ಕಾಂಟ್ರ್ಯಾಕ್ಟ್ ಕ್ಯಾರಿ (ಸಿಸಿ) ಪರ್ಮಿಟ್ ಬಾಡಿಗೆ ವಾಹನಗಳ ಮುಕ್ತ ಸಂಚಾರಕ್ಕೆ ಆರ್ಟಿಒ ಅಧಿಕಾರಿಗಳು ವಿನಾ ಕಾರಣ ಕಿರುಕುಳ ನೀಡುತ್ತಿದ್ದಾರೆ ಎಂದು ವಾಹನಗಳ ಮಾಲೀಕರು ಆಕ್ರೋಶ ವ್ಯಕ್ತಪಡಿಸಿದರು.ನಾಗಾಲ್ಯಾಂಡ್ ಮತ್ತು ದಿಯು-ದಾಮನ್ ನೋಂದಣಿ ಇರುವ ವಾಹನಗಳ ಸಂಚಾರಕ್ಕೆ ಮುಕ್ತ ಅವಕಾಶ ನೀಡಿ ಕರ್ನಾಟಕ ನೋಂದಣಿ ಇರುವ ವಾಹನಗಳ ಸಂಚಾರಕ್ಕೆ ಅಡ್ಡಿಪಡಿಸಿ ಕಿರುಕುಳ ನೀಡುತ್ತಿದ್ದಾರೆ’ ಎಂದು ಬೆಂಗಳೂರಿನ ಉಮೇಶ್ ದೂರಿದರು.
Read More »ಡಿವೋರ್ಸ್ ಬಳಿಕ ಲವರ್ಬಾಯ್ ಆದ ಹಾರ್ದಿಕ್! ದಿನಕ್ಕೊಂದು ಹುಡುಗಿ ಜೊತೆ ಡೇಟಿಂಗ್.
ಹಾರ್ದಿಕ್ ಪಾಂಡ್ಯ ಮತ್ತೆ ಸುದ್ದಿಯಲ್ಲಿದ್ದಾರೆ. ಕ್ರಿಕೆಟ್ ಮೈದಾನದಿಗಿಂತ ಹೆಚ್ಚು, ಇತ್ತೀಚೆಗೆ ಅವರ ವೈಯಕ್ತಿಕ ಜೀವನವೇ ಅಭಿಮಾನಿಗಳ ಕುತೂಹಲದ ವಿಷಯವಾಗಿದೆ. ತಮ್ಮ ಪತ್ನಿ ನತಾಶಾ ಸ್ಟಾಂಕೋವಿಕ್ನಿಂದ ವಿಚ್ಛೇದನ ಪಡೆದ ನಂತರ, ಹಾರ್ದಿಕ್ ಅವರ ಹೆಸರು ವಿವಿಧ ಮಾಡೆಲ್ಗಳೊಂದಿಗೆ ಸಂಪರ್ಕದಲ್ಲಿರುವ ಸುದ್ದಿ ಹರಿದಾಡುತ್ತಿದೆ.ಅಕ್ಟೋಬರ್ 10 ರಂದು ಮುಂಜಾನೆ ಮುಂಬೈ ವಿಮಾನ ನಿಲ್ದಾಣದಲ್ಲಿ ಹಾರ್ದಿಕ್ ಮತ್ತು ಮಹಿಕಾ ಒಟ್ಟಿಗೆ ಪ್ರಯಾಣಿಸುತ್ತಿರುವುದು ಅಭಿಮಾನಿಗಳ ಗಮನ ಸೆಳೆದಿತ್ತು. ಈ ದೃಶ್ಯಗಳು ಹೊರಬಂದ ಬಳಿಕ ಇಬ್ಬರ ನಡುವಿನ ಸಂಬಂಧದ …
Read More »ಶೋಚನೀಯ ಸ್ಥಿತಿಯಲ್ಲಿ ಸಂಗೀತ ಸಾಮ್ರಾಜ್ಞಿ ಡಾ.ಗಂಗೂಬಾಯಿ ಹಾನಗಲ್ ನಿವಾಸ: ನವೀಕರಣಕ್ಕೆ ಸರ್ಕಾರಕ್ಕೆ ಆಗ್ರಹ.
