ದು, 18 ಜನರು ನಾಪತ್ತೆಯಾಗಿದ್ದಾರೆ. ಅವರೆಲ್ಲರೂ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.ವರದಿಗಳ ಪ್ರಕಾರ ಎಂಟು ಕಟ್ಟಡಗಳನ್ನು ಹೊಂದಿರುವ ಅಕ್ಯುರೇಟ್ ಎನರ್ಜಿಟಿಕ್ ಸಿಸ್ಟಮ್ಸ್ ಸೌಲಭ್ಯದಲ್ಲಿ ಬೆಳಗ್ಗೆ 7:45 ರ ಸುಮಾರಿಗೆ ಸ್ಫೋಟ ಸಂಭವಿಸಿದೆ. ಇದು ಅಮೆರಿಕದ ಮಿಲಿಟರಿಗೆ ಸ್ಫೋಟಕಗಳು ಹಾಗೂ ಇತರ ಯುದ್ಧ ಸಾಮಾಗ್ರಿಗಳನ್ನು ತಯಾರಿಸುತ್ತದೆ ಮತ್ತು ಪರೀಕ್ಷಿಸುತ್ತದೆ. ಈ ಸ್ಥಾವರ ನ್ಯಾಶ್ವಿಲ್ಲೆಯ ನೈಋತ್ಯಕ್ಕೆ ಸುಮಾರು 60 ಮೈಲುಗಳಷ್ಟು …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