ಧಾರವಾಡದ, ಹೊಸ ಯಲ್ಲಾಪುರ ರಸ್ತೆಯಲ್ಲಿರುವ ಹಿಂದೂಸ್ಥಾನಿ ಸಂಗೀತದ ಗಾನಸಾಮ್ರಾಜ್ಞಿ, ಸಂಗೀತ ಶಿರೋಮಣಿ, ಸಂಗೀತ ಕಲಾರತ್ನ, ಪದ್ಮವಿಭೂಷಣ ಪುರಸ್ಕೃತ ಡಾ.ಗಂಗೂಬಾಯಿ ಹಾನಗಲ್ ಅವರ ನಿವಾಸ ಶಿಥಿಲಗೊಂಡಿದೆ.ಸ್ಮಾರಕ ಕಟ್ಟಡವು ಹತ್ತೇ ವರ್ಷದಲ್ಲಿ ಪಾಳು ಬಿದ್ದಿರುವುದು ಸರ್ಕಾರದ ನಿರ್ಲಕ್ಷ್ಯಕ್ಕೆ, ಕನ್ನಡ & ಸಂಸ್ಕೃತಿ ಇಲಾಖೆಯ ಅಸಡ್ಡೆಗೆ ಹಿಡಿದ ಕೈಗನ್ನಡಿ. ಸಂಗೀತ ಕ್ಷೇತ್ರದ ಬೆಳವಣಿಗೆಗೆ ಇಡೀ ತಮ್ಮ ಜೀವನದುದ್ದಕ್ಕೂ ಸೇವೆಯನ್ನು ಸಲ್ಲಿಸಿ ನಮ್ಮ ನಾಡು ಹಾಗೂ ದೇಶದ ಕೀರ್ತಿಯನ್ನು ವಿಶ್ವವ್ಯಾಪಿ ಪಸರಿಸುವಂತೆ ಮಾಡಿದ ಸಂಗೀತ ದಿಗ್ಗಜೆ …
Read More »ಸಂಘ ಪರಿವಾರದ ವಿರುದ್ಧ ದ್ವೇಷ ಭಾಷಣ – ಎಸ್ಡಿಪಿಐ ಮುಖಂಡ ರಿಯಾಜ್ ಕಡಂಬು ಅರೆಸ್ಟ್!
ಸಂಘಪರಿವಾರದ ವಿರುದ್ಧ ದ್ವೇಷ ಭಾಷಣ ಮಾಡಿದ ಆರೋಪದ ಮೇಲೆ ಎಸ್ಡಿಪಿಐ (SDPI) ಮುಖಂಡ ರಿಯಾಜ್ ಕಡಂಬು ಅವರನ್ನು ಪೊಲೀಸರು ಬಂಧಿಸಿದ್ದು 14 ದಿನ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಹಸುವಿನ ತಲೆ ಮತ್ತು ಇತರ ದೇಹದ ಭಾಗಗಳನ್ನು ರಸ್ತೆಗೆ ಎಸೆದ ಘಟನೆಯು ಅಭಿವೃದ್ಧಿ ಸಮಸ್ಯೆಗಳಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಸಂಘ ಪರಿವಾರದ ಕಾರ್ಯಕರ್ತರು ನಡೆಸಿದ ಸಂಘಟಿತ ಕೃತ್ಯವಾಗಿದೆ ಎಂದು ಹೇಳಿದ್ದರು. ಈ ಘಟನೆಯಲ್ಲಿ ಸಂಘ ಪರಿವಾರ ಮತ್ತು ಬಿಜೆಪಿ ಕಾರ್ಯಕರ್ತರು …
Read More »ಗಂಗಾವತಿ | ಬಿಜೆಪಿ ಯುವ ಮೋರ್ಚಾ ಅಧ್ಯಕ್ಷನ ಕೊಲೆ ಪ್ರಕರಣ: ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಪೊಲೀಸರು
ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಕೆ.ವೆಂಕಟೇಶ ಕೊಲೆ ಪ್ರಕರಣದ ಆರೋಪಿಗಳನ್ನು ಗುರುವಾರ ಇಲ್ಲಿನ ಜೆಎಂಎಫ್ಸಿ ನ್ಯಾಯಾಲಯಕ್ಕೆ ಪೊಲೀಸರು ಹಾಜರುಪಡಿಸಿದ್ದಾರೆ.ಭೀಮ್ ಅಲಿಯಾಸ್ ಭರತ್, ಸಲೀಂ, ವಿಜಯ್ ಹಾಗೂ ಧನರಾಜ್ ಬಂಧಿತ ಆರೋಪಿಗಲಾಗಿದ್ದು, ಇದಕ್ಕೂ ಮುನ್ನ ಕೃತ್ಯ ನಡೆದ ಸ್ಥಳ ರಿಲಯನ್ಸ್ ಪಾಯಿಂಟ್ನ ಲೀಲಾವತಿ ಆಸ್ಪತ್ರೆಯ ಬಳಿ ಆರೋಪಿಗಳನ್ನು ಕರೆತಂದು ಪೊಲೀಸರು ಸ್ಥಳ ಮಹಜರು ನಡೆಸಿದರು.ತೀವ್ರವಾಗಿ ಗಾಯಗೊಂಡಿದ್ದ ವೆಂಕಟೇಶನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಅವರು ಮೃತಪಟ್ಟಿದ್ದರು.
Read More »ಕೇರಳದಲ್ಲಿ ೧೫ ವರ್ಷಗಳ ಹಿಂದೆ ಬಾಂಬ್ ಎಸೆದು ೨ ಸಂಘ ಸ್ವಯಂಸೇವಕರ ಹತ್ಯೆ ಮಾಡಿದ ಪ್ರಕರಣದ ೧೪ ಆರೋಪಿಗಳ ಖುಲಾಸೆ.
ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಇಬ್ಬರು ಕಾರ್ಯಕರ್ತರ ಹತ್ಯೆ ಪ್ರಕರಣದಲ್ಲಿ ತಲಶ್ಶೇರಿ ಹೆಚ್ಚುವರಿ ಸತ್ರ ನ್ಯಾಯಾಲಯವು ೧೪ ಆರೋಪಿಗಳನ್ನು ನಿರ್ದೋಷಿಗಳೆಂದು ಬಿಡುಗಡೆ ಮಾಡಿದೆ.ಆರೋಪಿಗಳು ಮಾರ್ಕ್ಸ್ವಾದಿ ಕಮ್ಯುನಿಸ್ಟ್ ಪಕ್ಷದ ಕಾರ್ಯಕರ್ತರಾಗಿದ್ದಾರೆ. ನಿರ್ದೋಷಿ ಎಂದು ಬಿಡುಗಡೆಗೊಂಡವರಲ್ಲಿ ಎನ್.ಕೆ. ಸುನಿಲ್ ಕುಮಾರ್ ಅಲಿಯಾಸ್ ಕೋಡಿ ಸುನಿ, ಕೆ.ಕೆ. ಮೊಹಮ್ಮದ್ ಶಫಿ, ಕೆ. ಶಿನೋಜ್, ಟಿ. ಸುಜೀತ, ಟಿ.ಕೆ. ಸುಮೇಶ, ಟಿ.ಪಿ. ಶಮೀಲ, ಎ.ಕೆ. ಶಮ್ಮಾಸ್, ಕೆ.ಕೆ. ಅಬ್ಬಾಸ್, ರಾಹುಲ್, ಕೆ.ವಿ. ವಿನೀಶ್, ಪಿ.ವಿ. ವಿಜಿತ್, …
Read More »AI’ನಿಂದ 36 ಮಂದಿ ಸ್ನೇಹಿತೆಯರ ಅಶ್ಲೀಲ ಫೋಟೋ ಸೃಷ್ಟಿಸಿದ ವಿದ್ಯಾರ್ಥಿ ಅರೆಸ್ಟ್.!
ಛತ್ತೀಸ್ಗಢದ ಬಿಲಾಸ್ಪುರ ಜಿಲ್ಲೆಯ ಸಯೀದ್ ರಹೀಮ್ ಅದ್ನಾನ್ (21) ಎಂದು ಗುರುತಿಸಲಾದ ಆರೋಪಿ ವಿದ್ಯಾರ್ಥಿ, AI ಆಧಾರಿತ ಇಮೇಜ್ ಜನರೇಷನ್ ಮತ್ತು ಎಡಿಟಿಂಗ್ ಪರಿಕರಗಳನ್ನು ಬಳಸಿಕೊಂಡು ಮಹಿಳಾ ವಿದ್ಯಾರ್ಥಿಗಳ ನಕಲಿ ಮತ್ತು ಆಕ್ಷೇಪಾರ್ಹ ಛಾಯಾಚಿತ್ರಗಳನ್ನು ಸಿದ್ಧಪಡಿಸಿದ್ದಾನೆ ಎಂದು ರಾಯ್ಪುರ ಪೊಲೀಸರು ನೀಡಿದ ಹೇಳಿಕೆಯಲ್ಲಿ ತಿಳಿಸಲಾಗಿದೆ. ಸಂಸ್ಥೆಯ ರಿಜಿಸ್ಟ್ರಾರ್ನಿಂದ ಬಂದ ದೂರಿನ ನಂತರ, ಪೊಲೀಸರು ತನಿಖೆ ಆರಂಭಿಸಿ ಆರೋಪಿ ವಿದ್ಯಾರ್ಥಿಯನ್ನು ಬಂಧಿಸಿದ್ದಾರೆ. ಈ ಸಂಬಂಧ ರಾಖಿ ಪೊಲೀಸ್ ಠಾಣೆಯಲ್ಲಿ ಬಿಎನ್ಎಸ್ ಮತ್ತು …
Read More »ಬಾಲಕಿಯ ಕೊಲೆ ಪ್ರಕರಣ… ಶಂಕಿತ ಅರೋಪಿ ಕಾಲಿಗೆ ಗುಂಡು!!
ಬಾಲಕಿ ಮೇಲಿನ ಲೈಂಗಿಕ ದೌರ್ಜನ್ಯ ಮತ್ತು ಕೊ*ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತ ಆರೋಪಿ ಕಾರ್ತಿಕ್ ನನ್ನು ಹೆಚ್ಚಿನ ವಿಚಾರಣೆಗೆ ಮೈಸೂರಿಗೆ ಕರೆ ತರುತ್ತಿದ್ದಾಗ ಪರಾರಿಯಾಗಲು ಯತ್ನಿಸಿದ್ದು, ಪೊಲೀಸರು ಕಾರ್ತಿಕ್ ಕಾಲಿಗೆ ಗುಂಡು ಹಾರಿಸಿದ್ದಾರೆ.ಶಂಕಿತ ಕಾರ್ತಿಕ್ನ್ನು ಕೊಳ್ಳೇಗಾಲದಲ್ಲಿ ವಶಕ್ಕೆ ಪಡೆದು ಮೈಸೂರಿಗೆ ಕರೆದುಕೊಂಡು ಬಂದು ಕಾರ್ತಿಕ್ ನ ಊರು ಸಿದ್ದಲಿಂಗ ಪುರಕ್ಕೆ ಕರೆದು ಕೊಂಡು ವಾಪಸ್ ಬರುತ್ತಿದ್ದಾಗ ಮೇಟಗಳ್ಳಿ ಬಳಿ ತಪ್ಪಿಸಿಕೊಳ್ಳಲು ಯತ್ನಿಸಿದ್ದು ಪೊಲೀಸರು ಆತನ ಬಲ ಕಾಲಿಗೆ ಗುಂಡು ಹಾರಿಸಿದ್ದಾರೆ.
Read More »ರಟ್ಟೀಹಳ್ಳಿ | ಆಸ್ತಿ ದೋಚಲು ಒಂಟಿ ರೈತನ ಕೊಲೆ: ನಾಲ್ವರು ಆರೋಪಿಗಳು ವಶಕ್ಕೆ.
ತಂದೆ-ತಾಯಿ ಹಾಗೂ ಪತ್ನಿ-ಮಕ್ಕಳಿಲ್ಲದೇ ಒಂಟಿಯಾಗಿ ಮನೆಯಲ್ಲಿ ವಾಸವಿದ್ದ ರೈತ ಬಸವರಾಜ ಪುಟ್ಟಣ್ಣನವರ (40) ಅವರನ್ನು ಹತ್ಯೆ ಮಾಡಿ ಆಸ್ತಿ ದೋಚಲು ಯತ್ನಿಸಿದ್ದ ಆರೋಪದಡಿ ನಾಲ್ವರು ಆರೋಪಿಗಳನ್ನು ರಟ್ಟೀಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.ರೈತ ಬಸವರಾಜ ಅವರ ಹೆಸರಿನಲ್ಲಿ ಸುಮಾರು 12 ಎಕರೆ ಜಮೀನು ಇದೆ. ಬಸವರಾಜ ಅವರ ಅಣ್ಣ-ತಮ್ಮ, ತಂದೆ-ತಾಯಿ ತೀರಿಕೊಂಡಿದ್ದಾರೆ. ಪತ್ನಿ ಹಾಗೂ ಮಕ್ಕಳು ಸಹ ಇಲ್ಲ. ಒಂಟಿಯಾಗಿದ್ದ ಬಸವರಾಜ ಅವರ ಜಮೀನು ದೋಚಲೆಂದು ಆರೋಪಿಗಳು, ಅವರನ್ನು ಕೊಲೆ ಮಾಡಿರುವುದು …
Read More »ಹಾವೇರಿ | ₹ 8 ಲಕ್ಷ ಮೌಲ್ಯದ ಶ್ರೀಗಂಧ ಕಳವು.
ಶಿಗ್ಗಾವಿ ತಾಲ್ಲೂಕಿನ ಹಿರೇಮಣಕಟ್ಟಿ ಬಳಿಯ ಜಮೀನಿನಲ್ಲಿದ್ದ ಶ್ರೀಗಂಧದ 10 ಮರಗಳನ್ನು ಕಳ್ಳತನ ಮಾಡಲಾಗಿದ್ದು, ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಹಿರೇಮಣಕಟ್ಟಿ ಗ್ರಾಮದ ನಿವಾಸಿ ಮಂಜುನಾಥಗೌಡ ಗೋಟಗೊಡಿ ಅವರು ಮರ ಕಳ್ಳತನ ಬಗ್ಗೆ ದೂರು ನೀಡಿದ್ದಾರೆ.ಅಪರಿಚಿತರ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ’ ಎಂದು ಶಿಗ್ಗಾವಿ ಪೊಲೀಸರು ತಿಳಿಸಿದರು.
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





